ETV Bharat / state

ಜೆಡಿಎಸ್​ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ - ರಾಹುಲ್ ಗಾಂಧಿ

ಮೈತ್ರಿ ಮಾಡಿಕೊಳ್ಳುತ್ತಿರುವುದು ಬಿಜೆಪಿ ಸೋಲಿಸುವುದಕ್ಕೆ ಹೊರತು ಕಾಂಗ್ರೆಸ್ ಶಕ್ತಿ ಕಡಿಮೆ ಮಾಡಿಕೊಳ್ಳುವುದಕ್ಕಲ್ಲ ಎನ್ನುವ ಮೂಲಕ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಜೆಡಿಎಸ್​ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ವಿರೋಧ ವ್ಯಕ್ತವಾಯಿತು.

ಕೆಪಿಸಿಸಿ ಚುನಾವಣಾ ಸಮಿತಿ ಸಭೆ
author img

By

Published : Mar 7, 2019, 8:26 PM IST

ಬೆಂಗಳೂರು: ಜೆಡಿಎಸ್​ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಇಂತದ್ದೊಂದು ಬೇಸರ ವ್ಯಕ್ತವಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಬಿಟ್ಟು ಕೊಟ್ರೆ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಬಿಟ್ಟು ಕೊಡುವುದರಿಂದ ನಷ್ಟವೇ ಜಾಸ್ತಿ ಆಗಲಿದೆ. ಹೀಗಾಗಿ ಮೈತ್ರಿ ಅಂತ ಹೇಳಿ ಜೆಡಿಎಸ್​ಗಿರುವ ಶಕ್ತಿಗಿಂತಲೂ ಹೆಚ್ಚು ಸ್ಥಾನ ಕೊಟ್ರೆ ಮೈತ್ರಿ ಹೆಸರಲ್ಲಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಇದನ್ನ ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಮನವರಿಕೆ ಮಾಡಿಕೊಡಿ ಅಂತ ಸಭೆಯಲ್ಲಿ ಹಲವರಿಂದ ಒತ್ತಾಯ ಕೇಳಿಬಂತು ಎಂಬ ಮಾಹಿತಿ ಸಿಕ್ಕಿದೆ.

ಹಾಲಿಗಳ ಕೈಬಿಡುವುದು ಬೇಡ:

ಹಾಲಿ ಸಂಸದರ ಕ್ಷೇತ್ರಗಳನ್ನ ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲ ಅಂತ ಪದೇ ಪದೇ ಹೇಳುತ್ತಿದ್ದರೂ ನಿನ್ನೆ ದೇವೇಗೌಡರ ಮುಂದೆಯೂ ಅದೇ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಲಿ ಸಂಸದರ ಕ್ಷೇತ್ರಗಳನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ. ಮಂಡ್ಯ ಮತ್ತು ಹಾಸನ ನಾವು ಕೇಳಿಲ್ಲ. ಅದ್ರೆ, ಅವರು ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಳುತ್ತಿರುವುದು ಸರಿಯಾ ಅಂತ ಸಭೆಯಲ್ಲಿ ಪ್ರಶ್ನೆ ಕೇಳಿಬಂತು.

ಮೈತ್ರಿ ಮಾಡಿಕೊಳ್ಳುತ್ತಿರುವುದು ಬಿಜೆಪಿ ಸೋಲಿಸುವುದಕ್ಕೆ ಹೊರತು ಕಾಂಗ್ರೆಸ್ ಶಕ್ತಿ ಕಡಿಮೆ ಮಾಡಿಕೊಳ್ಳುವುದಕ್ಕಲ್ಲ. ಮೈತ್ರಿ ಮಾಡಿಕೊಳ್ಳುತ್ತಿರುವುದು ಎರಡು ಪಕ್ಷಗಳು ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹೀಗಾಗಿ, ಮತ್ತೊಮ್ಮೆ ಯೋಚನೆ ಮಾಡಿ ಸೀಟು ಹಂಚಿಕೆ ಮಾಡುವುದು ಒಳಿತು. ಇಲ್ಲವಾದ್ರೆ ಇದರ ಲಾಭ ಬಿಜೆಪಿ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಕೈ ನಾಯಕರು ಆತಂಕ ವ್ಯಕ್ತಪಡಿಸಿದರು.

