ETV Bharat / state

ಜಸ್ಟ್ ಡಯಲ್‌ಗೆ ಮಂಜೂರಾಗಿದ್ದ ಜಮೀನು ಹಿಂಪಡೆದ ಕೆಐಡಿಬಿ ಕ್ರಮ ಎತ್ತಿಹಿಡಿದ ಹೈಕೋರ್ಟ್

ಭೂಮಿ ಹಂಚಿಕೆಯಾಗಿ 8 ವರ್ಷ 10 ತಿಂಗಳು ಕಳೆದಿದ್ದರೂ ಜಸ್ಟ್​ ಡಯಲ್​ ಕಂಪನಿಯು ಜಮೀನನ್ನು ಅಭಿವೃದ್ಧಿಪಡಿಸಿ ಯೋಜನೆ ಅನುಷ್ಠಾನಗೊಳಿಸದ ಹಿನ್ನೆಲೆ ಕೆಐಡಿಬಿ ತೆಗೆದುಕೊಂಡಿರುವ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೈಕೋರ್ಟ್​ ತಿಳಿಸಿದೆ.

High Court
ಹೈಕೋರ್ಟ್​
author img

By ETV Bharat Karnataka Team

Published : Jan 18, 2024, 3:27 PM IST

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬೆಂಗಳೂರಿನ ಏರೋಸ್ಪೇಸ್ ಪಾರ್ಕ್‌ನಲ್ಲಿ 445 ಕೋಟಿ ಬಂಡವಾಳ ಹೂಡಿಕೆ ಮಾಡಿ 20 ಸಾವಿರ ಉದ್ಯೋವಕಾಶ ಸೃಷ್ಟಿಸುವುದಾಗಿ ತಿಳಿಸಿತ್ತು. ಇದಕ್ಕಾಗಿ 15 ಎಕರೆ ಜಮೀನು ಪಡೆದು 9 ವರ್ಷವಾದರೂ ಕಿಂಚಿತ್ತು ಪ್ರಗತಿಕಾರ್ಯ ಮಾಡದ ಮಾಹಿತಿ ತಂತ್ರಜ್ಞಾನ ಕಂಪನಿ ಜಸ್ಟ್ ಡಯಲ್ ಲಿಮಿಟೆಡ್‌ಗೆ ಮಂಜೂರಾಗಿದ್ದ ಭೂಮಿ ಹಿಂಪಡೆದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಭೂ ಮಂಜೂರಾತಿಯನ್ನು ರದ್ದುಪಡಿಸಿದ್ದ ಕೆಐಎಡಿಬಿ ಆದೇಶ ಅನೂರ್ಜಿತಗೊಳಿಸಲು ಕೋರಿ ಮೆರ್ಸಸ್ ಜಸ್ಟ್ ಡಯಲ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದೆ.

ಪ್ರಕರಣದಲ್ಲಿ ಕೆಐಎಡಿಬಿ 2014ರಲ್ಲೇ 15 ಎಕರೆ ಜಮೀನು ಮಂಜೂರು ಮಾಡಿದ್ದು, ಅದನ್ನು ಅರ್ಜಿದಾರ ಕಂಪನಿ ಸ್ವಾಧೀನಪಡಿಸಿಕೊಂಡಿದೆ. ಒಪ್ಪಂದ ಪ್ರಕಾರ ಸ್ವಾಧೀನ ಹೊಂದಿದ ದಿನದಿಂದ ಮೂರು ವರ್ಷದೊಳಗೆ ಉದ್ದೇಶಿತ ಯೋಜನೆ ಜಾರಿಗೊಳಿಸಬೇಕು. ಆದರೆ, ಅರ್ಜಿದಾರ ಕಂಪನಿ ಭೂಮಿ ಮಂಜೂರಾಗಿ 9 ವರ್ಷಗಳು ಕಳೆದರೂ ಒಂದು ಇಂಚು ನೆಲವನ್ನೂ ಅಭಿವೃದ್ಧಿಪಡಿಸಿಲ್ಲ. 2023ರ ಅ.10ರಂದು ತಡೆಗೋಡೆ ನಿರ್ಮಾಣ, ಭೂಮಿ ಅಗೆಯುವ ಕೆಲಸ ಮಾಡಿದೆ. ಇದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದಾಗಿ ಬಿಂಬಿಸಿ ಭೂ ಮಂಜೂರಾತಿ ಆದೇಶ ರದ್ದು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿದೆ ಎಂದು ಪೀಠ ತಿಳಿಸಿದೆ.

