ಬೆಂಗಳೂರು: ಇಲ್ಲಿನ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಉಪ ಚುನಾವಣೆ ರಂಗೇರಿದ್ದು, ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಪರ ಜೆಡಿಎಸ್ ವರಿಷ್ಠ ದೇವೇಗೌಡ ರೋಡ್ ಶೋ ನಡೆಸಿ, ಮತಯಾಚಿಸಿದರು.
ಇಲ್ಲಿನ ವೃಷಭಾವತಿ ನಗರದಿಂದ ಕಮಲನಗರದವರೆಗೆ ನೂರಾರು ಕಾರ್ಯಕರ್ತರ, ಬೆಂಬಲಿಗರ ಜತೆ ಅಭ್ಯರ್ಥಿ ಪರ ಮತಯಾಚಿಸಿದರು.
ಈ ವೇಳೆ ಕಾಮಾಕ್ಷಿ ಪಾಳ್ಯದ ವೃಷಭಾವತಿ ನಗರದಲ್ಲಿನ ಅನರ್ಹ ಶಾಸಕ ಗೋಪಾಲಯ್ಯ ಮನೆ ಮುಂದೆಯೂ ರೋಡ್ ಶೋ ನಡೆಸಿದರು. ಕಮಲಾನಗರದಲ್ಲಿ ದೇವೇಗೌಡರಿಗೆ ಯುವತಿಯೊಬ್ಬಳು ಆರತಿ ಬೆಳಗಿದರು.