ETV Bharat / state

ಗೋಹತ್ಯೆ ತಡೆ ಕಾಯ್ದೆ ರಚಿಸಿದ ಬಿಜೆಪಿ ಸರ್ಕಾರ ಗೋ ಶಾಲೆಗಳ ಸ್ಥಾಪನೆಗೇಕೆ ಉತ್ಸಾಹ ತೋರುತ್ತಿಲ್ಲ? - Karnataka Govt Not Established Goshala In Entire State

ಗೋ ಹತ್ಯೆ ನಿಷೇಧ ಕಾಯ್ದೆಯನ್ನೇನೋ ಬಿಜೆಪಿ ಸರ್ಕಾರ ಅತಿ ಉತ್ಸಾಹದಿಂದಲೇ ಜಾರಿಗೆ ತಂದಿತು. ಆದರೆ, ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಆಸಕ್ತಿ ಕಳೆದುಕೊಂಡಂತೆ ಭಾಸವಾಗುತ್ತಿದೆ.

Goshala
ಸಾಂದರ್ಭಿಕ ಚಿತ್ರ
author img

By

Published : Mar 16, 2022, 3:16 PM IST

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆ ಜಾರಿಯಾಗಿ ಈಗಾಗಲೇ ವರ್ಷವೇ ಕಳೆದಿದೆ. ಕಾಯ್ದೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.‌ ಆದರೆ, ಕಾಯ್ದೆ ಜಾರಿಯಾಗಿ ಒಂದು ವರ್ಷ ಕಳೆದರೂ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆ ಸ್ಥಾಪಿಸಲು ಸಾಧ್ಯವಾಗಿಲ್ಲ. ಗೋ ಶಾಲೆ ನಿರ್ಮಾಣದ ಸ್ಥಿತಿಗತಿ ಹೇಗಿದೆ ಎಂಬುವುದರ ಸಮಗ್ರ ವರದಿ ಇಲ್ಲಿದೆ.

ಪ್ರತಿ ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಗೋ ಶಾಲೆ ಸ್ಥಾಪನೆಯ ಪ್ರಗತಿ ಆಮೆಗತಿಯಲ್ಲಿದೆ. ಗೋ ಶಾಲೆ ನಿರ್ಮಾಣದ ಪ್ರಕ್ರಿಯೆ ಇನ್ನೂ ಭೂ ಸ್ವಾಧೀನದ ಹಂತದಲ್ಲಿದೆ. ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಮಾತ್ರ ಆರಂಭಿಕ ಕಾಮಗಾರಿ ಪ್ರಾರಂಭವಾಗಿದೆ.

ಖಾಸಗಿ ಗೋ ಶಾಲೆಗಳಿಗೆ ಹಣ ಬಿಡುಗಡೆ ಎಷ್ಟು?: ರಾಜ್ಯದ ಹಲವೆಡೆ ಕಸಾಯಿಖಾನೆಗೆ ಒಯ್ಯುವ ದನ ಕರುಗಳನ್ನು ರಕ್ಷಿಸಲಾಗುತ್ತಿದೆ. ವಿಪರ್ಯಾಸವೆಂದರೆ ರಕ್ಷಿಸಿದ ಹಸು, ಕರುಗಳನ್ನು ಎಲ್ಲಿಗೆ ಕಳುಹಿಸುವುದು ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳನ್ನು ಕಳುಹಿಸಲಾಗುತ್ತಿದೆ. ಆದರೆ ಬಹುತೇಕ ಖಾಸಗಿ ಗೋ ಶಾಲೆಗಳಲ್ಲಿ ಜಾಗವಿಲ್ಲದೇ ಹಸುಗಳಿಗೆ ಆಶ್ರಯ ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ.