undefined

ಬಿಜೆಪಿ ವಿರುದ್ಧ ರಣತಂತ್ರ:

ಚುನಾವಣಾ ಸಮಿತಿ ಸಭೆಯಲ್ಲಿ ಬಿಜೆಪಿ ಸ್ಟಾಟಜಿಗೆ ಪರ್ಯಾಯ ರಣತಂತ್ರದ ಚರ್ಚೆ ನಡೆದಿದೆ. ಬಿಜೆಪಿಯವರು ಮತ್ತೆ ಹಳೆಯ ಚಾಳಿಗೆ ಇಳಿದಿದ್ದಾರೆ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಏನೇನು‌ ಮಾತನಾಡಲ್ಲ. ಬರೀ ಸುಳ್ಳು ಹೇಳಿಕೊಂಡೇ ಜನರನ್ನ ಯಾಮಾರಿಸುತ್ತಾರೆ. ಇದರ ಬಗ್ಗೆ ನಾವು ಜಾಗರೂಕರಾಗಿರಬೇಕು. ಇತ್ತೀಚೆಗಿನ ಬೆಳವಣಿಗೆಗಳನ್ನೂ ಚುನಾವಣೆಗೆ ಬಳಸಿಕೊಳ್ತಾರೆ. ಮೈತ್ರಿ ಸರ್ಕಾರದ ಬಗ್ಗೆ ಗೊಂದಲ ಕ್ರಿಯೇಟ್ ಮಾಡ್ತಾರೆ.

ಕೆಪಿಸಿಸಿ ಚುನಾವಣಾ ಸಮಿತಿ ಸಭೆ

ಅವರ ಕಾರ್ಯಕರ್ತರು ಸಹ ಅದನ್ನೇ ಮಾಡ್ತಾರೆ. ಜನರಿಗೆ ಇಲ್ಲಸಲ್ಲದ್ದನ್ನ ತಲೆಗೆ ತುಂಬಿ ಸೆಳೆಯುವ ಕೆಲಸ ಮಾಡ್ತಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಕಾರ್ಯಕರ್ತರನ್ನ ಹಿಡಿದಿಟ್ಟುಕೊಳ್ಳಬೇಕು. ಕಾರ್ಯಕರ್ತರ ಮೂಲಕವೇ ಜನರನ್ನ ತಲುಪಬೇಕು. ಇದನ್ನ ನೀವು ತಪ್ಪದೆ ಅನುಸರಿಸಬೇಕು. ಕಾರ್ಯಕರ್ತರ ಜೊತೆ ಉತ್ತಮವಾಗಿ ನಡೆದುಕೊಳ್ಳಿ ಎಂದು ಸಭೆಯಲ್ಲಿ ಮುಖಂಡರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಸಭೆಗೆ ತಡವಾಗಿ ಬಂದ ಡಿಕೆಶಿ:

ಸಭೆಗೆ ಕೈ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ತಡವಾಗಿ ಆಗಮಿಸಿದರು. ಎರಡೂವರೆ ಗಂಟೆ ತಡವಾಗಿ ಆಗಮಿಸಿದ ಡಿ.ಕೆ ಶಿವಕುಮಾರ್ ಕೆಲಕಾಲ ಸಭೆಯಲ್ಲಿ ಪಾಲ್ಗೊಂಡರು. ಬಂದು ಕೆಲವೇ ಹೊತ್ತಿಗೆ ಸಭೆ ಮುಗಿಯಿತು. ತಡವಾಗಿ ಸಭೆಗೆ ಆಹ್ವಾನಿಸಿದ್ದಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಕ್ಲಾಸ್ ತೆಗೆದುಕೊಂಡರು. ಸಭೆಯ ಬಗ್ಗೆ ಮೊದಲೇ ಗಮನಕ್ಕೆ ತಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮುಸ್ಲೀಮರ ಒತ್ತಡ:

