ETV Bharat / state

ಜ್ಯೋತಿಷ್ಯವನ್ನು ಹೆಚ್ಚು ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರು: ಸಚಿವ ಅಶೋಕ್ - ಸಿಎಂ ಬಿ.ಎಸ್. ಯಡಿಯೂರಪ್ಪ ವಿದೇಶ ಪ್ರವಾಸ

ಮೌಢ್ಯ ಹರಡುವುದನ್ನು ಬಿಜೆಪಿ ವಿರೋಧಿಸುತ್ತದೆ‌. ಹಾಗೆ ನೋಡಿದರೆ ಜ್ಯೋತಿಷ್ಯ ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರೇ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ashok
ಕಂದಾಯ ಸಚಿವ ಆರ್.ಅಶೋಕ್
author img

By

Published : Jan 24, 2020, 2:57 PM IST

ಬೆಂಗಳೂರು: ಮೌಢ್ಯ ಹರಡುವುದನ್ನು ಬಿಜೆಪಿ ವಿರೋಧಿಸುತ್ತದೆ‌. ಹಾಗೆ ನೋಡಿದರೆ ಜ್ಯೋತಿಷ್ಯ ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರೇ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಯ್ದೆಯಲ್ಲಿ ಧರ್ಮದ ವಿಷಯವನ್ನು ಬೆರೆಸಿದ ಕಾರಣಕ್ಕೆ ನಾವು ವಿರೋಧಿಸಿದ್ದೆವು. ಮೌಢ್ಯ ಹರಡುವುದನ್ನು ಬಿಜೆಪಿ ವಿರೋಧಿಸುತ್ತದೆ‌. ಹಾಗೆ ನೋಡಿದರೆ ಜ್ಯೋತಿಷ್ಯ ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರೇ. ಈಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಧ್ಯ ಪ್ರದೇಶದಲ್ಲಿ ಹೋಮ ಮಾಡಿಸುತ್ತಿಲ್ಲವೇ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಯಾವಾಗಲೂ ಜ್ಯೋತಿಷ್ಯವನ್ನು ನಂಬುತ್ತಾರೆ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದು ಟಾಂಗ್ ನೀಡಿದರು.

ಕಂದಾಯ ಸಚಿವ ಆರ್.ಅಶೋಕ್

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಯಾವುದೇ ಕಾರಣಕ್ಕೂ ಜ್ಯೋತಿಷ್ಯವನ್ನು ಪ್ರತಿಬಂಧಿಸುವುದಿಲ್ಲ. ಜ್ಯೋತಿಷ್ಯ ವಿಜ್ಞಾನ ಎಂದು ಸಾಬೀತಾಗಿದೆ. ಆದರೆ, ಮೌಢ್ಯ ಬಿತ್ತುವ ನಕಲಿ ಜ್ಯೋತಿಷಿಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.

ಭೂ ಪರಿವರ್ತನೆ ಆಗದ, ಯೋಜನಾ ಮಂಜೂರಾತಿಯಾಗದ ಹಾಗೂ ಅಕ್ರಮ ನಿವೇಶನಗಳ ನೋಂದಣಿಯ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ನಿವೇಶನಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದ ಅವರು, ಸರ್ಕಾರ ಕಂದಾಯ ಇಲಾಖೆಯ "ಕಾವೇರಿ ತಂತ್ರಾಂಶ" ದಲ್ಲೂ ಇಂತಹ ನಿವೇಶನಗಳನ್ನು ನೋಂದಣಿ ಸ್ವೀಕರಿಸುವುದಿಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆ ಶೀಘ್ರ :

ಸಿಎಂ ಬಿ.ಎಸ್. ಯಡಿಯೂರಪ್ಪ ವಿದೇಶ ಪ್ರವಾಸದಿಂದ ವಾಪಸ್ ಬರುತ್ತಿದ್ದಂತೆಯೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈ ಸಂಬಂಧ ಯಡಿಯೂರಪ್ಪನವರು ಈಗಾಗಲೇ ಬಿಜೆಪಿ ಹೈ ಕಮಾಂಡ್ ಜತೆ ಚರ್ಚಿಸಿದ್ದಾರೆ. ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೂ ಮತ್ತೊಮ್ಮೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದರು.

