ETV Bharat / state

ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆ ಎರಡು ವಿಧೇಯಕಗಳಿಗೆ ಅಂಗೀಕಾರ - ಬೆಂಗಳೂರು

ಕರ್ನಾಟಕ ಜಲಸಾರಿಗೆ ಮಂಡಳಿ ಅಧ್ಯಕ್ಷರನ್ನಾಗಿ ಸಿಎಂರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರಾಗಿ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಪ್ರಭಾರ ಮಂತ್ರಿಯವರನ್ನು ಮಾಡುವ ಸಂಬಂಧ ತಿದ್ದುಪಡಿ ತರಲಾಗಿದೆ..

karnataka assembly passes 2 bills amid opposition uproar
ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆ ಎರಡು ವಿಧೇಯಕಗಳಿಗೆ ಅಂಗೀಕಾರ
author img

By

Published : Mar 23, 2021, 5:51 PM IST

ಬೆಂಗಳೂರು : ವಿಧಾನಸಭೆಯಲ್ಲಿ ಕಾಂಗ್ರೆಸ್ ಧರಣಿ ಮಧ್ಯೆ ಎರಡು ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು. ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ತೊಡೆದು ಹಾಕುವ ಉದ್ದೇಶದಿಂದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021 ಹಾಗೂ ಕರ್ನಾಟಕ ಜಲಸಾರಿಗೆ ಮಂಡಳಿ (ತಿದ್ದಪಡಿ) 2021 ವಿಧೇಯಕಗಳಿಗೆ ಅಂಗೀಕಾರ ಪಡೆಯಲಾಯಿತು.

ಸಾಮಾನ್ಯ ಸೊಸೈಟಿಗಳು ಮತ್ತು ಅಲ್ಪಸಂಖ್ಯಾತ ಸೊಸೈಟಿಗಳ ನಡುವಿನ ತಾರತಮ್ಯ ತೊಡೆದು ಹಾಕುವ ಉದ್ದೇಶದಿಂದ ಕರ್ನಾಟಕ ಸೊಸೈಟಿಗಳ ನೋಂದಣಿ (ತಿದ್ದುಪಡಿ) ವಿಧೇಯಕ 2021ವನ್ನು ತರಲಾಗಿದೆ. ಹೆಚ್ಚಿನ ವ್ಯಾಜ್ಯಗಳನ್ನು ತಪ್ಪಿಸಲು ಮತ್ತು ಸರ್ಕಾರದ ಸೊಸೈಟಿಯ ಸದಸ್ಯರ ಹಾಗೂ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ವಿಧೇಯಕವನ್ನು ತರಲಾಗಿದೆ.

ಹೊಸ ವಿಧೇಯಕದನ್ವಯ ಆಡಳಿತಾಧಿಕಾರಿಯು ಆತನ ನೇಮಕ ಅವಧಿಯ ಮುಕ್ತಾಯವಾಗುವ ಮೊದಲು ಸೊಸೈಟಿಯ ಸರ್ವಸದಸ್ಯರ ಸಭೆ ಕರೆಯಲು ಮತ್ತು ಆಡಳಿತ ಮಂಡಳಿಯ ರಚನೆಗಾಗಿ ಚುನಾವಣೆಗಳನ್ನು ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಇದೇ ವೇಳೆ ಕರ್ನಾಟಕ ಜಲಸಾರಿಗೆ ಮಂಡಳಿ (ತಿದ್ದಪಡಿ) 2021 ವಿಧೇಯಕವೂ ಧರಣಿ ಮಧ್ಯೆ ಅಂಗೀಕೃತಗೊಂಡಿತು.

ಕರ್ನಾಟಕ ಜಲಸಾರಿಗೆ ಮಂಡಳಿ ಅಧ್ಯಕ್ಷರನ್ನಾಗಿ ಸಿಎಂರನ್ನು ಅಧ್ಯಕ್ಷರನ್ನಾಗಿ ಮತ್ತು ಉಪಾಧ್ಯಕ್ಷರಾಗಿ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಪ್ರಭಾರ ಮಂತ್ರಿಯವರನ್ನು ಮಾಡುವ ಸಂಬಂಧ ತಿದ್ದುಪಡಿ ತರಲಾಗಿದೆ.

ನೌಕಾ ಸರಕುಗಳನ್ನು ನಿರ್ವಹಿಸುವ ಜವಾಬ್ದಾರಿಗಳನ್ನು ನಿರ್ವಹಿಸುವುದಕ್ಕಾಗಿ ನೌಕಾ ಸರಕು ಅಭಿರಕ್ಷಕ ನೇಮಕ ಮಾಡಲು ಮತ್ತು ಮಂಡಳಿಯು ಗುತ್ತಿಗೆ ಕರಾರು ಮಾಡಿಕೊಳ್ಳುವ ವರ್ಷಗಳ ಸಂಖ್ಯೆಯನ್ನು ಐದು ವರ್ಷಗಳಿಂದ ಮೂವತ್ತು ವರ್ಷಗಳಿಗೆ ಹೆಚ್ಚಿಸಲಿದೆ.

ಇದೇ ವೇಳೆ ಭಾರತ ಸಂವಿಧಾನದ 252ನೇ ಅನುಚ್ಛೇದದ ಅಡಿಯಲ್ಲಿ ಸಂಸತ್ತು ಅಂಗೀಕರಿಸಿದ ಮತ್ತು ತದನಂತರ ಕರ್ನಾಟಕ ರಾಜ್ಯ ಅಳವಡಿಸಿಕೊಂಡ ದಿ ಎಂಪ್ಲ್ಯಾಮೆಂಟ್ ಆಫ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಅಂಡ್ ಕನ್ಟ್ರಕ್ಷನ್ ಆಫ್ ಡ್ರೈ ಲ್ಯಾಟ್ರೈನ್ಸ್ (ಪ್ರೋಹಿಬಿಷನ್) ಆಕ್ಟ್ 1993 (1993ರ ಕೇಂದ್ರ ಅಧಿನಿಯಮ 46), ದಿ ಪ್ರೋಹಿಬಿಷನ್ ಆಫ್ ಎಂಪ್ಲ್ಯಾಮೆಂಟ್ ಆಫ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಅಂಡ್ ದೇರ್ ರಿಹಾಬಿಲಿಟೇಷನ್ ಆಕ್ಟ್ 2013ನ್ನು (2013 ರ ಕೇಂದ್ರ ಅಧಿನಿಯಮ 25) ಜಾರಿಗೊಳಿಸಿದ ತರುವಾಯ ಅನಗತ್ಯಗೊಂಡಿರುವುದರಿಂದ, ದಿ ಎಂಪ್ಲ್ಯಾಮೆಂಟ್ ಆಫ್ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಅಂಡ್ ಕನ್ಟ್ರ ಕ್ಷನ್ ಆಫ್ ಡ್ರೈ ಲ್ಯಾಟ್ರೈನ್ಸ್ (ಪ್ರೋಹಿಬಿಷನ್) ಆಕ್ಟ್ 1993 (1993ರ ಕೇಂದ್ರ ಅಧಿನಿಯಮ 46), ಅನ್ನು ನಿರಸನಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಯಿತು.

ಓದಿ: ಕೋವಿಡ್ ಅಲೆ.. ನಿಗದಿಯಂತೆ ಪರೀಕ್ಷೆಗಳು ನಡೆಯಲಿದೆ ಎಂದ ಡಿಸಿಎಂ ಅಶ್ವತ್ಥ್ ನಾರಾಯಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.