ರೈತರು ಗಂಡು ಕರು, ದನಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿದೆ. ಇತ್ತ ಖಾಸಗಿ ಗೋ ಶಾಲೆಗಳಲ್ಲಿ ಹಸುಗಳಿಂದ ತುಂಬಿದ್ದು, ಸ್ಥಳಾವಕಾಶದ ಜತೆಗೆ ಅನುದಾನದ ಕೊರತೆ ಎದುರಿಸುತ್ತಿವೆ. ಸರ್ಕಾರದಿಂದ ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24 ಲಕ್ಷ ರೂ. ಪ್ರತಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಸುಮಾರು 188 ಖಾಸಗಿ ಗೋ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಅನುದಾನದ ಕೊರತೆಯಿಂದ ಬಹುತೇಕ ಖಾಸಗಿ ಗೋ ಶಾಲೆಗಳಿಗೆ ಹಸುಗಳ ನಿರ್ವಹಣೆಯೇ ದುಸ್ತರವಾಗಿದೆ.

ಆಮೆಗತಿಯಲ್ಲಿ ಸ್ಥಾಪನೆ ಕಾರ್ಯ: ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದರ ನಿರ್ಮಾಣಕ್ಕೆ ಒಟ್ಟು 15 ಕೋಟಿ ರೂ.‌ ಹಂಚಿಕೆಯಾಗಿದೆ. ಪಶುಸಂಗೋಪನೆ ಇಲಾಖೆ ನೀಡಿದ ಮಾಹಿತಿಯಂತೆ 30 ಜಿಲ್ಲೆಗಳಲ್ಲಿ ಸರ್ಕಾರಿ