ಚುನಾವಣಾ ಸಮಿತಿ ಸಭೆಯಲ್ಲಿ ಮುಸ್ಲಿಂ ಮುಖಂಡರು ಮೂರು ಕ್ಷೇತ್ರ ಬಿಟ್ಟು ಕೊಡುವಂತೆ ಪಟ್ಟು ಹಿಡಿದರು. ರೋಷನ್ ಬೇಗ್, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಅವರಿಂದ ಒತ್ತಡ ಕೇಳಿಬಂತು. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಬಿಟ್ಟು ಕೊಡುವಂತೆ ಒತ್ತಾಯ ಮಾಡಿದರು. ಬೀದರ್​ನಲ್ಲಿ ಖಂಡ್ರೆ ಕುಟುಂಬದವರಿಂದಲೂ ಸ್ಪರ್ಧೆಗೆ ಇಳಿಯಲಿದ್ದಾರೆಂತೆ. ಅಲ್ಲದೆ ಸ್ವತಃ ಈಶ್ವರ್ ಖಂಡ್ರೆ ಅವರನ್ನೇ ಸ್ಪರ್ಧೆ ಮಾಡುವಂತೆ ವೇಣುಗೋಪಾಲ್ ಸೂಚಿಸಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ:

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಭೆಯ ನಂತರ ಮಾತನಾಡಿ, ಇವತ್ತಿನ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯಾಗಿದೆ. 12 ಮಂದಿ ಹಾಲಿ ಸಂಸದರ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ಒಂದೊಂದು ಕ್ಷೇತ್ರದಲ್ಲಿ ಇಬ್ಬರು, ಮೂವರು, 10 ಮಂದಿ ಇದ್ದಾರೆ. ಮತ್ತೊಮ್ಮೆ ಚರ್ಚಿಸಿ ಮೂವರನ್ನ ಆಯ್ಕೆ ಮಾಡುತ್ತೇವೆ. ನಂತರ ಸ್ಕ್ರೀನಿಂಗ್ ಕಮಿಟಿಗೆ ಕಳಿಸುತ್ತೇವೆ. ಅಲ್ಲಿ ಯಾರು ಏನು ಅನ್ನೋದನ್ನ ತೀರ್ಮಾನಿಸುತ್ತಾರೆ. ಮಾ.10 ರೊಳಗೆ ಹೊಂದಾಣಿಕೆಯೂ ಮುಗಿಯುತ್ತದೆ ಎಂದರು. ಅಲ್ಲದೆ ಬೀದರ್​ನಲ್ಲಿ ತಮ್ಮ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಯಿಸಿದ ಅವರು, ಈ ಬಗ್ಗೆ ಇಲ್ಲಿ ತೀರ್ಮಾನವಾಗಲ್ಲ. ದೆಹಲಿಯಲ್ಲಿ ವರಿಷ್ಠರು ಸೇರಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ತಮ್ಮ ಸ್ಪರ್ಧೆ ಬಗ್ಗೆ ಹೇಳಲು ನುಣುಚಿಕೊಂಡರು.

undefined

ಸೀಟು ಹಂಚಿಕೆ ವಿಚಾರ ಮಾತಾಡಿಲ್ಲ:

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿ, ಸೀಟು ಹಂಚಿಕೆ ವಿಚಾರ ಈ ಸಭೆಯಲ್ಲಿ ಆಗಿಲ್ಲ. ನಿನ್ನೆಯೇ ದೇವೇಗೌಡರು ಹಾಗೂ ರಾಹುಲ್ ಗಾಂಧಿಯವರು ಚರ್ಚೆ ಮಾಡಿದ್ದಾರೆ. ಇದೇ 11ಕ್ಕೆ ನಾವೆಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಎಲ್ಲವೂ ಫೈನಲ್ ಆಗುತ್ತೆ. ಒಟ್ಟು 13 ಕ್ಷೇತ್ರಗಳನ್ನ ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅಲ್ಪಸಂಖ್ಯಾತರು ಬೀದರ್, ಬೆಂಗಳೂರು ಕೇಂದ್ರ, ಹಾವೇರಿ ಮತ್ತು ಮಂಗಳೂರು‌ ಸೇರಿ ಕೆಲವಡೆ ಕೇಳಿದ್ದಾರೆ. ಹಾಲಿ ಸಂಸದ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ 10, ಜೆಡಿಎಸ್​ನ 2 ಕ್ಷೇತ್ರಗಳ ಚರ್ಚೆ ನಡೆಸಿಲ್ಲ. ಜೊತೆಗೆ ಶಿವಮೊಗ್ಗದ ಬಗ್ಗೆಯೂ ಚರ್ಚೆ ಮಾಡಿಲ್ಲ. ಹೆಚ್ಚು ಕಡಿಮೆ ಶಿವಮೊಗ್ಗ ಜೆಡಿಎಸ್​ಗೆ ಬಿಟ್ಟಿದ್ದೇವೆ. ಚರ್ಚೆ ಬಳಿಕ ನಮ್ಮ ಹೈಕಮಾಂಡ್ ಅಭ್ಯರ್ಥಿಯನ್ನ ಫೈನಲ್ ಮಾಡುತ್ತೆ. ಸೀಟು ಹಂಚಿಕೆ ಬಗ್ಗೆ ನಾವು ಇಂದು ಚರ್ಚಿಸಿಲ್ಲ ಎಂದರು.

Intro:Body:

ಸ್ಟೇಟ್​- 16

ಜೆಡಿಎಸ್​ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ

KPCC Election Committee Meeting in Banaglore

ಬೆಂಗಳೂರು: ಜೆಡಿಎಸ್​ಗೆ ಹೆಚ್ಚು ಸ್ಥಾನ ಕೊಡುವುದಕ್ಕೆ ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯಲ್ಲಿ ಇಂತದ್ದೊಂದು ಬೇಸರ ವ್ಯಕ್ತವಾಗಿದ್ದು, ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಬಿಟ್ಟು ಕೊಟ್ರೆ ಪಕ್ಷದ ಮೇಲೆ ದುಷ್ಪರಿಣಾಮ ಬೀರುತ್ತೆ. ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಬಿಟ್ಟು ಕೊಡುವುದರಿಂದ ನಷ್ಟವೇ ಜಾಸ್ತಿ ಆಗಲಿದೆ. ಹೀಗಾಗಿ ಮೈತ್ರಿ ಅಂತ ಹೇಳಿ ಜೆಡಿಎಸ್​ಗಿರುವ ಶಕ್ತಿಗಿಂತಲೂ ಹೆಚ್ಚು ಸ್ಥಾನ ಕೊಟ್ರೆ ಮೈತ್ರಿ ಹೆಸರಲ್ಲಿ ಹೆಚ್ಚು ಸ್ಥಾನ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಇದನ್ನ ರಾಹುಲ್ ಗಾಂಧಿಗೆ ಅರ್ಥವಾಗುವಂತೆ ಮನವರಿಕೆ ಮಾಡಿಕೊಡಿ ಅಂತ ಸಭೆಯಲ್ಲಿ ಹಲವರಿಂದ ಒತ್ತಾಯ ಕೇಳಿಬಂತು ಎಂಬ ಮಾಹಿತಿ ಸಿಕ್ಕಿದೆ.

