ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆಯ ವಿಚಾರದಲ್ಲಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಕೂಗುವಂತೆ ಮಾಡಿದ್ದೇ ಬಿಜೆಪಿ ಮುಖಂಡರು. ಹರ್ಷ ಕೊಲೆಯ ಅಪರಾಧಿಗಳನ್ನು ನಡು ರಸ್ತೆಯಲ್ಲಿ ಎನ್ಕೌಂಟರ್ ಮಾಡಿದರೆ, ಈ ಬರ್ಬರ ಹತ್ಯೆ ನಡೆಯುತ್ತಿರಲಿಲ್ಲ. ಹಿಂದೂ ಸಮಾಜ ಸಾಮಾನ್ಯವಾದ ಸಮಾಜವಲ್ಲ. ಬಾಬಾ ಸಾಹೇಬರ ಸಂವಿಧಾನಕ್ಕೆ ಬೆಲೆ ಕೊಟ್ಟು ಸುಮ್ಮನಿದ್ದೇವೆ. ನಾವು ಜಾಗೃತರಾಗಿಲ್ಲ ಎಂದರೆ ಕಷ್ಟದ ದಿನಗಳು ಎದುರಾಗಲಿವೆ ಎಂದು ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಿಂತಕ ಚಕ್ರವರ್ತಿ ಸೂಲಿಬೆಲೆ ಗುಡುಗಿದ್ದಾರೆ.
ಪ್ರವೀಣ್ ನೆಟ್ಟಾರು ಬರ್ಬರ ಹತ್ಯೆಯನ್ನು ಖಂಡಿಸಿ, ಅಪರಾಧಿಗಳನ್ನು ತಕ್ಷಣ ಬಂಧಿಸಿ ಶಿಕ್ಷಿಸಲು ಆಗ್ರಹಿಸಿ ಟೌನ್ ಹಾಲ್ ಬೃಹತ್ ಪ್ರತಿಭಟನೆ ನಡೆಸಲಾಯಿತು. ಅವರಿಗೆ ನಮನ ಸಲ್ಲಿಸಲು ಒಂದು ನಿರ್ಮಿಷದ ಪಾರ್ಥನೆ ಸಲ್ಲಿಸಲಾಯಿತು. ನಗರ ಜಿಲ್ಲಾಧಿಕಾರಿಗಳ ಮೂಲಕ ಸಿಎಂಗೆ ಮನವಿ ಪತ್ರ ಸಲ್ಲಿಸಿದ ವಿವಿಧ ಹಿಂದೂ ಸಂಘಟನೆಗಳ ಸದಸ್ಯರು ಬಳಿಕ ಟೌನ್ ಹಾಲ್ವರೆಗೂ ಮೆರವಣಿಗೆ ಮೂಲಕ ಬಂದರು. ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಸಮಾಜದ್ರೋಹಿಗಳಿಗೆ ಹೇಗೆ ಪಾಕಿಸ್ತಾನ ಟರ್ಕಿ ಫಂಡ್ ಮಾಡುತ್ತಿವೆ ಎಂದು ಈಗಾಗಲೇ ತಿಳಿದಿವೆ. ಈ ವಿಚಾರಗಳಲ್ಲಿ ಕರ್ನಾಟಕ ಸರ್ಕಾರ ಧೀರ್ಘ ನಿದ್ದೆಯಲ್ಲಿ ಇದೆ. ಒಬ್ಬ ಹಿಂದೂ ರಕ್ತ ಹುರಿಯದಂತೆ ನಾವು ನೋಡಿಕೊಳ್ಳಬೇಕು. ಈಗ ಹಿಂದೂ ಕಾರ್ಯಕರ್ತರು ಪೋಸ್ಟ್ ಹಾಕಲು ಹೆದರುವಂತಾಗಿದೆ. ತಲೆ ಕಡಿಯುವ ಭಯವಿದೆ. ಹೀಗೇ ಆದರೆ ಸಿದ್ದರಾಮಯ್ಯ ಸರ್ಕಾರ ಉರುಳಿಸಿದ ಹಾಗೆ ನಿಮ್ಮ ಸರ್ಕಾರದ ಉರುಳಿಸಲಾಗುವುದು ಎಂದು ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಮುಖ್ಯಮಂತ್ರಿ ಭೇಟಿ ಬೆನ್ನಲ್ಲೇ ಮಂಗಳೂರಿನಲ್ಲಿ ಮತ್ತೊಂದು ಹತ್ಯೆ: ಯುವಕನ ಬರ್ಬರ ಕೊಲೆ
