ETV Bharat / state

Live Updates| ರಾಜ್ಯದಲ್ಲಿ ಹೇಗಿದೆ 'ಬಂದ್'​ ಬಿಸಿ - karnataka bandh 2020

karnataka bandh live updates
ಕರ್ನಾಟಕ ಬಂದ್
author img

By

Published : Dec 5, 2020, 6:40 AM IST

Updated : Dec 5, 2020, 9:30 PM IST

17:33 December 05

ಸಿಎಂ ತವರು ಜಿಲ್ಲೆಯಲ್ಲಿ ಬಂದ್ ವಿಫಲ:

ಶಿವಮೊಗ್ಗದಲ್ಲಿ ಬಂದ್ ಸಂಪೂರ್ಣ ವಿಫಲ
ಶಿವಮೊಗ್ಗದಲ್ಲಿ ಬಂದ್ ಸಂಪೂರ್ಣ ವಿಫಲ

ಶಿವಮೊಗ್ಗ: ಸಿಎಂ ಬಿ.ಎಸ್.ಯಡಿಯೂರಪ್ಪನವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯ ಬಂದ್ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಕೇಂದ್ರವಾದ ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಿದ್ದ ಕಾರಣ ಯಾವುದೇ ಪ್ರತಿಭಟನೆ ನಡೆಸಲಿಲ್ಲ. ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಸಾಗರದಲ್ಲಿ ಕರವೇ (ಪ್ರವೀಣ್ ಶೆಟ್ಟಿ ಬಣ) ಹಾಗೂ ಮಲೆನಾಡು ರಕ್ಷಣಾ ವೇದಿಕೆಯವರು ಪ್ರತ್ಯೇಕವಾಗಿ ಉಪ ವಿಭಾಗಾಧಿಕಾರಿಗಳಿಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯುವಂತೆ ಮನವಿ ಸಲ್ಲಿಸಿದರು.

ಹೊಸನಗರದಲ್ಲಿ ಸಹ ಎಂದಿನಂತೆ ವಾಹನ ಸಂಚಾರ, ವಾರದ ಸಂತೆ ನಡೆಯಿತು. ಖಾಸಗಿ ಬಸ್ ಸಂಚಾರ ವಿರಳವಾಗಿತ್ತು.

ಶಿಕಾರಿಪುರ, ಭದ್ರಾವತಿ, ಸೊರಬ, ತೀರ್ಥಹಳ್ಳಿಯಲ್ಲಿ ಸಹ ಕನ್ನಡಪರ ಸಂಘಟನೆಗಳು ಮನವಿ ಸಲ್ಲಿಸಿವೆ.

16:53 December 05

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್​

ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್​
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸ್​

ಕೆ.ಆರ್.ಪುರ: ಬಿಬಿಎಂಪಿ‌ ಕಚೇರಿ ಮುಂಭಾಗದಲ್ಲಿ ನೂರಾರು ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿ, ನಗರದ ಟೌನ್ ಹಾಲ್ ಬಳಿಯಿಂದ ಜಾಥಾ ನಡೆಸಲು ಯತ್ನಿಸಿದಾಗ ಪ್ರತಿಭಟನಾಕಾರರನ್ನು ತಡೆದು, ಬಿಎಂಟಿಸಿ ಬಸ್​ನಲ್ಲಿ ಬಂಧಿಸಿ ಮಹದೇವಪುರ ಠಾಣೆಗೆ ಕರೆದೊಯ್ಯಲಾಯಿತು. ಕರುನಾಡ ರೈತ ಸಂಘ, ಸುವರ್ಣ ಕರ್ನಾಟಕ ಸಂಘಟನೆಗಳ ಒಕ್ಕೂಟದ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.

16:29 December 05

ರಾಜಧಾನಿಯಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರಿನಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಿನಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು : ಕನ್ನಡ‌ಪರ‌ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ‌ ವಿರೋಧಿಸಿ ಟೌನ್‌ಹಾಲ್ ಮುಂಭಾಗ ಕನ್ನಡ ಪರ ಹೋರಾಟಗಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ನೂರಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನು ವಾಟಾಳ್ ನೇತೃತ್ವದಲ್ಲಿ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್​ವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಆದರೆ ಮೆರವಣಿಗೆಗೆ ಪೊಲೀಸರು ಅನುಮತಿ‌ ನೀಡದ ಹಿನ್ನೆಲೆ ವಾಟಾಳ್, ಸಾ.ರಾ. ಗೋವಿಂದ್ ಸೇರಿದಂತೆ ಹಲವಾರನ್ನು ಪೊಲೀಸರು ವಶಕ್ಕೆ ಪಡೆದರು.

ಗಾಂಧಿನಗರದ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಗಾಂಧಿನಗರದಿಂದ ಸಿಎಂ ನಿವಾಸ ಕೃಷ್ಣಾವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕುವಂತೆ ಪ್ಲಾನ್ ರೂಪಿಸಿದ್ರು. ಆದರೆ ಪೊಲೀಸರು ಕರವೇ ಕಚೇರಿ‌ ಮುಂಭಾಗವೇ ಹೋರಾಟಗಾರರನ್ನು ವಶಕ್ಕೆ ಪಡೆದರು.

ಇನ್ನು ನಗರಾದ್ಯಂತ ವಾಹನ ಸಂಚಾರ ಎಂದಿನಂತಿತ್ತು. ಸಿಟಿ ಮಾರ್ಕೆಟ್, ಎಪಿಎಂಸಿ, ಮಾಲ್​, ಚಿತ್ರಮಂದಿರಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದವು. ಇಂದಿನ ಬಂದ್‌ಗೆ ಬೆಂಗಳೂರಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

16:09 December 05

ಯತ್ನಾಳ್ ವಿರುದ್ಧ ಶಂಕರ ಕರಪಡಿ ಗರಂ

ಕನ್ನಡಸೇನೆ ಗೌರವಾಧ್ಯಕ್ಷ ಶಂಕರ ಕರಪಡಿ
ಕನ್ನಡಸೇನೆ ಗೌರವಾಧ್ಯಕ್ಷ ಶಂಕರ ಕರಪಡಿ

ಕುಷ್ಟಗಿ /ಕೊಪ್ಪಳ : ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಕರ್ನಾಟಕ ಬಂದ್ ಬೆಂಬಲಾರ್ಥವಾಗಿ ಇಂದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಕನ್ನಡಸೇನೆ ಗೌರವಾಧ್ಯಕ್ಷ ಶಂಕರ ಕರಪಡಿ, ಕನ್ನಡ ಪರ ಸಂಘಟನೆಗಳ ತಂಟೆಗೆ ಬಂದರೆ ಮತ್ತು ವಾಟಾಳ್​ ನಾಗರಾಜ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ವಿಜಯಪುರಕ್ಕೆ ಹೋಗಿ ರಸ್ತೆಯ ಮಧ್ಯೆ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಬಟ್ಟೆ ಬಿಚ್ಚಿಸುವುದಾಗಿ ಎಚ್ಚರಿಕೆ ನೀಡಿದರು.

15:51 December 05

ಸಿಎಂ ಪ್ರತಿಕೃತಿ ದಹನ:

ಸಿಎಂ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು

ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ ಸಿಎಂ ಬಿ.ಎಸ್​. ಯಡಿಯೂರಪ್ಪನವರ ವಿರುದ್ಧ ಕೆರಳಿರುವ ಕರವೇ ಕಾರ್ಯಕರ್ತರು ಸಿಎಂ ಪ್ರತಿಕೃತಿ ದಹಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ್ ಗೌಡ) ಬಣದ ಕಾರ್ಯಕರ್ತರು ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಗೊಳಿಸುವಂತೆ ತಿಳಿಸಿದರು. ತಮಿಳು ಅಭಿವೃದ್ಧಿ ನಿಗಮವನ್ನು ಕೂಡ ಸ್ಥಾಪಿಸುತ್ತೇವೆ ಎಂದು ಹೇಳಿಕೆ‌ ನೀಡಿರುವ ಡಿಸಿಎಂ ಆಶ್ವತ್ಥ್​ ನಾರಾಯಣ ಅವರು ತಮ್ಮ ಹೇಳಿಕೆ ಹಿಂಪಡೆಯುವಂತೆ‌ ಮನವಿ ಮಾಡಿದರು.

15:18 December 05

ಬಂದ್ ಬೆಂಬಲಿಸಿದ​ ಕರವೇ ಕಾರ್ಯಕರ್ತರು

ಟಯರ್​​ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು
ಟಯರ್​​ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು

ಯಾದಗಿರಿ: ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಕರವೇ ಕಾರ್ಯಕರ್ತರು ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಿದರು. ಸುಭಾಷ್ ವೃತ್ತದಲ್ಲಿ ಟಯರ್​​ಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಸರ್ಕಾರ ಸರ್ವ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು.

