ETV Bharat / state

ಆಡಳಿತ ಪಕ್ಷ ಹಂಗೇ, ವಿಪಕ್ಷ ಹಿಂಗೇ.. ಪಾದಯಾತ್ರೆ ಕಟ್ಟಿ ಹಾಕಲು ಕಾಯ್ದೆಗಳ ಮೊರೆ ಹೋಗುತ್ತಾ ಸರ್ಕಾರ!?

author img

By

Published : Jan 7, 2022, 5:39 PM IST

ಜನವರಿ 9ರಿಂದ ಮೇಕೆದಾಟುವಿನಲ್ಲಿ ಕಾಂಗ್ರೆಸ್​ನ ಪಾದಯಾತ್ರೆ ಆರಂಭಗೊಳ್ಳಲಿದೆ. ಇದನ್ನು ತಡೆಯಲು ಸರ್ಕಾರ ಕಾನೂನಿನ ಮೊರೆ ಹೋಗುವ ಚಿಂತನೆಯಲ್ಲಿದೆ. ಎಲ್ಲಾ ರೀತಿಯ ಮೆರವಣಿಗೆ, ರ್ಯಾಲಿ, ಪ್ರತಿಭಟನೆ, ಧರಣಿ ನಿರ್ಬಂಧಿಸಿ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ರೂ, ಕಾಂಗ್ರೆಸ್​ ನಾಯಕರು ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ..

ಪಾದಯಾತ್ರೆ
ಪಾದಯಾತ್ರೆ

ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಸ್ಫೋಟದ ನಡುವೆ ಮೇಕೆದಾಟು ಪಾದಯಾತ್ರೆ ಸಾಕಷ್ಟು ವಿವಾದ ಸೃಷ್ಟಿಸಿದೆ. ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ವಿಷಯವನ್ನು ಪ್ರತಿಷ್ಟೆಯಾಗಿ ಪರಿಗಣಿಸಿದ್ದು, ಹಠಕ್ಕೆ ಬಿದ್ದಿವೆ.

ಶತಾಯಗತಾಯ ಪಾದಯಾತ್ರೆ ತಡೆಯಲೇಬೇಕು ಎಂದು ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿಗೊಳಿಸಿದ್ದರೆ, ಕಾಂಗ್ರೆಸ್ ಪಾದಯಾತ್ರೆ ಮಾಡಿಯೇ ತೀರುತ್ತೇವೆ ಎಂದು ನಿರ್ಧಾರ ಮಾಡಿದೆ. ಹೀಗಾಗಿ, ಸರ್ಕಾರ ಇದೀಗ ಕಾನೂನು ಅಸ್ತ್ರದ ಮೊರೆ ಹೋಗುವ ಚಿಂತನೆಯಲ್ಲಿದೆ.

ಜನವರಿ 9ರಂದು ಮೇಕೆದಾಟುವಿನಲ್ಲಿ ಕಾಂಗ್ರೆಸ್​ನ ಪಾದಯಾತ್ರೆ ಆರಂಭಗೊಳ್ಳಲಿದೆ. ಜನವರಿ 19ಕ್ಕೆ ಬೆಂಗಳೂರಿನಲ್ಲಿ ಮುಗಿಯಲಿದೆ. ಆದರೆ, ಜನವರಿ 19ರವರೆಗೂ ರಾಜ್ಯದಲ್ಲಿ ಕಠಿಣ ಕೋವಿಡ್ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಎಲ್ಲಾ ರೀತಿಯ ಮೆರವಣಿಗೆ, ರ್ಯಾಲಿ, ಪ್ರತಿಭಟನೆ, ಧರಣಿ ನಿರ್ಬಂಧಿಸಿ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇಷ್ಟಾದರೂ ಬಗ್ಗದ ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ. ತಾಕತ್ತಿದ್ದರೆ ತಡೆಯಿರಿ ಎಂದು ಸರ್ಕಾರಕ್ಕೆ ಸವಾಲನ್ನೂ ಎಸೆದಿದೆ. ಇದೀಗ ಮಾರ್ಗಸೂಚಿ ನಂತರ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020ರ ಅನ್ವಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಕ್ರಮಕೈಗೊಳ್ಳುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 : 2021ರಲ್ಲಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ವೇಳೆ ಮುಂಚೂಣಿ ಕಾರ್ಯಕರ್ತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದನ್ನು ತಪ್ಪಿಸಲು ರಾಜ್ಯದಲ್ಲಿ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮಕ್ಕೆ ತಿದ್ದುಪಡಿ ತರಲಾಯಿತು.

ವಿಧಾನಸಭೆ ಮತ್ತು ವಿಧಾನಪರಿಷತ್ ಎರಡರಲ್ಲಿಯೂ ಕಾಯ್ದೆ ಅಂಗೀಕಾರ ಪಡೆದುಕೊಂಡಿದೆ. ಕೋವಿಡ್ ನಿಯಂತ್ರಣದ ವೇಳೆ ಅಡ್ಡಿಪಡಿಸಿದ್ದಲ್ಲಿ 3 ತಿಂಗಳು ಅಥವಾ 5 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರದಿಂದ 2 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ.

ಇದನ್ನೂ ಓದಿ: ಡಿಕೆಶಿ ಭೇಟಿಯಾದ ಆರ್ಚಕರ ನಿಯೋಗ.. ದೇವಾಲಯಗಳ ಖಾಸಗೀಕರಣಗೊಳಿಸದಂತೆ ಸರ್ಕಾರಕ್ಕೆ ಒತ್ತಡ ಹೇರಲು ಮನವಿ..

