ETV Bharat / state

ಕೇಂದ್ರ,ರಾಜ್ಯದಿಂದ ಪ್ರಜಾಪ್ರಭುತ್ವದ ಧ್ವನಿ ದಮನ ಮಾಡಲಾಗುತ್ತಿದೆ: ಈಶ್ವರ್ ಖಂಡ್ರೆ

author img

By

Published : Oct 10, 2019, 5:05 PM IST

ವಿಧಾನಮಂಡಲದ ಅಧಿವೇಶನ ಪ್ರಾರಂಭವಾಗಿದೆ. ಆದ್ರೆ ಮಾಧ್ಯಮದವರಿಗೆ ಸರ್ಕಾರ ನಿರ್ಬಂಧ ಹೇರಿದೆ. ಇದನ್ನು ಪಕ್ಷ ಖಂಡಿಸುತ್ತದೆ. ಈ ಮೂಲಕ ಪ್ರಜಾಪ್ರಭುತ್ವದ ಧ್ವನಿಯನ್ನು ದಮನ ಮಾಡುವ ನಿಟ್ಟಿನಲ್ಲಿ ಕೇಂದ್ರದಿಂದ ಹಿಡಿದು ರಾಜ್ಯದವರೆಗೆ ಅದರ ಅನುಸರಣೆಯಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಯಿಂದ ಸುಮಾರು 7 ಕೋಟಿ ಜನ ತತ್ತರಿಸಿ ಹೋಗಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಿದ್ದಾರೆ. ಆದ್ರೆ ಯಾವುದೇ ಪುನರ್ವಸತಿ ಕಾರ್ಯಗಳು ನಡೆದಿಲ್ಲ. ಕೇಂದ್ರ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಾ, ಸದನ ಕರೆದಿದ್ದೇ ಮೂರು ದಿನ. ಇದು ಕೇವಲ ಕಾಟಾಚಾರಕ್ಕೆ ಮಾಡಿರುವಂತದ್ದು, ಯಾವ ರೀತಿ ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದಾರೋ, ಅದೇ ರೀತಿ ಹಿಂಬಾಗಿಲ ಮೂಲಕವೇ ಸದನ ಮುಗಿಸೋಕೆ ಹೊರಟಿದ್ದಾರೆ. ಸಂತ್ರಸ್ತರ ಚರ್ಚೆಗೆ ಇಂದು ಅವಕಾಶ ನೀಡ್ತಿಲ್ಲ ಎಂದು ದೂರಿದ್ರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ

ಸಿದ್ದರಾಮಯ್ಯನವರು ನೆರೆ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದ್ದರು. ಆದ್ರೆ, ಮಾನ್ಯ ಸಭಾಧ್ಯಕ್ಷರು ಸಂತಾಪ ಸೂಚನೆ ಬಳಿಕ ಚರ್ಚೆಗೆ ಅವಕಾಶ ನೀಡಬೇಕಿತ್ತು. ಇವರು ಕೇವಲ ಆದರೆ ಮಸೂದೆ ಮಂಡಿಸುತ್ತಾರೆ. ಚರ್ಚೆಗೆ ಅವಕಾಶ ನೀಡಲ್ಲ. ಜನಸಾಮಾನ್ಯರ ಚರ್ಚೆಗೂ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಸರ್ಕಾರ ನಡೆದುಕೊಳ್ತಿದೆ. ಇದರಲ್ಲಿ ಸ್ಪೀಕರ್ ಕೂಡ ಸೇರಿರುವುದು ದುರಂತ , ಇದು ಸದನದ ಹಕ್ಕು ಚ್ಯುತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

'ಪ್ರಜಾಪ್ರಭುತ್ವ ಅಳಿಸೋಕೆ ಆಗಲ್ಲ'

ಜಿ. ಪರಮೇಶ್ವರ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯ ವಿಚಾರದ ಕುರಿತು ಮಾತನಾಡಿ, ಪ್ರತಿಪಕ್ಷ ನಾಯಕರ ಧ್ವನಿಯನ್ನು ದಮನ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ. ಐಟಿ ದಾಳಿ ರಾಜಕೀಯ ಪ್ರೇರಿತವಾದುದು. ಇಂತಹ ಕೃತ್ಯದಿಂದ ಪ್ರಜಾಪ್ರಭುತ್ವವನ್ನು ಅಳಿಸೋಕೆ ಸಾಧ್ಯವಿಲ್ಲ. ಅವರ ಕನಸು ನನಸಾಗಲ್ಲ. ಸಮಯ ಬಂದಾಗ ಜನ ರೊಚ್ಚಿಗೇಳ್ತಾರೆ ಎಂದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರಮೇಶ್ವರ್ ಮೇಲಿನ ಐಟಿ ದಾಳಿ ವಿಚಾರ ಮಾತನಾಡಿ, ಕಾಂಗ್ರೆಸ್ ನಾಯಕರ ಮೇಲೆ ಐಟಿ‌ ದಾಳಿ ನಡೆದಿದೆ. ದುರುದ್ದೇಶಪೂರ್ವಕವಾಗಿ ದಾಳಿ ನಡೆಯುತ್ತಿದೆ. ಐಟಿಯನ್ನು ಬಳಸಿ ದಾಳಿ ಮಾಡ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ಹುನ್ನಾರವಾಗಿದೆ. ಈಗ ಸಂತ್ರಸ್ತರ ಸಮಸ್ಯೆ ಬಗ್ಗೆ ಗಮನಸೆಳೆಯಬೇಕು. ಇಂತಹ ಸಂದರ್ಭದಲ್ಲಿ ಗಮನ ಬೇರೆ ಸೆಳೆಯಲು ಹೊರಟಿದ್ದಾರೆ ಎಂದು ಕಿಡಿ ಕಾರಿದ್ರು.