13:22 December 05

ಸರ್ಕಾರಕ್ಕೆ ಶ್ರದ್ಧಾಂಜಲಿ ಸಲ್ಲಿಕೆ!

karnataka bandh live updates
ಪ್ರತಿಭಟನಾಕಾರರ ಆಕ್ರೋಶ

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರೆ ನೀಡಿದ ಕರ್ನಾಟಕ ಬಂದ್‌‌ನ ಬಿಸಿ ರಾಯಚೂರು ಜಿಲ್ಲೆಗೆ ತಟ್ಟಿಲ್ಲ. ಎಂದಿನಂತೆ ಜನ-ಜೀವನ, ಸಾರಿಗೆ ಬಸ್‌ಗಳು ಆಟೋಗಳು, ಖಾಸಗಿ ವಾಹನಗಳು ಸಂಚಾರಿಸುತ್ತಿದ್ದವು. ಅಂಗಡಿ-ಮುಂಗಟ್ಟುಗಳು ಸಹ ತೆರೆದಿವೆ. ಬಂದ್ ಹಿನ್ನೆಲೆ ಕನ್ನಡಪರ ಸಂಘಟನೆಗಳು ನಗರದ ಅಂಬೇಡ್ಕರ್ ಸರ್ಕಲ್​ನಲ್ಲಿ ರಾಜ್ಯ ಸರ್ಕಾರದ ಸತ್ತು ಹೋಗಿದೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು. ಸಮಾಧಿ ಕಟ್ಟಲು ಇಟ್ಟಗೆಗಳನ್ನ ಅರೆಬೆತ್ತಲೆ ತಲೆಯ ಮೇಲೆ ಹೊತ್ತುಕೊಂಡು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

13:19 December 05

ಶಾಸಕ ಯತ್ನಾಳ್‌ ಸವಾಲು

karnataka bandh live updates
ಪ್ರತಿಭಟನಾನಿರತ ಕರವೇ ಕಾರ್ಯಕರ್ತರು

ಕೊಡಗು: ಶಾಸಕ ಯತ್ನಾಳ್ ಅವರಿಗೆ ತಾಕತ್ತಿದ್ದರೆ ಕೊಡಗಿಗೆ ಬರಲಿ, ಸಂಬಾಜಿ ಪಾಟೀಲ್‌ಗೆ ಮಸಿ ಬಳಿದಂತೆ ಬಳಿಯುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯ ಜಿಲ್ಲಾಧ್ಯಕ್ಷ ವೆಂಕಟೇಶ್ ಪೂಜಾರಿ ಸವಾಲು ಹಾಕಿದ್ದಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರುದ್ಧ ಕುಶಾಲನಗರದಲ್ಲಿ ರಾಜ್ಯ ಸರ್ಕಾರದ ದೋರಣೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡಪರ ಸಂಘಟನೆಗಳ ಬಗ್ಗೆ ಮಾತನಾಡುವ ಮೊದಲು ಅವರ ಯೋಗ್ಯತೆ ತಿಳಿದುಕೊಳ್ಳಲಿ. ಆನೆ ಹೋಗುತ್ತಿರುತ್ತದೆ ನಾಯಿ ಬೊಗಳುತ್ತಿರುತ್ತದೆ,‌ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಕನ್ನಡಪರ ರಕ್ಷಣಾ ವೇದಿಕೆ ಇರುವುದರಿಂದ ರಾಜ್ಯದಲ್ಲಿ ಬೆಳಗಾವಿ ಉಳಿದಿದೆ ಹಿಂದೆ ಸಿಎಂ ಆಗಿದ್ದಂತಹ ಡಿ.ವಿ.ಸದಾನಂದಗೌಡ ಅವರೇ ಹೇಳಿದ್ದಾರೆ. ಜೈಲಿಗೆ ಹೋಗಿ ಬಂದವರೆಲ್ಲಾ ಕನ್ನಡಪರ ಸಂಘಟನೆಗಳ ಬಗ್ಗೆ ಮಾತನಾಡುತ್ತಾರೆ ಎಂದು ವಗ್ದಾಳಿ ನಡೆಸಿದರು. 

12:58 December 05

ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಿಶ್ರ ಪ್ರತಿಕ್ರಿಯೆ

karnataka bandh live updates
ಕನ್ನಡಪರ ಸಂಘಟನೆಗಳ ಪ್ರತಿಭಟನೆ

ಇಂದಿನ ಕರ್ನಾಟಕ ಬಂದ್​ಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಹನ ಸಂಚಾರ, ಅಂಗಡಿ-ಮುಂಗ್ಗಟ್ಟು ಪ್ರಾರಂಭವಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಕೆಲ ಕನ್ನಡಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. 

12:50 December 05

ಕುಷ್ಟಗಿಯಲ್ಲಿಯೂ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

karnataka bandh live updates
ಕುಷ್ಟಗಿಯಲ್ಲಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಕುಷ್ಟಗಿಯಲ್ಲಿಯೂ ಇಂದಿನ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದ ಅಂಗಡಿ ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿವೆ. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ಬೈಕ್​ ಜಾಥಾ ನಡೆಸಿ ತೆರೆದ ಅಂಗಡಿ ಮುಂಗಟ್ಟು ಮುಚ್ಚಿಸಲು ಪ್ರಯತ್ನಿಸಿದರು. ಇದಕ್ಕೆ ಕೆಲ ಅಂಗಡಿಕಾರರು ಪ್ರತಿರೋಧ ವ್ಯಕ್ತಪಡಿಸಿದರು. ಬಸ್ ಹಾಗೂ ವಾಹನ ಸಂಚಾರ, ಕಚೇರಿಗಳು ಎಂದಿಬಂತೆ ಇತ್ತು.  ಮುಂಜಾಗ್ರತಾ ಕ್ರಮವಾಗಿ ನಿಂಗಪ್ಪ ರುದ್ರಪ್ಪಗೋಳ, ಪಿಎಸ್​ಐ ತಿಮ್ಮಣ್ಣ ನಾಯಕ್ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದ್ ಕಲ್ಪಿಸಲಾಗಿದೆ. 

12:50 December 05

ರಕ್ಷಣಾ ವೇದಿಕೆ ವತಿಯಿಂದ ಬೈಕ್ ಜಾಥಾ

karnataka bandh live updates
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೈಕ್ ಜಾಥಾ

ಕರ್ನಾಟಕ ಬಂದ್​ ಬೆಂಬಲಿಸಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೈಕ್ ಜಾಥಾ ನಡೆಸಲಾಯಿತು. ಯಾವುದೇ ರೀತಿಯ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಬೈಕ್ ಜಾಥಾದ ನೇತೃತ್ವವನ್ನು ಕರವೇ ಅಧ್ಯಕ್ಷ ಶ್ರೀನಿವಾಸ್ ವಹಿಸಿದ್ದರು. 

12:39 December 05

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕರವೇ ಕಾರ್ಯಕರ್ತರಿಂದ ರಸ್ತೆ ತಡೆ

karnataka bandh live updates
ಪ್ರತಿಭಟನಾನಿರತ ಕರವೇ ಕಾರ್ಯಕರ್ತರು

ಚಿತ್ರದುರ್ಗ: ಇಂದಿನ ಬಂದ್​ ಹಿನ್ನೆಲೆ ಹೆದ್ದಾರಿ ತಡೆದು ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸುವುದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ‌. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಎಂಇಎಸ್ ಪರವಾಗಿ ರಾಜ್ಯ ಸರ್ಕಾರ ನಿಲ್ಲುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು

12:29 December 05

ದೊಡ್ಡಬಳ್ಳಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ

karnataka bandh live updates
ಮಾನವ ಸರಪಳಿ ನಿರ್ಮಿಸಿದ ಹೋರಾಟಗಾರರು

ಕರ್ನಾಟಕ ಬಂದ್ ಹಿನ್ನೆಲೆ ದೊಡ್ಡಬಳ್ಳಾಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ ಸಂಘಟನೆಗಳ ಹೋರಾಟಗಾರರು ಬೆಳಗ್ಗೆಯಿಂದಲೇ ಹೋರಾಟಕ್ಕೆ ಧುಮುಕಿದ್ದರು. ನಗರದ ಸಿದ್ದಲಿಂಗಯ್ಯ ವೃತ್ತದಿಂದ ಬೈಕ್ ಜಾಥಾ ಆರಂಭಿಸಿದ ಹೋರಾಟಗಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನೆಲದಾಂಜನೇಯ ದೇವಸ್ಥಾನದಿಂದ ತಾಲೂಕು ಕಚೇರಿ ವೃತ್ತದವರೆಗೂ ಪ್ರತಿಭಟನೆ ನಡೆಸಿದರು. ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಿಎಂ ಯಡಿಯೂರಪ್ಪ, ಯತ್ನಾಳ್​ ವಿರುದ್ಧ ಘೋಷಣೆ ಕೂಗಿದರು.

12:23 December 05

ಕನ್ನಡ ಪರ ಸಂಘಟನೆ ಕಾರ್ಯಕರ್ತರ ವಶಕ್ಕೆ

karnataka bandh live updates
ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು

ಹುಬ್ಬಳ್ಳಿ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಪ್ರತಿಭಟನೆ ಮಾಡಿತ್ತಿದ್ದ 25ಕ್ಕೂ ಹೆಚ್ಚು ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಶಾಸಕರಾದ ಅರವಿಂದ ಬೆಲ್ಲದ ಹಾಗೂ ಬಸವನಗೌಡ ಯತ್ನಾಳ್ ವಿರುದ್ಧ ಘೊಷಣೆ ಕೂಗಿ ಆಕ್ರೋಶ ಹೊರ ಹಾಕಿದರು. 

