ETV Bharat / state

ಕೋರಮಂಗಲ ಡಬಲ್ ಮರ್ಡರ್ ಪ್ರಕರಣ: ಸಹೋದರರ ಸಹಿತ ಮೂವರು ಆರೋಪಿಗಳ ಬಂಧನ - ಕೊಲೆ ಮತ್ತು ದರೋಡೆ ಪ್ರಕರಣ

ಕೆಲಸಗಾರ ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದ ಮೂವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

Three arrested accused
ಮೂವರು ಬಂಧಿತ ಆರೋಪಿಗಳು
author img

By

Published : Dec 20, 2022, 2:49 PM IST

ನಗರ ಪೊಲೀಸ್​ ಆಯುಕ್ತ ಸಿ ಹೆಚ್​ ಪ್ರತಾಪ್​ ರೆಡ್ಡಿ

ಬೆಂಗಳೂರು: ಅನ್ನ ಆಶ್ರಯ ನೀಡಿದ್ದವನ ಮನೆಯಲ್ಲಿ ನೆತ್ತರು ಹರಿಸಿ ದರೋಡೆಗೈದಿದ್ದ ಆರೋಪಿ ಮತ್ತು ಆತನ ಸಹಚರರನ್ನು ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೋರಮಂಗಲ ಆರನೇ ಹಂತದಲ್ಲಿ ನಡೆದಿದ್ದ ಡಬಲ್ ಮರ್ಡರ್ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪ್ರಕರಣ ವರದಿಯಾದ 48 ಗಂಟೆಗಳಲ್ಲಿ ಕೋರಮಂಗಲ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಜಗದೀಶ ಹಾಗೂ ಅಭಿಷೇಕ್ ಹಾಗೂ ಕಿರಣ್ ಬಂಧಿತ ಆರೋಪಿಗಳು.

ಡಿಸೆಂಬರ್ 17ರ ರಾತ್ರಿ ಕೋರಮಂಗಲ ಆರನೇ ಹಂತದಲ್ಲಿರುವ ಕಾಂಟ್ರಾಕ್ಟರ್ ಗೋಪಾಲರೆಡ್ಡಿ ಎಂಬುವವರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ದಿಲ್ ಬಹದ್ದೂರ್ ಹಾಗೂ ಮನೆ ಕೆಲಸಗಾರ ಕರಿಯಪ್ಪ ಎಂಬಾತನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದ ಆರೋಪಿಗಳು ಐದು ಲಕ್ಷ ನಗದು ಹಾಗೂ ನೂರು ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ನಗರ ಪೊಲೀಸ್​ ಆಯುಕ್ತ ಸಿ ಹೆಚ್​ ಪ್ರತಾಪ್​ ರೆಡ್ಡಿ ತಿಳಿಸಿದ್ದಾರೆ.

ಮಾಜಿ ಚಾಲಕನೇ ಮಾಸ್ಟರ್ ಮೈಂಡ್: ಆರೋಪಿ ಜಗದೀಶ್ ಕಳೆದ ಕೆಲ ವರ್ಷಗಳಿಂದ ಗೋಪಾಲರೆಡ್ಡಿ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಎರಡೂವರೆ ತಿಂಗಳ ಹಿಂದೆ ಗೋಪಾಲರೆಡ್ಡಿಯವರ ಬೆಲೆ ಬಾಳುವ ಕಾರನ್ನು ಶೋಕಿಗಾಗಿ ಒಬ್ಬನೇ ತೆಗೆದುಕೊಂಡು ಹೋಗಿ ಅಪಘಾತ ಮಾಡಿಕೊಂಡಿದ್ದನು. ಸಿಟ್ಟಿಗೆದ್ದ ಗೋಪಾಲರೆಡ್ಡಿ ಜಗದೀಶನ ಮನೆಯವರನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿಸಿದ್ದರು.

