ETV Bharat / state

ಕಬ್ಬನ್ ಪಾರ್ಕ್​​​ನಲ್ಲಿ ಹೊಸ ಕಟ್ಟಡ ನಿರ್ಮಿಸುತ್ತಿಲ್ಲ : ಹೈಕೋರ್ಟ್​​ಗೆ ಸರ್ಕಾರದ ಸ್ಪಷ್ಟನೆ - ಕಬ್ಬನ್ ಪಾರ್ಕ್​ನಲ್ಲಿರುವ ಕಟ್ಟಡಗಳು

ಬೆಂಗಳೂರಿನ ಪಾರಂಪರಿಕ ತಾಣವಾದ ಕಬ್ಬನ್ ಪಾರ್ಕ್​​ನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದರೂ ಹೈಕೋರ್ಟ್​​ನಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ವಿಭಾಗೀಯ ಪೀಠ 2001ರಲ್ಲಿ ಆದೇಶಿಸಿದೆ.

Karnataka high court
ಹೈಕೋರ್ಟ್​
author img

By

Published : Mar 5, 2021, 12:31 AM IST

Updated : Mar 5, 2021, 1:43 AM IST

ಬೆಂಗಳೂರು : ಕಬ್ಬನ್ ಪಾರ್ಕ್ ಆವರಣದಲ್ಲಿ ಯಾವುದೇ ಹೊಸ ಕಟ್ಟಡ ನಿರ್ಮಿಸುತ್ತಿಲ್ಲ, ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಕೇವಲ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ ಹೊರತು ಯಾವುದೇ ಹೊಸ ನಿರ್ಮಾಣ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ.

ಕಬ್ಬನ್ ಪಾರ್ಕ್ ಆವರಣದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಎಸ್.ಉಮೇಶ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ: ಸಿಮ್ಲಿಪಾಲ್ ಸೇರಿ 395 ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚಿನ ಹಾವಳಿ

ಈ ವೇಳೆ ಸರ್ಕಾರಿ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಸಂಘಕ್ಕೆ ಸೇರಿದ ಕಟ್ಟಡದಲ್ಲಿನ ಕೊಠಡಿ, ಕಾರಿಡಾರ್, ಎನ್‌ಜಿಓ ಹಾಲ್ ಮತ್ತು ಛಾವಣಿ ಭಾಗಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ನವೀಕರಿಸಲಾಗುತ್ತಿದೆ. ಅದು ಹೊರತುಪಡಿಸಿ ಯಾವುದೇ ಹೊಸ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ. ಅಲ್ಲದೆ, ಹೈಕೋರ್ಟ್ ಅನುಮತಿ ಪಡೆಯದೆ ಯಾವುದೇ ಹೊಸ ನಿರ್ಮಾಣ ಕಾಮಗಾರಿ ನಡೆಸುವುದಿಲ್ಲ ಎಂದು ತಿಳಿಸಿದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ನವೀಕರಣ ಕಾಮಗಾರಿ ಮುಂದುವರಿಸಲು ಅನುಮತಿ ನೀಡಿತು. ಜತೆಗೆ, ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರದ ಪರ ವಕೀಲರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ಬೆಂಗಳೂರಿನ ಪಾರಂಪರಿಕ ತಾಣವಾದ ಕಬ್ಬನ್ ಪಾರ್ಕ್​​ನಲ್ಲಿ ಯಾವುದೇ ಕಟ್ಟಡ ನಿರ್ಮಾಣ ಮಾಡಬೇಕೆಂದರೂ ಹೈಕೋರ್ಟ್​​ನಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ವಿಭಾಗೀಯ ಪೀಠ 2001ರಲ್ಲಿ ಆದೇಶಿಸಿದೆ.

ಆದರೆ, ಹೈಕೋರ್ಟ್​​ನಿಂದ ಅನುಮತಿ ಪಡೆಯದೇ ತೋಟಗಾರಿಕೆ ಇಲಾಖೆ, ಸೆಂಚುರಿ ಕ್ಲಬ್, ಪ್ರೆಸ್‌ ಕ್ಲಬ್, ಕರ್ನಾಟಕ ಸರ್ಕಾರಿ ನೌಕರರ ಸಂಘ, ವೈಎಂಸಿಎ ಸೇರಿ ಹಲವು ಕ್ಲಬ್ ಹಾಗೂ ಸರ್ಕಾರಿ ಇಲಾಖೆಗಳು ಕಬ್ಬನ್ ಪಾರ್ಕ್‌ನಲ್ಲಿ ಅನಧಿಕೃತವಾಗಿ ಶಾಶ್ವತ ಕಟ್ಟಡ ನಿರ್ಮಿಸಿವೆ. ಹೀಗಾಗಿ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

Last Updated : Mar 5, 2021, 1:43 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.