ಹಾಲಿಗಳ ಕೈಬಿಡುವುದು ಬೇಡ:

ಹಾಲಿ ಸಂಸದರ ಕ್ಷೇತ್ರಗಳನ್ನ ಬಿಟ್ಟು ಕೊಡುವುದಕ್ಕೆ ಸಾಧ್ಯವಿಲ್ಲ ಅಂತ ಪದೇ ಪದೇ ಹೇಳುತ್ತಿದ್ದರೂ ನಿನ್ನೆ ದೇವೇಗೌಡರ ಮುಂದೆಯೂ ಅದೇ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಹಾಲಿ ಸಂಸದರ ಕ್ಷೇತ್ರಗಳನ್ನ ಯಾವುದೇ ಕಾರಣಕ್ಕೂ ಬಿಟ್ಟು ಕೊಡಲು ಸಾಧ್ಯವಿಲ್ಲ. ಮಂಡ್ಯ ಮತ್ತು ಹಾಸನ ನಾವು ಕೇಳಿಲ್ಲ. ಅದ್ರೆ, ಅವರು ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೇಳುತ್ತಿರುವುದು ಸರಿಯಾ ಅಂತ ಸಭೆಯಲ್ಲಿ ಪ್ರಶ್ನೆ ಕೇಳಿಬಂತು.

ಮೈತ್ರಿ ಮಾಡಿಕೊಳ್ಳುತ್ತಿರುವುದು ಬಿಜೆಪಿ ಸೋಲಿಸುವುದಕ್ಕೆ ಹೊರತು ಕಾಂಗ್ರೆಸ್ ಶಕ್ತಿ ಕಡಿಮೆ ಮಾಡಿಕೊಳ್ಳುವುದಕ್ಕಲ್ಲ. ಮೈತ್ರಿ ಮಾಡಿಕೊಳ್ಳುತ್ತಿರುವುದು ಎರಡು ಪಕ್ಷಗಳು ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹೀಗಾಗಿ, ಮತ್ತೊಮ್ಮೆ ಯೋಚನೆ ಮಾಡಿ ಸೀಟು ಹಂಚಿಕೆ ಮಾಡುವುದು ಒಳಿತು. ಇಲ್ಲವಾದ್ರೆ ಇದರ ಲಾಭ ಬಿಜೆಪಿ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಅಂತ ಕೈ ನಾಯಕರು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ಧ ರಣತಂತ್ರ:

ಚುನಾವಣಾ ಸಮಿತಿ ಸಭೆಯಲ್ಲಿ ಬಿಜೆಪಿ ಸ್ಟಾಟಜಿಗೆ ಪರ್ಯಾಯ ರಣತಂತ್ರದ ಚರ್ಚೆ ನಡೆದಿದೆ. ಬಿಜೆಪಿಯವರು ಮತ್ತೆ ಹಳೆಯ ಚಾಳಿಗೆ ಇಳಿದಿದ್ದಾರೆ. ಜನರನ್ನ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅವರು ಅಭಿವೃದ್ಧಿ ಬಗ್ಗೆ ಏನೇನು‌ ಮಾತನಾಡಲ್ಲ. ಬರೀ ಸುಳ್ಳು ಹೇಳಿಕೊಂಡೇ ಜನರನ್ನ ಯಾಮಾರಿಸುತ್ತಾರೆ. ಇದರ ಬಗ್ಗೆ ನಾವು ಜಾಗರೂಕರಾಗಿರಬೇಕು. ಇತ್ತೀಚೆಗಿನ ಬೆಳವಣಿಗೆಗಳನ್ನೂ ಚುನಾವಣೆಗೆ ಬಳಸಿಕೊಳ್ತಾರೆ. ಮೈತ್ರಿ ಸರ್ಕಾರದ ಬಗ್ಗೆ ಗೊಂದಲ ಕ್ರಿಯೇಟ್ ಮಾಡ್ತಾರೆ. ಅವರ ಕಾರ್ಯಕರ್ತರು ಸಹ ಅದನ್ನೇ ಮಾಡ್ತಾರೆ. ಜನರಿಗೆ ಇಲ್ಲಸಲ್ಲದ್ದನ್ನ ತಲೆಗೆ ತುಂಬಿ ಸೆಳೆಯುವ ಕೆಲಸ ಮಾಡ್ತಾರೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಮ್ಮ ಕಾರ್ಯಕರ್ತರನ್ನ ಹಿಡಿದಿಟ್ಟುಕೊಳ್ಳಬೇಕು. ಕಾರ್ಯಕರ್ತರ ಮೂಲಕವೇ ಜನರನ್ನ ತಲುಪಬೇಕು. ಇದನ್ನ ನೀವು ತಪ್ಪದೆ ಅನುಸರಿಸಬೇಕು. ಕಾರ್ಯಕರ್ತರ ಜೊತೆ ಉತ್ತಮವಾಗಿ ನಡೆದುಕೊಳ್ಳಿ ಎಂದು ಸಭೆಯಲ್ಲಿ ಮುಖಂಡರಿಗೆ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.

