ETV Bharat / state

ಕೋಲ್ಕತ್ತಾ-ಚೆನ್ನೈ ಕ್ರಿಕೆಟ್​ ಪಂದ್ಯದ ವೇಳೆ ಬೆಟ್ಟಿಂಗ್​, ನಾಲ್ವರ ಬಂಧನ

ಐಪಿಎಲ್​ ಕ್ರಿಕೆಟ್​ ವೇಳೆ ಬೆಟ್ಟಿಂಗ್​ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಐಪಿಎಲ್​ ಕ್ರಿಕೆಟ್​ ವೇಳೆ ಬೆಟ್ಟಿಂಗ್​
ಐಪಿಎಲ್​ ಕ್ರಿಕೆಟ್​ ವೇಳೆ ಬೆಟ್ಟಿಂಗ್​
author img

By

Published : Oct 9, 2020, 10:32 AM IST

ಬೆಂಗಳೂರು: ಕೋಲ್ಕತ್ತಾ ಮತ್ತು ಚೆನ್ನೈ ತಂಡಗಳ ನಡುವೆ ನಡೆದ ಐಪಿಎಲ್ ಕ್ರಿಕೆಟ್‌ ಪಂದ್ಯದ ವೇಳೆ ಬೆಟ್ಟಿಂಗ್​ ನಡೆಸುತ್ತಿದ್ದ ನಾಲ್ವರನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಇಮ್ರಾನ್ ಭಾಷಾ, ಮಹಮ್ಮದ್ ಇರ್ಫಾನ್, ಮುಜಾಮಿಲ್ ಅಹಮ್ಮದ್, ರೋಮನ್ ವಿಮಲ್ ರಾಜ್ ಬಂಧಿತರು.

ಈ ಆರೋಪಿಗಳು ಐಪಿಎಲ್ ಪಂದ್ಯದ ಸಂದರ್ಭದಲ್ಲಿ ಮೊಬೈಲ್ ಫೋನ್ ಮೂಲಕ ಬೆಟ್ಟಿಂಗ್ ರೇಶ್ಯೂ ನೋಡಿಕೊಂಡು ಜೂಜಾಟ ನಡೆಸುತ್ತಿದ್ದರು. ಬೆಟ್ಟಿಂಗ್​ನಲ್ಲಿ ತೊಡಗಿದ್ದ ಆರೋಪಿಗಳು ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​ಟಿಒ ಕಚೇರಿ ಬಳಿ ಹಣ ಕಲೆಕ್ಟ್ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಕೇಂದ್ರ ವಿಭಾಗದ ಪೊಲೀಸರು ದಾಳಿ ನಡೆಸಿದ್ದಾರೆ.

ಬಂಧಿತ ಆರೋಪಿಗಳಿಂದ 3 ಲಕ್ಷ ರೂ ನಗದು, 4 ಮೊಬೈಲ್ ವಶಪಡಿಸಿಕೊಂಡಿರುವ ಯಶವಂತಪುರ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.