ಗೋ ಶಾಲೆಗಳ ಸ್ಥಾಪನೆ ಪ್ರಕ್ರಿಯೆಯ ಸ್ಥಿತಿಗತಿ ನೋಡುವುದಾದರೆ,

  • ಬೆಂಗಳೂರು ನಗರ:
    ಸ್ಥಳ- ದೊಡ್ಡಬಳ್ಳಾಪುರ ತಾಲೂಕು
    ಜಮೀನು ವಿಸ್ತೀರ್ಣ- 35.22 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಹಂತದಲ್ಲಿದೆ
    ಹಣ ಬಿಡುಗಡೆ-36 ಲಕ್ಷ ರೂ.
  • ಬೆಂ.ಗ್ರಾಮಾಂತರ:
    ಸ್ಥಳ- ನೆಲಮಂಗಲ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ತುಮಕೂರು:
    ಸ್ಥಳ-ಶಿರಾ ತಾಲೂಕು
    ಜಮೀನು ವಿಸ್ತೀರ್ಣ-9.20 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿಕ್ಕಬಳ್ಳಾಪುರ:
    ಸ್ಥಳ- ಶಿಡ್ಲಘಟ್ಟ ತಾಲೂಕು
    ಜಮೀನು ವಿಸ್ತೀರ್ಣ- 9.38 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಹಾಸನ:
    ಸ್ಥಳ- ಅರಸೀಕೆರೆ ತಾಲೂಕು
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ-ಕೊಳವೆ ಬಾವಿ ಕೊರೆಯುವ ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಬಾಗಲಕೋಟೆ:
    ಸ್ಥಳ-ಬೀಳಗಿ ತಾಲೂಕು
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ-ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 47.50 ಲಕ್ಷ ರೂ.
  • ಮೈಸೂರು:
    ಸ್ಥಳ-ವರುಣಾ ಹೋಬಳಿ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ-ವಿದ್ಯುತ್ ಕಂಬ ಅಳವಡಿಕೆ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿಕ್ಕಮಗಳೂರು:
    ಸ್ಥಳ-ಕಡೂರು ತಾಲೂಕು
    ಜಮೀನು ವಿಸ್ತೀರ್ಣ-11 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಪೂರ್ಣ
    ಹಣ ಬಿಡುಗಡೆ- 53.50 ಲಕ್ಷ ರೂ.
  • ದಕ್ಷಿಣ ಕನ್ನಡ:
    ಸ್ಥಳ-ಕಡಬ ತಾಲೂಕು
    ಜಮೀನು ವಿಸ್ತೀರ್ಣ-98.45 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 47.50 ಲಕ್ಷ ರೂ.
  • ರಾಯಚೂರು:
    ಸ್ಥಳ-ರಾಯಚೂರು ತಾಲೂಕು
    ಜಮೀನು ವಿಸ್ತೀರ್ಣ- 6 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಹಾವೇರಿ:
    ಸ್ಥಳ-ಗುತ್ತಲ‌ಕುರಿ
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಗದಗ:
    ಸ್ಥಳ-ಹರ್ತಿ ಗ್ರಾಮ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ-ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಬಳ್ಳಾರಿ/ವಿಜಯನಗರ:
    ಸ್ಥಳ-ಹಗರಿಬೊಮ್ಮನ ಹಳ್ಳಿ ತಾಲೂಕು
    ಜಮೀನು ವಿಸ್ತೀರ್ಣ- 9.88 ಎಕರೆ
    ಪ್ರಗತಿ- 1.25 ಕೋಟಿ ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಕೊಪ್ಪಳ:
    ಸ್ಥಳ-ಯಲಭುರ್ಗಾ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ದಾವಣಗೆರೆ:
    ಸ್ಥಳ-ದಾವಣಗೆರೆ ತಾಲೂಕು
    ಜಮೀನು ವಿಸ್ತೀರ್ಣ-7 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ‌ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಾಮರಾಜನಗರ:
    ಸ್ಥಳ- ಚಾಮರಾಜನಗರ ತಾಲೂಕು
    ಜಮೀನು ವಿಸ್ತೀರ್ಣ-9 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿತ್ರದುರ್ಗ:
    ಸ್ಥಳ- ಚಳ್ಳಕೆರೆ ತಾಲೂಕು
    ಜಮೀನು ವಿಸ್ತೀರ್ಣ- 9.36 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 47.50 ಲಕ್ಷ ರೂ.
  • ವಿಜಯಪುರ:
    ಸ್ಥಳ- ವಿಜಯಪುರ ತಾಲೂಕು
    ಜಮೀನು ವಿಸ್ತೀರ್ಣ- 10 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ರಾಮನಗರ:
    ಸ್ಥಳ- ಚನ್ನಪಟ್ಟಣ ತಾಲೂಕು
    ಜಮೀನು ವಿಸ್ತೀರ್ಣ- 8 ಎಕರೆಗ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಬೆಳಗಾವಿ:
    ಸ್ಥಳ- ಹುಕ್ಕೇರಿ ತಾಲೂಕು
    ಜಮೀನು ವಿಸ್ತೀರ್ಣ- 19.04 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಮಂಡ್ಯ:
    ಸ್ಥಳ- ಮದ್ದೂರು ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ-36 ಲಕ್ಷ ರೂ.
  • ಕೊಡಗು:
    ಸ್ಥಳ- ಮಡಿಕೇರಿ ತಾಲೂಕು
    ಜಮೀನು ವಿಸ್ತೀರ್ಣ-8 ಎಕರೆ
    ಪ್ರಗತಿ-ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಧಾರವಾಡ:
    ಸ್ಥಳ-ಮದನಬಾವಿ ಗ್ರಾಮ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಕೋಲಾರ:
    ಸ್ಥಳ- ಕೆಜಿಎಫ್ ತಾಲೂಕು
    ಜಮೀನು ವಿಸ್ತೀರ್ಣ- 9.36 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಉಡುಪಿ:
    ಸ್ಥಳ- ಹೆಬ್ರಿ ತಾಲೂಕು
    ಜಮೀನು ವಿಸ್ತೀರ್ಣ-13.24 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಉತ್ತರ ಕನ್ನಡ:
    ಸ್ಥಳ- ಹಳಿಯಾಳ ತಾಲೂಕು
    ಜಮೀನು ವಿಸ್ತೀರ್ಣ- 20 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ-48.50 ಲಕ್ಷ ರೂ.
  • ಕಲಬುರಗಿ:
    ಸ್ಥಳ- ಕಲಬುರ್ಗಿ ತಾಲೂಕು
    ಜಮೀನು ವಿಸ್ತೀರ್ಣ- 25 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 47.50 ಲಕ್ಷ ರೂ.
  • ಯಾದಗಿರಿ:
    ಸ್ಥಳ- ಯಾದಗಿರಿ ತಾಲೂಕು
    ಜಮೀನು ವಿಸ್ತೀರ್ಣ- 25 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ- 47.50 ಲಕ್ಷ ರೂ.
  • ಶಿವಮೊಗ್ಗ:
    ಸ್ಥಳ- ಸಾಗರ ತಾಲೂಕು
    ಜಮೀನು ವಿಸ್ತೀರ್ಣ- 46 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ- 36 ಲಕ್ಷ ರೂ.
  • ಬೀದರ್:
    ಸ್ಥಳ- ಔರದ್ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಸ್ಥಳ ಗುರುತಿಸುವ ಕಾರ್ಯ
    ಹಣ ಬಿಡುಗಡೆ- 36 ಲಕ್ಷ ರೂ.

