ETV Bharat / state

ರಾಜ್ಯಾದ್ಯಂತ ಒಂದೇ ದಿನ 298 ಜನರಿಗೆ ಕೋವಿಡ್ ಸೋಂಕು ದೃಢ; ನಾಲ್ವರು ಸಾವು - ಜೆಎನ್​ 1

ರಾಜ್ಯದಲ್ಲೇ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಕೋವಿಡ್​ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

Etv Bharat
Etv Bharat
author img

By ETV Bharat Karnataka Team

Published : Jan 4, 2024, 10:49 PM IST

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 298 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ನಾಲ್ಕು ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 1240 ಸಕ್ರಿಯ ಪ್ರಕರಣಗಳಿವೆ. ಕಳೆದ ಒಂದು ದಿನದಲ್ಲಿ 3.82% ಕೊವಿಡ್ ಪಾಸಿಟಿವ್ ರೇಟ್ ವರದಿಯಾಗಿದೆ. 7791 ಜನರಿಗೆ ಪರೀಕ್ಷೆ ಮಾಡಲಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಲ್ಲಿಯವರೆಗೂ 708 ಕೇಸ್‌ಗಳು ವರದಿಯಾಗಿದ್ದು, ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿರುವ ನಗರವಾಗಿದೆ. ಒಂದು ದಿನದಲ್ಲಿ 172 ಜನರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯವಾರು ಜೆಎನ್​.1 ಪ್ರಕರಣ : ಜನವರಿ 3 ರ ವರದಿ ಪ್ರಕಾರ ರಾಜ್ಯವಾರು ಜೆಎನ್​.1 ಪ್ರಕರಣದಲ್ಲಿ ಕರ್ನಾಟಕದಲ್ಲಿ 199, ಕೇರಳದಲ್ಲಿ 148, ಗೋವಾದಲ್ಲಿ 47, ಗುಜರಾತ್​​ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದೆಹಲಿಯಲ್ಲಿ 15, ರಾಜಸ್ಥಾನದಲ್ಲಿ 4 ಮತ್ತು ತೆಲಂಗಾಣ 2, ಹರಿಯಾಣ ಮತ್ತು ಒಡಿಶಾದಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ ಮಾತ್ರವಲ್ಲದೇ, ಜಾಗತಿಕವಾಗಿ ಕೋವಿಡ್​ ಸೋಂಕಿನ ಏರಿಕೆ ಕಂಡು ಬಂದಿವೆ ಎಂದು ಹಲವು ವರದಿಗಳು ತಿಳಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಕಳೆದೊಂದು ತಿಂಗಳಿನಿಂದ ಜಾಗತಿಕವಾಗಿ ಕೋವಿಡ್​​ 19 ಪ್ರಕರಣದಲ್ಲಿ ಶೇ 52ರಷ್ಟು ಹೆಚ್ಚಾಗಿದೆ. ಇದರಿಂದ ಆಸ್ಪತ್ರೆಗಳಲ್ಲಿ ಮತ್ತು ಐಸಿಯುಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನಿಂದ ಜಾಗತಿಕ ಸಾವಿನ ಸಂಖ್ಯೆ ಏರಿಕೆ ಕಂಡಿದೆ. (ಎಎನ್​ಐ)

ಇದನ್ನೂ ಓದಿ : ಕೋವಿಡ್​ ಉಪತಳಿಗಳಲ್ಲಿ ಓಮ್ರಿಕಾನ್ ಬಿಎ.5 ಹೆಚ್ಚು ಮಾರಣಾಂತಿಕ; ​ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.