ETV Bharat / state

ಕಂಬಳ ಸ್ಪರ್ಧೆಗಾಗಿ ಕೋಣಗಳು, ಜಾಕಿಗೆ ಪೂರ್ವದ ತಾಲೀಮು ಹೇಗಿರುತ್ತದೆ? ಇಲ್ಲಿದೆ ಮಾಹಿತಿ - jockey and buffaloes

ಕರಾವಳಿ ಭಾಗದಲ್ಲಿ ನವೆಂಬರ್​ನಿಂದ ಮಾರ್ಚ್ ವರೆಗಿನ ಅವಧಿಯನ್ನು ಕಂಬಳದ ಋತು ಕಾಲ ಎನ್ನಲಾಗುತ್ತದೆ. ಕಂಬಳ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮುನ್ನ ಕೋಣಗಳು, ಜಾಕಿ ಪೂರ್ವಸಿದ್ಧತೆ ಹೇಗೆ ಮಾಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

kambala competition
ಕಂಬಳ ಸ್ಫರ್ಧೆ
author img

By ETV Bharat Karnataka Team

Published : Nov 26, 2023, 5:39 PM IST

Updated : Nov 26, 2023, 6:28 PM IST

ಪಣಗಲುಬೈಲು ಕಂಬಳ ತಂಡದ ಸದಸ್ಯ ಕಿರಣ್ ಈಟಿವಿ ಭಾರತದೊಂದಿಗೆ ಮಾತನಾಡಿದರು.

ಬೆಂಗಳೂರು: ರಾಜಧಾನಿಯಲ್ಲಿ ಬೆಂಗಳೂರು ಕಂಬಳ - ನಮ್ಮ ಕಂಬಳ ಸ್ಪರ್ಧೆ ಎರಡನೇ ದಿನವೂ ಮುಂದುವರಿದಿದೆ. ಐತಿಹಾಸಿಕ ಹಿನ್ನೆಲೆಯುಳ್ಳ ಜಾನಪದ ಕ್ರೀಡೆಗೆ ರಾಜ್ಯ ರಾಜಧಾನಿ ಸಾಕ್ಷಿಯಾಗಿದ್ದು, ಅದರೊಂದಿಗೆ ಕರಾವಳಿ ಭಾಗದ ಸಾಂಸ್ಕೃತಿಕ ಚೆಲುವು ಅನಾವರಣಗೊಂಡಿದೆ. ಇನ್ನು ಕಂಬಳದಲ್ಲಿ ಪ್ರಮುಖ ಪಾತ್ರವಹಿಸುವ ಕೋಣಗಳು ಮತ್ತು ಅವುಗಳನ್ನು ಓಡಿಸುವ ಜಾಕಿಗಳ ತಯಾರಿ ವಿಭಿನ್ನವಾಗಿದೆ. ಯಾವ ಮಾಡರ್ನ್ ಕ್ರೀಡೆಗಳಿಗೂ ಕಮ್ಮಿಯಿಲ್ಲ ಎಂಬಂತೆ ಕಂಬಳಕ್ಕಾಗಿ ಯಾವಾಗ ಹೇಗೆ ಸಿದ್ಧತೆ ಇರುತ್ತದೆ ? ಎಂಬುದರ ಕುರಿತು ಒಂದು ಸಂಕ್ಷಿಪ್ತ ವರದಿ ಇಲ್ಲಿದೆ.

ಕಂಬಳ ಕರಾವಳಿ ಸಂಸ್ಕೃತಿ ಪ್ರತಿಬಿಂಬ: ಕಂಬಳ ಇಂದು ಕರಾವಳಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತಿದೆ. ಪ್ರತಿಷ್ಠೆಯ ಸಂಕೇತದ ಕ್ರೀಡೆಯೂ ಆಗಿದೆ.ಇದರಲ್ಲಿ ಪಾಲ್ಗೊಳ್ಳುವ ಕೋಣಗಳಿಗಂತೂ ಭರ್ಜರಿ ಡಿಮ್ಯಾಂಡ್ ಇದೆ. ನವೆಂಬರ್​ನಿಂದ ಮಾರ್ಚ್ ತಿಂಗಳ ವರೆಗಿನ ಕಾಲ ಕಂಬಳದ ಋತುವೆಂದೇ ಫೇಮಸ್ ಆಗಿದೆ. ಕೋಣಗಳ ತಯಾರಿ ಆರಂಭ ಆಗುವುದೇ ಈ ಅವಧಿಯ ಎರಡು ತಿಂಗಳ ಮುನ್ನ. ಕಂಬಳಕ್ಕೂ ಮುನ್ನ ಮರಿಕೋಣಗಳನ್ನು ತಂದು ಜೋಡಿಗಳನ್ನು ಮಾಡಿ, ಪೂರ್ವಭಾವಿಯಾಗಿ ಕುದಿಗಂಬಳ ಮಾಡುವ ಮೂಲಕ‌ ಕೋಣಗಳನ್ನು ಅಣಿಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ.

