ETV Bharat / state

ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿ ವರುಣನ ಆರ್ಭಟ.

ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿ ಬಿರುಗಾಳಿ ಸಮೇತ ಭಾರಿ ಮಳೆಯಾಗಿದ್ದು, ಅಲೆಮಾರಿಗಳ ಜೋಪಡಿಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ. ಬಿರುಗಾಳಿಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

author img

By

Published : May 25, 2019, 9:03 PM IST

ಗಡಿಭಾಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ

ಆನೇಕಲ್ : ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಬಿರುಗಾಳಿಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಸಂಚಾರಕ್ಕೂ ಅಡ್ಡಿಯುಂಟಾಗಿದೆ.

ಭಾರಿ ಬಿರುಗಾಳಿ ಬೀಸಿದ ಪರಿಣಾಮ ಬಯಲಲ್ಲಿ ವಾಸವಾಗಿದ್ದ ಅಲೆಮಾರಿಗಳ ಜೋಪಡಿಗಳು ಗಾಳಿಯ ರಭಸಕ್ಕೆ ಹಾರಿ ಹೋಗಿವೆ, ಮನೆ ಶೀಟ್​ಗಳು ನಡುಗುತ್ತಿದ್ದು, ಗಿಡ ಮರಗಳು ನೆಲಕ್ಕಪ್ಪಳಿಸಿವೆ. ಇನ್ನೂ ಬೈಕ್ ಸವಾರರು ಮಳೆಯಿಂದ ಆಶ್ರಯ ಪಡೆಯಲು ಮರ, ಕಟ್ಟಡಗಳ ಆಸರೆ ಪಡೆಯಲು ಕೂಡ ಹಿಂಜರಿಯುವಷ್ಟರ ಮಟ್ಟಿಗೆ ಗಾಳಿ ಬೀಸುತ್ತಿದ್ದು ಸಂಚಾರಿಗಳು ಪರಿತಪ್ಪಿಸುವಂತಾಗಿದೆ.

ಗಡಿಭಾಗದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆ

ಮಳೆಗಿಂತ ಹೆಚ್ಚಾಗಿ ಬೀಸುತ್ತಿರುವ ಬಿರುಗಾಳಿಗೆ ಜನರು ಭಯಭೀತರಾಗಿದ್ದಾರೆ. ಕೆಲವೆಡೆ ಆಲಿಕಲ್ಲುಗಳು ಬಿದ್ದರೆ ಇನ್ನು ಕೆಲವೆಡೆ ಬಿರುಸು ಮಳೆ ಸದ್ದು ಮಾಡಿದೆ. ವಾರದಿಂದ ಬಿಸಿ ಹವೆಗೆ ಜನ ಬೇಸತ್ತಿದ್ದರೂ ಇಂತಹ ಮಳೆಯ ಆಗಮನವನ್ನು ನಿರೀಕ್ಷಿಸದ ಜನರಿಗೆ ಏಕಾಏಕಿ ಹೊಸೂರು ಕಡೆಯಿಂದ ಮಳೆಯ ಆಗಮನ ಜನರಲ್ಲಿ ಮಂದಹಾಸದ ಜೊತೆಗೆ ಭೀತಿಯನ್ನು ತಂದೊಡ್ಡಿದೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.