ETV Bharat / state

ಗೋವಾ, ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲೂ ಆಗಬಹುದು: ಸದಾನಂದ ಗೌಡ ಅಸಮಾಧಾನ - Bangalore

ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು ಅಪರಾಧ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದರು.

ಸದಾನಂದ ಗೌಡ
author img

By

Published : Sep 4, 2019, 7:25 PM IST

ಬೆಂಗಳೂರು: ಜೆಡಿ‌ಎಸ್ ಶಾಸಕರು ಬಿಜೆಪಿ ಸೇರ್ಪಡೆ ವಿಚಾರ ಏನು ಬೇಕಾದ್ರೂ ಆಗಬಹುದು. ಗೋವಾ,‌ ಮಹಾರಾಷ್ಟ್ರದಲ್ಲಿ ನಡೆದ ಹಾಗೆ ನಡೆಯಬಹುದು. ಒಳ್ಳೆ ಕೆಲಸ ಯಾರು ಮಾಡ್ತಾರೋ ಅವರ ಜೊತೆ ಕೈ ಜೋಡಿಸಬಹುದು ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಕೇಂದ್ರ ಸಚಿವ ಡಿ.ವಿ‌. ಸದಾನಂದಗೌಡ ಆಪರೇಷನ್ ಕಮಲದ ಬಗ್ಗೆ ಮಾಹಿತಿ‌ ನೀಡಿದ್ರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ, ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದು ಅಪರಾಧ ಎಂದರು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಡಿವಿಎಸ್​

ಇಂತಹ ಕಾರ್ಯಗಳಿಂದ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಸರಿಯಲ್ಲ. ಒಂದು ಸಾರಿ ಬಂಧನ ಆದ್ಮೇಲೆ ಕಾನೂನಾತ್ಮಕ ಕೆಲಸ ಮಾಡ್ತಾರೆ. ಎಫ್.ಐ.ಆರ್ ಮಾಡಿ ತಪ್ಪು ಮಾಡಿರೋದು ಗೊತ್ತಾದ ಮೇಲೆ ಅವರ ಕೆಲಸ ಅವರು ಮಾಡಿದ್ದಾರೆ. ಬಂಧನ ಆದ್ಮೇಲೆ ಕಾನೂನಾತ್ಮಕ ಕೆಲಸಗಳು ನೋಡ್ಬೇಕು ಅಷ್ಟೆ. ಈಗ ಬೀದಿಯಲ್ಲಿ ನಿಂತು ರಂಪಾಟ ಮಾಡಿದ್ರೆ ಏನೂ ಪ್ರಯೋಜನ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನ ಚಿದಂಬರಂ ಒಳಗೆ ಇದ್ದಾರೆ. ಕಾಂಗ್ರೆಸ್​ನ ಹಲವಾರು ಮುಖಂಡರು ಏನೆಲ್ಲಾ ಮಾಡಿದ್ದಾರೆ ನಿಮಗೂ ಗೊತ್ತಿದೆ. ಅವರ ಕಾಲದಲ್ಲಿ ನಡೆದ ಹಗರಣಗಳನ್ನ ಎತ್ತಿ ಹಿಡಿದಿದ್ದೇವೆ. ಕೋಲ್, ಹೆಲಿಕಾಫ್ಟರ್, ಆದರ್ಶ, ಏಶಿಯನ್ ಕ್ರೀಡೆಯಲ್ಲಿ ನಡೆದ ಹಗರಣಗಳು ಎಲ್ಲರಿಗೂ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ಬಂಧನದ ಕುರಿತು ಸಮರ್ಥನೆ ನೀಡಿದ್ರು.

