ETV Bharat / state

ಸಂಧಾನಕ್ಕೆ ಹೋಗಿ ಏನು ಮುಚ್ಚಿಡುವುದಕ್ಕೆ ಪ್ರಯತ್ನ ಮಾಡ್ತಿದ್ದಾರೆ? ಸಿಂಧೂರಿಗೆ ರೂಪಾ ಪ್ರಶ್ನೆ

ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ - ಶಾಸಕ ಸಾ. ರಾ. ಮಹೇಶ್ ಸಂಧಾನ ವಿಚಾರ -​ ಸಿಂಧೂರಿಗೆ ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಂದ ಹಲವು ಪ್ರಶ್ನೆ- ಸರ್ಕಾರಕ್ಕೆ ಫೋಟೋಗಳನ್ನು ಕೊಡುವುದಾಗಿ ಹೇಳಿಕೆ

ಐಪಿಎಸ್ ಅಧಿಕಾರಿ ರೂಪಾ
ಐಪಿಎಸ್ ಅಧಿಕಾರಿ ರೂಪಾ
author img

By

Published : Feb 19, 2023, 4:45 PM IST

Updated : Feb 19, 2023, 5:47 PM IST

ಐಪಿಎಸ್ ಅಧಿಕಾರಿ ಡಿ ರೂಪಾ

ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಜೊತೆ ಸಂಧಾನಕ್ಕೆ ಹೋಗಿರುವುದು ಏತಕ್ಕಾಗಿ? ಹಾಗಾದರೆ ಏನಾದರೂ ಮುಚ್ಚಿಡುವ ಪ್ರಯತ್ನ ಮಾಡಿದ್ದಾರಾ? ಎಂದು ಐಪಿಎಸ್ ಅಧಿಕಾರಿ ರೂಪಾ ಪ್ರಶ್ನಿಸಿದ್ದಾರೆ.

ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು?.. ರೋಹಿಣಿ ಸಿಂಧೂರಿಗೆ ಪ್ರಶ್ನೆಗಳನ್ನ ಹಾಕಿರುವ ಡಿ ರೂಪಾ ಇಂದು ಮಾಧ್ಯಮಗಳೊಂದಿಗೆ ಮಾತನಾಡಿ 'ನೀವು ಏನು ಕೇಳಬೇಡಿ (ಮಾಧ್ಯಮಗಳಿಗೆ) ನಾನೇ ಎಲ್ಲಾ ಹೇಳುತ್ತೇನೆ. ನಾನು ಹೇಳಿದ್ದು ಪೂರ್ತಿ ತೋರಿಸಿ. ನಾನು ಹೇಳುವುದಕ್ಕೆ ನಾಚಿಕೆ ಮಾಡಿಕೊಳ್ಳುವುದಿಲ್ಲ. ಸಿಂಧೂರಿ ಅವರು ಶಾಸಕ ಸಾ ರಾ ಮಹೇಶ್ ಅವರೊಂದಿಗೆ ರಾಜಿ ಸಂಧಾನ ಮಾಡಿಕೊಂಡಿರುವುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಇವರು ಯಾಕೆ ಸಂಧಾನಕ್ಕೆ ಹೋದರು? ಯಾಕೆ ಹೋಗಬೇಕಿತ್ತು. ನಾನು ಯಾರ ಜೊತೆಗೂ ಸಂಧಾನಕ್ಕೆ ಹೋಗಿಲ್ಲ. ಇದೇ ಮೊದಲು ಐಎಎಸ್ ಅಧಿಕಾರಿ ಈ ರೀತಿ ಮಾಡಿರೋದು ಎಂದರು.

ಭಾರತದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಒಬ್ಬ ಐಎಎಸ್​ ಅಧಿಕಾರಿ ತಾನು ಮಾಡಿರುವ ಕೆಲಸಕ್ಕೆ ಎಂಎಲ್​ಎ ಹತ್ತಿರ ಸಂದಾನಕ್ಕೆ ಹೋಗಿರುವುದನ್ನು ನಾನು ಕೇಳುತ್ತಿದ್ದೇನೆ. ಈ ವಿಷಯ ಕೇಳಿ ನನಗೆ ತುಂಬಾ ನೋವಾಯಿತು. ಈ ಮಟ್ಟಿಗೆ ಒಬ್ಬ ಐಎಎಸ್​ ಅಧಿಕಾರಿ ಇಳಿದಿದ್ದಾರಾ? ಅಂತ. ಸರ್ಕಾರದ ನಿಯಮದಲ್ಲೇ ಇಲ್ಲ ಇದು. ಹಾಗಾಗಿ ಆ ನಿಟ್ಟಿನಲ್ಲಿ ನಾನು ಕೆಲವೊಂದು ಪಾಯಿಂಟ್ಸ್​ಗಳನ್ನು ಬರೆದೆ. ಕೇವಲ ಅಷ್ಟೇ ಬರೆದರೆ ಸರಿಯಾಗಲ್ಲ. ಆ ನಿಟ್ಟಿನಲ್ಲಿ ಇವರ ನಡವಳಿಕೆ ಪ್ರಾರಂಭದಿಂದ ಹೇಗಿತ್ತು? ಎಂಬುದನ್ನು ಬರೆದಿದ್ದೇನೆ. ಕೆಲವರು ಅದನ್ನೂ ಕೇಳಿದ್ದೀರಿ. ಹಿಂದಿನದೆಲ್ಲ ಯಾಕೆ ಸೇರಿಸಿ ಬರೆದಿದ್ದೀರಿ ಅಂತ. ಎಷ್ಟೋ ಹಿಂದಿನ ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿ ಬೆಳೆಯುತ್ತ ಬೆಳೆಯುತ್ತಾ ಗೊತ್ತಾಗುತ್ತದೆ. ನಮ್ಮ ಮನೆಯವರು ಹಾಗೂ ನಾನು ಇವರಿಗೆ ಅನೇಕ ವಿಷಯಗಳಲ್ಲಿ ಡ್ರಾಫ್ಟ್​ ಮಾಡಿಕೊಟ್ಟಿದ್ದೇವೆ. ಸಿಂಧೂರಿ ಹಾಸನದಲ್ಲಿದ್ದಾಗ ಸರ್ಕಾರದ ವಿರುದ್ಧ ಸಿಎಟಿಗೆ ಹೋದಾಗ ಅವರಿಗೆ ಡ್ರಾಫ್ಟ್​ ಮಾಡಿಕೊಟ್ಟವರು ಇವರೇ ಎಂದರು.

