ಬೆಂಗಳೂರು: ನಗರದಲ್ಲಿ ಏಕಕಾಲಕ್ಕೆ ಎರಡು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎ-ಒನ್ ಸ್ಟೀಲ್ ಕಂಪನಿ ಸಹಕಾರ ನಗರ ಹಾಗೂ ಎ- ಒನ್ ಕಾರ್ಪೊರೇಟ್ ಆಫೀಸ್ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ಅವ್ಯವಹಾರ ಶಂಕೆಯ ಹಿನ್ನೆಲೆ ಐಟಿ ಇಲಾಖೆ ಇಂದು ಬೆಳಗ್ಗೆ ದಾಳಿ ಮಾಡಿ, ಕಚೇರಿಯಲ್ಲಿನ ಪ್ರಮುಖ ಸಿಬ್ಬಂದಿ ಹಾಗೂ ಕಂಪೆನಿಯ ಪ್ರಮುಖ ವ್ಯಕ್ತಿಗಳ ಬ್ಯಾಂಕ್ ಖಾತೆ, ಕಡತಗಳನ್ನು ಪರಿಶೀಲಿಸುತ್ತಿದ್ದಾರೆ.