ETV Bharat / state

ಆತ್ಮನಿರ್ಭರ ಯೋಜನೆ ಬಗ್ಗೆ ಬಿಎಸ್​ವೈ ಜೊತೆ ಜೆ.ಪಿ ನಡ್ಡಾ ವಿಡಿಯೋ ಸಂವಾದ - Bangalore latest news

ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾದರು.

JP Nadda Video Conversation With BSY
ಬಿಎಸ್​ವೈ ಜೊತೆ ಜೆ.ಪಿ ನಡ್ಡಾ ವಿಡಿಯೋ ಸಂವಾದ
author img

By

Published : Jul 29, 2020, 1:29 AM IST

ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಆತ್ಮನಿರ್ಭರ ಯೋಜನೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ವೀಡಿಯೋ ಸಂವಾದದ ಮೂಲಕ ಮಾತುಕತೆ ನಡೆಸಿದರು.

ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾದರು. ಆತ್ಮನಿರ್ಭರ ನಿಧಿ ಬಳಕೆ ಕುರಿತು ಜೆ.ಪಿ ನಡ್ಡಾ ಮಾಹಿತಿ ಪಡೆದುಕೊಂಡರು.

ಆತ್ಮ ನಿರ್ಭರ್ ನಿಧಿ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಯಾವ ರೀತಿ ಉತ್ತೇಜನ ನೀಡಬಹುದು ಎನ್ನುವ ಕುರಿತು ಸಂವಾದ ನಡೆಸಿದರು. ಸಂವಾದ ಕೇವಲ ಆತ್ಮನಿರ್ಭರ ಯೋಜನೆ ಕುರಿತು ಚರ್ಚೆಗೆ ಸೀಮಿತವಾಗಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೂ ಪಕ್ಷ ಹಾಗು ರಾಜಕೀಯ ವಿಚಾರ ಸಂಬಂಧ ಯಾವುದೇ ಚರ್ಚೆ ನಡೆಯಲಿಲ್ಲ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.