ETV Bharat / state

Watch.. ರಾಜಕೀಯಕ್ಕೆ ನಮ್ಮ ವೈಯಕ್ತಿಕ ವಿಚಾರ ಎಳೆದು ತರಬೇಡಿ...  ಕಣ್ಣೀರಿಟ್ಟ ಕೆಜಿಎಫ್ ಬಾಬು ಕುಟುಂಬ - ಕೆಜಿಎಫ್ ಬಾಬು ಪತ್ನಿಯರಿಂದ ಸುದ್ದಿಗೋಷ್ಠಿ

ಕೆಜಿಎಫ್ ಬಾಬು ಮೇಲೆ ಕೇಳಿ ಬಂದ ಆರೋಪಕ್ಕೆ ಇಂದು ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದ್ದಾರೆ. ಕುಟುಂಬ ಸಮೇತರಾಗಿ ಹಾಜರಾದ ಅವರು ಭಾವುಕರಾಗಿ ರಾಜಕೀಯಕ್ಕೆ ವೈಯಕ್ತಿಕ ವಿಚಾರ ಎಳೆದು ತರಬೇಡಿ, ನಮ್ಮ ಸಂಸಾರ ಹಾಳು ಮಾಡಬೇಡಿ ಎಂದು ಗೋಗರೆದಿದ್ದಾರೆ.

kgf-babu-family tears in press meet
ಕೆಜಿಎಫ್ ಬಾಬು ಕುಟುಂಬ ಕಣ್ಣೀರು
author img

By

Published : Dec 1, 2021, 3:35 PM IST

ಬೆಂಗಳೂರು: ರಾಜಕೀಯಕ್ಕೆ ನಮ್ಮ ಕುಟುಂಬದ ವೈಯಕ್ತಿಕ ವಿಚಾರ ಯಾಕೆ ತರುತ್ತೀರಿ ಎಂದು ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಕೆಜಿಎಫ್ ಬಾಬು ಪತ್ನಿ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪತ್ನಿ ರೂಕ್ಸಾನ, ನಾವೀಗ ಅನ್ಯೋನ್ಯವಾಗಿದ್ದೇವೆ, ನಮ್ಮ ಸಂಸಾರ ಮತ್ತೆ ಹಾಳು ಮಾಡಬೇಡಿ ಎಂದು ಭಾವುಕರಾದರು.

ನನ್ನ ಗಂಡ ದೇವರ ಸಮಾನ, ನನ್ನನ್ನು ಚೆನ್ನಾಗಿ ನೋಡುಕೊಳ್ಳುತ್ತಿದ್ದಾರೆ. ಇಬ್ಬರೂ ಮಾತನಾಡಿ ಕೇಸ್ ವಾಪಸ್​​ ಪಡೆದಿದ್ದೇವೆ. ನಮ್ಮ ಮನೆ ಹಾಳು ಮಾಡಬೇಡಿ. ಮಗಳ ಸಂಸಾರ ಹಾಳು ಮಾಡಬೇಡಿ. ರಾಜಕೀಯಕ್ಕೆ ಬಂದಿದ್ದಾರೆ ಅಂತ ಮತ್ತೆ ಆರೋಪ ಮಾಡುವುದು ಬೇಡ ಎಂದು ಕಣ್ಣೀರು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಕೆಜಿಎಫ್ ಬಾಬು ಕುಟುಂಬ

ಬಳಿಕ ಕೆಜಿಎಫ್ ಬಾಬು ಮಾತನಾಡಿ, ಹೆಂಡತಿ, ಮಗಳು ನನಗೆ ಪ್ರಾಣ. ನವೀದ್ ಅಂತ ಸ್ನೇಹಿತ ಈತ ಪ್ರಾಪರ್ಟಿ ತೆಗೆದುಕೊಂಡಿದ್ದ. ಇನ್ನೂರು ಮೂನ್ನೂರು ಕೋಟಿ‌ ಪ್ರಾಪರ್ಟಿ ವ್ಯವಹಾರದಲ್ಲಿ ಅವನು ಮೋಸ ಮಾಡಿದ್ದ. ಈ ಸಂದರ್ಭದಲ್ಲಿ ಎರಡನೇ ಹೆಂಡತಿ ನನ್ನ ಆಫೀಸ್​​ನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಒಪ್ಪಿ ಮದುವೆ ಆದೆವು. ಆದರೆ, ಈ ವಿಚಾರ ಮೊದಲ ಹೆಂಡತಿಗೆ ಗೊತ್ತಿರಲಿಲ್ಲ ಎಂದರು.

ಕಣ್ಣೀರಿಟ್ಟ ಕೆಜಿಎಫ್ ಬಾಬು: ಈ ವಿಚಾರ ಗೊತ್ತಾದ ಬಳಿಕ ನವೀದ್ ನನ್ನ ಮೊದಲ ಹೆಂಡತಿಗೆ ಹೇಳಿ ಕೇಸ್ ಹಾಕಿಸಿದ. ಆದರೆ, ಈಗ ಎಲ್ಲವೂ ಸರಿಯಾಗಿದೆ. ನಾವು ಸಂತೋಷದಿಂದ ಇದ್ದೇವೆ ಎಂದರು. ಕೋರ್ಟಿನಲ್ಲಿ ಮೊದಲ ಪತ್ನಿ ರೂಕ್ಸಾನ 1 ಸಾವಿರ ಕೋಟಿ‌ ಪರಿಹಾರಕ್ಕೆ ಕೇಸ್ ಹಾಕಿದ್ರು. ಆದರೆ, ಈ ಆಸ್ತಿ ನನಗೆ ಬೇಡ ಎಲ್ಲ ನಿನ್ನದೇ ಎಂದು ಹೇಳಿದಾಗ ಆಕೆ ನನ್ನೊಡನೆ ಜೀವನ ಸಾಗಿಸಲು ಮುಂದಾದಳು ಎಂದರು.

ಎಸ್​​​.ಟಿ ಸೋಮಶೇಖರ್ ಆರೋಪ ಸಂಬಂಧ ಕೇಳಿದ ಪ್ರಶ್ನೆಗೆ ಕೆಜಿಎಫ್ ಬಾಬು ಕಣ್ಣೀರಿಟ್ಟು ಸುದ್ದಿಗೋಷ್ಠಿಯಿಂದ ಹೊರನಡೆದರು. ಅಲ್ಲದೇ ಎಸ್.ಟಿ ಸೋಮಶೇಖರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲು ನಿರ್ಧಾರಿಸಿರುವುದಾಗಿ ತಿಳಿಸಿದರು.

ಇದನ್ನೂ ಓದಿ: ಪರಿಷತ್​ ಚುನಾವಣೆ 2023 ಎಲೆಕ್ಷನ್​​​ ದಿಕ್ಸೂಚಿ ಅಲ್ಲ: ಹೆಚ್​ಡಿ ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.