ETV Bharat / state

ರಷ್ಯಾದಲ್ಲಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಹೆಸರು ನೋಂದಾಯಿಸಲು ಜಿ.ಸಿ. ಚಂದ್ರಶೇಖರ್ ಕರೆ - Karnataka Students stuck in Russia

ರಷ್ಯಾದಲ್ಲಿ ಸಿಲುಕಿರುವ ಕರ್ನಾಟಕದ 200ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಹೇಳಿದ್ದಾರೆ.

Russia and India
ರಷ್ಯಾ ಮತ್ತು ಭಾರತ
author img

By

Published : Jul 7, 2020, 4:42 PM IST

ಬೆಂಗಳೂರು: ರಷ್ಯಾದಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳನ್ನು ಕರೆತರಲು ವ್ಯವಸ್ಥೆ ಮಾಡಲಾಗಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್ ಮನವಿ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಷ್ಯಾದಲ್ಲಿ ಸಿಲುಕಿರುವ 200ಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳೇ ಚಾರ್ಟೆಡ್ ಫ್ಲೈಟ್ ಹಾಗೂ ವಂದೇ ಭಾರತ್ ಮಿಷನ್​​​ನ ಫ್ಲೈಟ್​​​ಗಳನ್ನೂ ಸಹ ನಿಮ್ಮ ಅನುಕೂಲಕ್ಕೆ ಕಡಿಮೆ ದರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಸೇರಿಸಲು ಇಂದು ನಮ್ಮ ಕಚೇರಿಯನ್ನು ಸಂಪರ್ಕಿಸಿ. ಇ-ಮೇಲ್- pa2gcmp@gmail.com, ವಾಟ್ಸ್​​ಆ್ಯಪ್​​​: +91 73491 89712 ಸಂಖ್ಯೆ ನೀಡಿದ್ದಾರೆ.

Karnataka Students stuck in Russia
ಹೆಸರು ನೋಂದಣಿ ಮಾಡಿಕೊಳ್ಳಲು ಮಾಡಿರುವ ಟ್ವೀಟ್​

ನೂರು ವರ್ಷದ ಹಿಂದೆ ಇತ್ತು ಸಮಸ್ಯೆ: ಮತ್ತೊಂದು ಟ್ವೀಟ್​​ನಲ್ಲಿ ಬೆಂಗಳೂರಿನ ಮುನ್ಸಿಪಲ್ ಕೌನ್ಸಿಲ್ ನೀಡಿದ ನೋಟಿಸ್ ಚಿತ್ರವನ್ನು ಲಗತ್ತಿಸಿರುವ ಅವರು, ಸುಮಾರು 100 ವರ್ಷಗಳ ಹಿಂದೆ ವಿಶ್ವದಾದ್ಯಂತ 5 ಕೋಟಿ ಜನರನ್ನು ಬಲಿ ತೆಗೆದುಕೊಂಡ ಸಾಂಕ್ರಾಮಿಕ ರೋಗ 'ಸ್ಪ್ಯಾನಿಷ್ ಫ್ಲೂ' ತಡೆಗಟ್ಟಲು ಜನಸಂದಣಿ ಇರುವ ನಾಟಕ ಮತ್ತು ಸಿನಿಮಾ ಥಿಯೇಟರ್​​​ಗಳಿಗೆ ಹೋಗಬೇಡಿ ಎಂದು ಅಂದಿನ ಬೆಂಗಳೂರು ನಗರ ಮುನ್ಸಿಪಲ್ ಕೌನ್ಸಿಲ್ ನೀಡಿದ್ದ ನೋಟಿಸ್! ಎಂದು ವಿವರಿಸಿದ್ದಾರೆ.

Karnataka Students stuck in Russia
ಜಿ.ಸಿ.ಚಂದ್ರಶೇಖರ್ ಅವರ ಟ್ವೀಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.