ಬೆಂಗಳೂರು: ಸಾರ್ವಜನಿಕರಿಗೆ ನಿನ್ನೆಯಷ್ಟೇ ಶಾಕ್ ನೀಡಿ ಬಸ್ ಟಿಕೆಟ್ ದರ ಏರಿಸಲಾಗಿದೆ. ಬಿಎಂಟಿಸಿ ಹೊರೆತುಪಡಿಸಿ, ಇತರ ಸಾರಿಗೆ ಬಸ್ಗಳ ಟಿಕೆಟ್ ದರ ಏರಿಕೆಯಾಗಿದೆ. ಹವಾನಿಯಂತ್ರಿತ ಬಸ್ ಗಳು ಹೊರತುಪಡಿಸಿ, ಸಾಮಾನ್ಯ ಸಾರಿಗೆ, ವೇಗದೂತ, ರಾಜಹಂಸ, ನಾನ್ ಎಸಿ ಸ್ಲೀಪರ್ಗಳ ಬಸ್ಗಳ ದರವನ್ನು ಶೇ.12 ರಷ್ಟು ಹೆಚ್ಚಳ ಮಾಡಲಾಗಿದೆ. ವೋಲ್ವೋ ಮತ್ತು ಎಸಿ ಸ್ಲೀಪರ್ ಬಸ್ಗಳ ದರ ಹೆಚ್ಚಳವಾಗಿಲ್ಲ.
ಇತ್ತ ಪ್ರಯಾಣಿಕರು, ಹೆಚ್ಚಳದ ಬಗ್ಗೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ನಿತ್ಯ ಬಳಕೆ ವಸ್ತುಗಳಿಂದ ಹಿಡಿದು ಪ್ರತಿಯೊಂದು ಬೆಲೆಯು ಗಗನಕೇರಿದೆ. ಹೀಗಿರುವಾಗ, ನಿತ್ಯ ಓಡಾಡುವ ಸಾರಿಗೆ ಬಸ್ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗಕ್ಕೆ ಪೆಟ್ಟು ಬೀಳುತ್ತೆ. ದರ ಏರಿಕೆ ಶೇಕಡವಾರು ಕಡಿಮೆ ಮಾಡಬೇಕಿತ್ತು ಎನ್ನುತ್ತಿದ್ದಾರೆ.