ETV Bharat / state

ಶಸ್ತ್ರಚಿಕಿತ್ಸೆ ಇಲ್ಲದೇ ಇಂಪೆಲ್ಲಾ ಹಾರ್ಟ್‌ ಪಂಪ್‌ ಮೂಲಕ ಚಿಕಿತ್ಸೆ.. ಮೂವರು ವೃದ್ಧರಿಗೆ ಜೀವದಾನ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಫೋರ್ಟಿಸ್​ ಆಸ್ಪತ್ರೆ ವೈದ್ಯರು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ಇಂಪೆಲ್ಲಾ ಹಾರ್ಟ್‌ ಪಂಪ್‌ ​ಸಹಾಯದಿಂದ ಆಂಜಿಯೋಪ್ಲಾಸ್ಟಿ ನಡೆಸಿ ಮೂವರು ವೃದ್ಧರನ್ನು ಬದುಕಿಸಿದ್ದಾರೆ.

KN_BNG_01_FORTIS_HOSPITAL_PC_SCRIPT_7208080
ಫೊರ್ಟಿಸ್‌ ಆಸ್ಪತ್ರೆ ವೈದ್ಯರು
author img

By

Published : Aug 30, 2022, 7:16 PM IST

Updated : Aug 30, 2022, 7:44 PM IST

ಬೆಂಗಳೂರು: ದೀರ್ಘಕಾಲದ ಹೃದಯ ವೈಫಲ್ಯದಿಂದ ಬಳಲುತ್ತಿದ್ದ ಮೂವರು ವೃದ್ಧರಿಗೆ ಫೋರ್ಟಿಸ್ ಆಸ್ಪತ್ರೆ ವೈದ್ಯರು ಅಪರೂಪದ "ಇಂಪೆಲ್ಲಾ ಹಾರ್ಟ್‌ ಪಂಪ್‌" ಅತ್ಯಾಧುನಿಕ ಸಾಧನದ ಸಹಾಯದಿಂದ ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೆ ಕೇವಲ ಆಂಜಿಯೋಪ್ಲಾಸ್ಟಿ ನಡೆಸುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ರೀತಿಯ ಚಿಕಿತ್ಸೆ ಬೆಂಗಳೂರಿನಲ್ಲಿ ಇದೇ ಮೊದಲು ಎಂದು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಹೃದಯ ತಜ್ಞ ಡಾ.ವಿವೇಕ್‌ ಜವಳಿ, ಹೃದಯಾಘಾತ ಆದವರನ್ನು ಹಾಗೂ ಹೃದಯದ ನಾಳ ಬ್ಲಾಕ್‌ ಆದವರನ್ನು ಕೂಡಲೇ ಬದುಕಿಸಲು ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನ ಸಂಜೀವಿನಿಯಂತೆ. ಈ ಹಾರ್ಟ್‌ಪಂಪ್‌ನನ್ನು ನೇರವಾಗಿ ಹೃದಯನಾಳದೊಳಗೆ ಸೇರಿಸಿ, ಪಂಪ್‌ ಮಾಡುವುದರಿಂದ ಹೃದಯದ ನಾಳಗಳು ಬ್ಲಾಕ್‌ ಆಗಿದ್ದರೂ 5 ಲೀಟರ್ ನಷ್ಟು ರಕ್ತವನ್ನು ಪಂಪ್‌ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಹೃದಯದ ನಾಲ್ಕು ರಕ್ತನಾಳಗಳು ಸರಾಗವಾಗಿ ರಕ್ತಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ.

ಈ ಸಾಧನವನ್ನು 81 ಮತ್ತು 85 ವರ್ಷದ ವೃದ್ಧರು, ಹಾಗೂ 71 ವರ್ಷದ ವೃದ್ಧೆ ಮೇಲೆ ಪ್ರಯೋಗಿಸಿದ್ದು, ಅವರನ್ನು ಬದುಕುಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು. ಈ ಮೂವರು ವೃದ್ಧರು ಕೋಮಾರ್ಬಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದರು. ಜೊತೆಗೆ ಕೆಲವು ವರ್ಷಗಳ ಹಿಂದೆಯೇ ಹೃದಯ ಸಮಸ್ಯೆಗೆ ಒಳಗಾಗಿ ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿತ್ತು.

