ETV Bharat / state

ಸುಗಮವಾಗಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆ; ರಾಜ್ಯದ ಒಟ್ಟು ಮತಪ್ರಮಾಣದಲ್ಲಿ ಹೆಚ್ಚಳ - ಈಟಿವಿ ಭಾರತ್ ಕನ್ನಡ ಸುದ್ದಿ

ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಇಂದು ಶೇ. 72 ರಷ್ಟು ಮತದಾನ ಆಗಿದೆ. ನಿಖರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ
ಕರ್ನಾಟಕ ವಿಧಾನಸಭೆ ಚುನಾವಣೆ
author img

By

Published : May 10, 2023, 10:58 PM IST

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023 ರಾಜ್ಯಾದ್ಯಂತ ಬಹುತೇಕ ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆ ಇಲ್ಲದೆ ಸುಸೂತ್ರವಾಗಿ ಮತಚಲಾವಣೆ ನಡೆಯಿತು.‌

ರಾಜ್ಯದ 224 ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ಜಿದ್ದಾಜಿದ್ದಿನಿಂದ ಕೂಡಿದ್ದ ಮತಸಮರ ಮುಗಿದಿದೆ. ರಾಜ್ಯದ ಮತಪ್ರಭುಗಳು ಅಭ್ಯರ್ಥಿಗಳ ಹಣೆಬರಹವನ್ನು ಮತಯಂತ್ರದ ಮೂಲಕ ಬರೆದಿದ್ದಾರೆ. ಅಭ್ಯರ್ಥಿಗಳ ಭವಿಷ್ಯ ಮೇ 13ರಂದು ನಿರ್ಧಾರವಾಗಲಿದೆ. ಮತಪ್ರಭುಗಳು ಯಾರನ್ನು ಗದ್ದುಗೆಗೆ ಏರಿಸಿದ್ದಾರೆ, ಯಾರನ್ನು ಗದ್ದುಗೆಯಿಂದ ಇಳಿಸಿದ್ದಾರೆ ಎಂಬ ಜನಾದೇಶ ಶನಿವಾರ ಗೊತ್ತಾಗಲಿದೆ. ಆದರೆ ಇಂದು ನಡೆದ ಮತದಾನ ರಾಜ್ಯಾದ್ಯಂತ ಶಾಂತಿಯುತವಾಗಿ ನಡೆದಿದೆ. ಸಣ್ಣಪುಟ್ಟ ಗೊಂದಲ, ತಾಂತ್ರಿಕ ದೋಷ, ಕಾರ್ಯಕರ್ತರ ನಡುವೆ ತಿಕ್ಕಾಟ ಬಿಟ್ಟರೆ ಚುನಾವಣೆ ಸುಗಮವಾಗಿ ಮುಗಿದಿದೆ.

ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾದ ಚುನಾವಣೆ ಸಂಜೆ 6.30 ಗಂಟೆವರೆಗೆ ನಡೆಯಿತು. ಕೆಲವೆಡೆ ಅಂತಿಮ‌ ಕ್ಷಣದಲ್ಲಿ ಮತಗಟ್ಟೆಗಳಿಗೆ ಹೆಚ್ಚಿನ‌ ಪ್ರಮಾಣದ ಮತದಾರರು ದೌಡಾಯಿಸಿ ಬಂದರು. ಆರು ಗಂಟೆಗೆ ಮತಗಟ್ಟೆಗಳ ಗೇಟುಗಳನ್ನು ಮುಚ್ಚಲಾಯಿತು. ಮತಗಟ್ಟೆ ಆವರಣದಲ್ಲಿ ಸಂಜೆ ಆರು ಗಂಟೆಯೊಳಗೆ ಬಂದಿದ್ದವರಿಗೆಲ್ಲರಿಗೂ ಮತದಾನದ ಅವಕಾಶವನ್ನು ನೀಡಲಾಯಿತು.