ಇನ್ನು ಮುಂದೆ ಡಿಸಿಗಳು ಜಿಲ್ಲಾ ಕಲೆಕ್ಟರ್ ಗಳು: ಇನ್ನು ಮುಂದೆ ಜಿಲ್ಲಾಧಿಕಾರಿಗಳನ್ನು" ಜಿಲ್ಲಾ ಕಲೆಕ್ಟರ್ "ಗಳೆಂದು ಕರೆಯಲಾಗುತ್ತದೆ. ಈ ಸಂಬಂಧ ಕಾಯ್ದೆ ತಿದ್ದುಪಡಿ ಮಾಡುವ ಚಿಂತನೆಯಿದೆ. ಆಂಧ್ರಪ್ರದೇಶ ಸೇರಿದಂತೆ ಬೇರೆ ಎಲ್ಲ ರಾಜ್ಯಗಳಲ್ಲೂ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್ ಗಳೆಂದೇ ಕರೆಯಲಾಗುತ್ತಿದೆ ಎಂದು ಹೇಳಿದರು.

Intro:ಬೆಂಗಳೂರು : ಭೂ ಪರಿವರ್ತನೆ ಆಗದ, ಯೋಜನಾ ಮಂಜೂರಾತಿಯಾಗದ ಹಾಗೂ ಅಕ್ರಮ ನಿವೇಶನಗಳ ನೊಂದಾವಣೆಯ ದೂರುಗಳು ಬಂದ ಹಿನ್ನೆಲೆಯಲ್ಲಿ ಕಂದಾಯ ನಿವೇಶನಗಳ ನೋಂದಾಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಆಶೋಕ್ ತಿಳಿಸಿದ್ದಾರೆ.Body:ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಕಂದಾಯ ಇಲಾಖೆಯ "ಕಾವೇರಿ ತಂತ್ರಾಂಶ" ದಲ್ಲೂ ಇಂತಹ ನಿವೇಶನಗಳನ್ನು ನೋಂದಾವಣೆಗೆ ಸ್ವೀಕರಿಸುವುದಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಶೀಘ್ರ : ಸಿಎಂ ಬಿ.ಎಸ್. ಯಡಿಯೂರಪ್ಪ ವಿದೇಶ ಪ್ರವಾಸದಿಂದ ವಾಪಸ್ ಬರುತ್ತಿದ್ದಂತೆಯೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಈ ಸಂಬಂಧ ಯಡಿಯೂರಪ್ಪನವರು ಈಗಾಗಲೇ ಬಿಜೆಪಿ ಹೈ ಕಮಾಂಡ್ ಜತೆ ಚರ್ಚಿಸಿದ್ದಾರೆ. ನೂತನ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೂ ಮತ್ತೊಮ್ಮೆ ಚರ್ಚಿಸಿ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಹೇಳಿದರು.
ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಯಾವುದೇ ತಕರಾರು ಇಲ್ಲ. ಪಕ್ಷಕ್ಕೆ ಬರುವಾಗ ಏನು ಒಪ್ಪಂದ ಆಗಿತ್ತೋ ಅದನ್ನು ನಡೆಸಿಕೊಡುತ್ತೇವೆ. ನಾವು ಕೊಟ್ಟ ಮಾತಿನಂತೆ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ. ನಾನು ಕೂಡ ಐದು ಜನರ ಜತೆ ಮಾತುಕತೆ ನಡೆಸಿದ್ದೇನೆ. ಯಡಿಯೂರಪ್ಪ ವಿದೇಶದಿಂದ ಬಂದ ಬಳಿಕ‌ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಹುದ್ದೆ ರದ್ದತಿ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮಾತ್ರ ಪ್ರತಿಕ್ರಯಿಸುವುದಿಲ್ಲವೆಂದು ಹೇಳಿದ ಆಶೋಕ್, ಮಾರ್ಮಿಕ ನಗೆ ಬೀರಿದರು.