ಕೋಣಗಳಿಗೆ ದಿನನಿತ್ಯ ಆಹಾರ : ನಂತರ ಕಂಬಳದಲ್ಲಿ ಪಾಲ್ಗೊಳ್ಳುವ ಕೋಣಗಳಿಗೆ ಎರಡು ತಿಂಗಳಿಗೆ ಮುನ್ನವೇ ಬೈಹುಲ್ಲು (ಒಣಹುಲ್ಲು) ಜೊತೆಗೆ ಹುರುಳಿ ಕಾಳು, ಕ್ಯಾರೆಟ್ ಸೇರಿದಂತೆ ವಿವಿಧ ತರಕಾರಿ, ಬಾದಾಮಿ ಸೇರಿ ಅದರ ಆಹಾರದೊಂದಿಗೆ ನೀಡಲಾಗುತ್ತದೆ. ಕುಂಬಳಕಾಯಿ ಮತ್ತಿತರ ಪದಾರ್ಥಗಳನ್ನು ನೀಡುವ ಮೂಲಕ ಕೋಣಗಳ ದೇಹ ತಂಪಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಇದಲ್ಲದೇ ವಾರಕ್ಕೆ ಎರಡರಿಂದ ಮೂರು ಬಾರಿ ವಾಕಿಂಗ್ ಮಾಡಿಸುವ ಜೊತೆಗೆ ಓಡುವ ತರಬೇತಿ ನೀಡಲಾಗುತ್ತದೆ. ಅಲ್ಲದೇ ಎಣ್ಣೆಯಲ್ಲಿ ಮಸಾಜ್ ಮಾಡುವುದು ನಿತ್ಯ ಕಡ್ಡಾಯ. ಕೋಣಗಳನ್ನು ಸಣ್ಣ ಸಣ್ಣ ನೀರಿರುವ ಪ್ರದೇಶ, ಕೆರೆಯಂತಹ ಜಾಗದಲ್ಲಿ ಈಜಲು ಬಿಡಲಾಗುತ್ತದೆ.

ಕೋಣಗಳ ಹಲ್ಲುಗಳ ಆಧಾರದ ಮೇಲೆ ಸ್ಪರ್ಧೆ: ಸ್ಪರ್ಧೆಯಲ್ಲಿ ಸಹ ಬೇರೆ ಬೇರೆ ವಿಭಾಗಗಳಿದ್ದು, ಕೋಣಗಳ ಹಲ್ಲುಗಳ ಆಧಾರದಲ್ಲಿ ಯಾವ ವಿಭಾಗದಲ್ಲಿ ಯಾವ ಕೋಣಗಳು ಸ್ಪರ್ಧಿಸಬೇಕು ಎಂಬುದನ್ನು ನಿರ್ಧಾರ ಮಾಡಲಾಗುತ್ತದೆ. ಎರಡರಿಂದ ಆರು ಹಲ್ಲುಗಳಿದ್ದರೆ ಕಿರಿಯ ವಿಭಾಗದಲ್ಲಿ, ಆರಕ್ಕಿಂತ ಹೆಚ್ಚು ಹಲ್ಲುಗಳಿದ್ದರೆ ಹಿರಿಯ ವಿಭಾಗದಲ್ಲಿ ಕೋಣಗಳಳನ್ನು ಸ್ಪರ್ಧೆಗಿಳಿಸಲಾಗುತ್ತದೆ.