ರಣಕಣದಲ್ಲಿ ಒಟ್ಟು 2,615 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದರು. ಈ ಪೈಕಿ 2,430 ಪುರುಷ ಅಭ್ಯರ್ಥಿಗಳಾಗಿದ್ದರು. 184 ಮಹಿಳಾ ಅಭ್ಯರ್ಥಿಗಳಾಗಿದ್ದರೆ, ಒಬ್ಬರು ಇತರೆ ಅಭ್ಯರ್ಥಿಯಾಗಿದ್ದರು. ರಾಜ್ಯಾದ್ಯಂತ ಒಟ್ಟು 58,545 ಮತಗಟ್ಟೆಗಳಲ್ಲಿ ಮತದಾನ‌ ನಡೆಯಿತು. ಈ ಪೈಕಿ 2,258 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ 996 ಮಹಿಳೆಯರಿಗಾಗಿ ಪ್ರತ್ಯೇಕ ಸಖಿ ಮತಗಟ್ಟೆಗಳಾಗಿತ್ತು. ವಿಶೇಷ ಚೇತನರಿಗೆ 239, ಯುವ ಮತದಾರರಿಗೆ 286, ಸ್ಥಳೀಯ ವಿಷಯಾಧಾರಿತ ಒಟ್ಟು 623 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. 114 ಬುಡಕಟ್ಟು ಮತದಾರರಿಗೆ ವಿಶೇಷ ಮತಗಟ್ಟೆ ಸ್ಥಾಪಿಸಲಾಗಿತ್ತು.

ಈ ಬಾರಿ ಒಟ್ಟು 5,30,85,566 ಮತದಾರರಿದ್ದರು. 2,66,82,156 ಪುರುಷ ಮತದಾರರು ಇದ್ದರೆ, 2,63,98,483 ಮಹಿಳಾ ಮತದಾರರು ಇದ್ದರು. 4,027 ಇತರ ಮತದಾರರು ಇದ್ದರು. ಈ ಪೈಕಿ ಒಟ್ಟು 11,71,558 ಯುವ ಮತದಾರರು ಇದ್ದರು. ವಿಶೇಷ ಚೇತನ ಮತದಾರರ ಸಂಖ್ಯೆ 5,71,281 ಇದ್ದರು.

ರಾಜ್ಯದ ಒಟ್ಟು ಮತ ಪ್ರಮಾಣ ಅಂದಾಜು 72: 224 ವಿಧಾನಸಭಾ ಕ್ಷೇತ್ರಗಳಿಗೆ ರಾಜ್ಯದಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ಮಧ್ಯಾಹ್ನ 5 ಗಂಟೆಯವರೆಗೆ ಶೇ. 65.69 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಸಂಜೆಯಾಗುತ್ತಲೇ ರಾಜ್ಯದ ಬಹುತೇಕ ಮತಗಟ್ಟೆಗಳಿಗೆ ಹೆಚ್ಚಿನ ಸಂಖ್ಯೆಯ ಮತದಾರರು ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿತ್ತು. ಮತದಾನ ಅಂತ್ಯಕ್ಕೆ ಕೆಲವೇ ನಿಮಿಷಗಳಿದ್ದರೂ, ಮತದಾರರ ಸಂಖ್ಯೆ ಮಾತ್ರ ಜಾಸ್ತಿಯಾಗಿತ್ತು. ಒಂದು ಅಂದಾಜಿನ ಪ್ರಕಾರ, ಒಟ್ಟು 72% ಮತದಾನ ಆಗಿತ್ತು. ನಿಖರ ಮತಪ್ರಮಾಣದ ಅಂಕಿಅಂಶ ಇನ್ನಷ್ಟೇ ಬರಬೇಕಾಗಿದೆ.

ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಒಟ್ಟು 8.26% ಮತದಾನ ಪ್ರಮಾಣ ಆಗಿತ್ತು. ಬೆಳಗ್ಗೆ 11 ಗಂಟೆಗೆ ಒಟ್ಟು ರಾಜ್ಯಾದ್ಯಂತ ಮತಪ್ರಮಾಣ 21% ಆಗಿತ್ತು. ಮಧ್ಯಾಹ್ನ ಒಂದು ಗಂಟೆವರೆಗೆ ರಾಜ್ಯದಲ್ಲಿನ ಒಟ್ಟು ಮತದಾನ ಪ್ರಮಾಣ 37.25% ಆಗಿತ್ತು. ಮಧ್ಯಾಹ್ನ 3 ಗಂಟೆವರೆಗೆ ರಾಜ್ಯಾದ್ಯಂತ ಒಟ್ಟು ಮತದಾನ ಪ್ರಮಾಣ 52.18% ಆಗಿತ್ತು. ರಾಜ್ಯದಲ್ಲಿ 5 ಗಂಟೆವರೆಗೆ ಒಟ್ಟು 65.69% ಮತದಾನ ಆಗಿತ್ತು. ಈ ಬಾರಿ ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮತದಾರರು ಮತಗಟ್ಟೆಗೆ ಬಂದು ಮತಚಲಾವಣೆ ಬಂದಿದ್ದರು. ಮತಗಟ್ಟೆಗಳಲ್ಲಿನ ಸರತಿ ಸಾಲು ಇದಕ್ಕೆ ಹಿಡಿದ ಕನ್ನಡಿಯಾಗಿತ್ತು.

2018ರಲ್ಲಿ 72.57% ಮತದಾನ ನಡೆದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಮತಪ್ರಮಾಣ ಆಗುವ ಅಂದಾಜಿದೆ. ಸಂಜೆ ಅಂತಿಮ ಒಂದು ಗಂಟೆಯಲ್ಲಿ ರಾಜ್ಯಾದ್ಯಂತ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿದ್ದರು. ಚುನಾವಣಾ ಆಯೋಗ ರಾಜ್ಯಾದ್ಯಂತ ಮತಪ್ರಮಾಣದ ಲೆಕ್ಕಹಾಕುತ್ತಿದ್ದು, ಅಂದಾಜಿನ ಪ್ರಕಾರ ಈ ಬಾರಿ 74-76% ಮತದಾ‌ನ ನಡೆದಿರುವ ಸಾಧ್ಯತೆ ಇದೆ. ಗುರುವಾರ ನಿಖರ ಅಂಕಿಅಂಶ ಸಿಗಲಿದೆ.

ವೃದ್ಧರಿಂದ ಉತ್ಸಾಹದ ಮತದಾನ: ಇತ್ತ ವೃದ್ಧರು ಅತಿ ಉತ್ಸಾಹದಿಂದ ರಾಜ್ಯಾದ್ಯಂತ ಮತ ಚಲಾವಣೆ ಮಾಡಿದರು. ವೀಲ್ ಚೇರ್ ಮೂಲಕ ಬಂದು 80 ವರ್ಷಕ್ಕೂ ಅಧಿಕ ವಯಸ್ಸಿನ ಮತದಾರರು ಮತಚಲಾವಣೆ ಮಾಡಿದರು. ಬೆಂಗಳೂರು ಸೇರಿದಂತೆ ಹಲವೆಡೆ ವೃದ್ಧರು ಉತ್ಸಾಹದಿಂದಲೇ ಆಗಮಿಸಿ ತಮ್ಮ ಮತಹಕ್ಕನ್ನು ಚಲಾಯಿಸಿ ತಮ್ಮ ಕರ್ತವ್ಯವನ್ನು ಮೆರೆದರು. ಆ ಮೂಲಕ ಯುವ ಮತದಾರರಿಗೆ ಸಂದೇಶವನ್ನು ನೀಡಿದರು.‌

ಫಸ್ಟ್ ಟೈಮರ್ಸ್ ರಿಂದ ಉತ್ತಮ ಸ್ಪಂದನೆ: ಫಸ್ಟ್ ಟೈಮರ್ಸ್ ರಿಂದ ಈ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಯುವ ಮತದಾರರು ಮೊದಲ ಬಾರಿ ಮತದಾನ ಮಾಡಿದರು. ಬಿಸಿಲನ್ನೂ ಲೆಕ್ಕಿಸದೆ ಹೆಚ್ಚಿನ ಯುವ ಮತದಾರರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮೊದಲ ಮತವನ್ನು ಹಾಕಿದರು.

