ಬೆಂಗಳೂರು: ರಾಜ್ಯ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಮೊದಲ ಪಟ್ಟಿ ಪ್ರಕಟಿಸಿರುವ ಬಿಜೆಪಿ ಹೈಕಮಾಂಡ್ ನಿಜಕ್ಕೂ ಈ ಬಾರಿ ಸಾಕಷ್ಟು ಬದಲಾವಣೆ ಮಾಡಿದೆ. 75 ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ ಮಾಡಿದ್ದು, ಹೊಸ ಪ್ರಯೋಗದ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಿದೆ.
ಈ ಬಾರಿ 75 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಬದಲಾವಣೆ ಮಾಡಿದೆ. ಪ್ರಮುಖವಾಗಿ ಯಡಿಯೂರಪ್ಪ ಚುನಾವಣಾ ನಿವೃತ್ತಿ ಹಿನ್ನೆಲೆ ಅವರ ಪುತ್ರ ಬಿವೈ ವಿಜಯೇಂದ್ರ, ಸಚಿವ ಆನಂದ್ ಸಿಂಗ್ ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಕಾರಣಕ್ಕೆ ಅವರ ಪುತ್ರ ಸಿದ್ದಾರ್ಥ ಸಿಂಗ್, ಚಿಕ್ಕೋಡಿಯಲ್ಲಿ ಉಮೇಶ್ ಕತ್ತಿ ನಿಧನದ ಕಾರಣದಿಂದ ಅವರ ಪುತ್ರ ನಿಖಿಲ್ ಕತ್ತಿ, ಆನಂದ್ ಮಾಮನಿ ನಿಧನದಿಂದಾಗಿ ಅವರ ಕುಟುಂಬದ ರತ್ನ ವಿಶ್ವನಾಥ್ ಮಾಮನಿ ಸೇರಿದಂತೆ 75 ಕಡೆ ಅಭ್ಯರ್ಥಿಗಳ ಬದಲಾವಣೆ ಮಾಡಲಾಗಿದೆ.
ಅಭ್ಯರ್ಥಿ ಬದಲಾವಣೆ ಮಾಡಿದ ಕ್ಷೇತ್ರಗಳು: ಚಿಕ್ಕೋಡಿ, ಹುಕ್ಕೇರಿ, ಯಮಕನಮರಡಿ, ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಜಮಖಂಡಿ, ಬಾದಾಮಿ, ಜೇವರ್ಗಿ, ಶಹಾಪುರ, ಚಿತ್ತಾಪುರ, ಹುಮ್ನಾಬಾದ್, ಸಿಂಧನೂರು, ಶಿರಹಟ್ಟಿ, ಕುಂದಗೋಳ, ಹುಬ್ಬಳ್ಳಿ-ಧಾರವಾಡ ಪೂರ್ವ, ಹಡಗಲಿ, ವಿಜಯನಗರ, ಬಳ್ಳಾರಿ ಗ್ರಾಮೀಣ, ಸಂಡೂರು, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ಹೊಸದುರ್ಗ, ಭದ್ರಾವತಿ, ಶಿಕಾರಿಪುರ, ಕುಂದಾಪುರ, ಉಡುಪಿ, ಕಾಪು, ಕೊರಟಗೆರೆ, ಪಾವಗಡ, ಮಧುಗಿರಿ, ಗೌರಿ ಬಿದನೂರು, ಬಾಗೇಪಲ್ಲಿ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಕೋಲಾರ, ಮಾಲೂರು, ಬ್ಯಾಟರಾಯನಪುರ, ಪುಲಿಕೇಶಿನಗರ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಜಯನಗರ, ಆನೇಕಲ್, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಮಾಗಡಿ, ರಾಮನಗರ, ಕನಕಪುರ, ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಹೊಳೆನರಸೀಪುರ, ಸಕಲೇಶಪುರ, ಮಂಗಳೂರು, ಪುತ್ತೂರು, ಸುಳ್ಯ, ಪಿರಿಯಾಪಟ್ಟಣ, ಕೆ.ಆರ್. ನಗರ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ, ವರುಣ, ಟಿ. ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ.
ಹಾಲಿ ಕ್ಷೇತ್ರದ ಬದಲು ಬೇರೆ ಕ್ಷೇತ್ರಕ್ಕೆ ಟಿಕೆಟ್: ವಿ. ಸೋಮಣ್ಣ ಅವರಿಗೆ ಗೋವಿಂದರಾಜನಗರ ಕ್ಷೇತ್ರದ ಬದಲು ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಿಗೆ ಟಿಕೆಟ್ ನೀಡಲಾಗಿದೆ. ಒಂದು ರೀತಿಯಲ್ಲಿ ಬೆಂಗಳೂರು ರಾಜಕಾರಣದಿಂದ ಸೋಮಣ್ಣರನ್ನು ಶಿಫ್ಟ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇವರ ಜೊತೆ ಬಿ ಶ್ರೀರಾಮುಲು ಮೊಳಕಾಲ್ಮೂರು ಬದಲಾಗಿ ಬಳ್ಳಾರಿ ಗ್ರಾಮೀಣ ಕ್ಷೇತ್ರ ನೀಡಲಾಗಿದೆ. ಕಳೆದ ಬಾರಿ ಬಾದಾಮಿ ಮತ್ತು ಮೊಳಕಾಲ್ಮೂರು ಎರಡು ಕಡೆ ನಿಂತಿದ್ದ ಶ್ರೀರಾಮುಲು ಈ ಬಾರಿ ಆ ಎರಡೂ ಕ್ಷೇತ್ರದ ಬದಲು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಕಳೆದ ಬಾರಿ ಸಿದ್ದರಾಮಯ್ಯ ವಿರುದ್ಧ ರಾಮುಲು ಕಣಕ್ಕಿಳಿದಿದ್ದರೆ ಈ ಬಾರಿ ಸೋಮಣ್ಣ ಎದುರಾಳಿಯಾಗಿದ್ದಾರೆ.
ಡಿಕೆಶಿ ವಿರುದ್ಧ ಅಶೋಕ್ ಫೈಟ್: ಇಬ್ಬರಿಗೆ ಈ ಬಾರಿ ಎರಡು ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದ ಟಿಕೆಟ್ ನೀಡಿದ್ರೆ ಆರ್ ಅಶೋಕ್ ಅವರಿಗೆ ಪದ್ಮನಾಭನಗರ ಕ್ಷೇತ್ರದ ಜೊತೆ ಕನಕಪುರದ ಟಿಕೆಟ್ ನೀಡಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸ್ಪರ್ಧೆಗೆ ಇಳಿಸಿದೆ.
ಓದಿ: ಅಥಣಿ ಟಿಕೆಟ್ ಫೈಟ್: ಸಿಎಂ ಬೊಮ್ಮಾಯಿ ಹೇಳಿಕೆಗೆ ಲಕ್ಷ್ಮಣ್ ಸವದಿ ಕಣ್ಣೀರು