700 ಕ್ಕೂ ಹೆಚ್ಚು ಜನರ ಮೇಲಿನ ಕೇಸ್ ತೆಗೆದು ಹಾಕಲಾಗಿದೆ: ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮುಂದುವರೆದು ಮಾತನಾಡಿ, ಸಿದ್ದರಾಮಯ್ಯ ಅವಧಿಯಲ್ಲಿ 23 ಜನ ಹಿಂದೂ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ. 700 ಕ್ಕೂ ಹೆಚ್ಚು ಜನರ ಮೇಲಿನ ಕೇಸ್ ತೆಗೆದು ಹಾಕಲಾಗಿದೆ. ಎಲ್ಲರಿಗೂ ಹಿಂದೂಗಳು ಎನ್ನುವ ಭಾವ ಬರಬೇಕು. ಒಂದೇ ಮಾತರಂ ರೀತಿ ಎಲ್ಲರೂ ಒಂದಾಗಾಗುವ ಕ್ರಮಕ್ಕೆ ಮುಂದಾಗಬೇಕು ಎಂದರು.
ಇಸ್ಲಾಂ ಗಲಾಟೆ ಎಂದೂ ನಿಲ್ಲುವುದಿಲ್ಲ: ಹಿಂದೂ ತಮ್ಮ ರಕ್ಷಣೆ ಮಾಡಿಕೊಳ್ಳಲು ತಾವೇ ಮುಂದಾಗಬೇಕು. ಸರ್ಕಾರ ನಮ್ಮ ರಕ್ಷಣೆಗೆ ನಿಲ್ಲುತ್ತಿಲ್ಲ. ಪೊಲೀಸರು ಕಳ್ಳರ ರೀತಿಯಲ್ಲಿ ನಿನ್ನೆ ಲಾಠಿ ಚಾರ್ಜ್ ಮಾಡಿದ್ದಾರೆ. ಮಫ್ತಿಯಲ್ಲಿ ಹಿಂದಿನಿಂದ ಹೊಡೆದಿದ್ದಾರೆ. ಇಸ್ಲಾಮಿನ ಗಲಾಟೆ ಇವತ್ತು ಶುರುವಾಗಿದ್ದು ಅಲ್ಲ ನಿಲ್ಲುವುದೂ ಇಲ್ಲ. ಹಿಂದೂ ಕಾರ್ಯಕರ್ತರ ಹತ್ಯೆ ಆಗುವಾಗ ಬಿಜೆಪಿ ಮುಖಂಡರು ನೋಡಿಕೊಂಡು ಸುಮ್ಮನಿದ್ದರು. ಆದರೆ ತಮ್ಮ ಕಾರ್ಯಕರ್ತನ ಹತ್ಯೆ ಆದಾಗ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ದೂರಿದರು.
ಸರ್ಕಾರದ ಭ್ರಮೆಯಿಂದ ಹೊರಗೆ ಬರಬೇಕು: ಆದರೆ, ಬಿಜೆಪಿ ಕಾರ್ಯಕರ್ತನ ಕೊಲೆಗೆ ಇಡೀ ಸಮಾಜ ನಿಂತಿರುವುದು ನೋಡಿದರೆ ಮತ್ತು ಕಾರ್ಯಕರ್ತರ ಕೊಲೆ ನಡೆಯುತ್ತದೆ. ಇವತ್ತು ಬಿಜೆಪಿ ಕಾರ್ಯಕರ್ತನ ಹತ್ಯೆ ನಡೆದರೆ ನಾಳೆ ನನ್ನ ಹತ್ಯೆಯೂ ಆಗಬಹುದು. ಎಲ್ಲ ಮುಗಿದ ಮೇಲೆ ಬಿಜೆಪಿ ಮುಖಂಡರ ಹತ್ಯೆ ಆಗುತ್ತದೆ. ಸರ್ಕಾರ ಭ್ರಮೆಯಿಂದ ಹೊರಗೆ ಬರಬೇಕು ಎಂದು ಕುಟುಕಿದರು.
