ಬೆಂಗಳೂರು: ರಾಜ್ಯದಲ್ಲಿ ಹಂತ ಹಂತವಾಗಿ ಕೋವಿಡ್ ವ್ಯಾಕ್ಸಿನ್ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಜಾವೇದ್ ಅಕ್ತರ್ ಕೋವಿಡ್ ಲಸಿಕೆ ಪಡೆದರು.
ಈಗಾಗಲೇ ನುರಿತ ವೈದ್ಯರು, ದಾದಿಯರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲ ನೌಕರರು ಲಸಿಕೆ ಪಡೆಯುತ್ತಿದ್ದಾರೆ. ಇದೀಗ ಇನ್ನಷ್ಟು ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಕ್ತರ್ ಇಂದು ಆರೋಗ್ಯ ಸೌಧದಲ್ಲಿ ಕೋವಿಡ್ ಲಸಿಕೆ ಪಡೆದುಕೊಂಡರು.
ಓದಿ: ಭಾರತದಲ್ಲಿ 29.28 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ.. ಕೇವಲ 11 ದಿನದಲ್ಲಿ 2 ಮಿಲಿಯನ್ ಡೋಸ್
ಒಟ್ಟು 6,593 ಶಿಬಿರಗಳು ನಡೆಯುತ್ತಿದ್ದು, ಈವರೆಗೆ 2,84,385 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಶೇ. 52ರಷ್ಟು ಲಸಿಕೆ ಅಭಿಯಾನ ಪ್ರಕ್ರಿಯೆ ನಡೆದಿದೆ.