ETV Bharat / state

ಐಎಂಎ ವಂಚನೆ ಪ್ರಕರಣ: ಮಾನ್ಸೂರ್​​​ ಒಡೆತನದ ಮಳಿಗೆ ಮೇಲೆ ಎಸ್ಐಟಿ ದಾಳಿ

ಐಎಂಎ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆಯುತ್ತಿದೆ. ಐಎಂಎ ಒಡೆತನದ ಪ್ರಮುಖ ಮಳಿಗೆಗಳ ಮೇಲೆ ಕಣ್ಣಿಟ್ಟಿರುವ ಎಸ್​ಐಟಿ, ಇಂದು ಫಾರ್ಮಸಿ ಮೇಲೆ ದಾಳಿ ನಡೆಸಿ ನಗದು ಮತ್ತು ಬೆಲೆ ಬಾಳುವ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಮಾನ್ಸೂರ್ ಒಡೆತನದ ಫ್ರಂಟ್ ಲೈನ್ ಫಾರ್ಮಾ ಮಳಿಗೆ ಮೇಲೆ ಎಸ್ಐಟಿ ದಾಳಿ
author img

By

Published : Jul 2, 2019, 8:46 PM IST

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಇಂದು ಐಎಂಎ ಸಂಸ್ಥೆ ಒಡೆತನದ ಫ್ರಂಟ್ ಲೈನ್ ಫಾರ್ಮಾದ ಮೂರು ಮಳಿಗೆಗಳ ಮೇಲೆ ದಾಳಿ ನಡೆಸಿದೆ.

ಐಎಂಎ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ರೂಪ ಪಡೆಯುತ್ತಿದೆ. ಐಎಂಎ ಒಡೆತನದ ಪ್ರಮುಖ ಮಳಿಗೆಗಳ ಮೇಲೆ ಕಣ್ಣಿಟ್ಟಿರುವ ಎಸ್​ಐಟಿ, ಇಂದು ಫಾರ್ಮಸಿ ಮೇಲೆ ದಾಳಿ ನಡೆಸಿ ನಗದು ಮತ್ತು ಬೆಲೆ ಬಾಳುವ ಉಪಕರಣಗಳನ್ನು ವಶಪಡಿಸಿಕೊಂಡಿದೆ.

ಐಎಂಎ ಸಂಸ್ಥೆಯ ಫಾರ್ಮಸಿ ಮಳಿಗೆಗಳು ಮಲ್ಲೇಶ್ವರಂ, ಯಶವಂತಪುರ ಮತ್ತು ವಿಜಯನಗರದಲ್ಲಿದ್ದು, 3 ಮಳಿಗೆಗಳ‌ ಮೇಲೆ ಡಿವೈಎಸ್ಪಿ ಅನಿಲ್ ಭೂಮಿ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ಮಾಡಿ, ಸುಮಾರು 53 ಲಕ್ಷ ಮೌಲ್ಯದ ಉಪಕರಣ ಹಾಗೂ 2.22 ಲಕ್ಷ ನಗದು ವಶಪಡಿಸಿಕೊಂಡು ಇನ್ನೂ ದಾಳಿ ಮುಂದುವರೆಸಿದೆ.

ಹಾಗೇ ನಿನ್ನೆ ಐಎಂಎ ಕಂಪನಿಯ ವಂಚನೆ ಪ್ರಕರಣದಲ್ಲಿ ಬಂಧನವಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರ್ ಕುಮಾರ್ ಎಂಬುವರನ್ನು ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಇಂದು ಎಸ್ಐಟಿ ಹಾಜರು ಪಡಿಸಿತ್ತು. ಈ ವೇಳೆ ಎಸ್ಐಟಿ ಹೆಚ್ಚಿನ ವಿಚಾರಣೆಗೆ ನ್ಯಾಯಲಯಕ್ಕೆ ಮನವಿ ಮಾಡಿದ ಹಿನ್ನೆಲೆ ಕುಮಾರ್​ನನ್ನು ನ್ಯಾಯಲಯ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

Intro:KN_BNG_12_2_IMA_7204498Body:KN_BNG_12_2_IMA_7204498Conclusion:ಐಎಂಎ ವಂಚನೆ ಪ್ರಕರಣ
ಮನ್ಸೂರು ಒಡೆತನದ ಫ್ರಂಟ್ ಲೈನ್ ಫಾರ್ಮಾದ‌ ಮೇಲೆ ದಾಳಿ
ಭವ್ಯ
ಐಎಂಎ ವಂಚನೆ ಪ್ರಕರಣದ ತನಿಕೆ ನಡೆಸುತ್ತಿರುವ ಎಸ್ ಐಟಿ ಇಂದು ಐಎಂ ಸಂಸ್ಥೆ ಒಡೆತನದ ಫ್ರಂಟ್ ಲೈನ್ ಫಾರ್ಮಾದ ಮೂರು ಮಳಿಗೆಗಳ ಮೇಲೆ ದಾಳಿ ನಡೆಸಿದ್ದಾರೆ..

ಈ ಸಂಸ್ಥೆ ಮಲ್ಲೇಶ್ವರಂ, ಯಶವಂತಪುರ, ಮತ್ತು ವಿಜಯ ನಗರದಲ್ಲಿದ್ದು 3ಮಳಿಗೆಗಳ‌ಮೇಲೆ ಡಿವೈಎಸ್ಪಿ ಅನಿಲ್ ಭೂಮಿ ರೆಡ್ಡಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ಸುಮಾರು 53ಲಕ್ಷ ಮೌಲ್ಯದ ಫಾರ್ಮಾಸಿ ಮತ್ತು ವಿದ್ಮುನ್ಮಾನ ಉಪಕರಣ ಹಾಗೂ 2.22ಲಕ್ಷ ನಗದು ವಶಪಡಿಸಿ ಇನ್ನು ದಾಳಿ ಮುಂದುವರೆಸಿದ್ದಾರೆ .

ಹಾಗೆ ನಿನ್ನೆ ಐಎಂಎ ಕಂಪನಿಯ ವಂಚನೆ ಪ್ರಕರಣದಲ್ಲಿ ಬಂಧನವಾದ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಎಂಜಿನಿಯರ್ ಬಿಡಿಎ ಕುಮಾರ್ ಅನ್ನ ಸಿಟಿ ಸಿವಿಲ್ ಕೋರ್ಟ್ ನ್ಯಾಯಾಧೀಶರ ಮುಂದೆ ಇಂದು ಎಸ್ಐಟಿ ಹಾಜರು ಪಡಿಸಿದ್ರು. ಈ ವೇಳೆ ಎಸ್ಐಟಿ ಹೆಚ್ಚಿನ ವಿಚಾರಣೆಗೆ ನ್ಯಾಯಲಯಕ್ಕೆ ಮನವಿ ಮಾಡಿದ ಹಿನ್ನೆಲೆ ನ್ಯಾಯಲಯ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.