ETV Bharat / state

ಬೇಕರಿ ಹುಡುಗರ ಮೇಲೆ‌ ಹಲ್ಲೆ: ಆರೋಪಿಗಳ ತ್ವರಿತ ಬಂಧನಕ್ಕೆ ಕರವೇ ಪ್ರತಿಭಟನೆ - ಪ್ರವೀಣ್ ಶೆಟ್ಟಿ

ಸಿಗರೇಟ್​ ಕೇಳುವ ನೆಪದಲ್ಲಿ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ
author img

By

Published : Dec 9, 2022, 9:22 PM IST

ಬೆಂಗಳೂರು: ಕುಂದಲಹಳ್ಳಿಯಲ್ಲಿ ನಿನ್ನೆ ಬೇಕರಿ ಯುವಕರ ಮೇಲೆ ದುಷ್ಕರ್ಮಿಗಳು ನಡೆಸಿದ ಪುಂಡಾಟ ವಿರೋಧಿಸಿ ಹಾಗೂ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಕರವೇ ಮುಖಂಡ ಪ್ರವೀಣ್ ಶೆಟ್ಟಿ ನೇತೃತ್ವದ ನಿಯೋಗ ಹಾಗೂ ಬೇಕರಿ, ಉದ್ಯಮಿದಾರರ ಸಂಘವು ಹೆಚ್ಎಎಲ್ ಠಾಣೆ ಮುಂದೆ ಪ್ರತಿಭಟನೆ ನಡೆಸಿತು.

ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮಾತನಾಡಿದರು

ಪ್ರವೀಣ್ ಶೆಟ್ಟಿ ಮಾತನಾಡಿ, ನಿನ್ನೆ ಪುಡಿ ರೌಡಿಗಳು ಅನವಶ್ಯಕವಾಗಿ ಬೇಕರಿ ಹುಡುಗರ ಮೇಲೆ ಹಲ್ಲೆ ಮಾಡಿದ್ದಾರೆ. ಮನಸೋ ಇಚ್ಛೆ ರಾಡ್​ ಹಾಗೂ ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಹಲ್ಲೆ ಮಾಡಿ‌ 24 ಗಂಟೆ ಕಳೆದ್ರೂ ಕೂಡ ಇನ್ನೂ ಪುಡಿ ರೌಡಿಗಳನ್ನು ಬಂಧನ ಮಾಡಿಲ್ಲ. ಬೆಂಗಳೂರಿನಲ್ಲಿ 40 ಸಾವಿರಕ್ಕೂ ಹೆಚ್ಚು ಜನರು ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಗಳ ವಿರುದ್ಧ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಸಿಗರೇಟು ಕೇಳುವ ನೆಪದಲ್ಲಿ ವಾಗ್ವಾದ: ಬೇಕರಿಗೆ ಸಿಬ್ಬಂದಿಗೆ ಹಲ್ಲೆ- ಸಿಸಿಟಿವಿ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.