ಫಸ್ಟ್ ಟೈಮರ್ಸ್ ಮತದಾರರು ಮತಹಾಕಿ ತಮ್ಮ ಜವಾಬ್ದಾರಿ ಮೆರೆದರು. ಈ ಬಾರಿ ರಾಜ್ಯದಲ್ಲಿ ಒಟ್ಟು 11,71,558 ಯುವ ಮತದಾರರು ಇದ್ದರು. ಬೆಂಗಳೂರು ಸೇರಿ ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಯುವ ಮತದಾರರು ಮತಚಲಾಯಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬೆಂಗಳೂರಲ್ಲಿ ನಿರಾಶಾದಾಯಕ ಮತದಾನ: ಬೆಂಗಳೂರಲ್ಲಿ ಈ ಬಾರಿನೂ ನಿರಾಶಾದಾಯಕ ಮತದಾನ‌ ನಡೆದಿದೆ. ಬೆಳಗ್ಗೆ ಸುಮಾರು ಎರಡು ಮೂರು ತಾಸುಗಳ ಕಾಲ ಬಹುತೇಕ ಮತಗಟ್ಟೆಗಳಲ್ಲಿ ಸರತಿ ಸಾಲು ಕಂಡು ಬಂತು. ಆದರೆ ಮಧ್ಯಾಹ್ನದ ಬಳಿಕ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.‌ ಈ ಬಾರಿ ಬೆಂಗಳೂರು‌ ನಗರದಲ್ಲಿ ಕೇವಲ 54 -55% ಮತದಾನ ನಡೆದಿದೆ.

ಬೆಂಗಳೂರಿನ ಮತದಾನ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ನಾನಾ ಕಸರತ್ತು ನಡೆಸಿತ್ತು. ಆದರೆ ಬೆಂಗಳೂರಿಗರು ತಮ್ಮ ನಿರಾಸಕ್ತಿ ಮುಂದುವರಿಸಿದ್ದಾರೆ. ಕಳೆದ ಬಾರಿ ಬೆಂಗಳೂರಲ್ಲಿ ‌ಸುಮಾರು 55% ಮತದಾನ ನಡೆದಿತ್ತು. ಈ ಬಾರಿ ಆರಂಭಿಕ ಉತ್ಸಾಹ ನೋಡಿ ಕಳೆದ ಬಾರಿಗಿಂತ ಗಣನೀಯ ಪ್ರಮಾಣದಲ್ಲಿ ಮತದಾನ ಆಗಲಿದೆ ಎಂದು ನಂಬಲಾಗಿತ್ತು.‌ ಆದರೆ ಬೆಂಗಳೂರಿಗರು ಆ ನಿರೀಕ್ಷೆಯನ್ನು ಮತ್ತೆ ಹುಸಿಗೊಳಿಸಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಇನ್ನೂ ಬೆಂಗಳೂರಿನ ಅಂತಿಮ ಮತದಾನದ ಪ್ರಮಾಣದ ವರದಿ ಬಂದಿಲ್ಲ. ಅಂತಿಮ ಕ್ಷಣದಲ್ಲಿನ ಮತದಾನದ ಪ್ರಮಾಣವನ್ನು ಪರಿಗಣಿಸಿದ ಬಳಿಕ ನಿಖರ ಅಂಕಿ ಅಂಶ ಸಿಗಲಿದೆ.

ಇದನ್ನೂ ಓದಿ: ಎಕ್ಸಿಟ್​ ಪೋಲ್​ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಬಿಜೆಪಿಯೇ ಅಧಿಕಾರಕ್ಕೆ ಬರುತ್ತೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.