ಬೆಂಗಳೂರು: ರಾಜ್ಯದಲ್ಲಿ ಇಂದು 12,533 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,206 ಜನರಿಗೆ ಸೋಂಕು ದೃಢಪಟ್ಟಿದೆ. 1653 ಮಂದಿ ಗುಣಮುಖರಾಗಿದ್ದಾರೆ. ಇಂದಿನ ಕೋವಿಡ್ ಸಾವಿನ ಸಂಖ್ಯೆ ಶೂನ್ಯ, ಸಕ್ರಿಯ ಪ್ರಕರಣಗಳು 10,475ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 9.62, ವಾರದ ಸೋಂಕಿತರ ಪ್ರಮಾಣ ಶೇ. 6.58 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.21 ಇದೆ. ವಿಮಾನ ನಿಲ್ದಾಣದಿಂದ 4,389 ಮಂದಿ ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದು 870 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 1,198 ಮಂದಿ ಬಿಡುಗಡೆಯಾಗಿದ್ದಾರೆ. ರಾಜಧಾನಿಯಲ್ಲಿ 6,951 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಕೋವಿಡ್ ಸಾವಿನ ಸಂಖ್ಯೆ 16,978 ಇದೆ.
ಇದನ್ನೂ ಓದಿ: ಓಮಿಕ್ರಾನ್‌ಗೆ ಲಸಿಕೆ ಅನುಮೋದಿಸಿದ ಬ್ರಿಟನ್: 6 ತಿಂಗಳಲ್ಲಿ ಭಾರತದ ಲಸಿಕೆ ಅಭಿವೃದ್ಧಿ ನಿರೀಕ್ಷೆ