ETV Bharat / state

ಕಟ್ಟುನಿಟ್ಟಾಗಿ ಟ್ರಾಫಿಕ್​ ರೂಲ್ಸ್​ ಪಾಲಿಸುವವರಿಗೆ ಸಿಹಿಸುದ್ದಿ: ನಿಮ್ಮ ವಾಹನ ಇನ್ಶೂರೆನ್ಸ್ ಪ್ರೀಮಿಯಂ ತಗ್ಗಿಸಲು ನಡೀತಿದೆ ಚಿಂತನೆ

ಕಟ್ಟುನಿಟ್ಟಾಗಿ ಟ್ರಾಫಿಕ್​ ನಿಯಮ ಪಾಲನೆ ಮಾಡಿದವರಿಗೆ ವಾಹನ ಇನ್ಶೂರೆನ್ಸ್ ಪ್ರೀಮಿಯಂ ತಗ್ಗಿಸಲು ಚಿಂತನೆ ನಡೆಸುತ್ತಿರುವುದಾಗಿ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

motorists
ವಾಹನ ಇನ್ಶೂರೆನ್ಸ್ ಪ್ರೀಮಿಯಂ ತಗ್ಗಿಸಲು ಚಿಂತನೆ
author img

By

Published : Jul 8, 2021, 9:43 PM IST

ಬೆಂಗಳೂರು: ಸಂಚಾರಿ ನಿಯಮ ಪಾಲನೆ ಮಾಡುವವರಿಗೆ ಸಂಚಾರ ಪೊಲೀಸರು ಸಿಹಿ ಸುದ್ದಿ ನೀಡಲು ಮುಂದಾಗಿದ್ದಾರೆ. ಸಂಚಾರಿ ನಿಯಮವನ್ನು ಸರಿಯಾಗಿ ಪಾಲಿಸುವ ಸವಾರರಿಗೆ ವಾಹನ ವಿಮೆ ತಗ್ಗಿಸಲು ಇನ್ಶೂರೆನ್ಸ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರ ಹೇಳಿಕೆ

ನಗರದಲ್ಲಿ ಹೆಚ್ಚಾಗುತ್ತಿರುವ ಅಪಘಾತ ಸಂಖ್ಯೆ ತಗ್ಗಿಸಲು ಹಾಗೂ ಉಲ್ಲಂಘನೆ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಲು ಸಂಚಾರ ಪೊಲೀಸರು ಪಣ ತೊಟ್ಟಿದ್ದಾರೆ. ಹೆಚ್ಚು ಟ್ರಾಫಿಕ್ ಉಲ್ಲಂಘನೆ ಮಾಡಿದವರಿಗೆ ಹೆಚ್ಚು ಪ್ರೀಮಿಯಂ ಹಾಗೂ ಕಡಿಮೆ ಉಲ್ಲಂಘನೆ ಮಾಡಿದವರಿಗೆ ಕಡಿಮೆ ಪ್ರೀಮಿಯಂ ವಿಧಿಸುವ ಹಾಗೆಯೇ ವಿಮಾ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

ಕಟ್ಟುನಿಟ್ಟಾಗಿ ಪಾಲನೆ ಮಾಡುವ ವಾಹನ ಸವಾರರಿಗೆ ಇನ್ಶೂರೆನ್ಸ್ ಒಂದು ವರ್ಷಕ್ಕೆ ಕಟ್ಟಿದರೆ ಅಂತಹವರಿಗೆ ಎರಡು ಅಥವಾ ಮೂರು ವರ್ಷಗಳ ಕಾಲ ವಿಮಾ ಅವಧಿ ವಿಸ್ತರಣೆ ಕುರಿತಂತೆ ಚಿಂತನೆ ನಡೆಸಲಾಗುತ್ತಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಲಾಗುತ್ತಿದ್ದು, ಅಂತಿಮವಾದ ಬಳಿಕ ನಿಯಮ ಜಾರಿ ತರಲಾಗುವುದು ಎಂದು ಸಂಚಾರಿ ವಿಭಾಗದ ಡಿಸಿಪಿ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

400 ಕೋಟಿ ದಂಡ ಬಾಕಿ:

ದಂಡ ಮೊತ್ತ ಹೆಚ್ಚಿಸಿದರೂ ಕ್ಯಾರೆ ಎನ್ನದ ವಾಹನ ಸವಾರರಿಂದ ಸಂಪರ್ಕರಹಿತ ವ್ಯವಸ್ಥೆ ಹಾಗೂ ಡಿಜಿಟಲ್ ತಂತ್ರಜ್ಞಾನದ ಮೂಲಕ ನಗರದಲ್ಲಿ ಪ್ರತಿನಿತ್ಯ 45 ಸಾವಿರ ಪ್ರಕರಣ ದಾಖಲಾಗುತ್ತಿವೆ. ಕೊರೊನಾ 2ನೇ ಅಲೆ ಹಿನ್ನೆಲೆಯಲ್ಲಿ ಪರಿಪೂರ್ಣವಾಗಿ ದಂಡ ವಸೂಲು ಮಾಡಲು ಸಾಧ್ಯವಾಗಿರಲಿಲ್ಲ. ದಂಡ ಪಾವತಿಸಲು ಪೇಟಿಎಂ ಮೂಲಕ ಅನುವು ಮಾಡಿಕೊಡಲಾಗಿದ್ದು ಈ ಸಾಧನದ ಮೂಲಕ ಸವಾರರು ದಂಡ ಪಾವತಿಸಬಹುದಾಗಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಸವಾರರ ಮನೆಗಳಿಗೆ ನೋಟಿಸ್ ನೀಡಲಾಗುವುದು ಎಂದರು.

ರೂಲ್ಸ್ ಬ್ರೇಕ್ ಮಾಡಿದ ಕೆಲವೇ ಗಂಟೆಯಲ್ಲಿ ಮೊಬೈಲ್​ನಲ್ಲಿ ಮೆಸೇಜ್​:

ಹೆಲ್ಮೆಟ್ ರಹಿತ ವಾಹನ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ವಿವಿಧ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಕೆಲವೇ ಗಂಟೆಗಳಲ್ಲಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಮೊಬೈಲಿಗೆ ವಾಟ್ಸ್​ಆ್ಯಪ್​ ಅಥವಾ ಮೆಸೇಜ್​ ಮಾಡಿ ನಿಯಮ ಉಲ್ಲಂಘಿಸಿದ ಸ್ಥಳ, ದಂಡ ಮೊತ್ತದ ಬಗ್ಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ (Artificial intelligence) ನೆರವಿನಿಂದ ಸ್ವಯಂಚಾಲಿತವಾಗಿ ನೋಟಿಫಿಕೇಷನ್ ಕಳುಹಿಸುವ ಹಾಗೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.