ಕಿಡಿ ಕಾರಿದ ಹಿಂದೂ ಮುಖಂಡ ಮೋಹನ್ ಗೌಡ: ಪ್ರೊಟೆಸ್ಟ್ ವೇಳೆ ಸರ್ಕಾರದ ವಿರುದ್ಧ ಹಿಂದೂ ಮುಖಂಡ ಮೋಹನ್ ಗೌಡ ಕಿಡಿ ಕಾರಿದರು. ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಹರ್ಷ, ಚಂದ್ರು ಹತ್ಯೆಯ ಬಳಿಕ ಈಗ ಪ್ರವೀಣ್ ಹತ್ಯೆಯಾಗಿದೆ. ಇಲ್ಲಿವರೆಗೆ ಒಟ್ಟು 35 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದರು.
ಎಸ್.ಡಿ.ಪಿ.ಐ, ಪಿ.ಎಫ್. ಐ ಸಂಘಟನೆಗಳ ಕೈವಾಡ: ಹಿಂದೂ ಕಾರ್ಯಕರ್ತರ ಕೊಲೆಗಳಲ್ಲಿ ಎಸ್.ಡಿ.ಪಿ.ಐ, ಪಿ. ಎಫ್. ಐ ಸಂಘಟನೆಗಳ ಕೈವಾಡ ಇರುವುದು ಸಾಬೀತಾದರೂ ಕ್ರಮ ತೆಗೆದುಕೊಂಡಿಲ್ಲ. ಈ ಸಂಘಟನೆಗಳನ್ನೂ ಈವರೆಗೆ ಬ್ಯಾನ್ ಮಾಡಿಲ್ಲ. ಇದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಿಂದೂ ಕಾರ್ಯಕರ್ತರ ಮೇಲಿರುವ ನಿರ್ಲಕ್ಷ್ಯವನ್ನು ತೋರುತ್ತಿದೆ ಎಂದು ಕಿಡಿಕಾರಿದರು.
ಹಿಂದೂಗಳು ಒಂಟಿ: ಪ್ರತಿಭಟನೆಯಲ್ಲಿ ಹಿಂದೂ ಮುಖಂಡ ಮನೋಹರ ಅಯ್ಯರ್ ಮಾತನಾಡಿ, ಧರ್ಮಗಳನ್ನು ಗಣನೆಗೆ ತೆಗೆದುಕೊಂಡರೆ ಹಿಂದೂಗಳು ಒಂಟಿಯಾಗಿದ್ದರೆ. ಭಾರತ ದೇಶವನ್ನು ಇಸ್ಲಾಮಿಕ್ ಮಾಡಲು ಹೊರಟಂತಿದೆ ನಾವು ಇದನ್ನು ವಿರೋಧಿಸುತ್ತೇವೆ ಎಂದರು.
ಕಳೆದ 500 ವರ್ಷದಲ್ಲಿ ಹಲವು ಧರ್ಮಗಳ ನಾಶ: ಮತ್ತೊಬ್ಬ ಹಿಂದೂ ಮುಖಂಡ ಪಾಟಾಪಟ್ ಶ್ರೀನಿವಾಸ ಪ್ರತಿಭಟನೆಯಲ್ಲಿ ಮಾತನಾಡಿ ಹಿಂದೂ ಸಮಾಜದ ಸಂಘಟನೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಹಿಂದೂ ಕಾರ್ಯದರ್ಶಿ ಕೈ ಮೂಗಿದು ಕೇಳುತ್ತೇನೆ. ನಮ್ಮ ಹಿಂದೂಗಳ ಕೊಲೆಗೆ ಯೋಜನೆ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ರಕ್ಷಣೆ ಕೇಳುತ್ತೇವೆ. ಆದರೆ ಮೊದಲು ನಮ್ಮ ರಕ್ಷಣೆ ಮಾಡುವುದನ್ನು ಕಲಿಯಬೇಕು. 500 ವರ್ಷದಲ್ಲಿ ಹಲವು ಧರ್ಮವನ್ನು ನಾಶ ಮಾಡಿದ್ದಾರೆ ಎಂದು ತಿಳಿಸಿದರು.