ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡನೆ ಮಾಡಿರುವ ಬಜೆಟ್ನಲ್ಲಿ ವಿವಿಧ ಅಭಿವೃದ್ಧಿ ನಿಗಮಗಳಿಗೆ ಬಂಪರ್ ಘೋಷಣೆ ಮಾಡಿದ್ದು, ಪ್ರಮುಖವಾಗಿ ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ. ಘೋಷಣೆ ಮಾಡಿದ್ದಾರೆ.
ಲಿಂಗಾಯತ ಅಭಿವೃದ್ಧಿ ನಿಗಮ ಈಗಾಗಲೇ ಘೋಷಣೆ ಮಾಡಲಾಗಿದ್ದು, ಅದಕ್ಕಾಗಿ 500 ಕೋಟಿ ರೂ ಅನುದಾನ ಘೋಷಣೆ ಮಾಡಿದ್ದು, ಈಗಾಗಲೇ 100 ಕೋಟಿ ಬಿಡುಗಡೆ ಆಗಿದೆ ಎಂದು ಬಜೆಟ್ ಭಾಷಣದಲ್ಲಿ ಸಿಎಂ ತಿಳಿಸಿದ್ದಾರೆ. ಉಳಿದಂತೆ ಅಲ್ಪ ಸಂಖ್ಯಾತರ ಕಲ್ಯಾಣಕ್ಕಾಗಿ 1500 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಇಲಾಖೆ ಅಧೀನದಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ, 400 ಉರ್ದು ಶಾಳೆಗಳನ್ನು ಘೋಷಣೆ ಮಾಡಿದ್ದು, ಮಾದರಿ ಶಾಲೆ ಹಾಗೂ ಕಾಲೇಜ್ಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಬಿಎಸ್ವೈ ಬಜೆಟ್ನಲ್ಲಿ ಕೃಷಿಗೆ ಬಂಪರ್... ವಿವಿಧ ಯೋಜನೆಗಳಿಗೆ ಕೋಟಿ ಕೋಟಿ ರೂ. ಘೋಷಣೆ
ಕ್ರಿಶ್ಚಿಯನ್ ಸಮುದಾಯದ ವಿವಿಧ ಅಭಿವೃದ್ಧಿ ಕಾರ್ಯ ಮುಂದುವರಿಸಲಾಗುವುದು ಎಂದಿರುವ ಸಿಎಂ, ಇದಕ್ಕಾಗಿ 2000 ಕೋಟಿ ರೂ. ಮೀಸಲಿರಿಸಲಾಗುವುದು ಎಂದಿದ್ದಾರೆ. ಇದರ ಜತೆಗೆ ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಕರ್ನಾಟಕ ಯಾತ್ರಿ ನಿವಾಸ ನಿರ್ಮಾಣಕ್ಕೆ 10 ಕೋಟಿ ಮೀಸಲಿಡಲಾಗಿದೆ ಎಂದು ಸಿಎಂ ಇದೇ ವೇಳೆ ಘೋಷಣೆ ಮಾಡಿದರು.
- ಕಿತ್ತೂರು ಚೆನ್ನಮ್ಮ ಪ್ರಾಧಿಕಾರಕ್ಕೆ 50 ಕೋಟಿ ರೂ. ಅನುದಾನ
- ಬಸವನಬಾಗೇವಾಡಿ ಇಂಗಳಗಿ ಅಭಿವೃದ್ಧಿಗೆ 5 ಕೋಟಿ ರೂ.
- ನಾಥ ಪರಂಪರೆ ಪರಿಚಯಿಸಲು ಆದಿ ಚುಂಚನಗಿರಿ ನಾಥ ಪಾರಂಪರಿಕ ಕ್ಷೇತ್ರ ಅಭಿವೃದ್ಧಿಗೆ 10ಕೋಟಿ ರೂ. ಗಳನ್ನು ಸಿಎಂ ತಮ್ಮ ಭಾಷಣದಲ್ಲಿ ಪ್ರಕಟಿಸಿದರು.