ETV Bharat / state

ತಾತಯ್ಯ ಜಯಂತಿ ಪಂಚಾಂಗದಂತೆ ಆಚರಿಸುವ ನಿರ್ಣಯ ಪರಿಶೀಲನೆ: ಸಚಿವ ಮಾಧುಸ್ವಾಮಿ

author img

By

Published : Mar 18, 2022, 10:16 PM IST

ಕೈವಾರ ತಾತಯ್ಯ ಯೋಗಿ ನಾರೇಯಣರ ಹಾಗೂ ದಾರ್ಶನಿಕರು, ಸಂತರ ಜಯಂತಿಯನ್ನು ಪಂಚಾಂಗದ ರೀತಿಯಲ್ಲಿ ಆಚರಿಸುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

J.C Madhuswamy
ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ನಾದಬ್ರಹ್ಮ ಸದ್ಗುರು ಕೈವಾರ ತಾತಯ್ಯ ಯೋಗಿ ನಾರೇಯಣರ ಜಯಂತಿಯನ್ನು ಪಂಚಾಂಗದ ರೀತಿಯಲ್ಲಿ ಮಾಡುವ ಬಗ್ಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯೋಗಿ ನಾರೇಯಣ ಜಯಂತಿ ಶುಭಾಶಯಗಳನ್ನು ನಾಡಿನ ಜನತೆಗೆ ಸದನದ ಪರವಾಗಿ ಕೋರಿದರು.

ಶೂನ್ಯ ವೇಳೆ ವಿಷಯ ಪ್ರಸ್ತಾಪಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್‌, ಇಂಗ್ಲಿಷ್ ಕ್ಯಾಲೆಂಡರ್‌ ಪ್ರಕಾರ ಜಯಂತಿ ಆಚರಣೆ ಘೋಷಣೆಯಾಗಿದೆ. ಅದರ ಬದಲು ಪಾಲ್ಗುಣ ಮಾಸದ ಪೌರ್ಣಮಿಯಂದು ತಾತಯ್ಯ ಜಯಂತಿ ಆಚರಿಸಿದರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಆಗ ಸ್ಪೀಕರ್ ಕಾಗೇರಿ, ಬೇರೆ ಬೇರೆ ದಾರ್ಶನಿಕರು, ಸಂತರ ಜಯಂತಿಯನ್ನು ಪಂಚಾಂಗದ ರೀತಿಯಲ್ಲಿ ಆಚರಿಸುವ ಅಭಿಪ್ರಾಯ ಇದೆ ಎಂದರು. ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಮಾಧುಸ್ವಾಮಿ ಸದನಕ್ಕೆ ತಿಳಿಸಿದರು.

ಇದನ್ನೂ ಓದಿ: ಸೋನಿಯಾ ಗಾಂಧಿ ಇಟಲಿ ಮೂಲ ಕೆದಕಿದ ವಿಚಾರ: ಸಿದ್ದು ಸವದಿ, ಪ್ರಿಯಾಂಕ್ ಖರ್ಗೆ ನಡುವೆ ಟಾಕ್ ವಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.