ಅಲ್ಲದೆ, ತಮಗೆ ಮಂಜೂರಾದ ಭೂಮಿಗೆ ವಾಹನ ಪ್ರವೇಶಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳನ್ನು ಕೆಐಎಡಿಬಿ ಕಲ್ಪಿಸದ ಕಾರಣ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನ ಮಾಡಿಲ್ಲ. ಈ ವಿಚಾರವನ್ನು 2017ರಲ್ಲಿ ಗಮನಕ್ಕೆ ತರಲಾಗಿತ್ತು. ಮೂಲಸೌಕರ್ಯ ಕಲ್ಪಿಸಿದ್ದರೆ ಕಾಲಮಿತಿಯಲ್ಲಿ ಜಾಗದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುತ್ತಿತ್ತು. ಭೂ ಮಂಜೂರಾತಿ ಆದೇಶ ರದ್ದುಪಡಿಸುವ ಮುನ್ನ ತನ್ನ ಗಮನಕ್ಕೆ ತರಲಿಲ್ಲ ಎಂಬ ಅರ್ಜಿದಾರ ಕಂಪನಿಯ ವಾದವನ್ನು ನ್ಯಾಯಪೀಠ ತಿರಸ್ಕರಿಸಿದೆ.

ಅಲ್ಲದೆ, ಅರ್ಜಿದಾರ ಕಂಪನಿ ಈಗಲೂ ಸಹ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಕಟ್ಟಡವೂ ಇಲ್ಲ. ಕೇವಲ ಪೊದೆಗಳು ಬೆಳೆದಿವೆ. ಅರ್ಜಿದಾರ ಕಂಪನಿಗೆ ನೀಡಿರುವ ಜಾಗದ ಪಕ್ಕದಲ್ಲಿ ಇತರೆ ಎರಡು ಕಂಪನಿಗಳಿಗೆ ಜಾಗ ನೀಡಲಾಗಿತ್ತು. ಅವು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಜಾಗ ಅಭಿವೃದ್ಧಿಪಡಿಸಿದ್ದು, ಕೆಐಎಡಿಬಿ ಹೇಳುವಂತೆ 600ರಿಂದ 1000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. ಹಾಗಾಗಿ, ಮೂಲಸೌಕರ್ಯ ಕಲ್ಪಿಸಿಲ್ಲ ಎಂಬುದು ಕೇವಲ ತಂತ್ರಗಾರಿಕೆಯಾಗಿದ್ದು, ಕೆಐಎಡಿಬಿ ನಡೆಯಲ್ಲಿ ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ಪೀಠ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ಮೆರ್ಸಸ್ ಜಸ್ಟ್ ಡಯಲ್ ಲಿಮಿಟೆಡ್ 445.08 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಕಂಪನಿ ಸ್ಥಾಪಿಸಲಾಗುವುದು ಹಾಗೂ 20,991 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿ 2014ರಲ್ಲಿ ಹೈ-ಟೆಕ್, ಡಿಫೆನ್ಸ್/ಏರೋಸ್ಪೇಸ್ ಪಾರ್ಕ್‌ನಲ್ಲಿ (ಐಟಿ ಸೆಕ್ಟರ್) 15 ಎಕರೆ ಜಮೀನನ್ನು 99 ವರ್ಷಗಳ ಗುತ್ತಿಗೆಗೆ ಕೆಐಡಿಬಿಯಿಂದ ಪಡೆದಿತ್ತು.

ಅದರಂತೆ 2014ರಿಂದ ಯಾವುದೇ ಅಡತಡೆಯಿಲ್ಲದೆ 60,632.41 ಚದರ ಮೀಟರ್ ಜಾಗವನ್ನು ಕಂಪನಿ ಸ್ವಾಧೀನಕ್ಕೆ ಪಡೆದಿತ್ತು. ಭೂ ಸ್ವಾಧೀನ ಪತ್ರ ನೀಡಿದ ದಿನದಿಂದ ಮೂರು ವರ್ಷಗಳಲ್ಲಿ ಅಂದರೆ 2014ರ ಸೆ.26ರಿಂದ 2017ರ ಅ.6ರೊಳಗೆ ಯೋಜನೆ ಕಾರ್ಯಗತಗೊಳಿಸಬೇಕು ಎಂಬುದಾಗಿ ಕಂಪನಿ ಹಾಗೂ ಕೆಐಎಡಿಬಿ ನಡುವೆ ಒಪ್ಪಂದವಾಗಿತ್ತು. ಆದರೆ, ಭೂಮಿ ಹಂಚಿಕೆಯಾಗಿ 8 ವರ್ಷ 10 ತಿಂಗಳು ಕಳೆದಿದ್ದರೂ ಕಂಪನಿಯು ಜಮೀನನ್ನು ಅಭಿವೃದ್ಧಿಪಡಿಸಿ ಯೋಜನೆ ಅನುಷ್ಠಾನಗೊಳಿಸಿರಲಿಲ್ಲ. ಆದ ಕಾರಣ ಭೂಮಿ ಹಂಚಿಕೆಯನ್ನು ರದ್ದುಪಡಿಸಲಾಗುತ್ತಿದೆ. 2023ರ ಅ.24ರೊಳಗೆ ಭೂಮಿಯನ್ನು ತನ್ನ ವಶಕ್ಕೆ ವಹಿಸಬೇಕು ಎಂದು 2023ರ ಸೆ.25ರಂದು ಕೆಐಎಡಿಬಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಕದ ತಟ್ಟಿತ್ತು.

ಇದನ್ನೂ ಓದಿ: ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧೆ: ಮಾಜಿ ಶಾಸಕ ಮಂಜುನಾಥ್ ವಿರುದ್ಧ ಕ್ರಮಕ್ಕೆ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.