ಬೆಂಗಳೂರು: ರೈತರಿಗೆ ಅನುಕೂಲ ಆಗಲಿ ಎಂದು ಸರ್ಕಾರವೇ ರೈತರಿಂದ ರಾಗಿ ಖರೀದಿಗೆ ಮುಂದಾಗಿದೆ. ಈ ರಾಗಿ ಖರೀದಿಗೆ ಬೇಕಾದ ಗೋಣಿ ಚೀಲದಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಆರೋಪ ಕೇಳಿ ಬಂದಿದೆ. ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ಶಿವಾನಂದ ಕಪಾಶಿ, ಕೆಎಎಸ್ ಅಧಿಕಾರಿ ಸೋಮಣ್ಣವರ್ ಹಾಗೂ ವೀರೇಶ್ ಕುಮಾರ್ ಗಂಭೀರ ಆರೋಪ ಕೇಳಿ ಬಂದಿದೆ.
ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಪ್ರತೀ ಗೋಣಿ ಚೀಲಗಳ ಖರೀದಿಗೆ ಸರ್ಕಾರ 22 ರೂಪಾಯಿ ನಿಗದಿ ಮಾಡಿದೆ. ಈ ಬಾರಿ ಜೆಮ್ ಪೋರ್ಟಲ್ಗಳ ಮೂಲಕ ಚೀಲ ಖರೀದಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು.
ಆದರೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಬಹುದೊಡ್ಡ ಗೋಲ್ಮಾಲ್ ನಡೆದಿದ್ದು, ಟೆಂಡರ್ ನೀಡುವಿಕೆಯಲ್ಲಿ ಕೋಟ್ಯಂತರ ರೂ ಅವ್ಯವಹಾರ ನಡೆಸಿದ್ದಾರೆ. ಟೆಂಡರ್ ಸಮಿತಿ ರಚಿಸದೇ ಏಕಪಕ್ಷೀಯವಾಗಿ ಹಿಂದಿನ ಎಂಡಿ ನಿರ್ಧಾರ ಮಾಡಿ ತಮಗೆ ಬೇಕಾದವರಿಗೆ ಟೆಂಡರ್ ಹಾಕಿಸಿ ಅಕ್ರಮ ಎಸಗಿದ್ದಾರೆ ಎಂದು ದೂರಿದ್ದಾರೆ.
ಇದನ್ನೂ ಓದಿ : ಬಳ್ಳಾರಿ: ಅರಣ್ಯಾಧಿಕಾರಿಯಿಂದ ಪೊಲೀಸ್ ವೇಷ ಧರಿಸಿ ಹಣ ವಸೂಲಿ