ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಹಾಗೂ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ ಹಾಗೂ ಆತನ ಸಹಚರರನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದೆ. ಜಿಹಾದಿಗಳ ಮಾಸ್ಟರ್ ಮೈಂಡ್ ಮೆಹಬೂಬ್ ಪಾಷಾನನ್ನು ಸಿಸಿಬಿ ಹೆಚ್ಚುವರಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ ಎನ್ನಲಾಗ್ತಿದೆ.
ಇನ್ನಷ್ಟು ಮಾಸ್ಟರ್ ಮೈಂಡ್ ಭಾಗಿ:
ಮೆಹಬೂಬ್ ಪಾಷಾ ಜತೆ ಹಲವಾರು ಮಂದಿ ಜಿಹಾದಿಗಳಿದ್ದು, ಇವ್ರೆಲ್ಲ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ತಲೆಮರೆಸಿಕೊಂಡಿರುವ ವಿಚಾರ ಹೇಳಿದ್ದಾನೆ. ಹುಡುಗರನ್ನು ನೇಮಕಾತಿ ಮಾಡಿಕೊಳ್ಳೋದು, ಟ್ರೈನಿಂಗ್ ಕೊಡಿಸೋದು ಮಾತ್ರ ಈತನ ಕೆಲಸವಂತೆ. ತೀರ್ಥಹಳ್ಳಿಯಲ್ಲಿದ್ದ ಜಿಹಾದಿಗಳು ಯಾವ ಕೆಲಸ ಮಾಡಬೇಕು ಅನ್ನೋದನ್ನ ಈತ ನಿರ್ಧರಿಸುತ್ತಿದ್ದನಂತೆ.
ಆರೋಪಿಗಳ ಜೀವನ ನಿರ್ವಹಣೆಗೆ ತಿಂಗಳಿಗೆ 10 ಸಾವಿರ ರೂಪಾಯಿ ಬರ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಈ ಹಣವನ್ನು ಯಾರು, ಯಾವಾಗ ಹೇಗೆ ಕೊಡುತ್ತಿದ್ದರು ಅನ್ನೋದು ಮಾತ್ರ ನಿಗೂಢವಾಗಿದೆ.