ETV Bharat / state

ಕೊನೆಗೂ ಕೆಪಿಸಿಸಿ ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಿಸಿದ ಹೈಕಮಾಂಡ್.. ಸರ್ವರಿಗೂ ಸಮಪಾಲು.. - ಕೆಪಿಸಿಸಿಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ

ಜಾತಿವಾರು ಹಂಚಿಕೆಯನ್ನು ಗಮನಿಸಿದಾಗ ಹಿಂದುಳಿದ ವರ್ಗದವರಿಗೆ 53 ಸ್ಥಾನ, ಪರಿಶಿಷ್ಟ ಜಾತಿ 25, ಪರಿಶಿಷ್ಟ ಪಂಗಡ 4, ಮಹಿಳೆ 23, ಅಲ್ಪಸಂಖ್ಯಾತರು 22, ಲಿಂಗಾಯಿತರು 19, ರೆಡ್ಡಿ ಲಿಂಗಾಯತರು 5, ಒಕ್ಕಲಿಗರು 16, ಒಬ್ಬರು ತೃತೀಯ ಲಿಂಗಿ ಹಾಗೂ ಇತರರು ನಾಲ್ವರು ಇದ್ದಾರೆ..

kpcc-committee-members-appointed-by-congress-high-command
ಕೊನೆಗೂ ಕೆಪಿಸಿಸಿ ಉಪಾಧ್ಯಕ್ಷ, ಪದಾಧಿಕಾರಿಗಳ ನೇಮಿಸಿದ ಹೈಕಮಾಂಡ್
author img

By

Published : Apr 9, 2022, 6:43 PM IST

ಬೆಂಗಳೂರು : ರಾಜ್ಯ ಕಾಂಗ್ರೆಸ್​​ನ ಬಹುದಿನದ ಬೇಡಿಕೆಯಾಗಿದ್ದ ಕೆಪಿಸಿಸಿ ಪದಾಧಿಕಾರಿಗಳ ನೇಮಕಕ್ಕೆ ಪಕ್ಷದ ಹೈಕಮಾಂಡ್ ಅಂಕಿತ ಹಾಕಿದೆ. ಮೊದಲ ಹಂತದಲ್ಲಿ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಎಐಸಿಸಿಯಿಂದ ಅಧಿಕೃತ ಪಟ್ಟಿ ಘೋಷಣೆಯಾಗಿದ್ದು, ಕಳೆದ ಮೂರು ವರ್ಷದಿಂದ ನೆನಗುದಿಗೆ ಬಿದ್ದಿದ್ದ ನೇಮಕಕ್ಕೆ ಎಐಸಿಸಿ ಮುದ್ರೆಯೊತ್ತಿದೆ.

kpcc-committee-members-appointed-by-congress-high-command
ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

ಮೊದಲ ಹಂತದಲ್ಲಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ನೇಮಕ ಮಾಡಲಾಗಿದೆ. 40 ಮಂದಿಗೆ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ, 109 ಮಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡಿ ಆದೇಶ ಹೊರಡಿಸಲಾಗಿದೆ. ಈ ದಿನದ ಕಾಂಗ್ರೆಸ್ ಬೇಡಿಕೆಯನ್ನು ಚುನಾವಣೆ ವರ್ಷದಲ್ಲಿ ಈಡೇರಿಸಿರುವ ಕಾಂಗ್ರೆಸ್ ಹೈಕಮಾಂಡ್, ರಾಜ್ಯ ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷದ ಎಲ್ಲಾ ಸಮಿತಿಗಳನ್ನು ವಿಸರ್ಜನೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಹೊರಡಿಸಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್ ಗುಂಡೂರಾವ್ ಹಾಗೂ ಕಾರ್ಯಾಧ್ಯಕ್ಷರಾಗಿ ಈಶ್ವರ್ ಖಂಡ್ರೆ ಅವರನ್ನು ಉಳಿಸಿ ಉಳಿದ ಎಲ್ಲರ ಸ್ಥಾನವನ್ನು ವಿಸರ್ಜಿಸಿತ್ತು. ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಡಿ ಕೆ ಶಿವಕುಮಾರ್, ಕಳೆದ ಎರಡೂವರೆ ವರ್ಷಗಳಿಂದ ಪದಾಧಿಕಾರಿಗಳ ನೇಮಕಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು.

ಇತ್ತೀಚೆಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿಯೂ ಹಲವು ನಾಯಕರು ಪದಾಧಿಕಾರಿಗಳ ನೇಮಕಕ್ಕೆ ಒತ್ತಡ ಹೇರಿದ್ದರು. ಇದೀಗ ಅಂತಿಮವಾಗಿ ಕಾಂಗ್ರೆಸ್ ಇಂಥದ್ದೊಂದು ಅವಕಾಶಕ್ಕೆ ಅಂತಿಮ ಮುದ್ರೆ ಒತ್ತಿದೆ.

ಜಾತಿವಾರು ಹಂಚಿಕೆಯನ್ನು ಗಮನಿಸಿದಾಗ ಹಿಂದುಳಿದ ವರ್ಗದವರಿಗೆ 53 ಸ್ಥಾನ, ಪರಿಶಿಷ್ಟ ಜಾತಿ 25, ಪರಿಶಿಷ್ಟ ಪಂಗಡ 4, ಮಹಿಳೆ 23, ಅಲ್ಪಸಂಖ್ಯಾತರು 22, ಲಿಂಗಾಯಿತರು 19, ರೆಡ್ಡಿ ಲಿಂಗಾಯತರು 5, ಒಕ್ಕಲಿಗರು 16, ಒಬ್ಬರು ತೃತೀಯ ಲಿಂಗಿ ಹಾಗೂ ಇತರರು ನಾಲ್ವರು ಇದ್ದಾರೆ.

ಇದನ್ನೂ ಓದಿ: ಗುಡ್​ನ್ಯೂಸ್ ​: ಕೋವಿಶೀಲ್ಡ್​, ಕೋವ್ಯಾಕ್ಸಿನ್​​​​​ ಬೂಸ್ಟರ್ ಡೋಸ್​​​​ ದರದಲ್ಲಿ ಇಳಿಕೆ.. ಪ್ರತಿ ಡೋಸ್​ಗೆ 225 ರೂ. ಮಾತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.