ಫೋಟೋಗಳನ್ನು ಸರ್ಕಾರಕ್ಕೆ ಕೊಡುತ್ತೇನೆ.. ನಾನು ಎಲ್ಲಾ ವಿಚಾರ ಹೇಳಿದ್ದೇನೆ. ನಾನು ಅವರಿಗೆ (ಸಿಂಧೂರಿ) ತುಂಬಾ ಹೆಲ್ಪ್ ಮಾಡಿಕೊಟ್ಟಿದ್ದೇನೆ. ಡಿ ಕೆ ರವಿಯವರ ವಿಚಾರದಲ್ಲಿಯೂ ಸಹ ನಾನು ಮಾತನಾಡಿದ್ದೆ. ಅವರು ಅವತ್ತೇ ಸಂಪರ್ಕ ಕಟ್ ಮಾಡಬೇಕಿತ್ತು. ಅವರು ಅವತ್ತೇ ಎಡವಿದರೂ, ಅವತ್ತು ಹೇಳಿದ್ದೆ, ಇವತ್ತು ಹೇಳುತ್ತಿದ್ದೇನೆ. ಬಿಡುಗಡೆ ಮಾಡಿರುವ ಸಿಂಧೂರಿ ಅವರ ಫೋಟೋಗಳನ್ನ ಯಾಕೆ ರಿಲೀಸ್ ಮಾಡಿದ್ದೀರಾ ? ಅಂತಾ ಕೇಳಬೇಡಿ. ನಾನು ಅದನ್ನು ಸರ್ಕಾರಕ್ಕೆ ಕೊಡುತ್ತೇನೆ. ಕೆಲ ಫೋಟೋಗಳನ್ನ ಓರ್ವ ಮಹಿಳಾ ಐಎಎಸ್ ಅಧಿಕಾರಿಯಾಗಿ ಪುರುಷ ಅಧಿಕಾರಿಗೆ ಕಳಿಸುತ್ತಾರೆ ಅಂದರೆ ಏನು ಅರ್ಥ ? ಇದನ್ನ ಸರ್ಕಾರದ ಮಟ್ಟದಲ್ಲಿ ನಾವು ಕೊಡ್ತೀನಿ. ಅದು ಸಹ ತನಿಖೆ ಆಗಲಿ ಎಂದು ಐಪಿಎಸ್​ ರೂಪಾ ಅವರು ಒತ್ತಾಯಿಸಿದರು.

ಇದನ್ನೂ ಓದಿ : ಚಿಕ್ಕಮಗಳೂರು ಜನ ಭಾವನಾತ್ಮಕ ವಿಚಾರ ಬಿಟ್ಟು, ಜೀವನದ ಬಗ್ಗೆ ಯೋಚಿಸುತ್ತಿದ್ದಾರೆ: ಡಿ ಕೆ ಶಿವಕುಮಾರ್​

ಕೋವಿಡ್ ಟೈಂನಲ್ಲಿ ಸ್ವಿಮ್ಮಿಂಗ್​ ಪೂಲ್ ಮಾಡಿಕೊಂಡರು. ಇದು ಏನು ಅರ್ಥ ಸೂಚಿಸುತ್ತೆ. ಆ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ.? ಯಾರು ಇವರಿಗೆ ಅಷ್ಟೊಂದು ಸಪೋರ್ಟ್ ಮಾಡ್ತಾಯಿದ್ದಾರೆ ಗೊತ್ತಿಲ್ಲ. ಯಾಕೆ ಶಿಕ್ಷೆ ಆಗುತ್ತಿಲ್ಲ, ಇವರ ಹಿಂದೆ ಯಾರಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದರು. ಈ ವಿಚಾರದಲ್ಲಿ ಪರ್ಸನಲ್ ಏನೂ ಇಲ್ಲ. ಫೋಟೋ ಒನ್ ಟು ಒನ್ ಕಳಿಸಿದ್ತಾರೆ ಅಂದ್ರೆ ಏನು ಅರ್ಥ. ಇದರ ಉದ್ದೇಶವೇನು? ಎಂದು ರೋಹಿಣಿ ಸಿಂಧೂರಿಗೆ ರೂಪಾ ಪ್ರಶ್ನಿಸಿದರು.

ಇದನ್ನೂ ಓದಿ : ರೋಹಿಣಿ ಸಿಂಧೂರಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದ ಡಿ. ರೂಪಾ

Last Updated : Feb 19, 2023, 5:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.