12:14 December 05

ಮುದ್ದೇಬಿಹಾಳದಲ್ಲಿ ಬಂದ್​ಗೆ ಹಿನ್ನಡೆ

karnataka bandh live updates
ಮುದ್ದೇಬಿಹಾಳ ಬಸ್​ ನಿಲ್ದಾಣ

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಕರ್ನಾಟಕ ಬಂದ್​ಗೆ ಕರೆ ನೀಡಿರುವ ಕನ್ನಡಪರ ಸಂಘಟನೆಗಳಿಗೆ ಹಿನ್ನಡೆಯಾಗಿದೆ. ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರೆದು ದೈನಂದಿನ ವ್ಯಾಪಾರ-ವಹಿವಾಟು ಆರಂಭಿಸಿದ್ದಾರೆ. ಬಸ್, ಖಾಸಗಿ ವಾಹನಗಳು, ಅಟೋ-ರಿಕ್ಷಾಗಳ ಸಂಚಾರ ಸಹಜ ಸ್ಥಿತಿಯಲ್ಲಿದೆ. ಮುಂಜಾಗ್ರತಾ ಕ್ರಮವಾಗಿ ಪಿಎಸ್​ಐ ಮಲ್ಲಪ್ಪ ಮಡ್ಡಿ ಹಾಗೂ ಸಿಬ್ಬಂದಿ ಜನರ ಸುಗಮ ಓಡಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಭದ್ರತೆ ವಹಿಸಿದ್ದಾರೆ.

12:08 December 05

ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಪೊಲೀಸರು

karnataka bandh live updates
ಕಾರ್ಯಕರ್ತರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠಾ ಪ್ರಾಧಿಕಾರ ವಿರೋಧಿಸಿ ಹೋರಾಟ ಮಾಡುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮರಾಠಾ ಪ್ರಾಧಿಕಾರ ರಚನೆ ಮಾಡಿರುವ ರಾಜ್ಯ ಸರಕಾರದ ವಿರುದ್ಧ ವಿವಿಧ ಕನ್ನಡ ಸಂಘನೆಗಳು ನೀಡಲಾದ ಬಂದ್​ಗೆ ಬೆಳಗಾವಿಯಲ್ಲಿ ನೀರಸ ಪ್ರತ್ರಿಕ್ರಿಯೆ ವ್ಯಕ್ತವಾಗಿತ್ತು.‌ ಆದ್ರೆ, ಕರವೇ ಕಾರ್ಯಕರ್ತರು ಸೇರಿದಂತೆ ಕನ್ನಡಪರ ಸಂಘಟನೆಗಳು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾದ ವೇಳೆ ಕನ್ನಡ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

12:06 December 05

ನಾಯಿಗಳೊಂದಿಗೆ ವಿಭಿನ್ನ ಪ್ರತಿಭಟನೆ

ಕನ್ನಡ ಸೈನ್ಯ ಕಾರ್ಯಕರ್ತರರ ಪ್ರತಿಭಟನೆ
karnataka bandh live updates
ಪ್ರತಿಭಟನಾನಿರತ ಕನ್ನಡ ಸೈನ್ಯ ಕಾರ್ಯಕರ್ತರು

ಕಲಬುರಗಿ: ಕನ್ನಡ ಸೈನ್ಯ ಕಾರ್ಯಕರ್ತರು ಕರ್ನಾಟಕ ಬಂದ್ ಹಿನ್ನೆಲೆ ನಾಯಿಗಳೊಂದಿಗೆ ಆಗಮಿಸಿ ವಿಭಿನ್ನ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ನಾಯಿಗಳಿಗೆ ಸಿಎಂ ಯಡಿಯೂರಪ್ಪ ಮತ್ತು ಶಾಸಕ ಯತ್ನಾಳ್​ ಭಾವಚಿತ್ರ ಹಾಕಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹೋರಾಟಗಾರರನ್ನು ವಶಕ್ಕೆ ಪಡೆದರು. 

11:58 December 05

ಕಾನೂನು ನಿಯಮ ಉಲ್ಲಂಘನೆ ಮಾಡಿದರೆ ಎಚ್ಚರ!

karnataka bandh live updates
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್

ಹುಬ್ಬಳ್ಳಿ: ಇಂದಿನ ಕರ್ನಾಟಕ ಬಂದ್ ಹಿನ್ನೆಲೆ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್​ ಹುಬ್ಬಳ್ಳಿಯ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈಗಾಗಲೇ ಹು-ಧಾ ಮಹಾನಗರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ‌ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಕೆಎಸ್​ಆರ್​ಪಿ ತಂಡ ಹಾಗೂ 12 ಸಿಎಆರ್ ಪೊಲೀಸ್ ತಂಡಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಅಲ್ಲದೇ ಧಾರವಾಡದಲ್ಲಿ ರಸ್ತೆ ತಡೆದು ಬಂದ್ ಮಾಡಲು ಮುಂದಾಗಿರುವ 24 ಜನ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಯಾರಾದರೂ ಕಾನೂನು ನಿಯಮ ಉಲ್ಲಂಘನೆ ಮಾಡಿದರೇ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.

11:43 December 05

ಸಿಎಂ ಯಡಿಯೂರಪ್ಪ ವಿರುದ್ಧ ವಾಟಾಳ್ ಆಕ್ರೋಶ

karnataka bandh live updates
ಹೋರಾಟಗಾರರನ್ನು ವಶಕ್ಕೆ ಪಡೆಯುತ್ತಿರುವ ಪೊಲೀಸರು

ಬೆಂಗಳೂರು: ಸಿಎಂ ಯಡಿಯೂರಪ್ಪ ಓರ್ವ ಹಿಟ್ಲರ್ ಎಂದು ಕನ್ನಡಪರ ಹೋರಾಟಗಾರರ ವಾಟಾಳ್ ನಾಗರಾಜ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೆ ಅವಕಾಶ ನೀಡದ ಪೊಲೀಸ್ ಆಯುಕ್ತ ಕಮಲ್ ಪಂಥ್ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ. ದೇಶಕ್ಕೆ ಯಡಿಯೂರಪ್ಪ ನಾಲಾಯಕ್. ನನಗೆ ಕೊಟ್ಟಿರೋ ಎಸ್ಕಾರ್ಟ್​ಅನ್ನು ಹಿಂಪಡೆದಿದ್ದಾರೆ. ಪೊಲೀಸ್ ಅಧಿಕಾರ ಬಳಸಿ ಕನ್ನಡ ಹೋರಾಟಗಾರರನ್ನು ಬಂಧಿಸಿದ್ದಾರೆ. ಪ್ರತಿಪಕ್ಷದ ನಾಯಕರು ಬಾಯಿ ಮುಚ್ಚಿಕೊಂಡು ಕೂರುವುದು ಸರಿಯಲ್ಲ. 

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇದನ್ನ ಖಂಡಿಸಬೇಕಿತ್ತು. ಆದರೆ, ಬಾಯಿ ಮುಚ್ಚಿ ಕುಳಿತಿದ್ದಾರೆ. ಯಡಿಯೂರಪ್ಪ ಅವರನ್ನ ರಾಜ್ಯವೇ ವಿರೋಧಿಸಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೌನ್ ಹಾಲ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಾಟಾಳ್ ನಾಗರಾಜ್, ಸಾರಾ ಗೋವಿಂದ್ ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.  

11:29 December 05

ಬಂದ್ ಮಾಡಿಸಿದ್ರೆ ಕಾನೂನು ರೀತಿ ಕ್ರಮ; ಎಸ್​ಪಿ ಮಿಥುನ್ ಕುಮಾರ್ ಎಚ್ಚರಿಕೆ

karnataka bandh live updates
ಎಸ್​ಪಿ ಮಿಥುನ್ ಕುಮಾರ್

ಚಿಕ್ಕಬಳ್ಳಾಪುರ: ಒತ್ತಾಯ ಪೂರ್ವಕವಾಗಿ ರಸ್ತೆಗಿಳಿದು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾವರಿಷ್ಠಾಧಿಕಾರಿ ಮಿಥುನ್ ಕುಮಾರ್ ಖಟಕ್ ಎಚ್ಚರಿಕೆ ನೀಡಿದ್ದಾರೆ. ಮರಾಠಾ ಅಭಿವೃದ್ಧಿ ನಿಗಮದ ವಿರುದ್ಧ ಕನ್ನಡಪರ ಸಂಘಟನೆಗಳು ಬಂದ್​ಗೆ ಕರೆ ಕೊಟ್ಟಿರುವ ಹಿನ್ನೆಲೆ ಎರಡು ಕೆಎಸ್​ಆರ್​ಪಿ ತುಕಡಿಗಳು, 8 ಡಿಆರ್ ತುಕಡಿಗಳು, 25 ಪೊಲೀಸ್ ಇನ್ಸ್‌ಪೆಕ್ಟರ್​​‌ಗಳು ಸೇರಿದಂತೆ ಒಟ್ಟು 750 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

11:08 December 05

ಕಲಬುರಗಿಯಲ್ಲಿ ಪ್ರತಿಭಟನಾಕಾರರು ಪೊಲೀಸರ ವಶಕ್ಕೆ

karnataka bandh live updates
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಮರಾಠಾ ನಿಗಮ ರಚನೆ ವಿರೋಧಿಸಿ ಕರೆ ನೀಡಲಾದ ಬಂದ್​ಗೆ ಬೆಂಬಲಿಸಿ ಪ್ರತಿಭಟನೆಗೆ ಮುಂದಾದ ಕನ್ನಡಪರ ಸಂಘಟನಾಕಾರರನ್ನು ಕಲಬುರಗಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದಾಗ ವಶಕ್ಕೆ ತೆಗೆದುಕೊಳ್ಳಲಾಯಿತು. ಇದಕ್ಕೂ ಮುನ್ನ ಹೋರಾಟಗಾರರು ಉರುಳು ಸೇವೆ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ಅಣಕು ಶವಯಾತ್ರೆಗೆ ಯತ್ನ ನಡೆಸಿದ 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

