ETV Bharat / state

ಭ್ರಷ್ಟಾಚಾರದ ರಾಜಧಾನಿಯಾಗಿದೆ ಕರ್ನಾಟಕ.. ಫುಡ್‌ ಮೆನುವಿನಂತೆ ಲೇವಡಿ ಮಾಡಿದ ಡಿಕೆಶಿ - ಈಟಿವಿ ಭಾರತ ಕನ್ನಡ

ಇಡ್ಲಿಗೆ ಇಷ್ಟು, ಸಾಂಬಾರ್​ಗೆ ಇಷ್ಟು, ಪಲಾವ್​ಗೆ ಇಷ್ಟು ದರ ಎಂಬಂತೆ ಆಹಾರದ ಮೆನು ಕಾರ್ಡ್ ತರಹ ಭ್ರಷ್ಟಾಚಾರ ಮಾಡುತ್ತಿದ್ಧಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

karnataka-has-become-the-capital-of-corruption-says-dk-shivakumar
ಭ್ರಷ್ಟಾಚಾರದ ರಾಜಧಾನಿಯಾಗಿದೆ ನಮ್ಮ ರಾಜ್ಯ... ಮೆನು ಕಾರ್ಡ್​ ತರಹ ವಿವರಿಸಿದ ಡಿಕೆಶಿ
author img

By

Published : Aug 24, 2022, 7:23 PM IST

Updated : Aug 24, 2022, 10:41 PM IST

ಬೆಂಗಳೂರು: ಭ್ರಷ್ಟಾಚಾರದ ರಾಜಧಾನಿ ಆಗಿಬಿಟ್ಟಿದೆ ಕರ್ನಾಟಕ ರಾಜ್ಯ. ಕಮಿಷನ್​ ಆರೋಪದ ಬಗ್ಗೆ ಪ್ರಧಾನಿಯವರಿಗೆ ದೂರು ಕೊಟ್ಟು ಒಂದು ವರ್ಷಕ್ಕಿಂತ ಹೆಚ್ಚಾಯ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಗುತ್ತಿಗೆದಾರರ ಆರೋಪದಲ್ಲಿ ಹುರುಳಿಲ್ಲ ಅಂದರೆ ನೀವು (ರಾಜ್ಯ ಸರ್ಕಾರದವರು) ದೂರು ದಾಖಲಿಸಿಲ್ಲ. ನೀವು ಹಾನೆಸ್ಟ್ ಹಾಗೂ ಬಹಳ ಕ್ಲೀನ್ ಆಗಿದ್ದರೆ ತನಿಖೆಗೆ ವಹಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ತನಿಖೆಗೆ ಮೊದಲೇ ಕ್ಲೀನ್‌ಚಿಟ್: ಬೆಂಗಳೂರು ಮೆಟ್ರೋ ರೈಲು ನಿಗಮದ ಕೇಂದ್ರ ಕಚೇರಿ ಬಳಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಬ್ಬ ಗುತ್ತಿಗೆದಾರ ಸತ್ತಿದ್ದಾಗ ನ್ಯಾಯವೂ ಸಿಕ್ಲಿಲ್ಲ. ತನಿಖೆಗೂ ಮೊದಲೇ ಕೆ.ಎಸ್​.ಈಶ್ವರಪ್ಪನವರಿಗೆ ಕ್ಲೀನ್​ಚಿಟ್ ಕೊಟ್ಟಿದ್ದಾರೆ. ಇದು ಮಹಾ ಅಪರಾಧ. ಕೊಲೆಗೆ ಕಾರಣಕಾರ್ತರಾದವರ ಮೇಲೆ ಭ್ರಷ್ಟಾಚಾರದ ಕೇಸ್​ ಕೂಡ ಹಾಕಿಲ್ಲ. ಇಂತಹ ಮುತ್ತು, ರತ್ನಗಳನ್ನೆಲ್ಲ ಮತ್ತೆ ಸಂಪುಟಕ್ಕೆ ತಗೊಳ್ಳಿ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ

