ETV Bharat / state

ಗ್ರಾಮೀಣ, ನಗರ, ವಿವಿಧೋದ್ದೇಶ ಪುನರ್ವಸತಿ ಸಿಬ್ಬಂದಿಯ ಗೌರವ ಧನ ಹೆಚ್ಚಳ - ಪುನರ್ವಸತಿ ಸಿಬ್ಬಂದಿಗಳ ಗೌರವಧನ ಹೆಚ್ಚಿಸಿ ಸರ್ಕಾರ ಆದೇಶ

ಗ್ರಾಮೀಣ, ನಗರ, ವಿವಿಧೋದ್ದೇಶ ಪುನರ್ವಸತಿ ಸಿಬ್ಬಂದಿಯ ಗೌರವಧನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

Increase to honorarium of rehabilitation staff  rehabilitation staff honorarium hike  Karnataka government Increase to honorarium  ಪುನರ್ವಸತಿ ಸಿಬ್ಬಂದಿಯರ ಗೌರವಧನ  ಪುನರ್ವಸತಿ ಸಿಬ್ಬಂದಿಗಳ ಗೌರವಧನ ಹೆಚ್ಚಿಸಿ ಸರ್ಕಾರ ಆದೇಶ  ಕಾರ್ಯಕರ್ತರ ಮಾಸಿಕ ಗೌರವಧನ
ಪುನರ್ವಸತಿ ಸಿಬ್ಬಂದಿಯರ ಗೌರವಧನ ಹೆಚ್ಚಿಸಿದ ಸರ್ಕಾರ
author img

By

Published : Sep 16, 2022, 2:26 PM IST

ಬೆಂಗಳೂರು: ಗ್ರಾಮೀಣ/ನಗರ ಹಾಗೂ ವಿವಿಧೋದ್ದೇಶ ಪುನರ್ವಸತಿ ಸಿಬ್ಬಂದಿಯ ಗೌರವಧನ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಗ್ರಾಮೀಣ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನವನ್ನು 6,000 ರೂ. ರಿಂದ 9,000 ರೂ. ಹಾಗೂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಮಾಸಿಕ ಗೌರವಧನವನ್ನು 12,000 ರೂ. ರಿಂದ 15,000 ರೂ. ಗೆ ಹೆಚ್ಚಿಸಲಾಗಿದೆ‌. ಸೆಪ್ಟೆಂಬರ್ 2022 ರಿಂದ ಅನ್ವಯವಾಗುವಂತೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಅಗತ್ಯವಿರುವ ಹೆಚ್ಚುವರಿ ಅನುದಾನ 14.43 ಕೋಟಿ ರೂ. ಪೂರಕ ಅಂದಾಜಿನಲ್ಲಿ ಒದಗಿಸಲು ಸೂಚಿಸಲಾಗಿದೆ.

ಗ್ರಾಮೀಣ ಪುನರ್ವಸತಿ ಯೋಜನೆಯಡಿ, ಜಿಲ್ಲಾ ಮಟ್ಟದಲ್ಲಿ ವಿಕಲಚೇತನ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಹಾಗೂ ಇಲಾಖಾ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವಂತೆ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಮತ್ತು ಗ್ರಾಮೀಣ/ನಗರ ಪುನರ್ಸತಿ ಕಾರ್ಯಕರ್ತರಿಗೆ ನೀಡಲಾಗುತ್ತಿರುವ ಗೌರವಧನವನ್ನು ಹೆಚ್ಚಿಸುವಂತೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿರ್ದೇಶಕರು ಕೋರಿದ್ದರು.

ಇದನ್ನೂ ಓದಿ: ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.