ಇದನ್ನೂ ಓದಿ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ!

ಬೆಂಗಳೂರು: ರಾಜ್ಯದಲ್ಲಿ ಗೋ ಹತ್ಯೆ ನಿಯಂತ್ರಣ ಕಾಯ್ದೆ ಜಾರಿಯಾಗಿ ಈಗಾಗಲೇ ವರ್ಷವೇ ಕಳೆದಿದೆ. ಕಾಯ್ದೆಯ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.‌ ಆದರೆ, ಕಾಯ್ದೆ ಜಾರಿಯಾಗಿ ಒಂದು ವರ್ಷ ಕಳೆದರೂ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆ ಸ್ಥಾಪಿಸಲು ಸಾಧ್ಯವಾಗಿಲ್ಲ. ಗೋ ಶಾಲೆ ನಿರ್ಮಾಣದ ಸ್ಥಿತಿಗತಿ ಹೇಗಿದೆ ಎಂಬುವುದರ ಸಮಗ್ರ ವರದಿ ಇಲ್ಲಿದೆ.

ಪ್ರತಿ ಜಿಲ್ಲೆಗಳಲ್ಲಿ ಗೋ ಶಾಲೆಗಳನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಗೋ ಶಾಲೆ ಸ್ಥಾಪನೆಯ ಪ್ರಗತಿ ಆಮೆಗತಿಯಲ್ಲಿದೆ. ಗೋ ಶಾಲೆ ನಿರ್ಮಾಣದ ಪ್ರಕ್ರಿಯೆ ಇನ್ನೂ ಭೂ ಸ್ವಾಧೀನದ ಹಂತದಲ್ಲಿದೆ. ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಮಾತ್ರ ಆರಂಭಿಕ ಕಾಮಗಾರಿ ಪ್ರಾರಂಭವಾಗಿದೆ.

ಖಾಸಗಿ ಗೋ ಶಾಲೆಗಳಿಗೆ ಹಣ ಬಿಡುಗಡೆ ಎಷ್ಟು?: ರಾಜ್ಯದ ಹಲವೆಡೆ ಕಸಾಯಿಖಾನೆಗೆ ಒಯ್ಯುವ ದನ ಕರುಗಳನ್ನು ರಕ್ಷಿಸಲಾಗುತ್ತಿದೆ. ವಿಪರ್ಯಾಸವೆಂದರೆ ರಕ್ಷಿಸಿದ ಹಸು, ಕರುಗಳನ್ನು ಎಲ್ಲಿಗೆ ಕಳುಹಿಸುವುದು ಎಂಬುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸದ್ಯ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳನ್ನು ಕಳುಹಿಸಲಾಗುತ್ತಿದೆ. ಆದರೆ ಬಹುತೇಕ ಖಾಸಗಿ ಗೋ ಶಾಲೆಗಳಲ್ಲಿ ಜಾಗವಿಲ್ಲದೇ ಹಸುಗಳಿಗೆ ಆಶ್ರಯ ನೀಡಲು ಸಾಧ್ಯವಾಗದ ಪರಿಸ್ಥಿತಿ ಇದೆ.

