ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಸದ್ಯ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿದ ಹಿನ್ನೆಲೆ ಮತ್ತೆ ಯಾವಾಗ ಲಾಕ್‌ಡೌನ್ ಸಡಿಲಿಕೆ ಮಾಡ್ತಾರೆ ಅನ್ನೋ ಗೊಂದಲ ಸೃಷ್ಟಿಯಾಗಿದ್ದು, ಜನರು ತಮ್ಮ ಊರುಗಳಿಗೆ ಗಂಟು-ಮೂಟೆ ಸಮೇತ ಹೊರಟಿದ್ದಾರೆ.
ರಾಜ್ಯಾದ್ಯಂತ ಸೆಮಿ ಲಾಕ್‌ಡೌನ್ ಆದ ಹಿನ್ನೆಲೆ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡಿದೆ. ಹಾಗಾಗಿ ಕಡಿಮೆ ಸಂಖ್ಯೆಯ ಪ್ರಯಾಣಿಕರ ಸಂಚಾರ ಇರುವ 4 ರೈಲುಗಳನ್ನು ನಾಳೆಯಿಂದ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
1.ಟ್ರೈನ್ ನಂ-01311 ಮೇ 13ರಿಂದಲೇ ಸೊಲ್ಲಾಪುರದಿಂದ ಹೊರಡಬೇಕಿದ್ದ ಸೊಲ್ಲಾಪುರ- ಹಾಸನ ಸ್ಪೆಷಲ್ ರೈಲು.
2. ಟ್ರೈನ್ ನಂ- 01312 ಹಾಸನ- ಸೊಲ್ಲಾಪುರ ಎಕ್ಸ್‌ಪ್ರೆಸ್. ಮೇ 14ರಂದು ಹಾಸನದಿಂದ ಹೊರಡಬೇಕಿದ್ದ ರೈಲು.
3. ಟ್ರೈನ್ ನಂ- 06201- ಕೆಎಸ್ಆರ್ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಸ್ಪೆಷಲ್ ಟ್ರೈನ್. ಮೇ- 14 ರಂದು ಸೊಲ್ಲಾಪುರದಿಂದ ಬೆಂಗಳೂರು ಸ್ಟೇಷನ್ಗೆ ಬರಬೇಕಿದ್ದ ರೈಲು.
4. ಟ್ರೈನ್ ನಂ- 06202- ಮೈಸೂರು- ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಸ್ಪೆಷಲ್ ರೈಲು. ಮೇ 14ರಂದು ಸೊಲ್ಲಾಪುರದಿಂದ ಹೊರಡಬೇಕಿದ್ದ ರೈಲು.
ಈ 4 ರೈಲುಗಳನ್ನ ಮುಂದಿನ ಆದೇಶದವರೆಗೆ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶಿಸಿದೆ.
ಓದಿ: ಕೋವಿಶೀಲ್ಡ್ 2ನೇ ಡೋಸ್ ಪಡೆಯುವ ಅಂತರ 12-16 ವಾರಗಳಿಗೆ ಹೆಚ್ಚಿಸಲು ಶಿಫಾರಸು