ಬೆಂಗಳೂರು : ಕೊರೊನಾ ಎರಡನೇ ಅಲೆಯ ಲಾಕ್ಡೌನ್ನಿಂದಾಗಿ 72 ದಿನಕ್ಕೆ ರದ್ದಾಗಿದ್ದ ಬಿಗ್ಬಾಸ್ ಸೀಸನ್-08 ಮತ್ತೆ ಆರಂಭವಾಗುತ್ತಿದೆ. ಆದರೆ, 11 ಮಂದಿ ಇದ್ದ ಮನೆಗೆ ಈಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಪ್ರಕಾರ 12 ಮಂದಿ ಮನೆ ಪ್ರವೇಶಿಸಲಿದ್ದಾರೆ. ಹೀಗಾಗಿ, 12 ಮಂದಿಯ ಸೂಟ್ ಕೇಸ್ ರೆಡಿಯಾಗಿದೆ. ಹಾಗಿದ್ದರೆ, ಮತ್ತೊಬ್ಬ ಹೊಸ ಸ್ಪರ್ಧಿ ಯಾರು ಎಂಬುದು ಕುತೂಹಲ ಮೂಡಿಸಿದೆ.
ಓದಿ: ಜೂನ್ 21ರಿಂದ ಮತ್ತೆ ಆರಂಭವಾಗಲಿದ್ಯಾ ಬಿಗ್ ಬಾಸ್?
ಸ್ಪರ್ಧಿಗಳಾದ ನಿಧಿ ಸುಬ್ಬಯ್ಯ, ಕೆ ಪಿ ಅರವಿಂದ್, ದಿವ್ಯಾ ಸುರೇಶ್, ಶಮಂತ್ ಗೌಡ, ರಘುಗೌಡ, ವೈಷ್ಣವಿಗೌಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ, ಮಂಜು ಪಾವಗಡ, ಶುಭಾ ಪೂಂಜಾ ಹಾಗೂ ಪ್ರಿಯಾಂಕಾ ತಿಮ್ಮೇಶ್ ಮತ್ತೆ ಬಿಗ್ ಬಾಸ್ ಮನೆಗೆ ಹಿಂದಿರುಗಲಿದ್ದಾರೆ.
ಪ್ರಮುಖವಾಗಿ ಸೀಸನ್ ಮುಖ್ಯ ಆಕರ್ಷಣೆಯಾಗಿದ್ದ ಅರವಿಂದ್ ಹಾಗೂ ದಿವ್ಯ ಉರುಡುಗ ಇಬ್ಬರನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ದಿವ್ಯ ಉರುಡುಗ ಬಿಗ್ಬಾಸ್ ಮನೆಗೆ ವಾಪಸಾಗಲಿದ್ದಾರ ಎಂಬುದು ಪ್ರಶ್ನೆಯಾಗಿದೆ.
ಈಗಾಗಲೇ ಸ್ಪರ್ಧಿಗಳಿಗೆ ವಾಹಿನಿ ಕಡೆಯಿಂದ ಎಲ್ಲಾ ಸೂಚನೆಗಳು ಬಂದಿವೆ. ಅಲ್ಲದೆ ಮಾಧ್ಯಮದೊಂದಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಮಾಡದಂತೆ ಸೂಚನೆ ನೀಡಲಾಗಿದೆ. ಎಲ್ಲಾ ಸ್ಪರ್ಧಿಗಳು ಮೊದಲ ಹಂತದ ವ್ಯಾಕ್ಸಿನ್ ಪಡೆದಿದ್ದಾರೆ ಎನ್ನಲಾಗಿದೆ.
ಬಿಗ್ಬಾಸ್ ಕೊನೆಗೊಳ್ಳುವ ಮೂರು ವಾರಗಳ ಕಾಲ ಸುದೀಪ್ ಸಹ ಗೈರಾಗಿದ್ದರು. ಅನಾರೋಗ್ಯದ ಕಾರಣದಿಂದ ಅವರು ಮತ್ತೆ ಬಿಗ್ಬಾಸ್ ವೇದಿಕೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಸುದೀಪ್ ಅವರನ್ನು ನೋಡಲು ಸಹ ಪ್ರೇಕ್ಷಕರು ಕಾತುರರಾಗಿದ್ದಾರೆ.
ಅಲ್ಲದೇ, ಬಿಗ್ಬಾಸ್ನಿಂದ ಹೊರ ಬಂದ ನಂತರ ಸ್ಪರ್ಧಿಗಳು ಮತ್ತೊಬ್ಬ ಸ್ಪರ್ಧಿಯನ್ನು ಹೇಗೆ ಮಾತನಾಡಿಸುತ್ತಾರೆ, ಅವರೊಂದಿಗೆ ಹೇಗೆ ಇರುತ್ತಾರೆ ಎಂಬುದು ಕೂಡ ಕಾದು ನೋಡಬೇಕಿದೆ.
ಸೀಸನ್-8ರ ಬಿಗ್ಬಾಸ್ ಮನೆಗೆ 16 ಸ್ಪರ್ಧಿಗಳು ಒಳಗೆ ಹೋಗಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್, ಶಂಕರ್ ಅಶ್ವತ್ಥ್, ವಿಶ್ವನಾಥ್ ಹಾವೇರಿ ಎಲಿಮಿನೇಟ್ ಆಗಿ ಹೊರ ಬಂದಿದ್ದರು.
ವೈಷ್ಣವಿ, ರಘು, ಅರವಿಂದ್, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ, ಶಮಂತ್ ಮನೆಯೊಳಗಿದ್ದರು. ನಂತರ ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದ್ದರು.