ETV Bharat / state

ಶಕ್ತಿಸೌಧಕ್ಕೆ ತಟ್ಟಿದ ಕರ್ನಾಟಕ ಬಂದ್ ಬಿಸಿ: ಪ್ರತಿಭಟನೆಗೆ ಬೆಂಬಲ ಸೂಚಿಸಿದ 89ರ ವೃದ್ಧ - ಬಂದ್​ನಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ವೃದ್ಧ

ಕರ್ನಾಟಕ ಬಂದ್ ಪ್ರಯುಕ್ತ ಹಲವು ಕನ್ನಡ ಪರ, ದಲಿತ ಪರ ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಇನ್ನೊಂದೆಡೆ, ಶಕ್ತಿಸೌಧಕ್ಕೆ ಕೂಡ ಬಂದ್ ಬಿಸಿ ತಟ್ಟಿದೆ.

Karnataka Bandh
ಬಂದ್​ನಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ವೃದ್ಧ
author img

By ETV Bharat Karnataka Team

Published : Sep 29, 2023, 1:30 PM IST

ಶಕ್ತಿಸೌಧಕ್ಕೆ ತಟ್ಟಿದ ಕರ್ನಾಟಕ ಬಂದ್ ಬಿಸಿ: ಪ್ರತಿಭಟನೆಗೆ ಬೆಂಬಲ ಸೂಚಿಸಿದ 89ರ ವೃದ್ಧ

ಬೆಂಗಳೂರು : ಕರ್ನಾಟಕ ಬಂದ್ ಹಿನ್ನೆಲೆ ವಿಧಾನಸೌಧದಲ್ಲಿ ಸರ್ಕಾರಿ ನೌಕರರ ಸಂಖ್ಯೆ ವಿರಳವಾಗಿದೆ. ಹೀಗಾಗಿ, ಬಂದ್ ಬಿಸಿ ಶಕ್ತಿಸೌಧಕ್ಕೂ ತಟ್ಟಿದ್ದು, ಸಚಿವಾಲಯದ ಹಲವು ಸಿಬ್ಬಂದಿ ಇಂದು ಕೆಲಸಕ್ಕೆ ಗೈರಾಗಿದ್ದಾರೆ. ವಾರದಲ್ಲಿ ಎರಡನೇ ಬಂದ್ ಇದಾಗಿದ್ದು, ವಿಧಾನಸೌಧದ ಕಾರಿಡಾರ್​ಗಳು ಖಾಲಿ ಖಾಲಿ ಇವೆ.

ಕರ್ನಾಟಕ ಬಂದ್ ಹಿನ್ನೆಲೆ ಹಲವು ಸಿಬ್ಬಂದಿ ಕೆಲಸಕ್ಕೆ ಆಗಮಿಸಿಲ್ಲ. ನಿನ್ನೆ ಈದ್ ಮಿಲಾದ್ ಇದ್ದ ಕಾರಣ ಸರ್ಕಾರಿ ರಜೆ ಇದ್ದು, ಇಂದು ಬಂದ್ ಇರುವುದರಿಂದ ಸಚಿವಾಲಯದ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ಇನ್ನೊಂದೆಡೆ, ನಿನ್ನೆ ಸರ್ಕಾರಿ ರಜೆ, ಇಂದು ಕರ್ನಾಟಕ ಬಂದ್, ನಾಳೆ ಶನಿವಾರ ಒಂದು ದಿನ‌ ರಜೆ ಹಾಕಿದರೆ ಭಾನುವಾರ ಹಾಗೂ ಸೋಮವಾರ ಗಾಂಧಿ ಜಯಂತಿ ಸೇರಿ ಐದು ದಿನ ರಜೆ ಇರುವುದರಿಂದ ಬಹುತೇಕರು ಊರಿಗೆ ತೆರಳಿದ್ದಾರೆ.‌

ಸಚಿವಾಲಯದ ಕಚೇರಿಗಳಲ್ಲಿ ಸುಮಾರು ಸೇ.50ಕ್ಕೂ ಅಧಿಕ ಸಿಬ್ಬಂದಿ ಗೈರಾಗಿದ್ದಾರೆ. ವಿಧಾನಸೌಧದ ಮೂರನೇ ಮಹಡಿಯ ಕಾರಿಡಾರ್ ಬಿಕೋ ಎನ್ನುತ್ತಿದೆ. ಆವರಣದಲ್ಲಿ ವಾಹನಗಳ ಸಂಖ್ಯೆಯೂ ವಿರಳವಾಗಿದೆ. ಸಚಿವಾಲಯ ನೌಕರರ ಸಂಘ ಕರ್ನಾಟಕ ಬಂದ್​ಗೆ ನೈತಿಕ ಬೆಂಬಲ ಸೂಚಿಸಿದೆ. ವಿಧಾ‌ನಸೌಧ, ವಿಕಾಸಸೌಧ ಹಾಗೂ ಎಂ.ಎಸ್.ಕಟ್ಟಡದಲ್ಲಿ ಸಿಬ್ಬಂದಿ ಸಂಖ್ಯೆ ಅತ್ಯಂತ ವಿರಳವಾಗಿದೆ.‌