ಬಳಿಕ ಜಗದೀಶನನ್ನು ಕೆಲಸದಿಂದ ಬಿಡಿಸಿ ಬೇರೆ ಚಾಲಕನನ್ನು ನೇಮಿಸಲಾಗಿತ್ತು. ಕೆಲಸ ಕಳೆದುಕೊಂಡ ಜಗದೀಶ ಗೋಪಾಲರೆಡ್ಡಿಯ ಹೊಸ ಚಾಲಕನ ಜೊತೆ ಸಂಪರ್ಕದಲ್ಲಿದ್ದನು. ಡಿಸೆಂಬರ್ 15ರಂದು ಜಗದೀಶ ಗೋಪಾಲರೆಡ್ಡಿ ಚಾಲಕನಿಗೆ ಕರೆ ಮಾಡಿದಾಗ ಗೋಪಾಲರೆಡ್ಡಿ ಕುಟುಂಬ ಆಂಧ್ರಪ್ರದೇಶದ ಅನಂತಪುರಕ್ಕೆ ಮದುವೆ ಸಮಾರಂಭಕ್ಕೆ ಹೋಗಿರುವುದು ತಿಳಿದಿತ್ತು. ಸೇಡು ತೀರಿಸಿಕೊಳ್ಳಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಜಗದೀಶ್ ತನ್ನ ಸ್ನೇಹಿತ ಲಗ್ಗೆರೆಯ ಕಿರಣ್ ಹಾಗೂ ಆತನ ಸಹೋದರ ಅಭಿಷೇಕ್ ಜೊತೆ ಸೇರಿ ಗೋಪಾಲರೆಡ್ಡಿಯ ಮನೆಗೆ ಬಂದಿದ್ದನು.

ಗೋಪಾಲರೆಡ್ಡಿಯ ಮನೆಯ ಬಗ್ಗೆ ಸಂಪೂರ್ಣ ತಿಳಿದಿದ್ದ ಜಗದೀಶ್ ಮೊದಲು ಸ್ಟೂಲ್ ಬಳಸಿ ಮನೆಯ ಹಿಂಭಾಗದ ಕಂಪೌಂಡ್ ಜಿಗಿದು ಒಳಬಂದಿದ್ದನು. ಬಳಿಕ ಸಿಸಿ ಕ್ಯಾಮರಾಗಳ ವೈರ್ ಕತ್ತರಿಸಿ ಸೆಕ್ಯೂರಿಟಿ ರೂಂನಲ್ಲಿದ್ದ ದಿಲ್ ಬಹದ್ದೂರ್​ನನ್ನು ಉಸಿರುಗಟ್ಟಿಸಿ ಮೈ ಕೈಗೆ ಟೇಪನ್ನು ಸುತ್ತಿ ಸಂಪ್​ಗೆ ಎಸೆದಿದ್ದನು. ನಂತರ ಕಿರಣ್ ಹಾಗೂ ಅಭಿಷೇಕನನ್ನು ಮನೆಯ ಕಾಂಪೌಂಡಿನೊಳಗೆ ಕರೆಸಿಕೊಂಡಿದ್ದನು. ಮೂವರೂ ಸೇರಿ ಇಡೀ ರಾತ್ರಿ ಮನೆಯ ಬಾಗಿಲ ಬಳಿ ಕಾದು ಕುಳಿತಿದ್ದರು. ಡಿಸೆಂಬರ್ 17ರ ಬೆಳಗ್ಗೆ ಮನೆಗೆಲಸದ ಕರಿಯಪ್ಪ ಮನೆ ಬಾಗಿಲು ತೆರೆಯುತ್ತಿದ್ದಂತೆ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ದೋಚಿ ಬಂದ ಆಟೋದಲ್ಲೇ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣಾ ಪೊಲೀಸರು ಬ್ಯಾಡರಹಳ್ಳಿ, ಕುಣಿಗಲ್​ನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಗದೀಶ್ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿಯೂ ಒಂದು ಪ್ರಕರಣವಿದ್ದು, ಸದ್ಯ ಮೂವರನ್ನೂ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ಇದನ್ನೂ ಓದಿ: ಕೋರಮಂಗಲ ಜೋಡಿ‌ ಕೊಲೆ ಪ್ರಕರಣ: ಪರಿಚಯಸ್ಥರಿಂದಲೇ ಕೃತ್ಯ ನಡೆದಿರುವ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.