ರೈತರು ಗಂಡು ಕರು, ದನಗಳನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗುವ ಪರಿಸ್ಥಿತಿ ಬಹುತೇಕ ಜಿಲ್ಲೆಗಳಲ್ಲಿದೆ. ಇತ್ತ ಖಾಸಗಿ ಗೋ ಶಾಲೆಗಳಲ್ಲಿ ಹಸುಗಳಿಂದ ತುಂಬಿದ್ದು, ಸ್ಥಳಾವಕಾಶದ ಜತೆಗೆ ಅನುದಾನದ ಕೊರತೆ ಎದುರಿಸುತ್ತಿವೆ. ಸರ್ಕಾರದಿಂದ ಪ್ರತಿ ಜಿಲ್ಲೆಗೆ 50 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ 24 ಲಕ್ಷ ರೂ. ಪ್ರತಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ಈಗಾಗಲೇ ರಾಜ್ಯದಲ್ಲಿ ಸುಮಾರು 188 ಖಾಸಗಿ ಗೋ ಶಾಲೆಗಳು ಕಾರ್ಯ ನಿರ್ವಹಿಸುತ್ತಿದೆ. ಆದರೆ ಖಾಸಗಿ ಗೋ ಶಾಲೆಗಳಿಗೆ ರಕ್ಷಿಸಿದ ಹಸುಗಳ ನಿರ್ವಹಣೆಗೆ ಅನುದಾನದ ಕೊರತೆ ಇದೆ. ಅನುದಾನದ ಕೊರತೆಯಿಂದ ಬಹುತೇಕ ಖಾಸಗಿ ಗೋ ಶಾಲೆಗಳಿಗೆ ಹಸುಗಳ ನಿರ್ವಹಣೆಯೇ ದುಸ್ತರವಾಗಿದೆ.

ಆಮೆಗತಿಯಲ್ಲಿ ಸ್ಥಾಪನೆ ಕಾರ್ಯ: ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಇದರ ನಿರ್ಮಾಣಕ್ಕೆ ಒಟ್ಟು 15 ಕೋಟಿ ರೂ.‌ ಹಂಚಿಕೆಯಾಗಿದೆ. ಪಶುಸಂಗೋಪನೆ ಇಲಾಖೆ ನೀಡಿದ ಮಾಹಿತಿಯಂತೆ 30 ಜಿಲ್ಲೆಗಳಲ್ಲಿ ಸರ್ಕಾರಿ