Intro:newsBody:ಕೇಂದ್ರ ರಾಜ್ಯದಲ್ಲಿ ಪ್ರತಿಪಕ್ಷ ಮುಗಿಸೋಕೆ ಹೊರಟಿದ್ದಾರೆ: ಖಂಡ್ರೆ

ಬೆಂಗಳೂರು: ಕೇಂದ್ರ ರಾಜ್ಯದಲ್ಲಿ ಪ್ರತಿಪಕ್ಷ ಮುಗಿಸೋಕೆ ಹೊರಟಿದ್ದಾರೆ. ಲಕ್ಷಾಂತರ ಜನ ಪ್ರವಾಹದಿಂದ ನೊಂದಿದ್ದಾರೆ. ರಾಜ್ಯ, ಕೇಂದ್ರ ಸಂಪೂರ್ಣ ವಿಫಲವಾಗಿವೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಜತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಸದನ ಕರೆದಿದ್ದೇ ಮೂರು ದಿನ. ಹಿಂಬಾಗಿಲಿನಿಂದ ಸರ್ಕಾರ ರಚಿಸಿದ್ದಾರೆ. ಹಿಂಬಾಗಿಲ ಮೂಲಕವೇ ಸದನ ಮುಗಿಸೋಕೆ ಹೊರಟಿದ್ದಾರೆ. ಸಂತ್ರಸ್ಥರ ಚರ್ಚೆಗೇ ಇಂದು ಅವಕಾಶ ನೀಡ್ತಿಲ್ಲ. ನೆರೆ ಬಗ್ಗೆ ನಿಲುವಳಿ ಸೂಚನೆ ಕೊಟ್ಟಿದ್ದೆವು. ಸಂತಾಪ ಸೂಚನೆ ಬಳಿಕ ಚರ್ಚೆಗೆ ಅವಕಾಶ ನೀಡಬೇಕಿತ್ತು. ಆದರೆ ಬಿಲ್ ಮಂಡಿಸ್ತಾರೆ,ಚರ್ಚೆಗೆ ಅವಕಾಶವಿಲ್ಲ. ಜನಸಾಮಾನ್ಯರ ಚರ್ಚೆಗೆ ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಸರ್ಕಾರ ನಡೆದುಕೊಳ್ತಿದೆ. ಸ್ಪೀಕರ್ ಕೂಡ ಇನ್ವಾಲ್ವ್ ಆಗಿರುವುದು ದುರಂತ.

ಪರಮೇಶ್ವರ್ ಮೇಲೆ ಐಟಿ ರೇಡ್ ವಿಚಾರ ಮಾತನಾಡಿ, ಪ್ರತಿಪಕ್ಷ ನಾಯಕರ ದಮನಕ್ಕೆ ಮುಂದಾಗಿದೆ. ಐಟಿ ದಾಳಿ ರಾಜಕೀಯ ಪ್ರೇರಿತವಾದುದು. ಇಂತ ಕೃತ್ಯದಿಂದ ಪ್ರಜಾಪ್ರಭುತ್ವ ಅಳಿಸೋಕೆ ಆಗಲ್ಲ. ಅವರು ಕನಸು ನನಸಾಗಲ್ಲ. ಸಮಯ ಬಂದಾಗ ಜನ ರೊಚ್ಚಿಗೇಳ್ತಾರೆ ಎಂದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪರಮೇಶ್ವರ್ ಮೇಲಿನ ಐಟಿ ಅಟ್ಯಾಕ್ ವಿಚಾರ ಮಾತನಾಡಿ, ಕಾಂಗ್ರೆಸ್ ನಾಯಕರ ಮೇಲೆ ಐಟಿ‌ ಅಟ್ಯಾಕ್ ನಡೆದಿದೆ. ದುರುದ್ದೇಶ ಪೂರಕವಾಗಿ ದಾಳಿ ನಡೆಯುತ್ತಿದೆ. ಐಟಿಯನ್ನ ಇಟ್ಟುಕೊಂಡು ದಾಳಿ ಮಾಡ್ತಿದ್ದಾರೆ. ಇದೊಂದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಸಂತ್ರಸ್ಥರ ಸಮಸ್ಯೆ ಬಗ್ಗೆ ಗಮನಸೆಳೆಯಬೇಕು. ಇಂತ ಸಂದರ್ಭದಲ್ಲಿ ಡೈವರ್ಟ್ ಮಾಡೋಕೆ ಹೊರಟಿದ್ದಾರೆ. ಆರ್ಥಿಕ ಅಪರಾಧ ಎಸಗುವವರ ಮೇಲೆ ಮಾಡಿ. ಆದರೆ ಈಗಿನ ಸಂದರ್ಭ ಅದಲ್ಲವಲ್ಲ. ಪ್ರತಿಪಕ್ಷ ನಾಯಕರ ದಮ‌ನಕ್ಕೆ ಮುಂದಾಗಿದ್ದಾರೆ ಎಂದರು.
Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.