ETV Bharat / state

ಸಿಎಂ ಭೇಟಿ ಮಾಡಿ ಉಸ್ತುವಾರಿ ಅರುಣ್ ಸಿಂಗ್, ಕಟೀಲ್ ಚರ್ಚೆ: ಶಾಸಕಾಂಗ ಸಭೆಗೆ ಮುನ್ನ ಮುಖಂಡರ ರೆಸ್ಟ್ - ಸಿಎಂ ಭೇಟಿ ಮಾಡಿ ಚರ್ಚಿಸಿದ ಉಸ್ತುವಾರಿ ಅರುಣ್ ಸಿಂಗ್, ಕಟೀಲ್

ಬಿಎಸ್ ವೈ ನಿವಾಸಕ್ಕೆ ಮುಖಂಡರಾದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ್ ಸಹ ಆಗಮಿಸಿ ಮಾತುಕತೆ ನಡೆಸಿದರು. ಸದ್ಯಕ್ಕೆ ಕೆಕೆ ಗೆಸ್ಟ್ ಹೌಸ್‌ಗೆ ಎಲ್ಲಾ ನಾಯಕರು ಹೊರಟಿದ್ದಾರೆ. ಶಾಸಕಾಂಗ ಸಭೆಗೆ ಮುನ್ನ ಕೆಲ ಹೊತ್ತು ರೆಸ್ಟ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಿಎಂ ಭೇಟಿ ಮಾಡಿ ಚರ್ಚಿಸಿದ ಉಸ್ತುವಾರಿ ಅರುಣ್ ಸಿಂಗ್, ಕಟೀಲ್

author img

By

Published : Jul 27, 2021, 6:36 PM IST

ಬೆಂಗಳೂರು: ಮಂಗಳವಾರ ಸಿಎಂ ನಿವಾಸ ಚಟುವಟಿಕೆಗಳ ಕೇಂದ್ರಬಿಂದುವಾಗಿದೆ. ಶಾಸಕರ ಮುಖಂಡರ ಭೇಟಿ ಬೆಳಗ್ಗಿನಿಂದ ಮುಂದುವರೆದಿದೆ. ಯಡಿಯೂರಪ್ಪ ಭೇಟಿ ಮಾಡಿದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಸಿಎಂ ಭೇಟಿ ಮಾಡಿ ಚರ್ಚಿಸಿದ ಉಸ್ತುವಾರಿ ಅರುಣ್ ಸಿಂಗ್

ಸಂಜೆ ಸುಮಾರು 7 ಗಂಟೆ ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನೆಡೆಯಲಿದ್ದು, ಈ ಬಗ್ಗೆ ಚರ್ಚಿಸಿದರು. ಈ ನಡುವೆ ಬಿ.ಎಸ್ ಯಡಿಯೂರಪ್ಪರನ್ನು ಜಗದೀಶ್ ಶೆಟ್ಟರ್ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದರು. ಬಿಎಸ್‌ವೈ ನಿವಾಸಕ್ಕೆ ಮುಖಂಡರಾದ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಶಾಸಕ ವೀರಣ್ಣ ಚರಂತಿಮಠ ಸಹ ಆಗಮಿಸಿ ಮಾತುಕತೆ ನಡೆಸಿದರು. ಸದ್ಯಕ್ಕೆ ಕೆಕೆ ಗೆಸ್ಟ್ ಹೌಸ್‌ಗೆ ಎಲ್ಲಾ ನಾಯಕರು ಹೊರಟಿದ್ದಾರೆ. ಶಾಸಕಾಂಗ ಸಭೆಗೂ ಮುನ್ನ ಕೆಲ ಹೊತ್ತು ರೆಸ್ಟ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಸಾರ ಮಹೇಶ್ ಭೇಟಿ
ಯಡಿಯೂರಪ್ಪ ಭೇಟಿ ಮಾಡಿದ ಸಾರಾ ಮಹೇಶ್

ಸಾರಾ ಮಹೇಶ್ ಭೇಟಿ: ಸಂಜೆ ಸುಮಾರು 4 ಗಂಟೆಯಿಂದ ಚಟುವಟಿಕೆ ಜೋರಾಗಿದ್ದು ಯಡಿಯೂರಪ್ಪ ಜೆಡಿಎಸ್ ಶಾಸಕ ಸಾರಾ ಮಹೇಶ್ ಭೇಟಿ ಮಾಡಿದರು. ಈ ಸಮಯದಲ್ಲಿ ಮಾನವೀಯ ದೃಷ್ಟಿಯಿಂದ ನಾನು ಯಡಿಯೂರಪ್ಪನವರನ್ನು ಭೇಟಿಯಾಗಿದ್ದೇನೆ. 20 ವರ್ಷ ನಾನು ಅವರ ಜೊತೆ ಹೋರಾಟದಲ್ಲಿ ಭಾಗಿಯಾದವನು ಎಂದರು.

ಈಗ ನಾನು ಬೇರೆ ಪಕ್ಷದಲ್ಲಿರಬಹುದು, ಆದರೆ ಅವರ ಜೊತೆ ಹೋರಾಟ ಮಾಡಿದ್ದೇನೆ. ಈ ದೃಷ್ಟಿಯಲ್ಲಿ ನಾನು ಇವತ್ತು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದರು. ಈ ಸಮಯದಲ್ಲಿ ಕುಮಾರಸ್ವಾಮಿ ಅರೋಗ್ಯವನ್ನು ಬಿಎಸ್‌ವೈ ವಿಚಾರಿಸಿದರು. ಸಾರಾ ಮಹೇಶ್ ಭೇಟಿ ವೇಳೆ ಆರೋಗ್ಯ ಕುಮಾರಸ್ವಾಮಿ ಆರೋಗ್ಯ ಹೇಗಿದೆ ಎಂದು ಬಿಎಸ್‌ವೈ ಕೇಳಿದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೇಂದ್ರದಿಂದ ಮೂವರು ವೀಕ್ಷಕರ ತಂಡ ರಾಜ್ಯಕ್ಕೆ ಆಗಮನ: ನಾಳೆ ಮಧ್ಯಾಹ್ನದ ವೇಳೆಗೆ ಮುಂದಿನ ಸಿಎಂ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.