ವೈದ್ಯರ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ಆಸ್ತಿ-ಪಾಸ್ತಿಗೆ ಹಾನಿ ಮಾಡಿದ್ದ ಕಾರಣಕ್ಕಾಗಿ ಈ ತಿದ್ದುಪಡಿ ತರಲಾಗಿದೆ. ಪಾದಯಾತ್ರೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದರೆ, ಈ ಕಾಯ್ದೆಯ ಅಸ್ತ್ರ ಬಳಸಿ ಕ್ರಮಕೈಗೊಳ್ಳಲು ಸರ್ಕಾರ ಚಿಂತಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 : ಕೋವಿಡ್ ನಿರ್ವಹಣೆಯ ನಿರ್ದೇಶಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯು, ವಿಪತ್ತು ನಿರ್ವಹಣಾ ಅಧಿನಿಯಮ 2005ರ ಸೆಕ್ಷನ್ 51ರಿಂದ 60ರ ಉಪಬಂಧಗಳು, ಅಲ್ಲದೆ ಐಪಿಸಿ 188 ಅಡಿ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪ ಬಂಧಗಳ ಮೇರೆಗೆ ಅವರ ವಿರುದ್ಧ ಕ್ರಮ ಜರುಗಿಸಲು ಅವಕಾಶ ಕಲ್ಪಿಸಿದೆ. ಈ ಅಸ್ತ್ರದ ಬಳಕೆಗೆ ಸರ್ಕಾರ ಚಿಂತನೆ ನಡೆಸಿದೆ. ಸಾಂಕ್ರಾಮಿಕ ಕಾಯ್ದೆಯಡಿ ಅವಕಾಶ ಸಿಗದೇ ಇದ್ದರೆ, ಪ್ಲಾನ್ ಬಿ ರೀತಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಅಸ್ತ್ರಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಕಾಯ್ದೆ ಹೀಗೆ ಹೇಳುತ್ತೆ..:

51ನೇ ವಿಧಿ : ಸಕಾರಣವಿಲ್ಲದೇ ಸರ್ಕಾರದ ಆದೇಶ ಪಾಲಿಸಲು ನಿರಾಕರಿಸುವ ವ್ಯಕ್ತಿಗೆ 1 ವರ್ಷ ಜೈಲು ಶಿಕ್ಷೆ ಅಥವಾ ದಂಡ/ಆದೇಶ ಪಾಲಿಸದೇ ಜೀವಹಾನಿ ಇಲ್ಲವೇ ಅಪಾಯಕ್ಕೆ ದೂಡಿದರೆ 2 ವರ್ಷದವರೆಗೆ ಜೈಲು.

52ನೇ ವಿಧಿ : ಸರ್ಕಾರದಿಂದ ಪರಿಹಾರ, ಸಹಾಯಧನ ಪಡೆಯಲು ತಪ್ಪು ಮಾಹಿತಿ ನೀಡಿದರೆ ಅಂತಹ ವ್ಯಕ್ತಿಗೆ ದಂಡ, 2 ವರ್ಷ ಜೈಲು ಶಿಕ್ಷೆ.

53ನೇ ವಿಧಿ : ಪರಿಹಾರ ವಿತರಿಸಲು ನೀಡಿದ ಹಣ, ವಸ್ತು ಅಥವಾ ಇನ್ನಾವುದೇ ಪರಿಹಾರ ದುರುಪಯೋಗಪಡಿಸಿಕೊಂಡರೆ ದಂಡ, 2 ವರ್ಷ ಜೈಲು.

54ನೇ ವಿಧಿ : ವಿಕೋಪದ ಬಗ್ಗೆ ಸುಳ್ಳು ಸುದ್ದಿ ಹರಡುವ ಮೂಲಕ ಜನರಲ್ಲಿ ಭೀತಿ ಮೂಡಿಸಿದರೆ ದಂಡ, 1 ವರ್ಷ ಜೈಲು.

55ನೇ ವಿಧಿ : ಸರ್ಕಾರಿ ಅಧಿಕಾರಿ ತಪ್ಪು ಮಾಡಿದರೆ ಅಂತಹ ಅಧಿಕಾರಿ ಶಿಕ್ಷಾರ್ಹ.

56ನೇ ವಿಧಿ : ಯಾವುದೇ ಅಧಿಕಾರಿ ಕರ್ತವ್ಯ ಮಾಡಲು ನಿರಾಕರಿಸಿದರೆ ದಂಡ, 1 ವರ್ಷದವರೆಗೆ ಜೈಲು.

57ನೇ ವಿಧಿ : ಆದೇಶ ತಪ್ಪಾಗಿ ಜಾರಿಗೆ ತಂದರೆ ದಂಡ, 1 ವರ್ಷದವರೆಗೆ ಜೈಲು.

58ನೇ ವಿಧಿ : ಯಾವುದೇ ಕಂಪನಿ ಅಥವಾ ಕಾರ್ಪೊರೇಟ್‌ ಸಂಸ್ಥೆ ತಪ್ಪು ಮಾಡಿದರೆ ಜವಾಬ್ದಾರಿ ಹೊಂದಿದವರು ಶಿಕ್ಷಾರ್ಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.