ಗೋ ಶಾಲೆಗಳ ಸ್ಥಾಪನೆ ಪ್ರಕ್ರಿಯೆಯ ಸ್ಥಿತಿಗತಿ ನೋಡುವುದಾದರೆ,

  • ಬೆಂಗಳೂರು ನಗರ:
    ಸ್ಥಳ- ದೊಡ್ಡಬಳ್ಳಾಪುರ ತಾಲೂಕು
    ಜಮೀನು ವಿಸ್ತೀರ್ಣ- 35.22 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಹಂತದಲ್ಲಿದೆ
    ಹಣ ಬಿಡುಗಡೆ-36 ಲಕ್ಷ ರೂ.
  • ಬೆಂ.ಗ್ರಾಮಾಂತರ:
    ಸ್ಥಳ- ನೆಲಮಂಗಲ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ತುಮಕೂರು:
    ಸ್ಥಳ-ಶಿರಾ ತಾಲೂಕು
    ಜಮೀನು ವಿಸ್ತೀರ್ಣ-9.20 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿಕ್ಕಬಳ್ಳಾಪುರ:
    ಸ್ಥಳ- ಶಿಡ್ಲಘಟ್ಟ ತಾಲೂಕು
    ಜಮೀನು ವಿಸ್ತೀರ್ಣ- 9.38 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಹಾಸನ:
    ಸ್ಥಳ- ಅರಸೀಕೆರೆ ತಾಲೂಕು
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ-ಕೊಳವೆ ಬಾವಿ ಕೊರೆಯುವ ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಬಾಗಲಕೋಟೆ:
    ಸ್ಥಳ-ಬೀಳಗಿ ತಾಲೂಕು
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ-ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 47.50 ಲಕ್ಷ ರೂ.
  • ಮೈಸೂರು:
    ಸ್ಥಳ-ವರುಣಾ ಹೋಬಳಿ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ-ವಿದ್ಯುತ್ ಕಂಬ ಅಳವಡಿಕೆ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿಕ್ಕಮಗಳೂರು:
    ಸ್ಥಳ-ಕಡೂರು ತಾಲೂಕು
    ಜಮೀನು ವಿಸ್ತೀರ್ಣ-11 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಪೂರ್ಣ
    ಹಣ ಬಿಡುಗಡೆ- 53.50 ಲಕ್ಷ ರೂ.
  • ದಕ್ಷಿಣ ಕನ್ನಡ:
    ಸ್ಥಳ-ಕಡಬ ತಾಲೂಕು
    ಜಮೀನು ವಿಸ್ತೀರ್ಣ-98.45 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 47.50 ಲಕ್ಷ ರೂ.
  • ರಾಯಚೂರು:
    ಸ್ಥಳ-ರಾಯಚೂರು ತಾಲೂಕು
    ಜಮೀನು ವಿಸ್ತೀರ್ಣ- 6 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಹಾವೇರಿ:
    ಸ್ಥಳ-ಗುತ್ತಲ‌ಕುರಿ
    ಜಮೀನು ವಿಸ್ತೀರ್ಣ-25 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಗದಗ:
    ಸ್ಥಳ-ಹರ್ತಿ ಗ್ರಾಮ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ-ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಬಳ್ಳಾರಿ/ವಿಜಯನಗರ:
    ಸ್ಥಳ-ಹಗರಿಬೊಮ್ಮನ ಹಳ್ಳಿ ತಾಲೂಕು
    ಜಮೀನು ವಿಸ್ತೀರ್ಣ- 9.88 ಎಕರೆ
    ಪ್ರಗತಿ- 1.25 ಕೋಟಿ ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಕೊಪ್ಪಳ:
    ಸ್ಥಳ-ಯಲಭುರ್ಗಾ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ದಾವಣಗೆರೆ:
    ಸ್ಥಳ-ದಾವಣಗೆರೆ ತಾಲೂಕು
