ETV Bharat / state

ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ, ಪ್ರಧಾನಿ ಮೋದಿ ಸಂಸತ್​ಗೆ ಹಾಜರಾಗಬೇಕು: ವಿ ಎಸ್ ಉಗ್ರಪ್ಪ - ಪ್ರಧಾನಿ ನರೇಂದ್ರ ಮೋದಿ

''ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್​ಗೆ ಹಾಜರಾಗಬೇಕು'' ಎಂದು ಮಾಜಿ ಸಂಸದ, ಕಾಂಗ್ರೆಸ್ ವಕ್ತಾರ ವಿ ಎಸ್ ಉಗ್ರಪ್ಪ ಆಗ್ರಹಿಸಿದರು.

VS Ugrappa
ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ, ಪ್ರಧಾನಿ ಮೋದಿ ಸಂಸತ್​ಗೆ ಹಾಜರಾಗಬೇಕು: ವಿ.ಎಸ್. ಉಗ್ರಪ್ಪ
author img

By

Published : Aug 2, 2023, 7:17 PM IST

ಮಾಜಿ ಸಂಸದ, ಕಾಂಗ್ರೆಸ್ ವಕ್ತಾರ ವಿ.ಎಸ್. ಉಗ್ರಪ್ಪ ಮಾತನಾಡಿದರು.

ಬೆಂಗಳೂರು: ''ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ, ಮೊದಲು ಪ್ರಧಾನಿಯವರು ಪಾರ್ಲಿಮೆಂಟಿಗೆ ಹಾಜರಾಗಬೇಕು. ಮಣಿಪುರ ಸರ್ಕಾರವನ್ನು ಉಚ್ಚಾಟನೆ ಮಾಡಿ ರಾಷ್ಟ್ರಪತಿ ಆಡಳಿತವನ್ನು ತಂದು ಅಲ್ಲಿರುವಂತಹ ಎಲ್ಲಾ ಜನರ ರಕ್ಷಣೆ ಮಾಡಬೇಕಾದಂತಹ ಕೆಲಸ ಮಾಡಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ಮಾಜಿ ಸಂಸದ, ಕಾಂಗ್ರೆಸ್ ವಕ್ತಾರ ವಿ ಎಸ್ ಉಗ್ರಪ್ಪ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ''ಪ್ರಧಾನಿ ಮೋದಿಯವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ. ಪ್ರಕೃತಿ ವಿಕೋಪದಿಂದ ಅನೇಕ ಜನ ಸಾಯುತ್ತಾ ಇದ್ದಾರೆ. ಅದಕ್ಕೆ ಪ್ರತಿಕ್ರಿಯಿಸಲು ಸಹ ನಮ್ಮ ಪ್ರಧಾನಿಯವರಿಗೆ ಸಮಯವಿಲ್ಲ. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲಿಕ್ಕೆ ಬದ್ಧತೆ ಇರುವಂತಹ ರಾಜಕಾರಣಿಯಾಗಿ ಅವರು ನನಗೆ ಕಾಣುತ್ತಿಲ್ಲ. ಈ ದೇಶ ಕಂಡಂತಹ ಅತ್ಯಂತ ಶೋಕಿಲಾಲ್ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ'' ಎಂದು ಟೀಕಿಸಿದರು.

''ನಿರ್ಭಯ ಪ್ರಕರಣ ಹಾಗೂ ಬೆಂಗಳೂರಿನಲ್ಲಿ ಒಂದಷ್ಟು ಅತ್ಯಾಚಾರ ಪ್ರಕರಣಗಳು ಆದಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಏನೆಲ್ಲಾ ಮಾತನಾಡಿದ್ದರು. ಆ ವಿಚಾರದಲ್ಲಿ ನನ್ನ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಕುರಿತು ಆರು ಸಾವಿರ ಪುಟಗಳ ವರದಿಯನ್ನು 24 ಮಾರ್ಚ್ 2018 ರಲ್ಲಿ ಸರ್ಕಾರಕ್ಕೆ ಮಂಡಿಸಿದ್ದೇನೆ'' ಎಂದರು.

ದೇಶದ ಜನರಿಗೆ ರಕ್ಷಣೆ ನೀಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ: "ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮಿಸ್ಟರ್ ಮೋದಿ. ಈ ದೇಶ ಶಾಶ್ವತ, ನಮ್ಮ ಸಂವಿಧಾನ ಶಾಶ್ವತ. ಈ ದೇಶದ ಜನರಿಗೆ ರಕ್ಷಣೆ ಮಾಡುವಂತಹದ್ದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಇದು ಆಗಲಿಲ್ಲ ಎಂದ ಮೇಲೆ ಒಂದು ಪಾರ್ಲಿಮೆಂಟ್ ಗೆ ಹಾಜಾರಾಗಬೇಕು, ಎರಡನೆಯದು ಮಣಿಪುರದ ಜನರಿಗೆ ರಕ್ಷಣೆ ನೀಡಬೇಕು ಆ ಸರ್ಕಾರ ವಿಫಲ ಆಗಿರೋದ್ರಿಂದ ಈ ಕೂಡಲೆ ಆ ಸರ್ಕಾರವನ್ನು ಉಚ್ವಾಟನೆ ಮಾಡಿ ಅಲ್ಲಿ ರಕ್ಷಣೆಯ ದೃಷ್ಟಿಯಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತೇವೆ" ಎಂದು ಉಗ್ರಪ್ಪ ಹೇಳಿದರು.

ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಉಗ್ರಪ್ಪ, ''ಮೋದಿಯವರು ನಾವು ಕೊಟ್ಟ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ. ಅದೇ ಮಣಿಪುರದ ಬಗ್ಗೆ ಮಾತನಾಡುವುದಿಲ್ಲ. ನಿನ್ನೆ ಪುಣೆಗೆ ಹೋಗಿ ನಮ್ಮ ರಾಜ್ಯದ ಐದು ಗ್ಯಾರೆಂಟಿಗಳ ಬಗ್ಗೆ ಮಾತನಾಡಿ ತೆಗಳಿದ್ದಾರೆ. ನಾನು ಇಷ್ಟು ಹೇಳಬಲ್ಲೇ, ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಜನಪರವಾದಂತಹ ಕಾರ್ಯಕ್ರಮಗಳೇನಾದರೂ ರೂಪಿಸಿದ್ದರೆ ಅದು ಅನೇಕ ಯೋಜನೆಗಳು ಸೇರಿದಂತೆ ಪ್ರಮುಖ ಐದು ಗ್ಯಾರೆಂಟಿಗಳು. ಇದನ್ನು ಸಹಿಸಿಕೊಳ್ಳೋಕೆ ಆಗದಂತಹ ಮನಸ್ಥಿತಿ ಬಜೆಪಿಯಲ್ಲಿ ಮತ್ತು ಪ್ರಧಾನಮಂತ್ರಿಯವರಲ್ಲಿ ಇದೆ. ನೀವು ಏನೆಲ್ಲಾ ಆಶ್ವಾಸನೆಗಳನ್ನು ಕೊಟ್ಟಿದ್ದಿರಿ, ಕಪ್ಪು ಹಣ ವಾಪಸ್​ ತಂದು 15 ಲಕ್ಷ ರೂ. ಹಾಕ್ತಿವಿ ಎಂದಿದ್ದಿರಿ. ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿವಿ ಎಂದು ಹೇಳಿದ್ದಿರಿ. 2022ರ ವೇಳೆಗೆ ಈ ದೇಶದಲ್ಲಿ ಎಲ್ಲರಿಗೂ ಮನೆ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಿರಿ. ಎಲ್ಲರಿಗೂ ಕುಡಿಯುವ ನೀರಿನ ಸಂಪರ್ಕ, ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿ ಯಾವುದನ್ನು ಮಾಡಲಿಕ್ಕೆ ನಿಮ್ಮಿಂದ ಆಗಲಿಲ್ಲ'' ಎಂದು ಟೀಕಿಸಿದರು.

ಮೋದಿಯಿಂದ ಸಣ್ಣತನದ ರಾಜಕಾರಣ: ''ಇವತ್ತು ರಾಜ್ಯವ್ಯಾಪಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ಸಿನ ಸರ್ಕಾರ, ಡಿ.ಕೆ. ಶಿವಕುಮಾರ್‌, ಖರ್ಗೆಯವರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ಮಾರ್ಗದರ್ಶನದಲ್ಲಿ ಇಡೀ ದೇಶ ಮೆಚ್ಚುವಂತಹ ಜನಪರವಾದಂತಹ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇದನ್ನು ಪುಣೆಗೆ ಹೋಗಿ ವ್ಯಂಗ್ಯ ಮಾಡುವಂತಹ ಸಣ್ಣತನವನ್ನು ರಾಜಕಾರಣದಲ್ಲಿ ಇವತ್ತು ಮೋದಿಯವರು ತೋರುತ್ತಿದ್ದಾರೆ. ನಾನು ಬೇರೆ ವಿಷಯಗಳನ್ನು ಬೆರೆಸದೇ ಮಿಸ್ಟರ್ ಮೋದಿಯವರಿಗೆ ಮತ್ತು ಬಿಜೆಪಿಗರಿಗೆ ಕೇಳುವುದು ಒಂದು ಪ್ರಶ್ನೆ, ನೀವು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದ್ದರೆ, ಈ ಕೂಡಲೇ ಮಣಿಪುರದಲ್ಲಿ ಶಾಂತಿ, ಸೌಹಾರ್ದತೆಯಿಂದ ಬದುಕುವಂತಹ ಸಮಾಜವನ್ನು ಸೃಷ್ಟಿ ಮಾಡಬೇಕು'' ಎಂದು ಆಗ್ರಹಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್. ಎಂ. ರೇವಣ್ಣ ಮಾತನಾಡಿ, ''ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡು ಬಲಿಷ್ಠವಾಗಿ ಇದ್ದಂತಹ ಸಂದರ್ಭದಲ್ಲಿ ಮಾತ್ರ ರಾಷ್ಟ್ರ ಏಳಿಗೆಯನ್ನು ಸಾಧಿಸುತ್ತೆ. ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಗೌರವ ಸಿಗುತ್ತೆ. ಆದರೆ, ಇವತ್ತು ಏನು ಭಾರತದ ಪ್ರಧಾನಿ ಮೋದಿಯವರು ವಿರೋಧ ಪಕ್ಷಗಳು ಒಗ್ಗೂಡುವಂತಹ ಸಂದರ್ಭದಲ್ಲಿ, ಯಾವತ್ತೂ ಯಾವ ವಿಷಯಕ್ಕೂ ಮಾತನಾಡದೆ ಪ್ರಚಲಿತ ವಿಷಯಗಳ ಕುರಿತು ಚರ್ಚೆಯೇ ಮಾಡದಿರುವಂತಹ ಈ ಮೋದಿಯವರು ವಿರೋಧ ಪಕ್ಷದವರು ಒಗ್ಗಟ್ಟಾಗುತ್ತಿರುವ ಒಂದೇ ಉದ್ದೇಶಕ್ಕೆ ಅವರನ್ನು ತೆಗಳಿದ್ದಾರೆ'' ಎಂದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಟೀಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.