ETV Bharat / state

ವಿಧಾನಸಭೆ ಚುನಾವಣೆ: ರಾಜ್ಯ ನಾಯಕರೊಂದಿಗೆ ಖರ್ಗೆ ಮಹತ್ವದ ಸಭೆ - ಈಟಿವಿ ಭಾರತ್ ಕನ್ನಡ ನ್ಯೂಸ್​

ಟಿಕೆಟ್ ಘೋಷಣೆ ವಿಳಂಬವಾಗುವುದು ಬೇಡ. ಬರುವ ತಿಂಗಳೇ ಟಿಕೆಟ್ ಫೈನಲ್ ಆಗಲಿ. ಹೊಸಮುಖಗಳಿಗೆ ಈ ಬಾರಿ ಆದ್ಯತೆ ಸಿಗಬೇಕು. ಕಾರ್ಯಕರ್ತರ ಸಲಹೆಯ ಮೇರೆಗೆ ಪಟ್ಟಿ ತಯಾರಾಗಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೂಚಿಸಿದ್ದಾರೆ.

Etv Bharat
Etv Bharat
author img

By

Published : Dec 12, 2022, 10:03 PM IST

ಹೊಸದಿಲ್ಲಿ/ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ಇಂದು ನವ ದೆಹಲಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಡಿಸಿಎಂ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್, ಹೆಚ್ಕೆಪಿ, ಜಾರ್ಜ್, ಸಲೀಂ, ಧ್ರುವನಾರಾಯಣ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ ಹಾಗು ಡಿ.ಕೆ.ಸುರೇಶ್ ಭಾಗಿಯಾಗಿದ್ದರು.

ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಒಂದೊಂದೇ ವಿಭಾಗದ ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಪ್ರಸ್ತಾಪವಾಗಿ ಇದರ ಬಗ್ಗೆ ಖಂಡ್ರೆ ಮಾಹಿತಿ ನೀಡಿದರು. ಈ ಭಾಗದಲ್ಲಿ 41 ಕ್ಷೇತ್ರಗಳಿದ್ದು, ಪ್ರಸ್ತುತ 18 ಕ್ಷೇತ್ರಗಳಲ್ಲಿ ನಮ್ಮ‌ ಶಾಸಕರಿದ್ದಾರೆ. ನಮಗೆ ಕೆಲವು ಕ್ಷೇತ್ರಗಳು ಕಠಿಣವಾಗಿದ್ದು, ಕಲಬುರಗಿ‌ ದಕ್ಷಿಣ, ಬಳ್ಳಾರಿ ನಗರ, ಔರಾದ್, ಗುರುಮಿಠ್ಕಲ್, ಯಾದಗಿರಿಯಲ್ಲಿ ಗೊಂದಲಗಳಿವೆ.

ಸಮರ್ಥ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಆ ಕ್ಷೇತ್ರಗಳಲ್ಲಿ ನಾವು ಪಕ್ಷ ಸಂಘಟನೆ ಮಾಡಬೇಕಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಿದರೆ ಗೆಲ್ಲಬಹುದು. ಬಿಜೆಪಿ ಕ್ಷೇತ್ರಗಳಲ್ಲಿ‌ ಹೊಸ ಮುಖಗಳಿಗೆ ಅವಕಾಶ ನೀಡಿದಾಗ ಮಾತ್ರ ಹೆಚ್ಚಿನ ಸೀಟು ಪಡೆಯಬಹುದು ಎಂದು ಅವರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು.

ಖರ್ಗೆ ಸೂಚನೆ: ರಾಹುಲ್‌ ಜೀ ಹೇಳಿದಂತೆ 150 ಸೀಟು ಗೆಲ್ಲಬೇಕು. ನೀವಿಬ್ಬರು ಅದೇನು‌ ಮಾಡುತ್ತಿರೋ ಗೊತ್ತಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡೇ ಹೋಗಬೇಕು. ಪಕ್ಷದೊಳಗಿನ ಎಲ್ಲಾ ಬೆಳವಣಿಗೆಗಳು ಗಮನದಲ್ಲಿವೆ. ನಾನು ಇಲ್ಲಿ ಬಹಿರಂಗವಾಗಿ ಏನನ್ನೂ ಹೇಳಲ್ಲ. ನೀವೇ ತಿಳಿದುಕೊಂಡು, ಸರಿಪಡಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಖರ್ಗೆ ಹೇಳಿದರು.

ಟಿಕೆಟ್ ಘೋಷಣೆ ವಿಳಂಬವಾಗುವುದು ಬೇಡ. ಬರುವ ತಿಂಗಳೇ ಟಿಕೆಟ್ ಫೈನಲ್ ಆಗಿ, ಹೊಸಮುಖಗಳಿಗೆ ಈ ಬಾರಿ ಆದ್ಯತೆ ಸಿಗಬೇಕು. ಕಾರ್ಯಕರ್ತರ ಸಲಹೆಯ ಮೇರೆಗೆ ಪಟ್ಟಿ ತಯಾರಾಗಬೇಕು ಎಂದರು. ನೀವು ಎಷ್ಟು ಬೇಗ ಚರ್ಚಿಸಿ ಪಟ್ಟಿ ಕಳುಹಿಸುತ್ತಿರೋ ಕಳಿಸಿ, ಅಷ್ಟೇ ಬೇಗ ಹೈಕಮಾಂಡ್ ಅಭ್ಯರ್ಥಿಗಳನ್ನು ಘೋಷಿಸಲಿದೆ. ನಾವು ಕಾದು ನೋಡಿ ಪಟ್ಟಿ ಬಿಡುಗಡೆ ಬೇಕಿಲ್ಲ, ಮೊದಲೇ ಮಾಡಿದರೆ ಸಮಸ್ಯೆ ಸರಿಪಡಿಸಿಕೊಂಡು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬಹುದು ಎಂದು ರಾಜ್ಯ ಕೈ ನಾಯಕರಿಗೆ ಖರ್ಗೆ ಹಿತವಚನ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ 'ಕೈ' ನಾಯಕರ ನಡುವೆ ಸಾಮರಸ್ಯ ಮೂಡಿಸಲು ನ. 30ರಂದು ಮಹತ್ವದ ಸಭೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.