10:49 December 05

ಯಾದಗಿರಿ ಜಿಲ್ಲೆಯಲ್ಲಿಯೂ ನೋ ರೆಸ್ಪಾನ್ಸ್​

karnataka bandh live updates
ತೆರೆದ ಅಂಗಡಿ ಮುಂಗಟ್ಟುಗಳು

ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್​ಗೆ ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಜನ-ಜೀವನ ಸಾಗಿದೆ. ನಗರದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿವೆ. ಬಸ್, ಆಟೋ ಸೇರಿದಂತೆ ಇತರೆ ವಾಹನಗಳ ಸಂಚಾರ ಎಂದಿನಂತೆ ಇದೆ. ದೂರದ ಊರಿಂದ ಜಿಲ್ಲಾ ಕೇಂದ್ರಕ್ಕೆ ಆಗಮಿಸಿದ ಜನರು ತಮ್ಮ ಕೆಲಸ ಕಾರ್ಯಕ್ಕೆ ತೆರಳುತ್ತಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣದಿಂದ ಬಸ್​ಗಳ ಓಡಾಟ ಸಹ ನಡೆಸಿವೆ. ಇಲ್ಲಿವರೆಗೂ ಯಾವುದೇ ಸಂಘಟನೆಗಳು ಬಂದ್​ಗೆ ಬೆಂಬಲಿಸಿ ಪ್ರತಿಭಟನೆ ನಡೆಸಿಲ್ಲ. ಅಲ್ಲದೇ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ.

10:37 December 05

ಮೈಸೂರಿನಲ್ಲಿ ಪ್ರತಿಭಟನಾಕಾರರ ವಶಕ್ಕೆ

karnataka bandh live updates
ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಪೊಲೀಸರು

ಮೈಸೂರು: ಕರ್ನಾಟಕ ಬಂದ್ ಹಿನ್ನೆಲೆ ಪ್ರತಿಭಟನಾಕಾರರು ಜಾಥಾ ಮಾರ್ಗ ಬದಲಿಸಿ ನಗರ ಬಸ್ ನಿಲ್ದಾಣಕ್ಕೆ ನುಗ್ಗಲು ಯತ್ನಿಸುತ್ತಿದ್ದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. 

10:27 December 05

ಟೌನ್ ಹಾಲ್ ಬಳಿ ಸುಳಿಯಲು ಬಿಡದ ಪೊಲೀಸರು

karnataka bandh live updates
ಪೊಲೀಸರ ಸರ್ಪಗಾವಲು

ಬೆಂಗಳೂರು: ಮರಾಠಿ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್​ಗೆ ಕರೆ ನೀಡಿದ್ದು ಮುಂಜಾಗ್ರತೆ ಹಿನ್ನೆಲೆ ಗುಂಪು ಸೇರುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಟೌನ್ ಹಾಲ್​​ನಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಲು ಸಜ್ಜಾಗಿರುವ ಹೋರಾಟಗಾರರನ್ನು ಟೌನ್ ಹಾಲ್ ಬಳಿ ಸುಳಿಯಲು ಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. 

09:59 December 05

ಬೀದರ್ ಬಂದ್​ಗೆ ನೋ ರೆಸ್ಪಾನ್ಸ್

karnataka bandh live updates
ಬೀದರ್ ಬಸ್​ ನಿಲ್ದಾಣ

ಬೀದರ್: ಇಂದಿನ ಬಂದ್​ಗೆ ಗಡಿ ಜಿಲ್ಲೆ ಬೀದರ್​​ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಎಂದಿನಂತೆ ಬಸ್​ಗಳ ಓಡಾಟ ಕಂಡು ಬಂತು. ಸಾರಿಗೆ ಸಂಚಾರ ಸಾಮಾನ್ಯವಾಗಿದೆ. ಅಂಗಡಿ ಮುಂಗ್ಗಟ್ಟುಗಳು ತೆರೆದಿವೆ. ಬೀದಿ ಬದಿಯ ವ್ಯಾಪಾರಿಗಳ ವ್ಯಾಪಾರ ಜೋರಾಗಿದೆ. ಬಂದ್ ಕರೆ ಬೀಡಿದ ವಿವಿಧ ಸಂಘಟನೆಗಳು ಸಾಂಕೇತಿಕವಾಗಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಿದ್ದಾರೆ. ಮುಂಜಾಗ್ರತ ಕ್ರಮಾವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್. ನೇತೃತ್ವದಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೊಬಸ್ತ್​ ಅಳವಡಿಸಲಾಗಿದೆ.

09:59 December 05

ಕೊಡಗಿಗೆ ತಟ್ಟದ ಕರ್ನಾಟಕ ಬಂದ್ ಬಿಸಿ

karnataka bandh live updates
ಕೊಡಗು (ಆಟೋ ನಿಲ್ದಾಣ)

ಕೊಡಗು: ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೊಡಗಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಜನರಲ್ ತಿಮ್ಮಯ್ಯ, ಚೌಕಿ ವೃತ್ತ, ಮಾರ್ಕೆಟ್ ರಸ್ತೆ, ಕಾಲೇಜು ರಸ್ತೆಗಳು ಸೇರಿದಂತೆ ನಗರದಾದ್ಯಂತ ಎಂದಿನಂತೆ ವಾಹನ ಸಂಚಾರ ಕಂಡು ಬಂದವು. ಜನರು ದೈನಂದಿನ ಕೆಲಸಗಳತ್ತ ಆಸಕ್ತಿ ವಹಿಸಿದ್ದರು. ಅಂಗಡಿ, ಮುಂಗಟ್ಟುಗಳು ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದವು. ರಾಜ್ಯ ರಸ್ತೆ ಸಾರಿಗೆ ಮತ್ತು ಖಾಸಗೀ ಬಸ್‌ಗಳು, ಆಟೋ, ಟ್ಯಾಕ್ಸಿ‌ಗಳು ಎಂದಿನಂತೆ ಸಂಚಾರ ಪ್ರಾರಂಭಿಸಿವೆ. ಅಲ್ಲದೆ ಹೊರ ರಾಜ್ಯದಿಂದ ಜಿಲ್ಲೆಗೆ ಪ್ರವಾಸಿಗರು ಆಗಮಿಸುತ್ತಿರುವ ದೃಶ್ಯಗಳು ಕಂಡು ಬಂದವು.

09:49 December 05

ಸಂಪೂರ್ಣ ಸಹಜ ಸ್ಥಿತಿಯಲ್ಲಿ ತುಮಕೂರು

karnataka bandh live updates
ತುಮಕೂರು ಬಸ್​ ನಿಲ್ದಾಣ

ಇಂದು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ತುಮಕೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜನ-ಜೀವನ ಸಂಪೂರ್ಣ ಸಹಜ ಸ್ಥಿತಿಯಲ್ಲಿದೆ. ಬೆಳಗ್ಗೆಯಿಂದಲೂ ಕೆಎಸ್​ಆರ್​ಟಿಸಿ ಬಸ್, ಖಾಸಗಿ ಬಸ್​ಗಳ ಸಂಚಾರ ನಿರಾತಂಕವಾಗಿ ಸಾಗಿದೆ. ಅದೇ ರೀತಿ ನಗರದಲ್ಲಿ ಆಟೋಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಇನ್ನು ವ್ಯಾಪಾರ-ವಹಿವಾಟು ಸಾಮಾನ್ಯವಾಗಿದೆ. ಯಾವುದೇ ಕನ್ನಡಪರ ಸಂಘಟನೆಗಳು ಕೂಡ ಬೆಳಗ್ಗೆಯಿಂದಲೇ ಪ್ರತಿಭಟನೆಗೆ ಇಳಿದಿಲ್ಲ. 

09:41 December 05

ಹೊಸಪೇಟೆಯಲ್ಲಿ ಬಂದ್​ಗೆ ಸಿಗದ ಬೆಂಬಲ

karnataka bandh live updates
ಹೊಸಪೇಟೆಯಲ್ಲಿ ಬಸ್​ಗಳ ಓಡಾಟ

ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ನಡೆಯುತ್ತಿರುವ ಕನ್ನಡಪರ ಸಂಘಟನೆಗಳ ಬಂದ್​ಗೆ ಹೊಸಪೇಟೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ಎಂದಿನಂತೆ ಜನ-ಜೀವನ ನಡೆಯುತ್ತಿದೆ. ಹೋಟೆಲ್ ಮಾಲೀಕರು, ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಆಟೋ, ಬಸ್, ಬೈಕ್ ಹಾಗೂ ವಾಹನಗ ಸಂಚರಿಸುತ್ತಿವೆ. ಅಹಿತರಕ ಘಟನೆ ನಡೆಯದಂತೆ ರೋಟರಿ ವೃತ್ತದಲ್ಲಿ ಪೊಲೀಸ್​ ಇಲಾಖೆ ಬಿಗಿ ಬಂದೋಬಸ್ತ್​ ನೀಡಿದೆ. 