KN_BNG_01_FORTIS_HOSPITAL_PC_SCRIPT_7208080
ಫೊರ್ಟಿಸ್‌ ಆಸ್ಪತ್ರೆ ವೈದ್ಯರು

ಹೃದಯಾಘಾತ ಸಂದರ್ಭದಲ್ಲಿ ಚಿಕಿತ್ಸೆ.. ಇದಾದ ಬಳಿಕವೂ ಸಹ ಅವರಿಗೆ ಗಂಭೀರ ಹೃದಯಾಘಾತ ಸಂಭವಿಸಿತ್ತು. ಅವರನ್ನು ಉಳಿಸಲು ಮತ್ತೊಮ್ಮೆ ಆಂಜಿಯೋಪ್ಲ್ಯಾಸ್ಟಿ ಮಾಡುವುದು ಅಸಾಧ್ಯದ ಕೆಲಸ. ಏಕೆಂದರೆ ದೈಹಿಕವಾಗಿ ಸದೃಢವಾಗಿರದ ಕಾರಣ ಅಸಾಧ್ಯವಾಗಿತ್ತು. ಹೀಗಾಗಿ ಇಂಪೆಲ್ಲಾ ಹಾರ್ಟ್‌ಪಂಪ್‌ ಸಾಧನವನ್ನು ಬಳಸಿದೆವು. ಇದು ಅತ್ಯಂತ ಸುಲಭ ಹಾಗೂ ಶೀಘ್ರವಾಗಿ ಬಳಸುವ ಸಾಧನವಾದ್ದರಿಂದ ಎಲ್ಲಾ ವಯೋಮಾನದವರಿಗೂ ಬಳಸಬಹುದು. ಆದರೆ ಈ ಸಾಧನವನ್ನು ಹೃದಯಾಘಾತ ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಬದುಕಿಸಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ವೈದ್ಯರು ವಿವರಿಸಿದರು.

ಶೇ. 100ರಷ್ಟು ಪ್ರಾಣ ಉಳಿಸುವ ಭರವಸೆ.. ಫೋರ್ಟಿಸ್‌ ಆಸ್ಪತ್ರೆ ಇಂಟರ್‌ವೆನ್ಷನಲ್‌ ಕಾರ್ಡಿಯಾಲಜಿ ನಿರ್ದೇಶಕ ಡಾ.ಆರ್‌.ಕೇಶವ್‌ ಮಾತನಾಡಿ, ಇಂಪೆಲ್ಲಾ ಹೃದಯ ಪಂಪ್‌ನ್ನು ವಯಸ್ಸಾದವರಿಗೆ ಅದರಲ್ಲೂ ಇನ್ನೇನು ಬದುಕಲು ಸಾಧ್ಯವೇ ಇಲ್ಲ ಎನ್ನುವಂಥ ಅಪರೂಪದ ಹೃದಯಾಘಾತದಂಥ ಪ್ರಕರಣಗಳಿಗೆ ಬಳಸಲಾಗುತ್ತದೆ. ಆದರೆ ಈ ಸಾಧನ ಬಳಕೆಯಿಂದ ಶೇ.100ರಷ್ಟು ಪ್ರಾಣ ಉಳಿಯುವುದು ಗ್ಯಾರಂಟಿ. ಏಕೆಂದರೆ, ಎಂಥಹ ಬ್ಲಾಕಿಂಗ್‌ ಆಗಿದ್ದರೂ ಈ ಪಂಪ್‌ ಮೂಲಕ ಹೃದಯದ ರಕ್ತ ಸಂಚಾರವನ್ನು ಸರಾಗಗೊಳಿಸಬಹುದು. ಈ ಸಾಧನವನ್ನು ದೇಹದೊಳಗೆ ಹಾಕಲು ಕೇವಲ 15 ನಿಮಿಷ ಸಾಕು ಎಂದು ವಿವರಿಸಿದರು.

ಇದನ್ನೂ ಓದಿ: ಹೆಸರು ಮತ್ತು ಉದ್ದು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ.. ರೈತರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ

Last Updated : Aug 30, 2022, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.