ಬೆಂಗಳೂರು : ನಗರದ ಅಪಘಾತ ಪ್ರಕರಣಗಳ ಅಂಕಿ-ಅಂಶಗಳ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. 2021ರಲ್ಲಿ 618 ಅಪಘಾತಗಳು ಸಂಭವಿಸಿವೆ. ಅದರಲ್ಲಿ 651 ಜನ ಮೃತಪಟ್ಟಿದ್ದಾರೆ ಎಂದು ದೃಢಪಟ್ಟಿದೆ.
ಕಳೆದ ವರ್ಷಕ್ಕಿಂತ ಅಲ್ಪ ಪ್ರಮಾಣದಲ್ಲಿ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಕಳೆದ ವರ್ಷ ರಾಜಧಾನಿಯಲ್ಲಿ 655 ಜನ ಅಪಘಾತಗಳಲ್ಲಿ ಮೃತಪಟ್ಟಿದ್ದರು. ಯುವಕರೇ ಹೆಚ್ಚು ಮೃತ ಪಟ್ಟಿರುವುದು ಅಂಕಿ-ಅಂಶಗಳಲ್ಲಿ ಬಹಿರಂಗವಾಗಿತ್ತು.
ಈ ವರ್ಷ ಮೃತಪಟ್ಟ 651 ಮಂದಿಯಲ್ಲಿ 21 ರಿಂದ 40 ವಯಸ್ಸಿನ ಯುವಕರು 336 ಜನ ಸಾವಿಗೀಡಾಗಿದ್ದಾರೆ. ಈ ಪೈಕಿ ವಿದ್ಯಾವಂತರೇ ಹೆಚ್ಚು ಅಪಘಾತಗಳಿಗೆ ಬಲಿಯಾಗಿದ್ದಾರೆ ಎಂದು ಮಾಹಿತಿಯಲ್ಲಿ ಬಹಿರಂಗವಾಗಿದೆ. 651 ಜನರಲ್ಲಿ ಕೇವಲ 53 ಜನ ಮಾತ್ರ ಅನಕ್ಷರಸ್ಥರಾಗಿದ್ದಾರೆ. ಉಳಿದ 598 ಮಂದಿ ಅಕ್ಷರಸ್ಥರೇ ಸಾವನಪ್ಪಿದ್ದಾರೆ.
ವಾರಾಂತ್ಯ ಹೆಚ್ಚು ಆ್ಯಕ್ಸಿಡೆಂಟ್ : ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳಾಗಿವೆ. ಮೋಜು-ಮಸ್ತಿ ಗುಂಗಿನಲ್ಲಿ ಆ್ಯಕ್ಸಿಡೆಂಟ್ ಹೆಚ್ಚಾಗಿವೆ. 208 ಜನ ವಿಕೇಂಡ್ ಆ್ಯಕ್ಸಿಡೆಂಟ್ಗೆ ಬಲಿಯಾಗಿದ್ದಾರೆ. ಹೆಲ್ಮೆಟ್ ಧರಿಸಿದ 291 ಜನ ಅಪಘಾತಗಳಲ್ಲಿ ಮೃತ ಪಟ್ಟಿದ್ದಾರೆ.
ಕಿಲ್ಲರ್ ಬಿಎಂಟಿಸಿಗೆ 27 ಮಂದಿ ಬಲಿ : ಈ ವರ್ಷ 27 ಜನ ಬಿಎಂಟಿಸಿ ಬಸ್ಗಳು ಗುದ್ದಿದ್ದರಿಂದ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನರನ್ನ ನಗರ ಸಾರಿಗೆ ಬಸ್ಗಳು ಬಲಿ ತೆಗೆದುಕೊಂಡಿವೆ.
ಬಿಎಂಟಿಸಿ, ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ಗಳು ಈ ಬಾರಿ 46 ಜನರನ್ನು ಬಲಿ ತೆಗೆದುಕೊಂಡಿವೆ ಎಂದು ನಗರ ಪೊಲೀಸರು ಬಿಡುಗಡೆ ಮಾಡಿರುವ ಕಳೆದ ವರ್ಷದ ಅಪಘಾತ ಪ್ರಕರಣಗಳ ಅಂಕಿ-ಅಂಶಗಳಲ್ಲಿ ತಿಳಿದು ಬಂದಿದೆ.
ಓದಿ: ಭಾರತ-ಚೀನಾ ನಡುವೆ 14ನೇ ಸುತ್ತಿನ ಮಿಲಿಟರಿ ಮಾತುಕತೆ : ಲಡಾಖ್ ಬಿಕ್ಕಟ್ಟು ಸುಧಾರಿಸಿದೆ ಎಂದ ಸೇನಾ ಮುಖ್ಯಸ್ಥ