ETV Bharat / state

ಕೋವಿಡ್‌ ವಾರಿಯರ್ಸ್‌ಗಳಿಂದಾಗಿ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ: ನಟ ರಮೇಶ್‌ ಅರವಿಂದ್ - ರಮೇಶ್ ಅರವಿಂದ್​ ಚಾಲನೆ

ಕೃತಜ್ಞಾ ಕಾರ್ಯಕ್ರಮದ ಹೆಸರಿನಡಿ ನಗರದ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಆಸ್ಪತ್ರೆ ವೈದ್ಯರು, ನರ್ಸ್, ಭದ್ರತಾ ಸಿಬ್ಬಂದಿ ಅಥವಾ ಶವಸಂಸ್ಕಾರಕ್ಕೆ ನೆರವಾದವರನ್ನು ಗುರುತಿಸಿ, ಆಸ್ಪತ್ರೆ ಬಳಿಯೇ ಹೋಗಿ ಸನ್ಮಾನ ಹಾಗೂ ಪ್ರಶಸ್ತಿ ನೀಡಲು ಕಾವೇರಿ ಆಸ್ಪತ್ರೆ ಮುಂದಾಗಿದೆ.

ರಮೇಶ್ ಅರವಿಂದ್​ ಚಾಲನೆ
ರಮೇಶ್ ಅರವಿಂದ್​ ಚಾಲನೆ
author img

By

Published : Jul 19, 2021, 5:23 PM IST

ಬೆಂಗಳೂರು: ಆರೋಗ್ಯ ತುರ್ತುಪರಿಸ್ಥಿತಿಯಾದ ಕೋವಿಡ್ ಸಮಯದಲ್ಲಿ ದುಡಿದು, ಲಕ್ಷಾಂತರ‌ ಜನರ ಆರೋಗ್ಯ ಕಾಪಾಡಿದ ಕೋವಿಡ್ ವಾರಿಯರ್​​ಗಳ ನೆರವಿಗೆ ಕಾವೇರಿ ಆಸ್ಪತ್ರೆ ಮುಂದೆ ಬಂದಿದೆ.

ಕೃತಜ್ಞಾ ಕಾರ್ಯಕ್ರಮದ ಹೆಸರಿನಡಿ ನಗರದ 300ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ಆಸ್ಪತ್ರೆ ವೈದ್ಯರು, ನರ್ಸ್, ಸೆಕ್ಯೂರಿಟಿ ಅಥವಾ ಶವಸಂಸ್ಕಾರಕ್ಕೆ ನೆರವಾದವರನ್ನು ಗುರುತಿಸಿ, ಆಸ್ಪತ್ರೆ ಬಳಿಯೇ ಹೋಗಿ ಸನ್ಮಾನ ಹಾಗೂ ಪ್ರಶಸ್ತಿ ನೀಡಲು ಆಸ್ಪತ್ರೆ ಮುಂದಾಗಿದೆ.

ಕೃತಜ್ಞಾ ಕಾರ್ಯಕ್ರಮದ ಹೆಸರಿನಡಿ ಕೋವಿಡ್​ ವಾರಿಯರ್​ಗಳಿಗೆ ಪ್ರಶಸ್ತಿ

ಈ ಕಾರ್ಯಕ್ರಮಕ್ಕೆ ಇಂದು ನಟ ರಮೇಶ್ ಅರವಿಂದ್ ಚಾಲನೆ ನೀಡಿದರು. ಇಂದಿನಿಂದಲೇ ವಿಕ್ಟೋರಿಯಾ, ಕೆ.ಸಿ ಜನರಲ್ ಆಸ್ಪತ್ರೆ ಬಳಿ ಹೋಗಿ ಗುರುತಿಸಿರುವ ಕೋವಿಡ್ ವಾರಿಯರ್​ಗಳಿಗೆ ಸನ್ಮಾನ ಮಾಡುವುದು. ಅಥವಾ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಕೋವಿಡ್ ವಾರಿಯರ್ ಮಕ್ಕಳ ವಿದ್ಯಾಭ್ಯಾಸಕ್ಕೆ ಎರಡು ಲಕ್ಷ ರೂ ಹಾಗೂ ಅವರು ಓದಿದ ಪದವಿಯ ಹಿನ್ನಲೆಯಲ್ಲಿ ಕೆಲಸ ನೀಡುವ ಕಾರ್ಯಕ್ರಮವನ್ನೂ ಆರಂಭಿಸಲಾಗಿದೆ.

ಈ ತಂಡದಲ್ಲಿ 8 ಜನ ತಜ್ಞ ವೈದ್ಯರಿದ್ದು, ಈ ತಂಡ ಆಯ್ಕೆ ಮಾಡುವ ವಾರಿಯರ್​​ಗಳಿಗೆ ಪ್ರಶಸ್ತಿ ನೀಡುವುದು, ಕೋವಿಡ್ ಸಮಯದಲ್ಲಾದ ಉತ್ತಮ ಸಂಶೋಧನೆಗಳಿಗೆ ಇನ್ನೋವೇಷನ್ ಅವಾರ್ಡ್ ನೀಡುವುದು ಹಾಗೂ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ್, ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್‌ಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಅವರ ಋಣ ಎಲ್ಲರ ಮೇಲೂ ಇದೆ. 2 ವರ್ಷದಿಂದ ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್‌ಗಳಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ ಎಂದರು.

ಇದನ್ನೂ ಓದಿ: ನಮ್ಮ ಚಿತ್ರರಂಗ ಬೀದಿ ಚರ್ಚೆಗೆ ವಿಷಯವಾಗದಿರಲಿ : ದಚ್ಚು-ಇಜಿಲ ಜಟಾಪಟಿಗೆ ಜಗ್ಗೇಶ್ ಗರಂ

ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಇಂದಿನಿಂದ ಪ್ರತಿನಿತ್ಯ ಆಸ್ಪತ್ರೆಗಳ ಬಳಿ ಹೋಗಿ ಕೋವಿಡ್‌ ವಾರಿಯರ್ಸ್‌ ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಅಂತಿಮ ಕಾರ್ಯಕ್ರಮ ಜುಲೈ 31 ರಂದು ಡಿಸಿಎಂ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ನಡೆಸಲಾಗುವುದು ಎಂದರು.

ಈ ಕಾರ್ಯಕ್ರಮದ ಫಲಾನುಭವಿಗಳಾಗಲು ವೆಬ್‌ಸೈಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಫನಾ ಹಾಗೂ ಐಎಮ್ ಎ ಸಂಸ್ಥೆಗಳೂ ಜೊತೆ ಕೈಜೋಡಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಯಕ್ಕೆ ಈ ಕಾರ್ಯಕ್ರಮ ಬೆಂಗಳೂರು ವ್ಯಾಪ್ತಿಗೆ ಸೀಮಿತವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.