ನಾವು ಇಲ್ಲಿಗೇ ಬಿಡುವುದಿಲ್ಲ: ಕಮಿಷನ್​ ವಿಚಾರದ ಬಗ್ಗೆ ಪ್ರಧಾನಮಂತ್ರಿ ಹತ್ರ ದೂರು ಹೋದಾಗಲೇ ಈ ಪ್ರಕರಣವನ್ನು ಮುಖ್ಯಮಂತ್ರಿ ಯಾಕೆ ಲೋಕಾಯುಕ್ತ ತನಿಖೆಗಾಗಿ ಶಿಫಾರಸ್ಸು ಮಾಡಲಿಲ್ಲ?. ನ್ಯಾಯಾಂಗ ತನಿಖೆಯನ್ನೂ ಮಾಡಿಲ್ಲ. ಈ ವಿಷಯದಲ್ಲಿ ಭಯ ಇಲ್ಲ ಅಂದ್ರೆ ತನಿಖೆಗೆ ಕೊಡಿ, ನೀವು ಯಾಕೆ ತನಿಖೆಗೆ ಕೊಡುತ್ತಿಲ್ಲ. ಭ್ರಷ್ಟಾಚಾರ ವಿಚಾರವನ್ನು ನಾವು ಇಲ್ಲಿಗೇ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮೆನು ಕಾರ್ಡ್​ ​ತರಹ ಭ್ರಷ್ಟಾಚಾರ: ಇಡ್ಲಿಗಿಷ್ಟು, ಸಾಂಬಾರ್​ಗೆ ಇಷ್ಟು, ಪಲಾವ್​ಗೆ ಇಷ್ಟು ದರ ಎಂಬಂತೆ ಮೆನು ಕಾರ್ಡ್ ತರಹ ಭ್ರಷ್ಟಾಚಾರ ಮಾಡುತ್ತಿದ್ಧಾರೆ. ಚಾಮರಾಜನಗರ ರೈತರು ಕೂಡ ಮಿನಿಸ್ಟರ್​ಗೆ ಇಷ್ಟು ಎತ್ತಿಟ್ಕೊಂಡಿದ್ದೀವಿ ಹೇಳುತ್ತಿದ್ಧಾರೆ. ಈ ಬಗ್ಗೆ ಸರ್ಕಾರಕ್ಕೆ ತನಿಖೆ ಮಾಡಲು ಯಾಕೆ ಭಯ ಎಂದು ಡಿಕೆಶಿ ಪ್ರಶ್ನಿಸಿದರು.

ಇದನ್ನೂ ಓದಿ: ಕಮಿಷನ್​ ಆರೋಪ: ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆಯಾಗಲಿ ಎಂದ ಸಿಎಂ ಬೊಮ್ಮಾಯಿ

ಕಮಿಷನ್​ ಕುರಿತಂತೆ ಎಲ್ಲ ಆಧಾರಗಳೂ ಇವೆ ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಇದು ಕೇವಲ ಒಬ್ಬರು ಬರೆದ ಕಂಪ್ಲೇಂಟ್ ಅಲ್ಲ. ಬಿಜೆಪಿ ಕಾರ್ಯಕರ್ತರೂ ಬರೆದಿದ್ದಾರೆ. ಅವರ ಕಾರ್ಯಕರ್ತರೇ ಸತ್ತು ಹೋಗಿದ್ದಾರಲ್ಲ. ಸಮಯ ಬಂದಾಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಡಿ.ಅಂಜುಮ್ ಪರ್ವೇಜ್ ಅವರನ್ನು ಡಿ.ಕೆ ಶಿವಕುಮಾರ್ ಭೇಟಿ ಮಾಡಿ, ಆಗಸ್ಟ್ 15ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ನಿಮಿತ್ತದ ಸ್ವಾತಂತ್ರ್ಯ ನಡಿಗೆಗೆ ಸಹಕಾರ ನೀಡಿದ ಕಾರಣಕ್ಕೆ ಅಭಿನಂದಿಸಿದರು. ಈ ವೇಳೆ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ರಾಮಲಿಂಗಾರೆಡ್ಡಿ, ಮಾಜಿ ಸಚಿವ ಡಿ.ಸುಧಾಕರ್ ಇದ್ದರು.

ಇದನ್ನೂ ಓದಿ: ನಾನು ತಪ್ಪಿತಸ್ಥನಲ್ಲ, ಕೋರ್ಟ್​ನಲ್ಲೂ ನನಗೆ ಕ್ಲೀನ್​ಚಿಟ್ ಸಿಗುತ್ತೆ: ಈಶ್ವರಪ್ಪ ವಿಶ್ವಾಸ

Last Updated : Aug 24, 2022, 10:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.