09:36 December 05

ಹಾವೇರಿಯಲ್ಲಿ ಎಂದಿನಂತೆ ಓಡಾಟ

karnataka bandh live updates
ಬಂದ್​ ಹಿನ್ನೆಲೆ ಬಿಗಿ ಪೊಲೀಸ್​ ಬಂದೋಬಸ್ತ್​

ಹಾವೇರಿಯಲ್ಲಿ ಇಂದಿನ ಬಂದ್​ಗೆ ಬೆಂಬಲ ವ್ಯಕ್ತವಾಗಿಲ್ಲ. ಸಾರಿಗೆ ಬಸ್, ಖಾಸಗಿ ವಾಹನ ಹಾಗೂ ಆಟೋ-ರಿಕ್ಷಾಗಳು ಎಂದಿನಂತೆ ಓಡಾಡುತ್ತಿವೆ. ಅಂಗಡಿ ಮುಂಗಟ್ಟುಗಳ ಬಾಗಿಲು ತೆರೆದಿವೆ. ಬಂದ್ ಬೆಂಬಲಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದು ಮುಂಜಾಗ್ರತೆ ಹಿನ್ನೆಲೆ ಬಿಗಿ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ. 

09:22 December 05

ಸಾಂಸ್ಕೃತಿಕ ನಗರಿಯಲ್ಲಿ ಎಂದಿನಂತೆ ಜನ-ಜೀವನ

karnataka bandh live updates
ಸಾಂಸ್ಕೃತಿಕ ನಗರಿಯಲ್ಲಿ ಪ್ರತಿಭಟನೆ

ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಸಾಂಸ್ಕೃತಿಕ ನಗರಿಯಲ್ಲಿ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನೈತಿಕ ಬೆಂಬಲ ಮಾತ್ರ ವ್ಯಕ್ತವಾಗಿದ್ದು, ಜನ-ಜೀವನ ಎಂದಿನಂತೆ ಇದೆ. ಬೆಳಗ್ಗೆ ನಗರ ಬಸ್ ಸಂಚಾರ ಎಂದಿನಂತೆ ಆರಂಭವಾಗಿದೆ. ದೇವರಾಜ ಮಾರುಕಟ್ಟೆ ಓಪನ್ ಆಗಿದೆ. ಹೋರಾಟಾಗಾರರು ಅಗ್ರಹಾರ ವೃತ್ತದಲ್ಲಿ ಅಂಗಡಿಗಳನ್ನು ಮುಚ್ಚಿಸಿ ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡಿದ್ದು ಬಿಟ್ಟರೆ ಬಂದ್​ಗೆ ಅಷ್ಟು ಬೆಂಬಲ ನೀಡಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಬಸ್ ನಿಲ್ದಾಣ ಸೇರಿದಂತೆ ಎಲ್ಲೆಡೆ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ.

09:10 December 05

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್​ ಬಹುತೇಕ ಅನುಮಾನ

karnataka bandh live updates
ರಸ್ತೆಗಿಳಿದ ಬಸ್​ಗಳು

ಮಂಗಳೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡ ಸಂಘಟನೆಗಳ ಕರ್ನಾಟಕ ಬಂದ್​ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಎಂದಿನಂತೆ ಬಸ್​​ಗಳ ಓಡಾಟ ಆರಂಭವಾಗಿದೆ. ಆಟೋ, ಕ್ಯಾಬ್​​ಗಳು, ಖಾಸಗಿ ವಾಹನಗಳು ರಸ್ತೆಗಿಳಿದಿವೆ. ವ್ಯಾಪಾರ-ವಹಿವಾಟುಗಳಲ್ಲಿ ಯಾವುದೇ ರೀತಿಯ ವ್ಯತ್ಯಯ ಆಗಿಲ್ಲ. ಜನ-ಜೀವನವೂ ಎಂದಿನಂತೆ ಆರಂಭಗೊಂಡಿದ್ದು, ಯಾವುದೇ ಸಂಘಟನೆಗಳಿಂದಲೂ ಬಂದ್​ಗೆ  ಬೆಂಬಲ ದೊರಕಿಲ್ಲ. ಜಿಲ್ಲೆಯಲ್ಲಿ ಇಂದು ಬಂದ್ ಆಗುವುದು ಬಹುತೇಕ ಅನುಮಾನವಾಗಿದೆ. 

09:02 December 05

ಉರುಳು ಸೇವೆ ಮಾಡಿ ಪ್ರತಿಭಟನೆ

karnataka bandh live updates
ವಿಜಯ ಸೇನೆಯ ಕಾರ್ಯಕರ್ತರ ಪ್ರತಿಭಟನೆ

ನೆಲಮಂಗಲ: ಕರ್ನಾಟಕ ಬಂದ್​​ ಹಿನ್ನೆಲೆ ಪ್ರತಿಭಟನೆಯ ಕಾವು ಕ್ರಮೇಣ ಹೆಚ್ಚುತ್ತಿದೆ. ನೆಲಮಂಗಲದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದರು. ತಾಲೂಕಿನ ಅರಿಶಿನಕುಂಟೆಯಲ್ಲಿ ಕರುನಾಡ ವಿಜಯ ಸೇನೆಯ ಕಾರ್ಯಕರ್ತರು ಮುಂಜಾನೆಯಿಂದಾನೆ ಪ್ರತಿಭಟನೆ ಆರಂಭಿಸಿದ್ದಾರೆ. ಸರ್ಕಾರದ ಧೋರಣೆ ವಿರೋಧಿಸಿ ರಸ್ತೆಯಲ್ಲಿ ಉರುಳು ಸೇವೆ ಮೂಲಕ ಪ್ರತಿಭಟನೆ ಮಾಡಿದ್ದಾರೆ.

08:57 December 05

08:50 December 05

ರಾಯಚೂರಿನಲ್ಲಿ ಬಂದ್​ಗೆ ನೀರಸ ಪ್ರತಿಕ್ರಿಯೆ

karnataka bandh live updates
ರಾಯಚೂರು ಬಸ್​ ನಿಲ್ದಾಣ

ರಾಯಚೂರು: ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರೆ ನೀಡಿರುವ ಕರ್ನಾಟಕ ಬಂದ್ ರಾಯಚೂರಿನಲ್ಲಿ ನೀರಸ ವ್ಯಕ್ತವಾಗಿದೆ. ನಗರದ ತರಕಾರಿ ಮಾರುಕಟ್ಟೆಯನ್ನ ಬಂದ್​​ಗೊಳಿಸಲಾಗಿದೆ. ಉಳಿದಂತೆ ಎಂದಿನಂತೆ ಬೆಳಗಿನ ವ್ಯಾಪಾರ-ವ್ಯಹಿವಾಟು ಜೋರಾಗಿದೆ. ಸಾರಿಗೆ ಬಸ್​​ಗಳ ಓಡಾಟ ಎಂದಿನಂತೆ ಮುಂದುವರೆದಿದೆ. ಖಾಸಗಿ ವಾಹನ ಸೇರಿದಂತೆ ಆಟೋಗಳು ಸಂಚಾರಿಸುತ್ತಿವೆ. 

08:44 December 05

ವಿಜಯಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತ

karnataka bandh live updates
ವಿಜಯಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತ

ವಿಜಯಪುರ: ಮರಾಠಿ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​ಗೆ ವಿಜಯಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆಯಿಂದಲೇ ಎಂದಿನಂತೆ ಬಸ್ ಸಂಚಾರವಿತ್ತು. ಅಂಗಡಿ ಮುಂಗ್ಗಟ್ಟು ಸಹ ತೆರೆದಿದ್ದವು.

08:39 December 05

ಕಾರವಾರದಲ್ಲಿ ಬಸ್-ಆಟೋ ಸಂಚಾರ ಆರಂಭ!

karnataka bandh live updates
ಕಾರವಾರದಲ್ಲಿ ಬಸ್-ಆಟೋ ಸಂಚಾರ ಆರಂಭ

ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್​ಗೆ ಗಡಿನಾಡು ಕಾರವಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗತೊಡಗಿದೆ. ಎಂದಿನಂತೆ ಜನ-ಜೀವನ ಯಥಾ ಸ್ಥಿತಿಗೆ ಮರಳುತ್ತಿದ್ದು, ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ತೆರೆದುಕೊಳ್ಳತೊಡಗಿವೆ. ಗೋವಾ ಸೇರಿದಂತೆ ಹೊರ ರಾಜ್ಯಗಳಿಗೆ ಹಾಗೂ ಜಿಲ್ಲೆಯ ಇತರೆಡೆ ತೆರಳುವ ಬಸ್​ಗಳು ಸಂಚರಿಸುತ್ತಿವೆ. ಅಲ್ಲದೆ ಆಟೋ ಸಂಚಾರ ಕೂಡ ಆರಂಭಗೊಂಡಿದ್ದು, ಹೊಟೆಲ್ ಸೇರಿದಂತೆ ಮಳಿಗೆಗಳು ನಿಧಾನವಾಗಿ ತೆರೆದುಕೊಳ್ಳತೊಡಗಿವೆ. 

08:02 December 05

ಕಲಬುರಗಿ ಜಿಲ್ಲೆಯಲ್ಲಿ ಕರ್ನಾಟಕ ಬಂದ್​ಗೆ ಸಿಗದ ಸ್ಪಂದನೆ

karnataka bandh live updates
ಕಲಬುರಗಿ ಜಿಲ್ಲೆಯಲ್ಲಿ ಬಂದ್​ಗೆ ಸಿಗದ ಸ್ಪಂದನೆ

ಕಲಬುರಗಿ: ಜಿಲ್ಲೆಯಲ್ಲಿ ಕರ್ನಾಟಕ ಬಂದ್​ಗೆ ಸ್ಪಂದನೆ ಸಿಕ್ಕಿಲ್ಲ. ಎಂದಿನಂತೆ ಜನ-ಜೀವನ ಆರಂಭಗೊಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಬಸ್, ಆಟೋ ಸಂಚಾರ ಯತಾವತ್ತಾಗಿ ಪ್ರಾರಂಭಗೊಂಡಿವೆ. ಟೀ, ಕಾಫಿ ಅಂಗಡಿಗಳು ತೆರೆದಿವೆ. ಬಂದ್ ಮಾಡಲು ಯಾವುದೇ ಕನ್ನಡಪರ ಸಂಘಟನೆಗಳು ಮುಂದಾಗಿಲ್ಲ. ಕೇವಲ ಪ್ರತಿಭಟನೆ ಮಾತ್ರ ಮಾಡೋದಾಗಿ ಹೇಳಿರುವ ಕನ್ನಡಪರ ಸಂಘಟನೆಗಳು, 10 ಗಂಟೆ ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ.