ತಮಿಳುನಾಡಿಗೆ ನೀರು ಬಿಡುಗಡೆಯನ್ನು ವಿರೋಧಿಸಿ ರೈತ ಸಂಘಟನೆ ಸೇರಿ ಹಲವು ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ಬಂದ್​ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಆದರೆ, ಬೆಂಗಳೂರು ಪೊಲೀಸ್ ಆಯುಕ್ತರು ನಗರದಲ್ಲಿ ಸೆಕ್ಷನ್ 144 ವಿಧಿಸಿದ ಕಾರಣ ಯಾವುದೇ ಮೆರವಣಿಗೆಗಳಿಗೆ ಅವಕಾಶ ಇಲ್ಲ.

ಬೆಂಗಳೂರಲ್ಲಿ ಕೆಎಸ್ಆರ್​ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇವೆ ಎಂದಿನಂತಿದ್ದು, ಆಟೋ, ಖಾಸಗಿ ವಾಹನಗಳ ಓಡಾಡುತ್ತಿವೆ. ಆದರೆ ಬಹುತೇಕ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳವಾಗಿರುವುದು ಕಂಡು ಬಂತು‌. ಕರ್ನಾಟಕ ಬಂದ್​ಗೆ ಪ್ರತಿಪಕ್ಷ ಬಿಜೆಪಿ, ಜೆಡಿಎಸ್ ಕೂಡ ಬೆಂಬಲ ಸೂಚಿಸಿದೆ.

ಬಂದ್​ನಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದ ವೃದ್ಧ: ಕಾವೇರಿ ನೀರಿನ ವಿಚಾರವಾಗಿ ಕರೆ ನೀಡಿರುವ ಕರ್ನಾಟಕ ಬಂದ್​ನಲ್ಲಿ ಮದನ್ ಲಾಲ್ ಜೈನ್ ಎಂಬ 89 ವರ್ಷದ ವೃದ್ಧ ಭಾಗಿಯಾಗಿ ತಮ್ಮ ಬೆಂಬಲ ಸೂಚಿಸಿದರು. ಟೌನ್ ಹಾಲ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾದ ಅವರು, ಕರ್ನಾಟಕದ ಪರ ತಮ್ಮ ಬೆಂಬಲ ಸೂಚಿಸಿದರು.

1949-50ರ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದು ನೆಲೆಸಿದ್ದೇನೆ, ಕರ್ನಾಟಕ ನನ್ನ ತಲೆಯ ಮೇಲಿದೆ. ನಮಗೆಲ್ಲರಿಗೂ ಕಾವೇರಿ ನೀರು ಕುಡಿಯಲು ಬೇಕು. ನನ್ನ ಆರೋಗ್ಯ ಸರಿಯಿಲ್ಲ ಆದರೂ ನಾನೊಬ್ಬನೇ ಬಂದಿದ್ದೇನೆ ಎಂದು ತಿಳಿಸಿದರು. ಇನ್ನು ಮನೆಗೆ ಹೋಗದೆ ಹೋರಾಟದಲ್ಲಿ ಭಾಗಿಯಾಗುವುದಾಗಿ ಹಠ ಹಿಡಿದ ಅವರನ್ನು ಕೊನೆಗೆ ಮನವೊಲಿಸಿ ಕಳುಹಿಸುವಲ್ಲಿ ಪೊಲೀಸರು ಯಶಸ್ವಿಯಾದರು.

ಹೋರಾಟಕ್ಕೆ ಸಾಕ್ಷಿಯಾದ ಫ್ರೀಡಂ ಪಾರ್ಕ್: ಫ್ರೀಡಂ ಪಾರ್ಕ್​ನಲ್ಲಿ ಕರ್ನಾಟಕ ಬಂದ್ ಪ್ರಯುಕ್ತ ಹಲವು ಕನ್ನಡ ಪರ, ದಲಿತ ಪರ ಸಂಘನೆಗಳು ಹಾಗೂ ರೈತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ತಮಿಳುನಾಡು ವಿರೋಧಿ ಭಿತ್ತಿ ಪತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

ಇದನ್ನೂ ಓದಿ : 'ಕಾವೇರಿ'ದ ಬಂದ್ : ಸ್ಯಾಂಡಲ್​ವುಡ್​ ನಟ-ನಟಿಯರಿಂದ ಪ್ರತಿಭಟನೆ... ಶಿವಣ್ಣ, ಶ್ರೀನಾಥ್, ಉಪೇಂದ್ರ ಸೇರಿ ಹಲವರು ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.