Intro:KN_BNG_04_04_Sadhanandh Gowda_Ambarish_7203301
Slug: ಗೋವಾ, ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗಬಹುದು: ಪರೋಕ್ಷವಾಗಿ ಜೆಡಿಎಸ್ ಶಾಸಕರ ಸೇರ್ಪಡೆಗೆ ಸ್ವಾಗತಿಸಿದ ಕೇಂದ್ರ ಸಚಿವ ಸದಾನಂದ ಗೌಡ

ಬೆಂಗಳೂರು: ಜಿ.ಡಿ‌.ಎಸ್ ಶಾಸಕರು ಬಿ.ಜೆ.ಪಿ ಸೇರ್ಪಡೆ ವಿಚಾರ ಏನು ಬೇಕಾದ್ರೂ ಆಗಬಹುದು.. ಗೋವಾ,‌ ಮಹಾರಾಷ್ಟ್ರ ದಲ್ಲಿ ನಡೆದ ಹಾಗೆ ನಡೆಯಬಹುದು. ಒಳ್ಳೆ ಕೆಲಸ ಯಾರು ಮಾಡ್ತಾರೋ ಅವರ ಜೊತೆ ಕೈ ಜೋಡಿಸ ಬಹುದು ಎನ್ನುವ ಮೂಲಕ ಪರೋಕ್ಷವಾಗಿ ಜೆ.ಡಿ.ಎಸ್ ಶಾಕರ ಸೇರ್ಪಡೆಗೆ ಕೇಂದ್ರ ಸಚಿವ ಡಿ.ವಿ‌. ಸದಾನಂದಗೌಡ ಆಪರೇಷನ್ ಕಮಲದ ಬಗ್ಗೆ ಮಾಹಿತಿ‌ ನೀಡಿದ್ರು..

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಾಂಗ್ರೇಸ್ ದೇಶದ್ರೋಹಿ ಕೆಲಸ ಮಾಡ್ತಿದೆ. ಪ್ರಜಾಪ್ರಭುತ್ವ ದಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು. ಆದರೆ ಸಾರ್ವಜನಿಕ ಅಸ್ತಿ ಪಾಸ್ತಿ ಹಾಳು ಮಾಡುವುದು ಅಪರಾದ . ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಸರಿಯಲ್ಲ. ಒಂದು ಸಾರಿ ಬಂಧನ ಆದ್ಮೇಲೆ ಕಾನುನಾತ್ಮಕ ಕೆಲಸ ಮಾಡ್ತಾರೆ. ಎಫ್.ಐ.ಆರ್ ಮಾಡಿ ತಪ್ಪು ಮಾಡಿರೋದು ಗೊತ್ತಾದ್ಮೇಮೆ ಅವರ ಕೆಲಸ ಅವರು ಮಾಡಿದಾರೆ. ಬಂಧನ ಆದ್ಮೇಲೆ ಕಾನೂನಾತ್ಮಕ ಕೆಲಸ ಗಳು ನೋಡ್ಬೇಕು ಅಷ್ಟೆ. ಈಗ ಬೀದಿಯಲ್ಲಿ ನಿಂತು ರಂಪಾಟಗಳು ಮಾಡಿದ್ರೆ ಏನೂ ಪ್ರಯೋಜನ..

ಕಾಂಗ್ರೆಸ್‌ ನ ಚಿದಂಬರಂ ಒಳಗೆ ಇದ್ದಾರೆ. ಕಾಂಗ್ರೆಸ್ ನ ಹಲವಾರು ಮುಖಂಡರು ಏನೆಲ್ಲಾ ಮಾಡಿದ್ದಾರೆ ನಿಮಗೂ ಗೊತ್ತಿದೆ.. ಅವರ ಕಾಲದಲ್ಲಿ ನಡೆದ ಹಗರಣಗಳನ್ನ ಎತ್ತಿ ಹಿಡಿದಿದ್ದೇವೆ.. ಕೋಲ್, ಎಲಿಕಾಫ್ಟರ್, ಆದರ್ಶ, ಏಶಿಯನ್ ಕ್ರೀಡೆ ನಡೆದ ಹಗರಣಗಳು ಎಲ್ರಿಗೂ ಗೊತ್ತಿದೆ ಎಂದು ಡಿ.ಕೆ. ಶಿವಕುಮಾರ್ ಬಂಧನದ ಕುರಿತು ಸಮರ್ಥನೆ ನೀಡಿದ್ರು..Body:NoConclusion:No

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.