    ಜಮೀನು ವಿಸ್ತೀರ್ಣ-7 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ‌ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಾಮರಾಜನಗರ:
    ಸ್ಥಳ- ಚಾಮರಾಜನಗರ ತಾಲೂಕು
    ಜಮೀನು ವಿಸ್ತೀರ್ಣ-9 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಚಿತ್ರದುರ್ಗ:
    ಸ್ಥಳ- ಚಳ್ಳಕೆರೆ ತಾಲೂಕು
    ಜಮೀನು ವಿಸ್ತೀರ್ಣ- 9.36 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 47.50 ಲಕ್ಷ ರೂ.
  • ವಿಜಯಪುರ:
    ಸ್ಥಳ- ವಿಜಯಪುರ ತಾಲೂಕು
    ಜಮೀನು ವಿಸ್ತೀರ್ಣ- 10 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ರಾಮನಗರ:
    ಸ್ಥಳ- ಚನ್ನಪಟ್ಟಣ ತಾಲೂಕು
    ಜಮೀನು ವಿಸ್ತೀರ್ಣ- 8 ಎಕರೆಗ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಬೆಳಗಾವಿ:
    ಸ್ಥಳ- ಹುಕ್ಕೇರಿ ತಾಲೂಕು
    ಜಮೀನು ವಿಸ್ತೀರ್ಣ- 19.04 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಮಂಡ್ಯ:
    ಸ್ಥಳ- ಮದ್ದೂರು ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಕ್ರಿಯಾ ಯೋಜನೆ ಸಿದ್ಧ
    ಹಣ ಬಿಡುಗಡೆ-36 ಲಕ್ಷ ರೂ.
  • ಕೊಡಗು:
    ಸ್ಥಳ- ಮಡಿಕೇರಿ ತಾಲೂಕು
    ಜಮೀನು ವಿಸ್ತೀರ್ಣ-8 ಎಕರೆ
    ಪ್ರಗತಿ-ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಧಾರವಾಡ:
    ಸ್ಥಳ-ಮದನಬಾವಿ ಗ್ರಾಮ
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ-53.50 ಲಕ್ಷ ರೂ.
  • ಕೋಲಾರ:
    ಸ್ಥಳ- ಕೆಜಿಎಫ್ ತಾಲೂಕು
    ಜಮೀನು ವಿಸ್ತೀರ್ಣ- 9.36 ಎಕರೆ
    ಪ್ರಗತಿ- ಜಮೀನು ಸಮತಟ್ಟು ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಉಡುಪಿ:
    ಸ್ಥಳ- ಹೆಬ್ರಿ ತಾಲೂಕು
    ಜಮೀನು ವಿಸ್ತೀರ್ಣ-13.24 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 53.50 ಲಕ್ಷ ರೂ.
  • ಉತ್ತರ ಕನ್ನಡ:
    ಸ್ಥಳ- ಹಳಿಯಾಳ ತಾಲೂಕು
    ಜಮೀನು ವಿಸ್ತೀರ್ಣ- 20 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ-48.50 ಲಕ್ಷ ರೂ.
  • ಕಲಬುರಗಿ:
    ಸ್ಥಳ- ಕಲಬುರ್ಗಿ ತಾಲೂಕು
    ಜಮೀನು ವಿಸ್ತೀರ್ಣ- 25 ಎಕರೆ
    ಪ್ರಗತಿ- ಶೆಡ್ ನಿರ್ಮಾಣ ಕಾರ್ಯ
    ಹಣ ಬಿಡುಗಡೆ- 47.50 ಲಕ್ಷ ರೂ.
  • ಯಾದಗಿರಿ:
    ಸ್ಥಳ- ಯಾದಗಿರಿ ತಾಲೂಕು
    ಜಮೀನು ವಿಸ್ತೀರ್ಣ- 25 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ- 47.50 ಲಕ್ಷ ರೂ.
  • ಶಿವಮೊಗ್ಗ:
    ಸ್ಥಳ- ಸಾಗರ ತಾಲೂಕು
    ಜಮೀನು ವಿಸ್ತೀರ್ಣ- 46 ಎಕರೆ
    ಪ್ರಗತಿ- ಜಮೀನು ಮಂಜೂರು
    ಹಣ ಬಿಡುಗಡೆ- 36 ಲಕ್ಷ ರೂ.
  • ಬೀದರ್:
    ಸ್ಥಳ- ಔರದ್ ತಾಲೂಕು
    ಜಮೀನು ವಿಸ್ತೀರ್ಣ-10 ಎಕರೆ
    ಪ್ರಗತಿ- ಸ್ಥಳ ಗುರುತಿಸುವ ಕಾರ್ಯ
    ಹಣ ಬಿಡುಗಡೆ- 36 ಲಕ್ಷ ರೂ.

ಇದನ್ನೂ ಓದಿ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.