07:58 December 05

ಸಿಎಂ ತವರು ಜಿಲ್ಲೆಯಲ್ಲಿ ಬಂದ್​ಗೆ ಯಾವುದೇ ಪ್ರತಿಕ್ರಿಯೆ ಇಲ್ಲ

ಶಿವಮೊಗ್ಗ: ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಕರ್ನಾಟಕ ಬಂದ್​ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಇದುವರೆಗೂ ಯಾವುದೇ ಕನ್ನಡಪರ ಸಂಘಟನೆಗಳು ಬಂದ್​ಗೆ ಕರೆ ನೀಡಿಲ್ಲ. ಇದರಿಂದ ಜಿಲ್ಲೆಯಲ್ಲಿ ಸರ್ಕಾರಿ, ಖಾಸಗಿ ಹಾಗೂ ಇತರೆ ವಾಹನ ಸಂಚಾರ ಎಂದಿನಂತೆ ನಡೆಯುತ್ತಿದೆ. ನಗರ ಸೇರಿದಂತೆ ಇತರೆ ತಾಲೂಕುಗಳಲ್ಲೂ ವಾಹನ ಸಂಚಾರ ನಡೆಯುತ್ತಿದೆ. ಅಂಗಡಿ ಮುಂಗ್ಗಟ್ಟುಗಳು ಇನ್ನೂ ತೆರೆದಿಲ್ಲ. ಕಾರಣ ಮೊನ್ನೆ ಶಿವಮೊಗ್ಗದ ಹಳೆ ಭಾಗದಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಇಂದು ಬೆಳಗ್ಗೆ 10 ಗಂಟೆ ತನಕ ಕರ್ಪ್ಯೂ ಹಾಗೂ ಇತರೆ ಭಾಗದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಇದರಿಂದ ಜನ ಸಂಚಾರ ಕಡಿಮೆ ಇದೆ.

07:54 December 05

ಚಿಕ್ಕೋಡಿ ಪಟ್ಟಣದಲ್ಲಿ ತಟ್ಟದ ಬಂದ್ ಬಸಿ

karnataka bandh live updates
ಚಿಕ್ಕೋಡಿ ಪಟ್ಟಣದಲ್ಲಿ ತಟ್ಟದ ಬಂದ್ ಬಸಿ

ಪಟ್ಟಣದಲ್ಲಿ ಕರ್ನಾಟಕ ಬಂದ್ ಬಸಿ ಅಷ್ಟು ತಟ್ಟಿಲ್ಲ. ಎಂದಿನಂತೆ ಜನ-ಜೀವನ, ವ್ಯಾಪಾರ-ವಹಿವಾಟು, ಆಟೋ, ಕೆಎಸ್ಆರ್‌ಟಿಸಿ, ಖಾಸಗಿ ವಾಹನಗಳು ಸಂಚಾರ ನಡೆಸಿವೆ. ಬೀದಿಬದಿ ಅಂಗಡಿಗಳು, ಹೋಟೆಲ್​ಗಳು ಎಂದಿನಂತೆ ಓಪನ್ ಆಗಿವೆ. ಬೆಳಿಗ್ಗೆ 11 ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಮಿನಿವಿಧಾನ ಸೌಧದವರಗೆ ಜಾಥಾ ನಡೆಯಲಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

07:43 December 05

ರಾಜ್ಯ ಕಾರ್ಯಕಾರಿಣಿ ಹಿನ್ನೆಲೆ ಬಿಗಿ ಪೊಲೀಸ್ ಬಂದೂಬಸ್ತ್

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ ಕರ್ನಾಟಕ ಬಂದ್​ಗೆ ಕುಂದಾನಗರಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಖಾಸಗಿ ವಾಹನಗಳು, ಬಸ್ ಸಂಚಾರ ಆರಂಭಿಸಿವೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೀಡಿದ್ದ ಬಂದ್​ಗೆ ರಾಜ್ಯದ ಹಲವು ಕನ್ನಡಪರ ಹಾಗೂ ರೈತ ಸಂಘಟನೆ ಸೇರಿದಂತೆ ಇನ್ನಿತರ ಸಂಘಟನೆಗಳು ಬಂದ್‌ ಸಂಪೂರ್ಣ ಬೆಂಬಲಿಸಿದ್ದವು. ಆದ್ರೆ, ಬಂದ್​ಗೆ ಬೆಂಬಲಿಸದ ಕುಂದಾನಗರಿ ಜನರು ಎಂದಿನಂತೆ ವ್ಯಾಪಾರ ವಹಿವಾಟಿಗೆ ಅಣಿಯಾಗುತ್ತಿದ್ದಾರೆ. ಅಟೋ, ಖಾಸಗಿ ವಾಹನಗಳು, ಬಸ್, ಬೈಕ್ ಸಂಚಾರ ಒಡಾಡುತ್ತಿವೆ. ಇಂದು ಬೆಳಗಾವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹಿನ್ನೆಲೆ ಮುಂಜಾಗ್ರತಾ ‌ಕ್ರಮವಾಗಿ ಚೆನ್ನಮ್ಮ ಸರ್ಕಲ್, ಕೊಲ್ಲಾಪುರ ಸರ್ಕಲ್, ರೈಲ್ವೆ ನಿಲ್ದಾಣ, ಕೇಂದ್ರ ಬಸ್ ನಿಲ್ದಾಣ,ಅಶೋಕ ವೃತ ಹಾಗೂ ಕಾಲೇಜು ರಸ್ತೆಯ ಗಾಂಧಿ ಭವನ ಹತ್ತಿರ ಬಿಗಿ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. 

07:39 December 05

ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತ

karnataka bandh live updates
ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತ

ಹಾಸನ: ಇಂದಿನ ಕರ್ನಾಟಕ ಬಂದ್‌ಗೆ ಹಾಸನದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಇಂದಿನಂತೆಯೇ ಕೆಎಸ್‌ಆರ್‌ಸಿಟಿ ಬಸ್ ಸಂಚಾರ ಆರಂಭಗೊಂಡಿದೆ. ಆಟೋಗಳು ಎಂದಿನಂತೆ ಸಂಚರಿಸುತ್ತಿವೆ. ಹೂವು-ಹಣ್ಣುಗಳ ಮಾರಾಟ ಜೋರಾಗಿದೆ. ಸಂಘಟನೆಗಳ ಮುಖಂಡರು ಬೀದಿಗಿಳಿದಿಲ್ಲ. ಇಷ್ಟೊತ್ತಿಗಾಗಲೇ ಹಾಸನದಲ್ಲಿ ಪ್ರತಿಭಟನೆ ಕಾವು ಏರಬೇಕಿತ್ತು. ಆದರೆ, ಈ ದಿನ ಮಾತ್ರ ಈವರೆಗೆ ಪ್ರತಿಭಟನೆ ಆರಂಭವಾಗಿಲ್ಲ. ಕೇವಲ ಪೊಲೀಸ್ ಇಲಾಖೆಯ ವಾಹನಗಳು ಮಾತ್ರ ಪ್ರತಿಭಟನಾ ಸ್ಥಳದಲ್ಲಿ ಬೀಡುಬಿಟ್ಟಿವೆ. 

07:34 December 05

ಚಿಕ್ಕಮಗಳೂರು ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಚಿಕ್ಕಮಗಳೂರು: ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಜನ- ಜೀವನ ಪ್ರಾರಂಭವಾಗಿದ್ದು, ಬಸ್​, ಆಟೋ, ಲಾರಿಗಳು ಓಡಾಡುತ್ತಿವೆ ಅಂಗಡಿ-ಮುಂಗಟ್ಟುಗಳು ತೆರೆದಿವೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಕಟ್ಟೆಚ್ಚರ ವಹಿಸಿದೆ. 

07:28 December 05

ಧಾರವಾಡದಲ್ಲಿ ಮರಾಠ ಸಂಘಟನೆಗಳ ವಿಜಯೋತ್ಸವ?

karnataka bandh live updates
ಧಾರವಾಡದಲ್ಲಿ ಮರಾಠ ಸಂಘಟನೆಗಳ ವಿಜಯೋತ್ಸವ?

ಧಾರವಾಡ: ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್​ಗೆ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್, ಆಟೋ ಸೇರಿದಂತೆ ಖಾಸಗಿ ವಾಹನಗಳ ಸಂಚಾರ ಕಾರ್ಯಾರಂಭ ಮಾಡಿದೆ. ಒಂದೆಡೆ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾದರೆ ಮರಾಠ ಸಂಘಟನೆಗಳು ವಿಜಯೋತ್ಸವ ಆಚರಿಸಲು ಮುಂದಾಗಿವೆ.