ಕೆಲವೊಮ್ಮೆ ಜೋಡಿ ಸಿಗದಿದ್ದಾಗ ಬೇರೆ ತಂಡಗಳಲ್ಲಿರುವ ಕೋಣಗಳನ್ನು ಎರವಲು ಪಡೆದು ಸ್ಪರ್ಧೆಯಲ್ಲಿ ಭಾಗವಹಿಸಲಾಗುತ್ತದೆ. ಸ್ಪರ್ಧೆಯಲ್ಲಿ ನಾವುಂದ ಹಾಗೂ ಪಣಗಲುಬೈಲು ಭಂಡಾರಮನೆ ತಂಡಗಳ ಕಾಲಾ ಹಾಗೂ ಜಿಂಕೆ ಎಂಬ ಹೆಸರಿನ ಎರಡು ಕೋಣಗಳನ್ನು ಒಂದಾಗಿ ಕಣಕ್ಕಿಳಿಸುತ್ತಿದ್ದೇವೆ ಎಂದು ಪಣಗಲುಬೈಲು ಭಂಡಾರಮನೆ ತಂಡದ ಕಿರಣ್ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡರು.

ಜಾಕಿಗಳಿಗೆ ಫಿಟ್ನೆಸ್ ಮುಖ್ಯ: ಕಂಬಳದಲ್ಲಿ ಕೋಣಗಳಲ್ಲದೇ ಅವುಗಳನ್ನ ಓಡಿಸುವವರು ಸಹ ಮುಖ್ಯಪಾತ್ರ ವಹಿಸುತ್ತಾರೆ. ಕೋಣಗಳನ್ನ ಓಡಿಸುವವ (ಜಾಕಿ) ಶಿಸ್ತುಬದ್ಧ ಆಹಾರ ಸೇವನೆಯೊಂದಿಗೆ ಫಿಟ್ನೆಸ್ ಕಾಪಾಡಬೇಕಾಗುತ್ತದೆ. ಅಲ್ಲದೇ ಕಂಬಳದ ಕರೆಯಲ್ಲಿ ಓಡಿ ಅನುಭವ ಪಡೆದಿರಬೇಕಾಗುತ್ತದೆ. ಇದಲ್ಲದೇ ಅಕಾಡೆಮಿಗಳಲ್ಲಿ ತರಬೇತಿ ನೀಡುವ ವ್ಯವಸ್ಥೆ ಸಹ ದಕ್ಷಿಣ ಕನ್ನಡ ಭಾಗದಲ್ಲಿ ಚಾಲ್ತಿಯಲ್ಲಿದೆ. ಬೆಂಗಳೂರು ಕಂಬಳದಲ್ಲಿ ಇಂದು 30.41 ಸೆಕೆಂಡ್ ನಲ್ಲಿ (150 ಮೀಟರ್ ಟ್ರ್ಯಾಕ್) ಓಡಿರುವುದು ಈವರೆಗಿನ ದಾಖಲೆಯಾಗಿದೆ. ಆ ವೇಗವನ್ನು ಕಂಬಳ ಓಡಿಸುವವರು ಕಾಪಾಡಬೇಕಾಗುತ್ತದೆ.

ಕಂಬಳಕ್ಕೆ ಕೋಣಗಳನ್ನ ಅಣಿಗೊಳಿಸಲು ಖರ್ಚು ಬಂದೇ ಬರುತ್ತದೆ. ಆದರೆ ಅದು ಮುಖ್ಯವಲ್ಲ. ಕಂಬಳ ನಮ್ಮ ಸಂಸ್ಕೃತಿ. ಕೃಷಿ ಕಾರ್ಯಗಳಿಗೆ ಕೋಣಗಳನ್ನ ಬಳಸಿಕೊಂಡು ಲಾಭ ಪಡೆಯುತ್ತೇವೆ. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿರುವುದು ಖುಷಿಯಿದೆ. ಎರಡು ತಂಡಗಳು ಒಂದಾಗಿ ಐವತ್ತು ಜನ ಬಂದಿದ್ದೇವೆ ಎಂದು ಪಣಗಲುಬೈಲು ಭಂಡಾರಮನೆ ತಂಡದ ಸದಸ್ಯ ಕಿರಣ್ ತಿಳಿಸಿದರು.

ಇದನ್ನೂಓದಿ:ಬೆಂಗಳೂರು ಕಂಬಳದಲ್ಲಿ ಚಿನ್ನದ ಮೆಡಲ್ ಗೆಲ್ಲುವವರಾರು?

Last Updated : Nov 26, 2023, 6:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.