ETV Bharat / state

ವಿಶ್ವದರ್ಜೆಯ ಐಐಎಂ ಬೆಂಗಳೂರು ತನ್ನ ಧ್ಯೇಯದಂತೆ ಕಾರ್ಯ ನಿರ್ವಹಿಸಿದೆ: ರಾಜ್ಯಪಾಲ ಗೆಹ್ಲೋಟ್ - 5 ಟ್ರಿಲಿಯನ್ ಡಾಲರ್ ಆರ್ಥಿಕತೆ

ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟಿನ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು.

Indian Institute of Management Golden Jubilee Program
ಐಐಎಂ ಸಂಸ್ಥೆಯ ಸುವರ್ಣ ಮಹೋತ್ಸವ ಕಾಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು,ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು.
author img

By ETV Bharat Karnataka Team

Published : Oct 26, 2023, 10:04 PM IST

Updated : Oct 26, 2023, 10:58 PM IST

ಬೆಂಗಳೂರು: ಕರ್ನಾಟಕವು ಶಿಕ್ಷಣ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಬೆಂಗಳೂರು ಭಾರತದ ಶಿಕ್ಷಣ ಮತ್ತು ಐಟಿ ಹಬ್ ಎಂದು ಕರೆಯಲ್ಪಡುತ್ತದೆ. ಇಲ್ಲಿ ಅನೇಕ ವಿಶ್ವ ದರ್ಜೆಯ ಸಂಶೋಧನಾ ಕೇಂದ್ರಗಳು ಮತ್ತು ಶಿಕ್ಷಣ ಸಂಸ್ಥೆಗಳಿವೆ, ಅವುಗಳಲ್ಲಿ ಒಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಅದು ತನ್ನ ಧ್ಯೇಯ ವಾಕ್ಯದಂತೆ ಕೆಲಸ ಮಾಡಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಬೆಂಗಳೂರಿನಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್​ನ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿ ಮಾತನಾಡಿದರು.

ಐಐಎಂ ತನ್ನ ಧ್ಯೇಯವಾಕ್ಯ 'ತೇಜಸ್ವಿ ನವಧಿತಂಸ್ತು'- 'ನಮ್ಮ ಅಧ್ಯಯನಗಳನ್ನು ಪ್ರಬುದ್ಧಗೊಳಿಸು' ಎನ್ನುವಂತೆ ಸರ್ಕಾರ ಮತ್ತು ಸಮಾಜಕ್ಕೆ ನಿರ್ವಹಣೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಶ್ರೇಷ್ಠತೆಯನ್ನು ಉತ್ತೇಜಿಸುವ ಮೂಲಕ ಸಂಸ್ಥೆಗಳನ್ನು ವಿಶ್ವಪ್ರಸಿದ್ಧಗೊಳಿಸಿದೆ. ಆದ್ದರಿಂದ ಸುವರ್ಣ ಮಹೋತ್ಸವ ಪ್ರತಿಷ್ಠಾಪನಾ ಸಪ್ತಾಹದ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದರು.