07:26 December 05

ಚಿತ್ರದುರ್ಗದಲ್ಲಿ ವಾಗ್ವಾದ!

karnataka bandh live updates
ಚಿತ್ರದುರ್ಗದಲ್ಲಿ ವಾಗ್ವಾದ

ಚಿತ್ರದುರ್ಗ: ಇಂದಿನ ಕರ್ನಾಟಕ ಬಂದ್ ಹಿನ್ನೆಲೆ ವಾಹನ ಸವಾರರಿಗೆ ರಸ್ತೆಗಿಳಿದಂತೆ ಒತ್ತಾಸುತ್ತಿದಂತೆ ಕರವೇ ಕಾರ್ಯಕರ್ತರನ್ನ ಪೊಲೀಸರು ತಡೆದ ಘಟನೆ ನಡೆಯಿತು. ನಗರದ ಗಾಂಧಿ ವೃತ್ತದಲ್ಲಿ ಎಂದಿನಂತೆ ಜವನ-ಜೀವನ ಸಾಗುತ್ತಿತು. ರಸ್ತೆಯಲ್ಲಿ ಸಂಚರಿಸುವ ಆಟೋ, ಖಾಸಗಿ ಬಸ್‌ ಸೇರಿದಂತೆ ವಾಹನಗಳ ಓಡಾಟ ನಡೆಸದಂತೆ ಚಾಲಕರಿಗೆ ಒತ್ತಾಯಿಸುತ್ತಿದ್ದರು. ಈ ವೇಳೆ ಪೊಲೀಸರು ಕರವೇ ಕಾರ್ಯಕರ್ತರನ್ನ ತಡೆದು ಬಲವಂತವಾಗಿ ಸಾರ್ವಜನಿಕರಿಗೆ ತೊಂದರೆ ಮಾಡಬೇಡಿ ಎಂದು ಸೂಚನೆ ನೀಡಿದರು. ಕೆಲ ಕಾಲ ಪೊಲೀಸರ ಹಾಗೂ ಕರವೇ ಕಾರ್ಯಕರ್ತರು ಮಧ್ಯ ಕೆಲಕಾಲ ವಾಗ್ವಾದ ಕೂಡ ಜರುಗಿತು. 

07:18 December 05

ಕೋಲಾರದಲ್ಲಿ ನೀರಸ ಪ್ರತಿಕ್ರಿಯೆ

karnataka bandh live updates
ಕೋಲಾರದಲ್ಲಿ ನೀರಸ ಪ್ರತಿಕ್ರಿಯೆ

ಕೋಲಾರ : ಇಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್​ಗೆ ಕೋಲಾರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರದಲ್ಲಿ ಕೇವಲ ನೈತಿಕ ಬೆಂಬಲ ಸೂಚಿಸಿರುವ ಸಂಘಟನೆಗಳು, ಬಂದ್ ಮಾಡಲು ಸಂಘಟನೆಗಳಿಂದ ನಿರಾಸಕ್ತಿ ಸೂಚಿಸಿದ್ದಾರೆ. ಇನ್ನು ಎಂದಿನಂತೆಯೇ ಸಾರಿಗೆ, ವ್ಯಾಪಾರ ವಹಿವಾಟು, ಹೋಟೆಲ್, ಕಾರ್ಯನಿರ್ವಹಿಸುತ್ತಿದ್ದು, ಹತ್ತು ಗಂಟೆ ನಂತರ ವಿವಿದ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಅದ್ರೆ ಇದುವರೆಗೂ ಯಾವೊಬ್ಬ ಪ್ರತಿಭಟನಾಕಾರರು ಬೀದಿಗಿಳಿದು ಬಂದ್ ಮಾಡಲು ಮುಂದಾಗಿಲ್ಲ. 

07:12 December 05

ಕರ್ನಾಟಕ ಬಂದ್​ಗೆ ಬೆಣ್ಣೆ ನಗರಿಯಲ್ಲಿ ನೀರಸ ಪ್ರತಿಕ್ರಿಯೆ

ದಾವಣಗೆರೆ: ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆದಿರುವ ಕರ್ನಾಟಕ ಬಂದ್​ಗೆ ದಾವಣಗೆರೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಎಂದಿನಂತೆ ಕೆಎಸ್​ಆರ್​ಟಿಸಿ ಬಸ್ ಸಂಚಾರ ಆರಂಭಗೊಂಡಿವೆ. ಇನ್ನು ಆಟೋಗಳು ಎಂದಿನಂತೆ ಸಂಚರಿಸುತ್ತಿದ್ದು, ಬೆಳಗಿನ ಜಾವ ಹೂವಿನ ಮಾರುಕಟ್ಟೆ ಕೂಡ ಆರಂಭಿಸಲಾಗಿದೆ. ಇನ್ನು ದಾವಣಗೆರೆಯಲ್ಲಿ 28 ವಿವಿಧ ಸಂಘಟನೆಗಳು ಬಂದ್​ಗೆ ಕರೆ ನೀಡಿದ್ದು, ಬೆಳಗ್ಗೆ 6:30 ಗಂಟೆ ಕಳೆದರು ಕೂಡ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಸುಳಿವಿರಲಿಲ್ಲ. 

07:07 December 05

ಚಿತ್ರದುರ್ಗದಲ್ಲಿ ಬಂದ್​ಗೆ ಸಹಕರಿಸುವಂತೆ ಮನವಿ

ಚಿತ್ರದುರ್ಗ: ಇಂದಿನ ಕರ್ನಾಟಕ ಬಂದ್‌ಗೆ ಕರೆ ನೀಡಿದ ಬೆನ್ನಲ್ಲೆ ಕರವೇ ಕಾರ್ಯಕರ್ತರು ಬಂದ್ ಸಹಕರಿಸುವಂತೆ ವಾಹನ ಸವಾರರಿಗೆ ಹಾಗೂ ಬೀದಿ ವ್ಯಾಪಾರಿಗಳಿಗೆ ಮನವಿ ಮಾಡಿದರು. ನಗರದ ಗಾಂಧಿ ವೃತ್ತದಲ್ಲಿ ಹೂವು-ಹಣ್ಣು ಮಾರಾಟ ಹಾಗೂ ಖಾಸಗಿ ವಾಹನಗಳ ಓಡಾಟ ಎಂದಿನಂತೆ ಸಾಗುತ್ತಿತ್ತು. ಕಾರ್ಯಕರ್ತರು ಆಗಮಿ ರಸ್ತೆಯಲ್ಲಿ ಓಡಾಟ ನಡೆಸುತ್ತಿರುವ ವಾಹನಗಳ ಚಾಲಕರಿಗೆ ಬಂದ್ ಸಹಕರಿಸುವಂತೆ ಒತ್ತಾಯಿಸಿದರು. ಇನ್ನು ಪ್ರಾಧಿಕಾರ ರಚನೆ ಮಾಡಿದ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಕರವೇ ಕಾರ್ಯಕರ್ತರು  ನಾರಾಯಣಗೌಡ ಬಣ) ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕನ್ನಡ ಪರ ಸಂಘಟನಗಳ ಕುರಿತು ಹಗುರವಾಗಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಗುಡುಗಿದರು. ಇತ್ತ ಹೆಚ್ಚಿನ ಭದ್ರತೆಗಾಗಿ ನಗರದ್ಯಾಂತ 500ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

07:02 December 05

ಕರ್ನಾಟಕ ಬಂದ್​ಗೆ ಗಣಿಜಿಲ್ಲೆ ನಕಾರ!

karnataka bandh live updates
ಕರ್ನಾಟಕ ಬಂದ್​ಗೆ ಗಣಿಜಿಲ್ಲೆ ನಕಾರ

ಬಳ್ಳಾರಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಈ ದಿನ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್​ಗೆ ಗಣಿ ಜಿಲ್ಲೆಯಲ್ಲಿ ನಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕರ್ನಾಟಕ ಬಂದ್ ಆಚರಣೆ ಮಾಡಲು ನಿರ್ಧರಿಸಿದ ಬೆನ್ನಲ್ಲೇ ಬಂದ್ ಶುರುವಾಗಿ ಒಂದು ಗಂಟೆಯಾದ್ರೂ ಕೂಡ ಜಿಲ್ಲೆಯ ಕನ್ನಡಪರ ಸಂಘಟನೆಗಳ ಮುಖಂಡರು ಬೀದಿಗಿಳಿಯಲಿಲ್ಲ. ಬಳ್ಳಾರಿಯ ಗಡಿಗಿ ಚನ್ನಪ್ಪ ವೃತ್ತದ ಬಳಿ ಇಷ್ಟೋತ್ತಿಗಾಗಲೇ ಈ ಪ್ರತಿಭಟನೆಯ ಕಾವು ಏರಬೇಕಿತ್ತು. ಆದರೆ, ಈ ದಿನ ಮಾತ್ರ ಈವರೆಗೂ ಆರಂಭವಾಗಿಲ್ಲ. ಕೇವಲ ಪೊಲೀಸ್ ಇಲಾಖೆಯ ವಾಹನ ಮಾತ್ರ ಪ್ರತಿಭಟನಾ ಸ್ಥಳದಲ್ಲಿ ಬೀಡು ಬಿಟ್ಟಿದೆಯಾದ್ರೂ ಪ್ರತಿಭಟನಾಕಾರರ ಸುಳಿವೇ ಇರಲಿಲ್ಲ.