ಇನ್ನು ಮುಂದೆ ಡಿಸಿಗಳು ಜಿಲ್ಲಾ ಕಲೆಕ್ಟರ್ ಗಳು : ಇನ್ನು ಮುಂದೆ ಜಿಲ್ಲಾಧಿಕಾರಿಗಳನ್ನು" ಜಿಲ್ಲಾ ಕಲೆಕ್ಟರ್ "ಗಳೆಂದು ಕರೆಯಲಾಗುತ್ತದೆ. ಈ ಸಂಬಂಧ ಕಾಯ್ದೆ ತಿದ್ದುಪಡಿ ಮಾಡುವ ಚಿಂತನೆಯಿದೆ. ಆಂಧ್ರಪ್ರದೇಶ ಸೇರಿದಂತೆ ಬೇರೆ ಎಲ್ಲ ರಾಜ್ಯಗಳಲ್ಲೂ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್ ಗಳೆಂದೇ ಕರೆಯಲಾಗುತ್ತಿದೆ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ ಅಬಕಾರಿ, ಬಿಬಿಎಂಪಿ ಮತ್ತು ಸಾರಿಗೆ ಇಲಾಖೆಯಲ್ಲೂ ಡಿಸಿ ಹೆಸರಿನ ಹುದ್ದೆಗಳಿವೆ.ಇದರಿಂದ ಗೊಂದಲವಾಗುತ್ತಿದೆ ಎಂದು ಹಲವು ಜಿಲ್ಲಾಧಿಕಾರಿಗಳೇ ಅಲವತ್ತುಕೊಂಡಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳನ್ನು ಕಲೆಕ್ಟರ್ ಗಳೆಂದು ಮರು ನಾಮಕರಣ ಮಾಡುವ ಚಿಂತನೆ ಇದೆ ಎಂದರು.
ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯಲ್ಲಿ ಬಳಕೆಯಾಗುತ್ತಿರುವ ಪರ್ಷಿಯನ್, ಉರ್ದು ಶಬ್ದಗಳನ್ನು ತೆಗೆದು ಕನ್ನಡ ಶಬ್ದಗಳನ್ನು ಬಳಕೆ ಮಾಡುವ ಬಗ್ಗೆಯೂ ಚಿಂತನೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿದ್ದ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಕೆಲವು ಬದಲಾವಣೆಗಳೊಂದಿಗೆ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ. ಆದರೆ ಯಾವುದೇ ಕಾರಣಕ್ಕೂ ಜ್ಯೋತಿಷ್ಯವನ್ನು ಪ್ರತಿಬಂಧಿಸುವುದಿಲ್ಲ. ಜ್ಯೋತಿಷ್ಯ ವಿಜ್ಞಾನ ಎಂದು ಸಾಬೀತಾಗಿದೆ. ಆದರೆ, ಮೌಢ್ಯ ಬಿತ್ತುವ ನಕಲಿ ಜ್ಯೋತಿಷಿಗಳ ಮೇಲೆ ಕ್ರಮ ಕೈಗೊಳ್ಳುವುದು ಎಂದು ತಿಳಿದರು.
ಜ್ಯೋತಿಷ್ಯ ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರೇ : ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾಯ್ದೆಯಲ್ಲಿ ಧರ್ಮದ ವಿಷಯವನ್ನೂ ಬೆರೆಸಿದ ಕಾರಣಕ್ಕೆ ನಾವು ವಿರೋಧಿಸಿದ್ದೆವು. ಮೌಢ್ಯ ಹರಡುವುದನ್ನು ಬಿಜೆಪಿ ವಿರೋಧಿಸುತ್ತದೆ‌. ಹಾಗೆ ನೋಡಿದರೆ ಜ್ಯೋತಿಷ್ಯ ನಂಬುವುದು ಜೆಡಿಎಸ್, ಕಾಂಗ್ರೆಸ್ ನಾಯಕರೇ. ಈಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಧ್ಯ ಪ್ರದೇಶದಲ್ಲಿ ಹೋಮ ಮಾಡಿಸುತ್ತಿಲ್ಲವೇ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಯಾವಾಗಲೂ ಜ್ಯೋತಿಷ್ಯವನ್ನು ನಂಬುತ್ತಾರೆ. ನಾವು ಜ್ಯೋತಿಷ್ಯ ನಿಷೇಧಿಸಿದರೆ ಅವರಿಗೆ ಕಷ್ಟವಾಗುತ್ತದೆ. ಹಾಗಾಗಿ ಜ್ಯೋತಿಷ್ಯ ನಿಷೇಧಿಸುವುದಿಲ್ಲ ಎಂದು ಟಾಂಗ್ ನೀಡಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.