1973ರಲ್ಲಿ ಸ್ಥಾಪನೆಗೊಂಡ ಐಐಎಂ ಬೆಂಗಳೂರು ಪ್ರಾರಂಭದಿಂದಲೂ, ಸಾಫ್ಟ್‌ವೇರ್ ಮತ್ತು ಐಟಿ ಮ್ಯಾನೇಜ್‌ಮೆಂಟ್ ಮತ್ತು ಸಾಫ್ಟ್‌ವೇರ್ ಎಂಟರ್‌ಪ್ರೈಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಕಾರ್ಯಕ್ರಮಗಳ ಮೂಲಕ ಸಾಫ್ಟ್‌ವೇರ್ ಉದ್ಯಮದಲ್ಲಿ ಬೆಂಗಳೂರಿಗೆ ಹೊಸ ಗುರುತು ನೀಡಿದೆ. ಬೆಂಗಳೂರನ್ನು ಐಟಿ ಹಬ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಐಐಎಂ 2000ರಲ್ಲಿ ಎನ್‌ಎಸ್‌ಆರ್‌ಸಿಇಎಲ್ ಉದ್ಯಮಶೀಲ ಕಲಿಕೆಯನ್ನು ಸ್ಥಾಪಿಸುವ ಮೂಲಕ ಉದ್ಯಮಶೀಲತೆಗೆ ಚೈತನ್ಯವನ್ನು ಒದಗಿಸಲು ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಡಿಜಿಟಲ್ ಶಿಕ್ಷಣದಲ್ಲಿ ಉಪಕ್ರಮವನ್ನು ತೆಗೆದುಕೊಳ್ಳಲು, ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್‌ಗಳನ್ನು ಪ್ರಾರಂಭಿಸುವ ಮೂಲಕ ಬಿಸಿನೆಸ್ ಅನಾಲಿಟಿಕ್ಸ್‌ನಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ. ಐಎಂಬಿಯು ತರಬೇತಿ ಪಡೆದ ಆರೋಗ್ಯ ವೃತ್ತಿಪರರ ಅಗತ್ಯವನ್ನು ಪೂರೈಸಲು ಆಸ್ಪತ್ರೆ ನಿರ್ವಹಣೆಯಲ್ಲಿ 12 ತಿಂಗಳ ವೃತ್ತಿಪರ ಪ್ರಮಾಣಪತ್ರ ಕಾರ್ಯಕ್ರಮವನ್ನು ಪ್ರಾರಂಭಿಸಿರುವುದು ಸಂತಸದ ವಿಚಾರ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಶಿಕ್ಷಣ ತಜ್ಞರಿಗೆ ಶಿಕ್ಷಣವನ್ನು ಒದಗಿಸುತ್ತದೆ, ಕಾರ್ಯನಿರ್ವಾಹಕ ಶಿಕ್ಷಣ, ನಿರ್ವಹಣೆಯಲ್ಲಿ ಸಂಶೋಧನೆ, ವ್ಯಾಪಾರ ಪ್ರತಿಭೆಗಳನ್ನು ನಿರ್ಮಿಸುವುದು ಮತ್ತು ಉದ್ಯಮಶೀಲತೆಯಲ್ಲಿ ಭಾರತದ ಸ್ಥಾನವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಆರ್ಥಿಕತೆಯ ಅಭಿವೃದ್ಧಿಯಲ್ಲಿ ಐಐಎಂ ಕೊಡುಗೆ: ಭಾರತೀಯ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಐಐಎಂ ಪ್ರಮುಖ ಕೊಡುಗೆಯನ್ನು ಹೊಂದಿದೆ. ಇದರಿಂದಾಗಿ ಇಂದು ಭಾರತದ ಆರ್ಥಿಕತೆಯು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯತ್ತ ಸಾಗುತ್ತಿದೆ. ಮುಂಬರುವ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ರಚಿಸಲು ನಮಗೆ ಹೆಚ್ಚು ಹೆಚ್ಚು ವಿಶ್ವ ದರ್ಜೆಯ ವ್ಯವಸ್ಥಾಪಕರು ಹಾಗೂ ಇದಕ್ಕಾಗಿ ವಿಶ್ವ ದರ್ಜೆಯ ನಿರ್ವಹಣಾ ಶಾಲೆಗಳ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಿ, ನೈತಿಕತೆ ಇಲ್ಲದ ಯಶಸ್ಸು, ದುಡಿಮೆ ಇಲ್ಲದ ಸಂಪತ್ತು ಹಾಗೂ ಚಾರಿತ್ರ್ಯ ಇಲ್ಲದ ಜ್ಞಾನ ನಿಷ್ಟ್ರಯೋಜಕ. ಅವುಗಳಿಂದ ಮನುಕುಲಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿ ಅವರು ಬೋಧಿಸಿದ ನೈತಿಕತೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಬೇಕು. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ಪರಸ್ಪರ ಸೌಹಾರ್ದ, ಸದಾಶಯಗಳಿಂದ ದೇಶ ಕಟ್ಟಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ 'ದಿ ಮೇಕಿಂಗ್ ಆಫ್ ಎ ಕ್ಯಾಂಪಸ್ ಐಐಎಂ ಬೆಂಗಳೂರು ಕೃತಿ ಮತ್ತು ಸಂಸ್ಥೆಯ ಸಾಕ್ಷ್ಯಚಿತ್ರದ ಟೀಸರ್ ಬಿಡುಗಡೆ ಮಾಡಲಾಯಿತು. 50 ಗಂಟೆಗಳ ರಿಲೇ ವಾಕ್‌ಥಾನ್‌ಗೆ ಕೂಡ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ನಿರ್ದೇಶಕ ಪ್ರೊಫೆಸರ್ ಹೃಷಿಕೇಶ್ ಟಿ ಕೃಷ್ಣನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ನಿರ್ದೇಶಕ ಪ್ರೊಫೆಸರ್ ಹೃಷಿಕೇಶ್ ಟಿ.ಕೃಷ್ಣನ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ಇದನ್ನೂಓದಿ: ಕನ್ನಡ ರಾಜ್ಯೋತ್ಸವ: ಈ ಬಾರಿ 68 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ.. 2 ದಿನದಲ್ಲಿ ಪಟ್ಟಿ ಪ್ರಕಟ

Last Updated : Oct 26, 2023, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.