ಸಭೆಗೆ ತಡವಾಗಿ ಬಂದ ಡಿಕೆಶಿ:

ಸಭೆಗೆ ಕೈ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ತಡವಾಗಿ ಆಗಮಿಸಿದರು. ಎರಡೂವರೆ ಗಂಟೆ ತಡವಾಗಿ ಆಗಮಿಸಿದ ಡಿ.ಕೆ ಶಿವಕುಮಾರ್ ಕೆಲಕಾಲ ಸಭೆಯಲ್ಲಿ ಪಾಲ್ಗೊಂಡರು. ಬಂದು ಕೆಲವೇ ಹೊತ್ತಿಗೆ ಸಭೆ ಮುಗಿಯಿತು. ತಡವಾಗಿ ಸಭೆಗೆ ಆಹ್ವಾನಿಸಿದ್ದಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿಗೆ ಕ್ಲಾಸ್ ತೆಗೆದುಕೊಂಡರು. ಸಭೆಯ ಬಗ್ಗೆ ಮೊದಲೇ ಗಮನಕ್ಕೆ ತಾರದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮುಸ್ಲೀಮರ ಒತ್ತಡ:

ಚುನಾವಣಾ ಸಮಿತಿ ಸಭೆಯಲ್ಲಿ ಮುಸ್ಲಿಂ ಮುಖಂಡರು ಮೂರು ಕ್ಷೇತ್ರ ಬಿಟ್ಟು ಕೊಡುವಂತೆ ಪಟ್ಟು ಹಿಡಿದರು. ರೋಷನ್ ಬೇಗ್, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್ ಅವರಿಂದ ಒತ್ತಡ ಕೇಳಿಬಂತು. ಬೆಂಗಳೂರು ಕೇಂದ್ರ, ಬೀದರ್, ಹಾವೇರಿ ಬಿಟ್ಟು ಕೊಡುವಂತೆ ಒತ್ತಾಯ ಮಾಡಿದರು. ಬೀದರ್​ನಲ್ಲಿ ಖಂಡ್ರೆ ಕುಟುಂಬದವರಿಂದಲೂ ಸ್ಪರ್ಧೆಗೆ ಇಳಿಯಲಿದ್ದಾರೆಂತೆ. ಅಲ್ಲದೆ ಸ್ವತಃ ಈಶ್ವರ್ ಖಂಡ್ರೆ ಅವರನ್ನೇ ಸ್ಪರ್ಧೆ ಮಾಡುವಂತೆ ವೇಣುಗೋಪಾಲ್ ಸೂಚಿಸಿದ್ದಾರೆ ಎನ್ನಲಾಗಿದೆ.

ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ:

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಭೆಯ ನಂತರ ಮಾತನಾಡಿ, ಇವತ್ತಿನ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆಯಾಗಿದೆ. 12 ಮಂದಿ ಹಾಲಿ ಸಂಸದರ ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆದಿದೆ. ಒಂದೊಂದು ಕ್ಷೇತ್ರದಲ್ಲಿ ಇಬ್ಬರು, ಮೂವರು, 10 ಮಂದಿ ಇದ್ದಾರೆ. ಮತ್ತೊಮ್ಮೆ ಚರ್ಚಿಸಿ ಮೂವರನ್ನ ಆಯ್ಕೆ ಮಾಡುತ್ತೇವೆ. ನಂತರ ಸ್ಕ್ರೀನಿಂಗ್ ಕಮಿಟಿಗೆ ಕಳಿಸುತ್ತೇವೆ. ಅಲ್ಲಿ ಯಾರು ಏನು ಅನ್ನೋದನ್ನ ತೀರ್ಮಾನಿಸುತ್ತಾರೆ. ಮಾ.10 ರೊಳಗೆ ಹೊಂದಾಣಿಕೆಯೂ ಮುಗಿಯುತ್ತದೆ ಎಂದರು. ಅಲ್ಲದೆ ಬೀದರ್​ನಲ್ಲಿ ತಮ್ಮ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಯಿಸಿದ ಅವರು, ಈ ಬಗ್ಗೆ ಇಲ್ಲಿ ತೀರ್ಮಾನವಾಗಲ್ಲ. ದೆಹಲಿಯಲ್ಲಿ ವರಿಷ್ಠರು ಸೇರಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿ ತಮ್ಮ ಸ್ಪರ್ಧೆ ಬಗ್ಗೆ ಹೇಳಲು ನುಣುಚಿಕೊಂಡರು.

ಸೀಟು ಹಂಚಿಕೆ ವಿಚಾರ ಮಾತಾಡಿಲ್ಲ:

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಮಾತನಾಡಿ, ಸೀಟು ಹಂಚಿಕೆ ವಿಚಾರ ಈ ಸಭೆಯಲ್ಲಿ ಆಗಿಲ್ಲ. ನಿನ್ನೆಯೇ ದೇವೇಗೌಡರು ಹಾಗೂ ರಾಹುಲ್ ಗಾಂಧಿಯವರು ಚರ್ಚೆ ಮಾಡಿದ್ದಾರೆ. ಇದೇ 11ಕ್ಕೆ ನಾವೆಲ್ಲರೂ ದೆಹಲಿಗೆ ಹೋಗುತ್ತಿದ್ದೇವೆ. ಅಲ್ಲಿ ಎಲ್ಲವೂ ಫೈನಲ್ ಆಗುತ್ತೆ. ಒಟ್ಟು 13 ಕ್ಷೇತ್ರಗಳನ್ನ ಬಿಟ್ಟು ಉಳಿದ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅಲ್ಪಸಂಖ್ಯಾತರು ಬೀದರ್, ಬೆಂಗಳೂರು ಕೇಂದ್ರ, ಹಾವೇರಿ ಮತ್ತು ಮಂಗಳೂರು‌ ಸೇರಿ ಕೆಲವಡೆ ಕೇಳಿದ್ದಾರೆ. ಹಾಲಿ ಸಂಸದ ಕ್ಷೇತ್ರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ 10, ಜೆಡಿಎಸ್​ನ 2 ಕ್ಷೇತ್ರಗಳ ಚರ್ಚೆ ನಡೆಸಿಲ್ಲ. ಜೊತೆಗೆ ಶಿವಮೊಗ್ಗದ ಬಗ್ಗೆಯೂ ಚರ್ಚೆ ಮಾಡಿಲ್ಲ. ಹೆಚ್ಚು ಕಡಿಮೆ ಶಿವಮೊಗ್ಗ ಜೆಡಿಎಸ್​ಗೆ ಬಿಟ್ಟಿದ್ದೇವೆ. ಚರ್ಚೆ ಬಳಿಕ ನಮ್ಮ ಹೈಕಮಾಂಡ್ ಅಭ್ಯರ್ಥಿಯನ್ನ ಫೈನಲ್ ಮಾಡುತ್ತೆ. ಸೀಟು ಹಂಚಿಕೆ ಬಗ್ಗೆ ನಾವು ಇಂದು ಚರ್ಚಿಸಿಲ್ಲ ಎಂದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.