ETV Bharat / state

ಬೆಂಗಳೂರಿನಲ್ಲಿ ಜೆಡಿಎಸ್​​ನಿಂದ ಜನತಾ ಸೇವಕ ಕಾರ್ಯಕ್ರಮ: ಹೆಚ್​ಡಿಕೆ

author img

By

Published : Jun 9, 2022, 7:30 PM IST

Updated : Jun 9, 2022, 10:01 PM IST

ಬೆಂಗಳೂರಿನಲ್ಲಿ ಜೆಡಿಎಸ್​ನಿಂದ 'ಜನತಾ ಸೇವಕ' ಎಂಬ ವಿನೂತನ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

janata-sevaka-program-by-jds-in-bengaluru
ಬೆಂಗಳೂರಿನಲ್ಲಿ ಜೆಡಿಎಸ್​​ನಿಂದ ಜನತಾ ಸೇವಕ ಕಾರ್ಯಕ್ರಮ: ಹೆಚ್​ಡಿಕೆ

ಬೆಂಗಳೂರು: ಜನತಾ ಜಲಧಾರೆ ಕಾರ್ಯಕ್ರಮದ ಬಳಿಕ ಜೆಡಿಎಸ್‍ ಇದೀಗ ರಾಜಧಾನಿಯಲ್ಲಿ 'ಜನತಾ ಸೇವಕ' ಎಂಬ ವಿನೂತನ ಕಾರ್ಯಕ್ರಮ ನಡೆಯಲಿದೆ. ಜನತಾ ಸೇವಕ ವಾಹನ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನಲ್ಲಿ 15 ವಾಹನಗಳು ಸಂಚರಿಸಲಿವೆ. ಒಂದು ತಿಂಗಳು ವಾಹನ ಸಂಚಾರದ ಮೂಲಕ ಸಮಸ್ಯೆಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲಾಗುತ್ತಿದೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಜನತಾ ಸೇವಕ ವಾಹನ ಹೆಸರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂನ್​ 22ರಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬೆಂಗಳೂರು ನಗರದಲ್ಲಿರುವ ಸಮಸ್ಯೆಗಳ ಬಗ್ಗೆ ಅರಿಯಲು ಹಾಗೂ ಜನಾಭಿಪ್ರಾಯ ಸಂಗ್ರಹಿಸಲು ಜನತಾ ಸೇವಕ ಕಾರ್ಯಕ್ರಮ ನಡೆಯಲಿದೆ ಎಂದರು.

ಕುಮಾರಸ್ವಾಮಿ ಮಾಧ್ಯಮಗೋಷ್ಟಿ

ಜನತಾ ಸೇವಕ ಎಂಬ ವಾಹನದ ಮೂಲಕ ಬೆಂಗಳೂರು ಪ್ರವಾಸ ಮಾಡಲಾಗುತ್ತದೆ. 15 ವಾಹನಗಳು ನಗರದ ಗಲ್ಲಿ-ಗಲ್ಲಿಗೂ ಹೋಗುತ್ತವೆ. ಜನರಿಗೆ ನಾವೇನು ಕೊಡುತ್ತಿದ್ದೇವೆ, ರಾಷ್ಟ್ರೀಯ ಪಕ್ಷಗಳು ಮಾಡುತ್ತಿರುವ ಲೂಟಿ ಬಗ್ಗೆ ಜನತೆಗೆ ತಿಳಿಸಲಾಗುವುದು. ಬೆಂಗಳೂರಿನಲ್ಲಿ ಮುಂದಿನ ಬಾರಿ 12-13 ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ 123ರ ಗುರಿ ಹೇಗೆ‌ ಮುಟ್ಟುತ್ತೇನೆಂಬುದು ನಿಮಗೆ ಗೊತ್ತಾಗುತ್ತದೆ ಎಂದು ತಿಳಿಸಿದರು.

ಜೆಡಿಎಸ್‍ ಮುಗಿಸಲು ಸಾಧ್ಯವಿಲ್ಲ: ಯಾರ ಕೈಯಲ್ಲೂ ಜೆಡಿಎಸ್‍ ಮುಗಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಲಕ್ಷಾಂತರ ಕಾರ್ಯಕರ್ತರು ಇದ್ದಾರೆ. ವಿಧಾನ ಪರಿಷತ್​​ನಲ್ಲಿ ಏನಾಯಿತು. ಸಿದ್ದರಾಮಯ್ಯನವರದ್ದು ಎಲ್ಲಿ ವರ್ಕ್ ಆಯ್ತು?. 2023ಕ್ಕೆ ಕಾಂಗ್ರೆಸ್​​ನ ಕೊನೆ ದಿನಗಳು ಬರುತ್ತವೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಂತಿಮ ದಿನಗಳು ಪ್ರಾರಂಭವಾಗುತ್ತವೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್​​ಡಿಕೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಜಾತ್ಯತೀತತೆಯ ಸಾವು-ಬದುಕಿನ ಪ್ರಶ್ನೆ, ಆತ್ಮಸಾಕ್ಷಿಯ ಮತ ಮನ್ಸೂರ್​ಗೆ ಕೊಡಿ: ಜೆಡಿಎಸ್ ಶಾಸಕರಿಗೆ ಸಿದ್ದು ಪತ್ರ

Last Updated : Jun 9, 2022, 10:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.