06:54 December 05

ಚಾಮರಾಜನಗರದಲ್ಲಿ ಸಾರಿಗೆ ಸಂಸ್ಥೆ ಓಡಾಟ ನಿರಾತಂಕ!

karnataka bandh live updates
ಚಾಮರಾಜನಗರದಲ್ಲಿ ಕನ್ನಡ ಪರ ಸಂಘಟನೆಗಳ ಬಂದ್​

ಚಾಮರಾಜನಗರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರೆ ನೀಡಿರುವ ರಾಜ್ಯ ಬಂದ್​ಗೆ ಕೆಎಸ್​ಆರ್​ಟಿಸಿ ಬೆಂಬಲ ಇಲ್ಲದಿರುವುದರಿಂದ ಬೆಳಗಿನ ಸಂಚಾರ ಆರಂಭಿಸಿತು‌. ಸರಕು ತುಂಬಿದ ಲಾರಿಗಳು, ಸಾರಿಗೆ ಬಸ್ ಹಾಗೂ ಅವಶ್ಯಕ ವಸ್ತುಗಳ ಅಂಗಡಿಗಳು, ಟೀ ಕ್ಯಾಂಟೀನ್​​ಗಳು ಕಾರ್ಯಾರಂಭ ಮಾಡಿದ್ದು ಜನ ಸಂಚಾರ ಕೂಡ ಸಾಮಾನ್ಯವಾಗಿದೆ. ನಗರದ ಭುವನೇಶ್ವರಿ ವೃತ್ತದಲ್ಲಿ ಶಾ. ಮುರುಳಿ, ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರೇಣುಕಾಚಾರ್ಯ, ಯತ್ನಾಳ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಸರ್ಕಾರವನ್ನು ಡೋಂಗಿ ಎಂದು ಕೂಗಿ ಮರಾಠಿ ಅಭಿವೃದ್ಧಿ ನಿಗಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಡಿಆರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿ ಭಾರಿ ಬಿಗಿ ಭದ್ರತೆ ಕೈಗೊಂಡಿದೆ.

06:47 December 05

ಇಂದು ಗದಗನಲ್ಲಿ ಬಂದ್ ಕರೆ ಹೇಗಿರಲಿದೆ!

Karnataka bandh live updates
ಗದಗನಲ್ಲಿ ಬಂದ್ ಕರೆ

ಗದಗ: ಪ್ರಾಧಿಕಾರ ರಚನೆ ವಿಚಾರವಾಗಿ ಇಂದು ಕರೆ ನೀಡಲಾಗಿರುವ ಬಂದ್ ಯಶಸ್ವಿಗೊಳಿಸಲು ಜಿಲ್ಲೆಯ ಸಂಘಟನೆಗಳು ಹರಸಾಹಸಪಡುತ್ತಿವೆ. ರಕ್ಷಣಾ ವೇದಿಕೆ ಸೇರಿದಂತೆ 50ಕ್ಕೂ ಅಧಿಕ ಸಂಘಟನೆಗಳು ಬಂದ್​ಗೆ ಬೆಂಬಲ ನೀಡಿದ್ದು ಕೆಲವು ಸಂಘಟನೆಗಳು ಬಂದ್​ನಿಂದ ದೂರವೇ ಉಳಿದಿವೆ. ಕನ್ನಡಪರ ಸಂಘಟನೆ ಅಲ್ಲದೇ ರಾಜಕೀಯ ಪಕ್ಷವಾದ ಜೆಡಿಎಸ್ ಹಾಗೂ ಕಾಂಗ್ರೆಸ್ ಸಹ ಪರೋಕ್ಷವಾಗಿ ಬೆಂಬಲ ನೀಡಿವೆ. ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಆದರೆ, ಕೆಸ್​ಆರ್​ಟಿಸಿ ಬಂದ್​ಗೆ ಬೆಂಬಲ ಸೂಚಿಸಿಲ್ಲ, ಹಾಗಾಗಿ ಬಸ್ ಸಂಚಾರ ಎಂದಿನಂತೆ ಇತಲಿದೆ. ಹೋಟೆಲ್ ಮಾಲೀಕರ ಸಂಘವು ಬಂದ್​ಗೆ ನೈತಿಕ ಬೆಂಬಲ ಸೂಚಿಸಿವೆ. 

06:47 December 05

ಕೊಪ್ಪಳದಲ್ಲಿಯೂ ಪ್ರತಿಭಟನೆ ಪ್ರಾರಂಭ

ಕೊಪ್ಪಳ: ಇಂದಿನ ಬಂದ್​ ಹಿನ್ನೆಲೆ ಕೊಪ್ಪಳದಲ್ಲಿಯೂ ಪ್ರತಿಭಟನೆ ಪ್ರಾರಂಭಗೊಂಡಿವೆ. ಬೆಳಗಿನ ಜಾವವೇ ರಸ್ತೆಗಿಳಿದಿರುವ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಸರ್ಕಾರದ ವಿರುದ್ಧ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಇರುವ ರಸ್ತೆಯಲ್ಲಿ ಟೈರ್​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ನಗರದ ಕೇಂದ್ರೀಯ ಬಸ್ ನಿಲ್ದಾಣದಿಂದ ಬೆಳಗ್ಗೆ ಹೊರಟಿದ್ದ ಬಸ್​​ಗಳನ್ನು ತಡೆದು ಬಸ್ ಸಂಚಾರವನ್ನು ಸ್ಥಗಿತಗೊಳಿಸುವಂತೆ ತಾಕೀತು ಮಾಡಿದರು. ಬಂದ್ ಹಿನ್ನೆಲೆಯಲ್ಲಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇನ್ನು ಹೊತ್ತು ಏರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗುವ ಸಾಧ್ಯತೆ ಇದೆ.

06:43 December 05

karnataka bandh live updates
ಬಂದ್​ (ಸಂಗ್ರಹ ಚಿತ್ರ)

ಬೆಂಗಳೂರು : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ನೀಡಲಾಗಿರುವ ಬಂದ್​ ಹಿನ್ನೆಲೆ ಪೊಲೀಸ್ ಇಲಾಖೆಯಿಂದಲೂ ಟಫ್ ರೂಲ್ಸ್​ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಇಲಾಖೆ ಸೂಚನೆ ನೀಡಿದ್ದರಿಂದ ಬಿಗಿ ಪೊಲೀಸ್​ ಬಂದೋಬಸ್ತ್​ ನೀಡಲಾಗಿದೆ. ಇಂದು ಮುಂಜಾನೆಯಿಂದಲೂ ಹೊಯ್ಸಳ ಗಸ್ತು ತಿರುಗುತ್ತಿದೆ. ಬಂದ್​ ಹಿನ್ನೆಲೆ 5 ಜನ ಅಡಿಷನ್ ಸಿಪಿಗಳು, ಡಿಸಿಪಿಗಳು ಎಸಿಪಿಗಳ ನೇತೃತ್ವದಲ್ಲಿ 35 ಕೆಎಸ್​ಆರ್​ಪಿ, 32 ಸಿಎಆರ್​ ತುಕಡಿಗಳು ಸೇರಿದಂತೆ ಒಟ್ಟು 15 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಬಸ್ ನಿಲ್ದಾಣ, ಮೆಟ್ರೋ ಬಳಿ ಹೆಚ್ಚಿನ ಭದ್ರತೆ ಕೊಡಲಾಗಿದೆ. ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸುವಂತಿಲ್ಲ, ಶಾಂತಿಯುತ ರ‍್ಯಾಲಿ ನಡೆಸಲಷ್ಟೇ ಅವಕಾಶ ನೀಡಲಾಗಿದೆ. ಅಲ್ಲದೇ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಪೊಲೀಸ್​ ಇಲಾಖೆ ಎಚ್ಚರಿಕೆ ನೀಡಿದೆ.

06:06 December 05

ರಾಜ್ಯದಲ್ಲಿ ಹೇಗಿದೆ 'ಬಂದ್'​ ಬಿಸಿ

karnataka bandh live updates
ಕರ್ನಾಟಕ ಬಂದ್

ಬೆಂಗಳೂರು : ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್​ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವು ಸಂಘಟನೆಗಳು ಬಂದ್​ ಬೆನ್ನಿಗೆ ನಿಂತರೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ನೀಡುವ ಮೂಲಕ ಬಂದ್​ನಿಂದ ಅಂತರ ಕಾಯ್ದುಕೊಂಡಿವೆ.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ್ದಲ್ಲದೇ ಅದಕ್ಕೆ ಸರ್ಕಾರವು 50 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ಕನ್ನಡಿಗರಿಗೆ ದ್ರೋಹ ಬಗೆದಿದೆ. ಆದ್ದರಿಂದ ನೀಡಿದ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಇಂದು (ಶನಿವಾರ) ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸೇರಿ ಹತ್ತಾರು ಸಂಘಟನೆಗಳು ಬೀದಿಗಿಳಿಯಲಿವೆ. ಬಂದ್​ ಹಿನ್ನೆಲೆ ಪೊಲೀಸ್​ ಬಿಗಿ ಬಂದೋಬಸ್ತ್​ ಸಹ ನೀಡಲಾಗಿದೆ. ಗುಂಪು ಸೇರುತ್ತಿರುವ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಟೌನ್ ಹಾಲ್​​ನಿಂದ ಫ್ರೀಡಂ ಪಾರ್ಕ್ ವರೆಗೆ ಜಾಥಾ ನಡೆಸಲು ಸಜ್ಜಾಗಿರುವ ಹೋರಾಟಗಾರರನ್ನು ಟೌನ್ ಹಾಲ್ ಬಳಿ ಸುಳಿಯಲು ಬಿಡದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

Last Updated : Dec 5, 2020, 9:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.