ETV Bharat / state

ಡ್ರಗ್ಸ್​​ ನಂಟು ಆರೋಪ​ ಪ್ರಕರಣ: ಸಂಜನಾ-ರಾಗಿಣಿಗೆ ಐಟಿ ಸಂಕಷ್ಟ - ಡ್ರಗ್​ ಕೇಸ್​ ಇತ್ತೀಚಿನ ಸುದ್ದಿ

ನಟಿಯರಾದ ರಾಗಿಣಿ ಹಾಗೂ ಸಂಜನಾ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇಡಿ ವಿಚಾರಣೆ ನಡೆಸುತ್ತಿದೆ. ಇದೀಗ ಐಟಿ ಇಲಾಖೆಯು ವಿಚಾರಣೆಗೆ ಮುಂದಾಗಿದ್ದು, ನಟಿಮಣಿಯರ ಕೋಟಿ ಕೋಟಿ ಆದಾಯದ ಮೂಲಗಳನ್ನು ಸಂಗ್ರಹಿಸಲಿದೆ ಎಂದು ಹೇಳಲಾಗ್ತಿದೆ.

ಸಂಜನಾ-ರಾಗಿಣಿಗೆ ಐಟಿ ಸಂಕಷ್ಟ
ಸಂಜನಾ-ರಾಗಿಣಿಗೆ ಐಟಿ ಸಂಕಷ್ಟ
author img

By

Published : Oct 11, 2020, 9:50 AM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಮಾಫಿಯಾ ನಂಟು ಆರೋಪ ಪ್ರಕರಣದಲ್ಲಿ ನಟಿಯರ ಬಣ್ಣ ಬಯಲು ಮಾಡಲು ಇಡಿ ಮುಂದಾಗಿತ್ತು. ಇದೀಗ ಇಡಿ ಜೊತೆ ಐಟಿ ಅಧಿಕಾರಿಗಳು ತನಿಖೆ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

ನ್ಯಾಯಾಲಯದ ಅನುಮತಿ ಪಡೆದು ಇಡಿ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿ ಸಂಜನಾ ಮತ್ತು ರಾಗಿಣಿ ವಿಚಾರಣೆ ನಡೆಸಿದ್ದಾರೆ. ಡ್ರಗ್ಸ್​ ಕೇಸ್​ನಲ್ಲಿ ಸಿಲುಕಿದ ನಟಿಯರಿಗೆ ಬರುತಿದ್ದ ಆದಾಯ, ಆಸ್ತಿ, ಮನೆ, ಹಣ, ಕಾರುಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ.

ಶ್ರೀಲಂಕಾ, ದುಬೈ ಪಾರ್ಟಿಗಳು, ಮನೆ, ಗಳಿಸಿದ ಆಸ್ತಿಗಳ ಮೂಲ, ನಟಿಸಿದ ಚಿತ್ರಗಳಿಗೆ ಪಡೆಯಲಾದ ಪೇಮೆಂಟ್, ಭಾಗಿಯಾದ ಜಾಹೀರಾತುಗಳಲ್ಲಿ ಗಳಿಸಿದ ಮೊತ್ತ ಇವೆಲ್ಲದರ ಬಗ್ಗೆ ಇಡಿ ಅಧಿಕಾರಿಗಳು ಮಾಹಿತಿ ಕೇಳಿದ್ದಾರೆ. ಈ ವೇಳೆ ನಟಿಮಣಿಯರು ಕಂಗಾಲು ಆಗಿ ಸರಿಯಾಗಿ ಉತ್ತರ ನೀಡದೆ ಕಣ್ಣೀರು ಹಾಕಿದ್ದಾರಂತೆ.

ಸದ್ಯ ಐಟಿ ಇಲಾಖೆ ವಿಚಾರಣೆ ನಡೆಸಲು ಕೈಜೋಡಿಸುತ್ತಿದ್ದು, ನಟಿಮಣಿಯರು ಗಳಿಸಿದ ಆದಾಯಕ್ಕೆ ಸರಿಯಾದ ತೆರಿಗೆ ಕಟ್ಟಿದ್ದಾರೆಯೇ, ಗಳಿಸಿದ ಇಷ್ಟೊಂದು ಆಸ್ತಿ ಮೂಲ ಯಾವುದು ಎಂಬೆಲ್ಲಾ ವಿಚಾರದ ಬಗ್ಗೆ ಮಾಹಿತಿಯನ್ನು ಐಟಿ ಕಲೆಹಾಕಲಿದೆ ಎಂದು ಹೇಳಲಾಗ್ತಿದೆ.

ಸದ್ಯ ಸಂಜನಾ ಹಾಗೂ ರಾಗಿಣಿ ಜೈಲಿನಲ್ಲೇ ಇರುವ ಕಾರಣ ನ್ಯಾಯಾಲಯದ ಅನುಮತಿ ಪಡೆದು ಜೈಲಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ. ನಂತರ ಇಡಿಗೆ ಮಾಹಿತಿ ರವಾನೆ ಮಾಡಲಿದ್ದಾರೆ. ಹಾಗೆ ಕುಟುಂಬಸ್ಥರಿಂದಲೂ ಕೂಡ ಆಸ್ತಿಯ ಮೂಲದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.