ETV Bharat / state

ನವೀನ್​​ ಕುಟುಂಬಸ್ಥರ ವಿಚಾರಣೆ: ಮನೆ ಸುತ್ತ ಖಾಕಿ ಸರ್ಪಗಾವಲು - ಡಿಜೆ ಹಳ್ಳಿ ಠಾಣೆ ಹಾಗೂ ಕೆ.ಜಿ ಹಳ್ಳಿ ಪ್ರಕರಣ'

ಈಗಾಗಲೇ ಆರೋಪಿ ನವೀನ್ ಮನೆ ಸುಟ್ಟು ಹೋಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಸಂಪೂರ್ಣ ಹಾನಿಯಾಗಿದೆ. ಮನೆ ಬಳಿ ಯಾರೂ ಬರದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ನವೀನ್​​ ಕುಟುಂಬಸ್ಥರ ವಿಚಾರಣೆ
ನವೀನ್​​ ಕುಟುಂಬಸ್ಥರ ವಿಚಾರಣೆ
author img

By

Published : Aug 14, 2020, 11:27 AM IST

ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಕಾರಣಿ ಕರ್ತನಾದ ಆರೋಪಿ ನವೀನ್ ಮನೆಗೆ ‌ಸದ್ಯ ಬೀಗಿ ಪೊಲೀಸ್​​ ಭದ್ರತೆ ನೀಡಲಾಗಿದೆ. ಈಗಾಗಲೇ ಆರೋಪಿ ನವೀನ್ ಮನೆ ಸುಟ್ಟು ಹೋಗಿದೆ. ಜೊತೆಗೆ ಅಕ್ಕಪಕ್ಕದ ಮನೆಗಳಿಗೂ ಸಂಪೂರ್ಣ ಹಾನಿಯಾಗಿದೆ. ಮನೆ ಬಳಿ ಯಾರೂ ಬರದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ಮನೆ ಸುತ್ತ ಖಾಕಿ ಸರ್ಪಗಾವಲು

ತನಿಖೆ ಬಹಳ ಗಂಭೀರವಾಗಿ‌ ಸಾಗುತ್ತಿದ್ದು, ಸದ್ಯ ಒಂದೊಂದು ತಂಡ ಒಂದೊದು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ಹೊರತು ಪಡಿಸಿ ಮನೆಯೊಳಗೆ ಯಾರಿಗೂ ಪ್ರವೇಶ ಇಲ್ಲ. ಕುಟುಂಬದವರು ಕೂಡ ಯಾರೂ ಮನೆಯೊಳಗೆ ಹೋಗುವಂತಿಲ್ಲ. ಸುಮಾರು 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಅನಾವಶ್ಯಕವಾಗಿ ಓಡಾಡುವರಿಗೆ ವಾರ್ನಿಂಗ್ ನೀಡುತ್ತಿದ್ದಾರೆ.

ನವೀನ್ ಕುಟುಂಬಸ್ಥರ ವಿಚಾರಣೆ: ನವೀನ್ ಕುಟುಂಬಸ್ಥರನ್ನ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ನವೀನ್ ಫೇಸ್ ಬುಕ್​​ನಲ್ಲಿ ಹಾಕಿದ ಪೋಸ್ಟ್ ಕುರಿತು, ಹಾಗೆ ನವೀನ್​​ ಮಾಡುತ್ತಿದ್ದ ಕೆಲಸ ಮತ್ತು ಆತನ ಚಲನವಲನ ಅಖಂಡ ಶ್ರೀನಿವಾಸ್ ಮೂರ್ತಿ‌ ಜೊತೆಗಿನ‌ ನಂಟು, ಹಾಗೆ ನವೀನ್ ಮೊಬೈಲ್ ಕಳ್ಳತನವಾಗಿದೆ ಎಂದು ಪೋಷಕರು ಕೂಡ ಆರೋಪಿಸಿದ್ದಾರೆ. ಹೀಗಾಗಿ ಇದರ ಬಗ್ಗೆ ಸಂಪೂರ್ಣವಾದ ತನಿಖೆ ‌ನಡೆಸಲು ಖಾಕಿ ಪಡೆ ‌ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.